ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಗೆ (Assembly Election 2023) ಸ್ಪರ್ಧೆ ಮಾಡಲು ಜನಾರ್ದನ ರೆಡ್ಡಿ ಸಿದ್ಧತೆ ನಡೆಸಿದ್ದಾರೆ. ಇದರ ಭಾಗವಾಗಿ ಗಂಗಾವತಿ (Gangavati) ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ಮುಖಂಡರ ಜೊತೆಯಲ್ಲಿಯೂ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಜನಾರ್ದನ ರೆಡ್ಡಿ ಬಿಜೆಪಿಯಿಂದಲೇ ಟಿಕೆಟ್ (BJP Ticket) ಕೇಳಿದ್ದಾರೆ ಎನ್ನಲಾಗಿದೆ. ತಮಗೆ ಟಿಕೆಟ್ ನೀಡಬೇಕೆಂಬ ಸಂದೇಶವನ್ನು ಹೈಕಮಾಂಡ್ (BJP High command) ನಾಯಕರಿಗೂ ತಲುಪಿಸುವಲ್ಲಿ ಜನಾರ್ದನ ರೆಡ್ಡಿ ಯಶಸ್ವಿಯೂ ಆಗಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಬಿಜೆಪಿ ತಮಗೆ ಟಿಕೆಟ್ ನೀಡಲು ನಿರಾಕರಿಸಿದ್ರೆ ತಮ್ಮದೇ ಹೊಸ ಪಕ್ಷ ಸ್ಥಾಪಿಸುವ ಸಂದೇಶವನ್ನು ಬಿಜೆಪಿ ಹೈಕಮಾಂಡ್ಗೆ ರವಾನೆ ಮಾಡಿದ್ದಾರಂತೆ. ಈ ಬೆನ್ನಲ್ಲೇ ಅಲರ್ಟ್ ಆಗಿರುವ ಬಿಜೆಪಿ ಹೈಕಮಾಂಡ್, ರೆಡ್ಡಿಯವರ ಪರಮಾಪ್ತರಾಗಿರುವ ಸಚಿವ ಬಿ.ಶ್ರೀರಾಮುಲು (Minister B Sriramulu) ಮೂಲಕ ಸಂಧಾನಕ್ಕೆ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿರುವ ಜನಾರ್ದನ ರೆಡ್ಡಿ ಅವರ ಮನವೊಲಿಸುವ ಟಾಸ್ಕ್ನ್ನು ಹೈಕಮಾಂಡ್ ಶ್ರೀರಾಮಲು ಅವರಿಗೆ ನೀಡಿದೆ ಎಂದು ಹೇಳಲಾಗುತ್ತಿದೆ.
ಶ್ರೀರಾಮುಲುಗೆ ಬಿಗ್ ಟಾಸ್ಕ್
ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಸ್ಥಾಪನೆ ಬಿಜೆಪಿಗೆ ತಲೆನೋವಾಗೋ ನಿರೀಕ್ಷೆ ಇದೆ. ಆದ್ದರಿಂದ ಬಿಜೆಪಿ ಹೈಕಮಾಂಡ್, ಸಚಿವ ಶ್ರೀರಾಮುಲುಗೆ ಬಿಗ್ ಟಾಸ್ಕ್ ಕೊಟ್ಟಿದೆ. ರೆಡ್ಡಿಯನ್ನ ಮನವೊಲಿಸುವಂತೆ ಸೂಚಿಸಿದೆ.
ಈಗಾಗಲೇ ಬಿಜೆಪಿ ಹೈಕಮಾಂಡ್ಗೆ ಶ್ರೀರಾಮುಲು ಅಭಯ ನೀಡಿದ್ದು, ಸ್ನೇಹಿತ ಜನಾರ್ದನ ರೆಡ್ಡಿಯಿಂದ ಏನು ಸಮಸ್ಯೆ ಆಗಲ್ಲ. ಪಕ್ಷ ಅಧಿಕಾರಕ್ಕೆ ತರಲು ಒಟ್ಟಾಗಿ ಕೆಲಸ ಮಾಡುತ್ತೇವೆ. ಜನಾರ್ದನ ರೆಡ್ಡಿ ಯಾವುದೇ ಪಕ್ಷ ಸ್ಥಾಪನೆ ಮಾಡಲ್ಲ ಎಂದಿದ್ದಾರೆ ಎಂದು ತಿಳಿದು ಬಂದಿದೆ.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ
ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ವಾಸ್ತವ್ಯ ಹೂಡುವ ವಿಚಾರದ ಬಗ್ಗೆ ಮಾತಾಡಿದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ರಾಜ್ಯ, ರಾಷ್ಟ್ರ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ. ಜನಾರ್ದನ ರೆಡ್ಡಿ ಹನುಮಮಾಲೆ ಧರಿಸಿ ಆಂಜನಾದ್ರಿಗೆ ಬಂದಿದ್ದಾಗ ನಾನೂ ಭಾಗಿಯಾಗಿದ್ದೆ ಎಂದು ಹೇಳಿದ್ದಾರೆ.
ಬಿಜೆಪಿ ಹುಮ್ಮಸ್ಸು, ಸ್ವಲ್ಪ ಟೆನ್ಶನ್
ಗುಜರಾತ್, ಹಿಮಾಚಲ ಪ್ರದೇಶ ಆಯ್ತು. ಇದೀಗ ಎಲ್ಲಾ ಪಕ್ಷಗಳ ಕಣ್ಣು ಕರ್ನಾಟಕದ ಮೇಲೆ ನೆಟ್ಟಿದೆ. ಗುಜರಾತ್ ಪ್ರಚಂಡ ಗೆಲುವಿನಿಂದ ಬಿಜೆಪಿಗೆ ಹುಮ್ಮಸ್ಸು ಬಂದಿದ್ರೆ, ಕಾಂಗ್ರೆಸ್ಗೆ ಹಿಮಾಚಲದ ಗೆಲುವು ಆಕ್ಸಿಜನ್ ನೀಡಿದೆ. ಹಿಮಾಚಲ ಪ್ರದೇಶದ ರೀತಿ ಕರ್ನಾಟಕದಲ್ಲಿ ಸಮಸ್ಯೆ ಆಗಬಾರದು ಎಂದು ರಾಜ್ಯ ಬಿಜೆಪಿಗೆ ಹೈಮಾಂಡ್ ಸಂದೇಶ ರವಾನಿಸಿದೆ.
ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಲು ತಾಕೀತು ಮಾಡಲಾಗಿದೆ. ಇದ್ರ ಮಧ್ಯೆ RSS ಮುಖಂಡ ಮುಕುಂದ್, ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ಮತ್ತಷ್ಟು ಅಲರ್ಟ್
ಹಿಮಾಚಲ ಪ್ರದೇಶದ ಗೆಲುವು ಕಾಂಗ್ರೆಸ್ಗೆ ಹುಮ್ಮಸ್ಸು ತುಂಬಿದೆ. ಕರ್ನಾಟಕದಲ್ಲೂ ಅದೇ ರಣತಂತ್ರ ರೂಪಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಸಿದ್ದು, ಡಿ.ಕೆ ಶಿವಕುಮಾರ್ ಮತ್ತಷ್ಟು ಅಲರ್ಟ್ ಆಗಲಿದ್ದಾರೆ. ಭಿನ್ನಾಭಿಪ್ರಾಯ ಬಿಟ್ಟು ಗ್ರೌಂಡ್ವರ್ಕ್ಗೆ ಆದ್ಯತೆ ಕೊಡಲಿದ್ದಾರೆ. ಮತ್ತಷ್ಟು ಸಮಾವೇಶಗಳನ್ನು ಆಯೋಜಿಸಲು ಕಾಂಗ್ರೆಸ್ ತಯಾರಿ ಮಾಡಿದೆ.
ಇದನ್ನೂ ಓದಿ: Janardhan Reddy: ರಾಜಕೀಯಕ್ಕೆ ಜನಾರ್ದನ ರೆಡ್ಡಿ ಪತ್ನಿ? ಹೊಸ ಪಕ್ಷ ಸ್ಥಾಪನೆ ಮಾಡ್ತಾರಾ?
ಈ ನಡುವೆ ನ್ಯೂಸ್ 18 ಜತೆ ಮಾತಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, 60 ಪರ್ಸೆಂಟ್ ಹಿರಿಯರಿಗೆ, 40 ಪರ್ಸೆಂಟ್ ಯುವಕರಿಗೆ ಟಿಕೆಟ್ ಕೊಡಬೇಕು. ಹಿರಿಯರನ್ನ ಪರಿಷತ್ಗೆ ಕಳಿಸಿ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ