ಗಂಗಾವತಿ, ಕೊಪ್ಪಳ: ರಾಜ್ಯ ರಾಜಕೀಯ (State Poliotics) ರಂಗೇರುತ್ತಿದೆ. ಚುನಾವಣೆ (Election) ಹೊತ್ತಲ್ಲಿ ಮತದಾರರನ್ನು (Voters) ಸೆಳೆಯಲು ರಾಜಕಾರಣಿಗಳು, ರಾಜಕೀಯ ಪಕ್ಷಗಳು ಹಲವು ರೀತಿಯ ಆಮಿಷಗಳನ್ನು ಒಡ್ಡುತ್ತಿವೆ. ಇದೀಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರೂ (G. Janardhan Reddy) ಕೂಡ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangawati ) ಮತದಾರರಿಗೆ ಭರ್ಜರಿ ಆಫರ್ ನೀಡಿದ್ದಾರೆ. ತಾವು ಗೆದ್ದು ಶಾಸಕರಾದರೆ ಕ್ಷೇತ್ರದ ಮತದಾರರಿಗೆ ಡಬಲ್ ಬೆಡ್ ರೂಂ ಮನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಸ್ಲಂಗಳಲ್ಲಿರುವ ಜನರಿಗೆ ಪಟ್ಟಗಳನ್ನು ಕೊಡಿಸುತ್ತೇನೆ ಅಂತ ಭರವಸೆ ನೀಡಿದ್ದಾರೆ.
ಗಂಗಾವತಿ ಮತದಾರರಿಗೆ ಡಬಲ್ ಬೆಡ್ ರೂಂ ಗಿಫ್ಟ್
ಕೊಪ್ಪಳದ ಗಂಗಾವತಿ ಮತದಾರರಿಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭರ್ಜರಿ ಆಫರ್ ನೀಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಾರ್ಟಿ ಸ್ಥಾಪಿಸಿ, ಗಂಗಾವತಿಯಿಂದ ಸ್ಪರ್ಧೆಗೆ ಸಜ್ಜಾಗಿರುವ ಜನಾರ್ದನ ರೆಡ್ಡಿ, ಮತದಾರರಿಗೆ ಭರ್ಜರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಗಂಗಾವತಿ ಮತದಾರರಿಗೆ ಡಬಲ್ ಬೆಡ್ ರೂಂ ನೀಡುವ ಭರವಸೆ ನೀಡಿದ್ದಾರೆ.
ಸ್ಲಂಗಳ ಜನರಿಗೆ ಪಟ್ಟ ನೀಡುವ ಭರವಸೆ
ಇನ್ನು ಗಂಗಾವತಿಯ ಮತದಾರರಿಗೆ ತಾನು ಶಾಸಕನಾಗಿ ಗೆದ್ದು ಬಂದರೆ ಹಲವು ಸವಲತ್ತು ಒದಗಿಸುವುದಾಗಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿನ್ನೆ ಪ್ರಚಾರದ ವೇಳೆ ಮಾತನಾಡಿದ ಅವರು, ತಾವು ಶಾಸಕರಾದರೆ ಗಂಗಾವತಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Gali Janardhana Reddy: ಬಡ ಕುಟುಂಬದಿಂದ ಬಂದ ನಾನು ಏನು ಅನ್ನೋದನ್ನು ಈಗಾಗಲೇ ತೋರಿಸಿ ಕೊಟ್ಟಿದ್ದೇನೆ: ಜನಾರ್ದನ ರೆಡ್ಡಿ
ಲಂಬಾಣಿ ಡ್ರೆಸ್‌ನಲ್ಲಿ ಮಿಂಚಿದ್ದ ರೆಡ್ಡಿ
ನಿನ್ನೆ ಪತ್ನಿ ಅರುಣಾ ಲಕ್ಷ್ಮೀ ಜೊತೆ ಹಿರೇಜಂತಗಲನ ವಿರುಪಾಪುರ ತಾಂಡಾದಲ್ಲಿ ಭರ್ಜರಿ ಪ್ರಚಾರ ಮಾಡಿದ್ದ ಜನಾರ್ದನ ರೆಡ್ಡಿ, ಬಂಜಾರ ಸಮುದಾಯದ ಉಡುಗೆ ತೊಟ್ಟು ಗಮನ ಸೆಳೆದರು. ಜೊತೆಗೆ ಜನಾರ್ದನ ರೆಡ್ಡಿಗೆ ಸಮುದಾಯದ ಮುಖಂಡರು ಬೆಳ್ಳಿ ಕಿರೀಟ ತೊಡಿಸಿ, ಗೌರವಿಸಿದರು.
ಮಕ್ಕಳನ್ನು ದತ್ತು ಪಡೆದ ರೆಡ್ಡಿ ದಂಪತಿ
ಭರ್ಜರಿ ಪ್ರಚಾರ ನಡುವೆ ಜನಾರ್ದನ ರೆಡ್ಡಿ ಅವರು ತಂದೆ-ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡು ಮಾನವೀಯತೆ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ವೀರುಪಾಪುರ ತಾಂಡದ ಮಕ್ಕಳಾದ ಜ್ಯೂತಿ ಸ್ವರೂಪ್, ವೇಣು ಎಂಬವರನ್ನು ಅಧಿಕೃತವಾಗಿ ದತ್ತು ಪಡೆದುಕೊಂಡಿದ್ದಾರೆ. ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ಜನಾರ್ದನ ರೆಡ್ಡಿ ಅವರು ವಹಿಸಿಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿ ದತ್ತು ಸ್ವೀಕಾರ ಮಾಡಿದ್ದಾರೆ.
ಬಟ್ಟೆ ಘಟಕ ಆರಂಭದ ಭರವಸೆ
ಮೂರು ತಿಂಗಳಲ್ಲಿ ಗಂಗಾವತಿ, ಕೊಪ್ಪಳದಲ್ಲಿ ಬಟ್ಟೆ ತಯಾರಿಕ ಘಟಕ ಆರಂಭ ಮಾಡಲಾಗುತ್ತದೆ. ತಲಾ 5 ಕೋಟಿ ರೂಪಾಯಿಯಲ್ಲಿ ಬಟ್ಟೆ ತಯಾರಿಕ ಘಟಕಗಳ ಆರಂಭ ಮಾಡುತ್ತೇನೆ. ಬಟ್ಟೆ ತಯಾರಕ ಘಟಕದ ಹೊಲಿಗೆ ತರಬೇತಿ, ಹೊಲಿಗೆ ಯಂತ್ರ ನೀಡಲಾಗುವುದು. ಬಟ್ಟೆ ತಯಾರಕರು ಪ್ರತಿ ತಿಂಗಳು 40 ಸಾವಿರ ರೂಪಾಯಿಯವರೆಗೂ ದುಡಿಯುವ ಅವಕಾಶವಿದೆ ಎಂದು ಹೇಳಿದರು.
ಇದನ್ನೂ ಓದಿ: Janardhana Reddy: ಲಂಬಾಣಿ ಡ್ರೆಸ್‌ನಲ್ಲಿ ಮಿಂಚಿದ ರೆಡ್ಡಿ ದಂಪತಿ; ಇಬ್ಬರು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ
ಶೀಘ್ರವೇ ಅಭ್ಯರ್ಥಿಗಳ ಘೋಷಣೆ
ಈಗಾಗಲೇ ಜನಾರ್ದನ ರೆಡ್ಡಿ ಅವರ ಕೆಆರ್ಪಿಪಿ ಪಕ್ಷದಿಂದ 12 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇದೇ ತಿಂಗಳ 30ರ ಒಳಗಾಗಿ 30ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ