ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ಸ್ಥಾಪನೆಯ ಕೆಆರ್ಪಿಪಿ (KRPP) ಪಕ್ಷ ಕಾಂಗ್ರೆಸ್ ನಾಯಕರ (Congress Leaders) ನಿದ್ದೆಗೆಡಿಸಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ (Gangavati) ಆರಂಭಗೊಂಡ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಇದೀಗ ಆರು ಜಿಲ್ಲೆಗಳಲ್ಲಿ ಪ್ರಬಲವಾಗುತ್ತಿದೆ. ಆರಂಭದಲ್ಲಿ ಜನಾರ್ದನ ರೆಡ್ಡಿ ರಾಜಕೀಯ ಪ್ರವೇಶದಿಂದ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಈ ಮಾತು ಉಲ್ಟಾ ಆಗಿದೆ. ಕೆಆರ್ಪಿಪಿ ಜನಪ್ರಿಯತೆ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಉತ್ತರ ಕರ್ನಾಟಕದ (North Karnataka) ಆರು ಜಿಲ್ಲೆಗಳಲ್ಲಿ ಜನಾರ್ದನ ರೆಡ್ಡಿ ನೇತೃತ್ವದ ಪಕ್ಷ ಸ್ಥಳೀಯ ಕಾಂಗ್ರೆಸ್ ನಾಯರನ್ನು ಸೆಳೆಯುತ್ತಿದೆ. ಇದು ತಳಮಟ್ಟದಲ್ಲಿ ಕಾಂಗ್ರೆಸ್ಗೆ ಹೊಡೆತ ನೀಡಲಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಈ ರಾಜಕೀಯ ಬೆಳವಣಿಗೆಯನ್ನು ಗಮನಿಸಿರುವ ಕಾಂಗ್ರೆಸ್ ಹೈಕಮಾಂಡ್, KRPP ಆಪರೇಷನ್ ತಡೆಯಿರಿ ಎಂಬ ಸೂಚನೆಯನ್ನು ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಸಮೀಕ್ಷೆಯಲ್ಲಿ KRPP ಆಪರೇಷನ್ ಪಕ್ಷಕ್ಕೆ ನಷ್ಟವುಂಟಾಗಲಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಸೂಚನೆಯನ್ನು ಹೈಕಮಾಂಡ್ ರವಾನಿಸಿದೆಯಂತೆ.
ಜನಾರ್ದನ ರೆಡ್ಡಿ ಮಾಡ್ತಿರೋದೇನು?
1.ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರೋದು.
2.‘ಮುಸ್ಲಿಂ’ ಮತಗಳನ್ನು ಸೆಳೆಯುತ್ತಿದ್ದಾರೆ ರೆಡ್ಡಿಗಾರು.
3.ಕೆಲವೆಡೆ ಮುಸ್ಲಿಮರಿಗೆ ಟಿಕೆಟ್ ನೀಡಿದೆ KRPP
4.‘ಕೈ’ ಸಾಂಪ್ರದಾಯಿಕ ಮತ ಸೆಳೆಯುತ್ತಿದ್ದಾರೆ ರೆಡ್ಡಿ
ಒಟ್ಟು ಆರು ಜಿಲ್ಲೆಗಳ 16 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕೆಆರ್ಪಿಪಿ ಅಡ್ಡಿಯಾಗಲಿದೆ. ಜನಾರ್ದನ ರೆಡ್ಡಿ ಪಕ್ಷ KRPP ಪ್ರಭಾವ ತಗ್ಗಿಸಬೇಕು. ಬಿಜೆಪಿಯ ಬಿ ಟೀಮ್ ಎಂದು ಪ್ರಚಾರ ಮಾಡಬೇಕು. ರೆಡ್ಡಿ ಆಪರೇಷನ್ ಮಾಡದಂತೆ ನೋಡಿಕೊಳ್ಳಬೇಕು ಎಂದು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Congress ಹೈಕಮಾಂಡ್ ಮೇಲೆ ರಮೇಶ್ ಕುಮಾರ್ ಮುನಿಸು?
6 ಜಿಲ್ಲೆಗಳಲ್ಲಿ ಟೆನ್ಶನ್
ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ವಿಜಯನಗರ ಮತ್ತು ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ