• Home
  • »
  • News
  • »
  • state
  • »
  • Janardhana Reddy: ಜನಾರ್ದನ ರೆಡ್ಡಿ ರೀ ಎಂಟ್ರಿಗೆ ಅಖಾಡ ರೆಡಿ! ಗಂಗಾವತಿಯಿಂದ ಗಣಿ ಧಣಿ ಸ್ಪರ್ಧೆ ಫಿಕ್ಸ್​?!

Janardhana Reddy: ಜನಾರ್ದನ ರೆಡ್ಡಿ ರೀ ಎಂಟ್ರಿಗೆ ಅಖಾಡ ರೆಡಿ! ಗಂಗಾವತಿಯಿಂದ ಗಣಿ ಧಣಿ ಸ್ಪರ್ಧೆ ಫಿಕ್ಸ್​?!

ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ

ಜನಾರ್ದನರೆಡ್ಡಿ ರಾಜಕೀಯಕ್ಕೆ ರೀ ಎಂಟ್ರಿ ಹಿನ್ನೆಲೆ ಗಂಗಾವತಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸಿನಿಂದ ಸಾಗಿದೆ. ಬಳ್ಳಾರಿ ಗಣಿ ಧಣಿ ಗಂಗಾವತಿಯಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ.

  • Share this:

ಕೊಪ್ಪಳ (ಡಿ.12): ಜನಾರ್ದನ ರೆಡ್ಡಿ ರಾಜಕೀಯದ (Politics) 2ನೇ ಆರಂಭಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಬಿಜೆಪಿಯಿಂದ ದೂರ ಸರಿದಿರುವ ಜನಾರ್ದನ ರೆಡ್ಡಿ (Janardhan Reddy) ಅವರು ಹೊಸ ಪಕ್ಷ ಕಟ್ಟಲು ನಾನಾ ರಣತಂತ್ರ ಮಾಡ್ತಿದ್ದಾರೆ. ಇನ್ನು ಗಂಗಾವತಿ ಕ್ಷೇತ್ರದಿಂದಲೇ ರೆಡ್ಡಿ ರೀ ಎಂಟ್ರಿ ಕೊಡ್ತಾರೆ ಎನ್ನಲಾಗಿದೆ. ಇತ್ತ ಗೆಳೆಯ ರಾಮುಲು (Ramulu) ಅವರನ್ನು ಇತ್ತೀಚೆಗೆ ಭೇಟಿಯಾಗಿ ಮಾತುಕತೆ ನಡೆಸಿರುವ ಜನಾರ್ದನ ರೆಡ್ಡಿ, ತಮಗೆ ಸಹಕಾರ ನೀಡಬೇಕೆಂದು ಕೋರಿದ್ದಾರೆ ಎಂಬ ಮಾಹಿತಿ ಅವರ ಆಪ್ತ ವಲಯದಿಂದ ತಿಳಿದು ಬಂದಿದೆ. ಆದರೆ, ರಾಮುಲು ಯಾವುದೇ ಭರವಸೆ ನೀಡಿಲ್ಲ ಎನ್ನಲಾಗಿದೆ.


ಜನಾರ್ದನರೆಡ್ಡಿ ರಾಜಕೀಯಕ್ಕೆ ರೀ ಎಂಟ್ರಿ


ಜನಾರ್ದನರೆಡ್ಡಿ ರಾಜಕೀಯಕ್ಕೆ ರೀ ಎಂಟ್ರಿ ಹಿನ್ನೆಲೆ ಗಂಗಾವತಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸಿನಿಂದ ಸಾಗಿದೆ. ಬಳ್ಳಾರಿ ಗಣಿ ಧಣಿ ಗಂಗಾವತಿಯಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ. ವೈ ಎಸ್ ಜಗನ್ ಭೇಟಿಯಾಗಿ ವೈಎಆಸ್ ಆರ್ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಕಟ್ಟುತ್ತಾರೆ ಎಂಬ ವದಂತಿ ಸಹ ಕೇಳಿ ಬಂದಿದೆ. ಇಲ್ಲವಾದ್ರೆ ಅವರೇ ಕಲ್ಯಾಣ ಕರ್ನಾಟಕ  ಎನ್ನುವ ಸ್ವತಃ ಪಕ್ಷ ಕಟ್ಟುವ ಸಾಧ್ಯತೆಯಿದೆ ಎನ್ನಲಾಗ್ತಿದೆ.


Janardhana Reddy is returning to politics Re entry by which party pvn
ಜನಾರ್ದನ ರೆಡ್ಡಿ


ಹಾಲಿ ಶಾಸಕರ ಎದೆಯಲ್ಲಿ ಢವಢವ


ಒಂದು ಜನಾರ್ದನ ರೆಡ್ಡಿ ಗಂಗಾವತಿಯಿಂದ ಸ್ಪರ್ಧಿಸಿದರೆ ಹಾಲಿ ಶಾಸಕರಿಗೆ ಢವಢವ ಶುರುವಾಗಿದೆ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಎನ್ನುವ ಪರಣ್ಣ, ಮುಂದಿನ ಬಾರಿ ನನಗೆ ಟಿಕೆಟ್ ನೀಡುತ್ತಾರೆ ಎಂದಿದ್ದಾರೆ. ಆದರೆ ನಿನ್ನೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಭೇಟಿಯಾಗಿರುವುದು ಇದೀಗ ಕುತೂಹಲ ಮೂಡಿಸಿದೆ.


ಗಂಗಾವತಿಯಲ್ಲಿ ಶೀಘ್ರವೇ ಗೃಹ ಪ್ರವೇಶ


ಡಿಸೆಂಬರ್ 18ರ ನಂತರ ಜನಾರ್ದನ ರೆಡ್ಡಿ ತನ್ನ ರಾಜಕೀಯ ನಡೆಯ ಬಗ್ಗೆ  ಸ್ಪಷ್ಟವಾಗಿ ತಿಳಿಸಲಿದ್ದಾರೆ. ಶೀಘ್ರವೇ ಗಂಗಾವತಿಯಲ್ಲಿ ಗೃಹ ಪ್ರವೇಶ ಮಾಡಲಿದ್ದಾರೆ. ಈ ಬಗ್ಗೆ ಜನಾರ್ದನ ರೆಡ್ಡಿ ಬೆಂಬಲಿಗರು ಈಗಾಗಲೇ  ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪೋಸ್ಟ್ ಹಾಕುತ್ತಿದ್ದಾರೆ. ಗಂಗಾವತಿಯಲ್ಲಿ ರಾಮುಲು ಆ್ಯಕ್ಟೀವ್ ಆಗಿರುವುದು ಕೊಪ್ಪಳ ಹಾಗೂ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.


ಸಂಸದ ಸಂಗಣ್ಣ ಕರಡಿ ಹೇಳಿಕೆ 


ಜನಾರ್ದನರೆಡ್ಡಿ ರಾಜಕೀಯ ಎಂಟ್ರಿ ಬಗ್ಗೆ ಮಾತಾಡಿದ ಸಂಸದ ಸಂಗಣ್ಣ ಕರಡಿ ಅವರು ರೆಡ್ಡಿ ಅವರು ಗಂಗಾವತಿಯಿಂದ ಮತ್ತೆ ರಾಜಕೀಯ ಪ್ರವೇಶದ  ಈ ಬಗ್ಗೆ ನಾನೇನು ಹೇಳೋದಿಲ್ಲ. ಹೈಕಮಾಂಡ್​ ಈ ಎಲ್ಲವನ್ನೂ ನೋಡುತ್ತಿದೆ. ಜನಾರ್ದನ ರೆಡ್ಡಿ ಈ ಹಿಂದೆ ನಮ್ಮ ಪಕ್ಷದಲ್ಲಿದ್ದವರು
ಈಗಲೂ ರಾಷ್ಟ್ರೀಯ ನಾಯಕರು  ಹಾಗೂ ಮುಖಂಡರು ಅವರೊಂದಿಗೆ ಇದ್ದಾರೆ ಎಂದು ಹೇಳಿದ್ರು.


ಇದನ್ನೂ ಓದಿ:  Bus Strike: ಸಾರ್ವಜನಿಕರೇ ಗಮನಿಸಿ, ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ಸಿಬ್ಬಂದಿ


ರೆಡ್ಡಿ ಹೊಸ ಪಕ್ಷ ಕಟ್ಟಬಹುದು


ಗಂಗಾವತಿಯಲ್ಲಿ ಜನಾರ್ದನರೆಡ್ಡಿ ಅಥವಾ ಪರಣ್ಣರಿಗೆ ಟಿಕೆಟ್​ ನೀಡಬೇಕು
ಶೇ 100 ರಷ್ಟು ಪರಣ್ಣನವರಿಗೆ ಟಿಕೆಟ್ ಸಿಗುತ್ತದೆ ಅನಿಸುತ್ತದೆ
ಅವರು ಜನಾರ್ದನ ರೆಡ್ಡಿ ಅವರು ಹೊಸ ರಾಜಕೀಯ ಪಕ್ಷ ಮಾಡಬಹುದು. ಇದು ರಾಜಕೀಯದಲ್ಲಿ ಹೊಸದಲ್ಲ ಈ ಹಿಂದೆ ಹೊಸ ರಾಜಕೀಯ ಪಕ್ಷ ಮಾಡಿ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ನಮ್ಮ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು