• Home
  • »
  • News
  • »
  • state
  • »
  • Janardhan Reddy: ಇಂದು ಜನಾರ್ದನ ರೆಡ್ಡಿ ರಾಜಕಾರಣದ ಕ್ಲೈಮ್ಯಾಕ್ಸ್‌ ಡೇ!

Janardhan Reddy: ಇಂದು ಜನಾರ್ದನ ರೆಡ್ಡಿ ರಾಜಕಾರಣದ ಕ್ಲೈಮ್ಯಾಕ್ಸ್‌ ಡೇ!

ಜನಾರ್ಧನ ರೆಡ್ಡಿ, ಮಾಜಿ ಸಚಿವ

ಜನಾರ್ಧನ ರೆಡ್ಡಿ, ಮಾಜಿ ಸಚಿವ

ಕಳೆದ ಒಂದು ವಾರದಿಂದ ಟೆಂಪಲ್​ ರನ್ ಮಾಡುತ್ತಿರುವ ಜನಾರ್ದನ ರೆಡ್ಡಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

  • Share this:

ಇಂದು ಮಾಜಿ ಸಚಿವ, ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ (Former Minister Gali Janardhan Reddy) ರಾಜಕಾರಣದ ಕ್ಲೈಮ್ಯಾಕ್ಸ್‌ ಡೇ. ಇಂದು ಬೆಳಗ್ಗೆ 10.30ಕ್ಕೆ ಜನಾರ್ದನ್ ರೆಡ್ಡಿ ಸುದ್ದಿಗೋಷ್ಠಿ (Janardhan Reddy Press meet) ನಡೆಸಲಿದ್ದಾರೆ. ಬೆಂಗಳೂರಿನ ಬಸವೇಶ್ವರ ಸರ್ಕಲ್ ಬಳಿಯ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜಕೀಯ ನಡೆ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ. ಆಪ್ತರ ಹೆಸರಿನಲ್ಲಿ ಹೊಸ ಪಕ್ಷ ಸ್ಥಾಪನೆ (New Political Party) ಬಗ್ಗೆ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಇಂದು ಜನಾರ್ದನ್​​ ರೆಡ್ಡಿ ರಾಜಕೀಯ (Janardhan Reddy Politics) ನಡೆ ಬಗ್ಗೆ ನಿರ್ಧಾರ ತಿಳಿಸಲಿದ್ದಾರೆ. ಜನಾರ್ದನ್​ ರೆಡ್ಡಿ ರಾಜಕೀಯ ನಡೆ ಕುರಿತು ಬಿಜೆಪಿ ನಾಯಕರಿಗೆ (BJP Leaders) ಟೆನ್ಷನ್ ಶುರುವಾಗಿದೆ.


ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಾರಿಗೆ ಸಚಿವ ಶ್ರೀರಾಮುಲು, ಜನಾರ್ದನರೆಡ್ಡಿ ಈ ಭಾಗದ ಹಿರಿಯ ನಾಯಕರು. ಪಕ್ಷದ ಹಿರಿಯ ನಾಯಕರು ಮನವೊಲಿಸುವ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ನೀಡಿದ್ದರು.


ಬಿಜೆಪಿ ಜನಾರ್ದನರೆಡ್ಡಿ ಅವರನ್ನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಜನಾರ್ದನರೆಡ್ಡಿ ಅವರ ಬೇಡಿಕೆಗಳ ಬಗ್ಗೆ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ಕೂಡ ತರಲಾಗಿದೆ. ಪಕ್ಷದ ನಾಯಕರು ಜನಾರ್ದನರೆಡ್ಡಿ ಅವರನ್ನ ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.


is this a janardhan reJanardhan Reddy press meet today ddy new party name mrq
ಸಿದ್ಧಾರೂಢ ಮಠದಲ್ಲಿ ಜನಾರ್ದನ ರೆಡ್ಡಿ


ಕಳೆದ ಒಂದು ವಾರದಿಂದ ಟೆಂಪಲ್ ರನ್


ಎರಡು ದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಜನಾರ್ದನ ರೆಡ್ಡಿ, ರಾಜಕೀಯ ಮತ್ತು ಸ್ನೇಹ ಎರಡೂ ಬೇರೆ ಬೇರೆ ಎಂದು ಹೇಳುವ ಮೂಲಕ ಶ್ರೀರಾಮುಲು ತಮ್ಮ ಜೊತೆ ಬರುತ್ತಿಲ್ಲ ಎಂಬ ಸುಳಿವು ನೀಡಿದ್ದಾರೆ. ಕಳೆದ ಒಂದು ವಾರದಿಂದ ಟೆಂಪಲ್​ ರನ್ ಮಾಡುತ್ತಿರುವ ಜನಾರ್ದನ ರೆಡ್ಡಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.


ಸ್ಥಳೀಯ ಮುಖಂಡರ ಜೊತೆ ಚರ್ಚೆ


ಟೆಂಪಲ್ ರನ್ ಜೊತೆಯಲ್ಲಿಯೇ ಸ್ಥಳೀಯ ಮುಖಂಡರನ್ನು ಭೇಟಿಯಾಗಿರುವ ಜನಾರ್ದನ ರೆಡ್ಡಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದಲೇ ತಮ್ಮ ಸ್ಪರ್ಧೆ ಎಂಬುದನ್ನು ಈಗಾಗಲೇ ಖಚಿತಪಡಿಸಿದ್ದಾರೆ.


ಮಾಧ್ಯಮಗಳ ಎಲ್ಲಾ ಪ್ರಶ್ನೆಗಳಿಗೆ ಮುಗುಳ್ನಗುವ ಜನಾರ್ದನ ರೆಡ್ಡಿ, ಭಾನುವಾರದ ಸುದ್ದಿಗೋಷ್ಠಿಯಲ್ಲಿ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಇಂದಿನ ಸುದ್ದಿಗೋಷ್ಠಿ ತೀವ್ರ ಕುತೂಹಲ ಕೆರಳಿಸಿದೆ.


Janardhan Reddy press meet today
ಜನಾರ್ದನ ರೆಡ್ಡಿ


ಶ್ರೀರಾಮುಲು, ರೆಡ್ಡಿ ಗೌಪ್ಯ ಮಾತುಕತೆ


ಇತ್ತೀಚಿಗಷ್ಟೇ ಸಚಿವ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಗೌಪ್ಯವಾಗಿ ಮಾತುಕತೆ ನಡೆಸಿದ್ರು. ಈ ವೇಳೆ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೆ ರಾಜಕೀಯಕ್ಕೆ ಎಂಟ್ರಿ ನೀಡಲು ಬಿಜೆಪಿ ನಾಯಕರು ಹಾಗೂ ಪಕ್ಷದ ವರಿಷ್ಠರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ರಾಮುಲು ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಕರ್ನಾಟಕ ರಾಜ್ಯ ಪ್ರಗತಿ ಪಕ್ಷ?


ಇಷ್ಟು ದಿನ ಜನಾರ್ದನ ರೆಡ್ಡಿ ಅವರ ನೂತನ ಪಕ್ಷದ ಹೆಸರು ಕಲ್ಯಾಣ ಕರ್ನಾಟಕ ಪಕ್ಷ ಎಂದು ಹೇಳಲಾಗುತ್ತಿತ್ತು. ಇದೀಗ ನೂತನ ಪಾರ್ಟಿಗೆ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಎಂದು ಹೆಸರಿಡಲು ಬೆಂಬಲಿಗರು ಮುಂದಾಗಿದ್ದಾರೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ನೋಂದಣಿ ಸಂಬಂಧಿಸಿದ ಕಾರ್ಯಗಳಲ್ಲಿ ಜನಾರ್ದನ ರೆಡ್ಡಿ ಬೆಂಬಲಿಗರು ನಿರತರಾಗಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ: Janardhan Reddy: ಹೊಸ ಪಕ್ಷ ಸ್ಥಾಪನೆಯಾದ್ರೆ ಗೆಳೆಯರು ನಿಮ್ಮ ಜೊತೆ ಬರ್ತಾರಾ? ಪ್ರಶ್ನೆಗೆ ಗಣಿ ಧಣಿ ಉತ್ತರ ಹೀಗಿತ್ತು


10 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ


ಇನ್ನು ಉತ್ತರ ಕರ್ನಾಟಕದ ಸುಮಾರು 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜನಾರ್ದನ ರೆಡ್ಡಿ  ಮುಂದಾಗಿದ್ದಾರಂತೆ. ಇದರಲ್ಲಿ ಸುಮಾರು 10ರಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಗುರಿಯನ್ನು ಜನಾರ್ದನ ರೆಡ್ಡಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನು ತಾವು ಗಂಗಾವತಿಯಿಂದಲೇ ಸ್ಪರ್ಧೆ ಮಾಡೋದಾಗಿ ಅಂತ ಹೇಳಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು