• Home
  • »
  • News
  • »
  • state
  • »
  • Janardhana Reddy: ಕಾಂಗ್ರೆಸ್‌ನಿಂದ ರಾಜಕೀಯ ಅಖಾಡಕ್ಕೆ ಇಳಿತಾರಾ ಗಣಿಧಣಿ? ಹುಲಿ ಬೇಟೆಗೆ ನಿಂತ್ರೆ ಆಡದೇ ಬಿಡಲ್ಲ ಅಂದ್ರು ಜನಾರ್ದನ ರೆಡ್ಡಿ!

Janardhana Reddy: ಕಾಂಗ್ರೆಸ್‌ನಿಂದ ರಾಜಕೀಯ ಅಖಾಡಕ್ಕೆ ಇಳಿತಾರಾ ಗಣಿಧಣಿ? ಹುಲಿ ಬೇಟೆಗೆ ನಿಂತ್ರೆ ಆಡದೇ ಬಿಡಲ್ಲ ಅಂದ್ರು ಜನಾರ್ದನ ರೆಡ್ಡಿ!

ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ

ಕಾಂಗ್ರೆಸ್, ಬಿಜೆಪಿ ಅಂತ ನಾನು ಹೇಳೋದಿಲ್ಲ. ನಮ್ಮ ಕುಟುಂಬದ ಮೇಲೆ ಬಳ್ಳಾರಿ ಜನರ ಆಶೀರ್ವಾದ ಇರಲಿ ಅಂತ ಹೇಳುವ ಮೂಲಕ ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ರೀ ಎಂಟ್ರಿ ಕೊಡುವ ಸುಳಿವು ನೀಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬಳ್ಳಾರಿ (ನ.05):  ಮತ್ತೆ ರಾಜಕೀಯದ (Politics) ಅಖಾಡಕ್ಕಿಳಿಯಲು ಗಣಿಧಣಿ ಜನಾರ್ದನ ರೆಡ್ಡಿ ತಯಾರಾಗಿದ್ದಾರೆ. ಕಾರ್ಯಕ್ರಮದಲ್ಲಿ ಗುಡುಗಿದ ಜನಾರ್ದನ ರೆಡ್ಡಿ (Janardhana Reddy) ಹಸಿವಾದಾಗ ಹುಲಿ ಬೇಟೆ ಆಡುತ್ತೇ, ರಾಜಕೀಯಕ್ಕೆ ಬಿಜೆಪಿ, ಕಾಂಗ್ರೆಸ್ (BJP Congress) ಯಾವ್ದೋ ಗೊತ್ತಿಲ್ಲ. ಹುಲಿ ಬೇಟೆಗೆ ನಿಂತ್ರೆ ಬೇಟೆ ಆಡೇ ಆಡುತ್ತದೆ ಎಂದು ಹೇಳಿದ್ದಾರೆ. ರಸ್ತೆಯಲ್ಲಿ ಓರ್ವ ಹುಡುಗ ಹುಲಿ ಫೋಟೋ (Photo) ತೋರಿಸಿ ನನ್ನ ಹುಲಿ ಎಂದು ಕರೆದಿದ್ದಾನೆ. ಹುಲಿಗೆ (Tiger) ಹಸಿವಾದಾಗ ಬೇಟೆಗೆ ಬರುತ್ತೇ, ಬೇಟೆ ಹೊಡೆದೇ ಹೊಡಿಯುತ್ತದೆ. ರಕ್ತದಿಂದಲೇ ಬಂದಿರುವುದನ್ನು ಯಾರು ತಡೆಯಲು ಸಾಧ್ಯವೇ ಇಲ್ಲ ಎಂದು ಜನಾರ್ದನ ರೆಡ್ಡಿ ಅಬ್ಬರಿಸಿದ್ದಾರೆ.


ಶೀಘ್ರವೇ ರಾಜಕೀಯಕ್ಕೆ ಜನಾರ್ದನ ರೆಡ್ಡಿ ರೀ ಎಂಟ್ರಿ!


ಕೆಲವರು ಮತ್ತೆ ನನ್ನ ಬಳ್ಳಾರಿಯಿಂದ ಹೊರ ಹಾಕ್ತಿದ್ದಾರೆ. ಎರಡ್ಮೂರು ತಿಂಗಳಲ್ಲಿ ಮತ್ತೆ ಬಳ್ಳಾರಿಗೆ ಬರುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಗುಡುಗಿದ್ದಾರೆ. ನಗರದಲ್ಲಿ ನಿನ್ನೆ (ನ.4) ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ನನ್ನ ತಂದೆ ಪೊಲೀಸ್ ಪೇದೆ ಆಗಿ ಕೆಲಸ ಮಾಡಿರಬಹುದು. ಆದ್ರೇ ನನ್ನ ತಾತಂದಿರು ರಾಜರಂತೆ ಬದುಕಿದ್ದರು. ಅವರ ರಕ್ತ ನನ್ನಲಿದೆ ಅದನ್ನ ಬದಲಾಯಿಸಲಾಗದು ಎಂದು ಹೇಳಿದ್ದಾರೆ.


Janardhana Reddy is returning to politics Re entry by which party pvn
ಜನಾರ್ದನ ರೆಡ್ಡಿ


ನಮ್ಮ ಕುಟುಂಬ ಬಳ್ಳಾರಿ ಅಭಿವೃದ್ಧಿಗೆ ಬದ್ಧ


 12 ವರ್ಷ ನಾನು ಸುಮ್ನೆ ಇದ್ದೀನಿ ಅಂದ್ರೆ ನನ್ನ ಕೈಯಲ್ಲಿ ಏನೂ ಆಗೋದಿಲ್ಲ ಅಂತ ಅಲ್ಲ. ಒಂದೂವರೆ ವರ್ಷದಿಂದ ಬಳ್ಳಾರಿಯ ಮನೆಯಿಂದ ಹೊರ ಬಂದಿಲ್ಲ. ಯಾಕಂದ್ರೇ ಆಗುವ ಕೆಲಸ ಆಗುವುದಿಲ್ಲ ಎಂದು ಸುಮ್ಮನಿದ್ದೇ. ನಮ್ಮ ಕುಟುಂಬ ಬಳ್ಳಾರಿ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. 


ಕಾಂಗ್ರೆಸ್​ ಸೇರ್ತಾರಾ ಜನಾರ್ದನ ರೆಡ್ಡಿ?


ಕಾಂಗ್ರೆಸ್, ಬಿಜೆಪಿ ಅಂತ ನಾನು ಹೇಳೋದಿಲ್ಲ. ನಮ್ಮ ಕುಟುಂಬದ ಮೇಲೆ ಬಳ್ಳಾರಿ ಜನರ ಆಶೀರ್ವಾದ ಇರಲಿ ಅಂತ ಹೇಳಿದ್ದಾರೆ. ಇತ್ತೀಚೆಗೆ ಜನಾರ್ದನ‌ ರೆಡ್ಡಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನಗಳು ಸಿಕ್ಕಿಲ್ಲ,  ಹೈಕಮಾಂಡ್​ ಹಾಗೂ ರಾಜ್ಯ ಬಿಜೆಪಿ ನಾಯಕರು ಏನಾದ್ರೂ ನಿರ್ಧಾರ ತೆಗೆದುಕೊಳ್ತಾರೆ ಎಂಬ ನಿರೀಕ್ಷೆಯಲ್ಲೇ ಜನಾರ್ದನ ರೆಡ್ಡಿ ಕಾಯುತ್ತಿದ್ರು ಆದ್ರೆ ಇದೀಗ ಸ್ಥಾನ ಸಿಗದ ಹಿನ್ನೆಲೆ ಕಾಂಗ್ರೆಸ್​ಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.


ಇದನ್ನೂ ಓದಿ: JDS Party: ವಿಧಾನಸಭೆ ಚುನಾವಣೆಗೆ ಜೆಡಿಎಸ್​ ರಣತಂತ್ರ, ಅಭ್ಯರ್ಥಿಗಳಿಗೆ ರಹಸ್ಯ ಸ್ಥಳದಲ್ಲಿ ತರಬೇತಿ!


ಜನರ ಜೇಬಿಗೆ ನಾನು ಕತ್ತರಿ ಹಾಕಿಲ್ಲ


ನಾವು ಯಾವತ್ತೂ ಜನರ ಜೇಬಿಗೆ ಕತ್ತರಿ ಹಾಕಿಲ್ಲ, ಯಾರಿಗೂ ನಾವು ಮೋಸ ಮಾಡಿಲ್ಲ ಅದೃಷ್ಟದಿಂದ ಮೇಲೆ ಬಂದಿದ್ದೇವೆ. ಹೆಲಿಕಾಪ್ಟರ್ ತೆಗೆದುಕೊಂಡಿದ್ದಕ್ಕೆ ಕೆಲವರು ಮಾತನಾಡಿದರು. ಆದ್ರೇ, ನಾನು ಸಚಿವನಾಗಿದ್ದಾಗ ರಸ್ತೆ ಮೂಲಕ ಬೆಂಗಳೂರಿಗೆ ಹೋದ್ರೆ ಏಳೆಂಟು ಗಂಟೆಯಾಗುತ್ತಿತ್ತು. ನನಗೆ ಬಳ್ಳಾರಿಯ ಜನರಿಗೆ ಸಮಯ ಕೊಡೋಕೆ ಆಗ್ತಾ ಇರಲಿಲ್ಲ. ಹೀಗಾಗಿ ಹೆಲಿಕಾಪ್ಟರ್ ತೆಗೆದುಕೊಂಡಿದ್ದೆ, ಎರಡು ಗಂಟೆಯಲ್ಲಿ ಬೆಂಗಳೂರಿಗೆ ಹೋಗಿ ಬಂದು ಬಳ್ಳಾರಿ ಜನರ ಜೊತೆ ಸಮಯ ಕಳೆಯುತ್ತಿದ್ದೆ ಎಂದು ಜನಾರ್ದನ‌ ರೆಡ್ಡಿ ಹೇಳಿದ್ದಾರೆ.


ಇದನ್ನೂ ಓದಿ: Potholes in Bengaluru: ಅಪಘಾತ ತಪ್ಪಿಸಲು ಅಖಾಡಕ್ಕಿಳಿದ ಖಾಕಿ! ಟ್ರಾಫಿಕ್ ಪೊಲೀಸರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ


ಇತ್ತೀಚಿಗಷ್ಟೇ ಸಚಿವ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಗೌಪ್ಯವಾಗಿ ಮಾತುಕತೆ ನಡೆಸಿದ್ರು. ಈ ವೇಳೆ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೆ ರಾಜಕೀಯಕ್ಕೆ ಎಂಟ್ರಿ ನೀಡಲು ಬಿಜೆಪಿ ನಾಯಕರು ಹಾಗೂ ಪಕ್ಷದ ವರಿಷ್ಠರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ರಾಮುಲು ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published by:ಪಾವನ ಎಚ್ ಎಸ್
First published: