Janardhan Reddy: ಪಕ್ಷದ ಚಿಹ್ನೆ, ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ ಗಣಿ ಧಣಿ

ಜನಾರ್ಧನ ರೆಡ್ಡಿ

ಜನಾರ್ಧನ ರೆಡ್ಡಿ

ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ ಹಲವು ಹೊಸ ಘೋಷಣೆಗಳನ್ನು ಮಾಡಿದ್ದಾರೆ. ಹೊಸ ಘೋಷಣೆಗಳು ಈ ಕೆಳಗಿನಂತಿದೆ

  • News18 Kannada
  • 4-MIN READ
  • Last Updated :
  • Karnataka, India
  • Share this:

ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya Pragati Party) ಸ್ಥಾಪನೆ ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Former Minister Janardhan Reddy) ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಚಿಹ್ನೆ (Party Logo) ಮತ್ತು ಚುನಾವಣಾ ಪ್ರಣಾಳಿಕೆಯನ್ನು (Election Manifesto) ಬಿಡುಗಡೆಗೊಳಿಸಿದರು.ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚುನಾವಣಾ ಚಿಹ್ನೆ ಪುಟ್ಬಾಲ್ ಆಗಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ರಾಜ್ಯಧ್ಯಾಕ್ಷರಾಗಿರುವ ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಬಿಡುಗಡೆ ಮಾಡಿದರು. ನನ್ನ ಪರವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮುಂದೆ ಪ್ರಚಾರ ಮಾಡ್ತಾರೆ ಅನ್ನೋದು ಸಂಪೂರ್ಣ ಸುಳ್ಳು ಎಂದು ಹೇಳಿದರು.


ಕಲ್ಯಾಣ ರಾಜ್ಯ ಪ್ರಗತಿ ಪಕ್ಷವೂ ಯಾರ ಜೊತೆಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಸೇರಿದಂತೆ ಯಾವ ಪಕ್ಷದ ನಾಯಕರು ನನ್ನ ಸಂಪರ್ಕ ಮಾಡಿಲ್ಲ. ನಾನು ಯಾವ ಪಕ್ಷದ ಜೊತೆಗೂ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿದರು.


ಕಲ್ಯಾಣ ರಾಜ್ಯ ಪ್ರಗತಿ ಪಕ್ಷ


ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ ಹಲವು ಹೊಸ ಘೋಷಣೆಗಳನ್ನು ಮಾಡಿದ್ದಾರೆ. ಹೊಸ ಘೋಷಣೆಗಳು ಈ ಕೆಳಗಿನಂತಿದೆ


*ಬಸವೇಶ್ವರ ಶಿಕ್ಷಣ ಸುಧಾರಣೆ


*ಒನಕೆ ಓಬವ್ವ ಸ್ವಾಭಿಮಾನ ಯೋಜನೆ


*ಬಸವೇಶ್ವರ ಗೃಹ ಯೋಜನೆ


*ಸಂಗೊಳ್ಳಿ ರಾಯಣ್ಣ ಯುವ ಕಿರಣ ಯೋಜನೆ




*ರಾಣಿ ಚೆನ್ನಮ್ಮ ಅಭಯ ಹಸ್ತ ಯೋಜನೆ


*ಬಸವೇಶ್ವರ ಆರೋಗ್ಯ ಕವಚ ಯೋಜನೆ


*ಬಸವೇಶ್ವರ ಪಿಂಚಣಿ ಯೋಜನೆ


*ಬಸವೇಶ್ವರ ರೈತ ಭರವಸೆ


*ಸಂಗೊಳ್ಳಿ ರಾಯಣ್ಣ ಯುವ ಕಿರಣ


ಇದನ್ನೂ ಓದಿ:  Karnataka Election 2023: ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಅಭಯ; ಫುಲ್ ಖುಷಿ ಆದ್ರಂತೆ ಚುನಾವಣಾ ಚಾಣಕ್ಯ


*ಬಸವೇಶ್ವರ ಜಲ ಯಜ್ಞ


*ಅಭಿವೃದ್ಧಿ ವಿಕೇಂದ್ರಿಕರಣ

top videos


    *ಮಹರ್ಷಿ ವಾಲ್ಮಿಕಿ- ಅಂಬೇಡ್ಕರ್ ಜನಸ್ನೇಹಿ ಯೋಜನೆಗಳು

    First published: