• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Janardhan Reddy: ಕುಚುಕು ಗೆಳೆಯನ ಮಾತು ಒಪ್ಪದ ಜನಾರ್ದನ ರೆಡ್ಡಿ; ನಾಳೆಯೇ ಹೊಸ ಪಕ್ಷ ಘೋಷಣೆ ಸಾಧ್ಯತೆ?

Janardhan Reddy: ಕುಚುಕು ಗೆಳೆಯನ ಮಾತು ಒಪ್ಪದ ಜನಾರ್ದನ ರೆಡ್ಡಿ; ನಾಳೆಯೇ ಹೊಸ ಪಕ್ಷ ಘೋಷಣೆ ಸಾಧ್ಯತೆ?

ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ

ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ

ಶ್ರೀರಾಮುಲು ಅವರಿಗೂ ಮೊದಲೇ ದೆಹಲಿಗೆ ತೆರಳಿದ್ದ ಜನಾರ್ದನ ರೆಡ್ಡಿ ತಮ್ಮ ಆಪ್ತರ ಮೂಲಕ ಹೊಸ ಪಕ್ಷ ನೋಂದಣಿ ಕಾರ್ಯದಲ್ಲಿ ತೊಡಗಿದ್ದರಂತೆ. ತಮ್ಮ ನೂತನ ಪಾರ್ಟಿಗೆ ಕಲ್ಯಾಣ ಕರ್ನಾಟಕ ಪಕ್ಷ (Kalyana Karnataka Party) ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ಕಮ್ ಬ್ಯಾಕ್ ಮಾಡುವ ವಿಷಯದ ಬಗ್ಗೆ ಬಿಜೆಪಿ (BJP) ಅಂತರ ಕಾಯ್ದುಕೊಳ್ಳುತ್ತಿದೆಯಾ ಅನ್ನೋ ಅನುಮಾನಗಳು ಮೂಡಿವೆ. ತನ್ನನ್ನು ದೂರ ಮಾಡುತ್ತಿರುವ ವಿಷಯ ತಿಳಿಯುತ್ತಲೇ ಬಿಜೆಪಿಗೆ ತಿರುಗೇಟು ನೀಡಲು ಜನಾರ್ದನ ರೆಡ್ಡಿ ಹೊಸ ಪಕ್ಷ (New Political Party) ಸ್ಥಾಪನೆ ಮಾಡ್ತಾರೆ, ಗಂಗಾವತಿಯಿಂದ (Gangavati) ತಾವೇ ಸ್ಪರ್ಧೆ ಮಾಡಿ, ಉತ್ತರ ಕರ್ನಾಟಕದ (North Karnataka) ಮೂವತ್ತಕ್ಕೂ ಅಧಿಕ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದವು.


ಈ ಹಿನ್ನೆಲೆ ಎಚ್ಚೆತ್ತ ಬಿಜೆಪಿ ಹೈಕಮಾಂಡ್ (BJP High command) ಸಾರಿಗೆ ಸಚಿವ ಶ್ರೀರಾಮುಲು (Minister Sriramulu) ಮೂಲಕ ಜನಾರ್ದನ ರೆಡ್ಡಿ ಮನವೊಲಿಸಲು ಮುಂದಾಗಿತ್ತು. ಹೈಕಮಾಂಡ್ ನೀಡಿದ ಟಾಸ್ಕ್​ ಸ್ವೀಕರಿಸಿದ್ದ ಶ್ರೀರಾಮುಲು ಆಪ್ತ ಗೆಳೆಯನಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗಲ್ಲ ಎಂಬ ಅಭಯವನ್ನು ಹೈಕಮಾಂಡ್​ಗೆ ನೀಡಿದ್ದರು.


ಇತ್ತ ಶ್ರೀರಾಮುಲು ಅವರು ಗೆಳೆಯನ ಪರ ಲಾಬಿ ಮಾಡಲು ದೆಹಲಿಗೆ ತೆರಳಿ ನಿರಾಸೆಯಿಂದ ಹಿಂದಿರುಗಿದ್ದಾರೆ. ಎರಡು ದಿನ ದೆಹಲಿಯಲ್ಲಿದ್ದ ಶ್ರೀರಾಮುಲು ರಹಸ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಅತ್ಯಾಪ್ತ ಗೆಳೆಯನನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವಂತೆ ಮಾಡಿಕೊಂಡಿದ್ದರಂತೆ. ಆದ್ರೆ ಈ ಬಗ್ಗೆ ಅಮಿತ್ ಶಾ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ ಎಂದು ಹೇಳಲಾಗಿದೆ.


ಇದನ್ನೂ ಓದಿ: Janardhan Reddy Granddaughter: ಜನಾರ್ದನ ರೆಡ್ಡಿ ಅವರ ಮೊಮ್ಮಗಳ ನಾಮಕರಣ, ಫೋಟೋಸ್​ ಇಲ್ಲಿವೆ


ಕಲ್ಯಾಣ ಕರ್ನಾಟಕ ಪಕ್ಷ ನೋಂದಣಿ ಪ್ರಕ್ರಿಯೆ


ಶ್ರೀರಾಮುಲು ಅವರಿಗೂ ಮೊದಲೇ ದೆಹಲಿಗೆ ತೆರಳಿದ್ದ ಜನಾರ್ದನ ರೆಡ್ಡಿ ತಮ್ಮ ಆಪ್ತರ ಮೂಲಕ ಹೊಸ ಪಕ್ಷ ನೋಂದಣಿ ಕಾರ್ಯದಲ್ಲಿ ತೊಡಗಿದ್ದರಂತೆ. ತಮ್ಮ ನೂತನ ಪಾರ್ಟಿಗೆ ಕಲ್ಯಾಣ ಕರ್ನಾಟಕ ಪಕ್ಷ (Kalyana Karnataka Party) ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.


janardhan reddy did not agree for sriramalu tomorrow he might announce new party mrq
ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ


ಹೊಸ ಪಕ್ಷ ಸ್ಥಾಪನೆಗೆ ಮುಂದಾಗದಂತೆ ಶ್ರೀರಾಮುಲು ಮನವಿ ಮಾಡಿಕೊಂಡರೂ ಜನಾರ್ದನ ರೆಡ್ಡಿ ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಇಬ್ಬರು ರಾಜ್ಯಕ್ಕೆ ಹಿಂದಿರುಗಿದ್ದಾರೆ. ಆದ್ರೆ ಜನಾರ್ದನ ರೆಡ್ಡಿ ದೆಹಲಿಯಲ್ಲಿ ಆಪ್ತರ ಮೂಲಕ ಪಕ್ಷದ ನೋಂದಣಿ ಮಾಡಿಸುತ್ತಿದ್ದಾರೆ ಎನ್ನಲಾಗಿದೆ.


ಎರಡ್ಮೂರು ದಿನಗಳಲ್ಲಿ ನೋಂದಣಿ ಕಾರ್ಯ ಪೂರ್ಣ ಸಾಧ್ಯತೆ


ಎರಡ್ಮೂರು ದಿನಗಳಲ್ಲಿ ಪಕ್ಷದ ನೋಂದಣಿ ಕಾರ್ಯ ಪೂರ್ಣವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹೊಸ ಪಕ್ಷ ಸ್ಥಾಪನೆ ಮತ್ತು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ನಾಳೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಜನಾರ್ದನ ರೆಡ್ಡಿ ಆಪ್ತ ವಲಯ ಮಾಹಿತಿ ನೀಡಲಿದೆ.


ಇದನ್ನೂ ಓದಿ: Janardhan Reddy: ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ? ಗಣಿ ಧಣಿಯನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳೋ ಸುಳಿವು ನೀಡಿದ ರಾಜಾಹುಲಿ


ಮತ್ತೊಂದು ಕಡೆ ಚುನಾವಣಾ ಆಯೋಗ ಹೊಸ ಪಕ್ಷ ಸ್ಥಾಪನೆಯ ದಾಖಲೆಗಳನ್ನು ನೀಡಿದ ನಂತರವೇ ಸುದ್ದಿಗೋಷ್ಠಿ ಮಾಡ್ತಾರೆ ಎಂದು ತಿಳಿದು ಬಂದಿದೆ.


janardhan reddy did not agree for sriramalu tomorrow he might announce new party mrq
ಬಿಎಸ್​ವೈ ಜೊತೆ ಜನಾರ್ದನ ರೆಡ್ಡಿ


ಜನಾರ್ದನ ರೆಡ್ಡಿಯತ್ತ ಬಿಎಸ್​ವೈ ಒಲವು


ಈ ಎಲ್ಲಾ ಬೆಳವಣಿಗೆ ನಡುವೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ನೀಡಿದ ಅಚ್ಚರಿಯ ಹೇಳಿಕೆ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿತ್ತು. ಪರೋಕ್ಷವಾಗಿ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಸುಳಿವನ್ನು ನೀಡಿದ್ದರು.


ಹಾಲಿ ಶಾಸಕರ ಎದೆಯಲ್ಲಿ ಢವಢವ


ಒಂದು ವೇಳೆ ಜನಾರ್ದನ ರೆಡ್ಡಿ ಗಂಗಾವತಿಯಿಂದ ಸ್ಪರ್ಧಿಸಿದರೆ ಹಾಲಿ ಶಾಸಕರಿಗೆ ಢವಢವ ಶುರುವಾಗಿದೆ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಎನ್ನುವ ಪರಣ್ಣ, ಮುಂದಿನ ಬಾರಿ ನನಗೆ ಟಿಕೆಟ್ ನೀಡುತ್ತಾರೆ ಎಂದಿದ್ದಾರೆ. ಆದರೆ ನಿನ್ನೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಭೇಟಿಯಾಗಿರುವುದು ಇದೀಗ ಕುತೂಹಲ ಮೂಡಿಸಿದೆ.

Published by:Mahmadrafik K
First published: