• Home
  • »
  • News
  • »
  • state
  • »
  • Janardhana Reddy: ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ; ಕಾಂಗ್ರೆಸ್, ಬಿಜೆಪಿ ಜೊತೆ ವೈಮಸ್ಸು ಇರೋರಿಗೆ ಗಾಳ

Janardhana Reddy: ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ; ಕಾಂಗ್ರೆಸ್, ಬಿಜೆಪಿ ಜೊತೆ ವೈಮಸ್ಸು ಇರೋರಿಗೆ ಗಾಳ

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ

ಅಂಜನಾದ್ರಿ ಬೆಟ್ಟವನ್ನು ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ದಿಗೆ ಕ್ರಮಕೈಗೊಳ್ಳುತ್ತೇನೆ. 50 ಸಾವಿರ ಎಕರೆ ಪ್ರದೇಶದಲ್ಲಿ 10 ಬೃಹತ್ ಉಕ್ಕು ಕಾರ್ಖಾನೆಗಳ ಆರಂಭಿಸುವ ಭರವಸೆಯನ್ನು ಜನಾರ್ದನ ರೆಡ್ಡಿ ನೀಡಿದ್ದಾರೆ.

  • Share this:

ಕೊಪ್ಪಳ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಕಣಕ್ಕೆ ಇಳಿದು ರಾಜಕೀಯದ ಎರಡನೇ ಇನ್ನಿಂಗ್ಸ್​ ಆರಂಭ ಮಾಡಿದ್ದ ಗಣಿಧಣಿ ಮಾಜಿ ಸಚಿವ ಜನಾರ್ಧನ ರೆಡ್ಡಿ (Ex Minister Janardhan Reddy) ಗಂಗಾವತಿ ಕ್ಷೇತ್ರದಲ್ಲಿ (Gangavathi Constituency) ಭರ್ಜರಿ ಆರಂಭ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಗಳಲ್ಲಿ ಸಾರ್ವಜನಿಕ ಸಭೆಗಳ (Public Meetings) ಆಯೋಜನೆ ಮಾಡ್ತಿದ್ದಾರೆ. ಈಗಾಗಲೇ ಬುದುಗುಂಪಾ, ಬಸಾಪಟ್ಟಣ, ಬಂಡ್ರಾಳು, ವೆಂಕಟಗಿರಿ ಸೇರಿ ಹಲವು ಕಡೆ ಪ್ರಚಾರ ನಡೆಸಿದ್ದಾರೆ.


ಪ್ರಚಾರ ವೇಳೆ ಬೃಹತ್ ಹಾರ ಹಾಕಿ ಸ್ವಾಗತ ಕ್ಷೇತ್ರ ಜನತೆ ಸ್ವಾಗತಕೋರಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಸಮಾಧಾನಿತ ಕಾರ್ಯಕರ್ತರ ಭೇಟಿ ಮಾಡ್ತಿದ್ದಾರೆ. ಅಲ್ಲದೇ ಕುರುಬ ಸಮುದಾಯ ಹಾಗೂ ಮುಸ್ಲಿಂ ಜನಾಂಗದ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.


ಇದನ್ನೂ ಓದಿ: Janardhana Reddy: ಜನಾರ್ದನ ರೆಡ್ಡಿಗೆ ಆಂಜನೇಯನ ಹೂವಿನ ಪ್ರಸಾದ! ಗಣಧಣಿಗೆ ಸಿಗುತ್ತಾ ಯಶಸ್ಸು?


ಜನಾರ್ದನ ರೆಡ್ಡಿಯಿಂದ ಭರವಸೆಗಳ ಮಹಾಪೂರ


ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಅಂಜನಾದ್ರಿ ಬೆಟ್ಟವನ್ನು ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ದಿಗೆ ಕ್ರಮಕೈಗೊಳ್ಳುತ್ತೇನೆ. 50 ಸಾವಿರ ಎಕರೆ ಪ್ರದೇಶದಲ್ಲಿ 10 ಬೃಹತ್ ಉಕ್ಕು ಕಾರ್ಖಾನೆಗಳ ಆರಂಭಿಸುವ ಭರವಸೆ ನೀಡಿದ್ದಾರೆ.


ಅಲ್ಲದೇ ವೆಂಕಟಗಿರಿಯಲ್ಲಿ ಸ್ಥಳೀಯ ಯುವಕರಿಗಾಗಿ ಕ್ರಿಕೆಟ್ ಗ್ರೌಂಡ್​ ನೀಡುವುದಾಗಿಯೂ ಹೇಳಿದ್ದಾರೆ. ರಾಜಕೀಯಕ್ಕೂ ಗ್ರಾಮಗಳ ಅಭಿವೃದ್ದಿಗೂ ಸಂಬಂಧವಿಲ್ಲ. ನಿಮ್ಮ ಬೇಡಿಕೆಗಳು ಯಾವುದೇ ಇರಲಿ ನಿಮ್ಮೊಂದಿಗೆ ನಾನು ಇರುತ್ತೇನೆ. ಯಾವುದೇ ಟೀಕೆ, ಟಿಪ್ಪಣಿಗಳ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.
ಗಂಗಾವತಿಯಲ್ಲಿ ಪಟ್ಟಣ ಮಾತನಾಡಿದ ಅವರು, ಕೆಆರ್​ಪಿಪಿ ಪಕ್ಷ ನಿರೀಕ್ಷೆಗೂ ಮೀರಿ ಜನರನ್ನು ತಲುಪುತ್ತಿದೆ. ಗಂಗಾವತಿ ಭಾಗದಲ್ಲಿ ಸಾವಿರರು ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪಕ್ಷ ಸೇರಿದ್ದಾರೆ. ನಾನು ಯಾರನ್ನೂ ಸೋಲಿಸಲು ಅಭ್ಯರ್ಥಿ ಹಾಕುವುದಿಲ್ಲ. ನಮ್ಮ ಪಕ್ಷ ಗೆಲ್ಲುವ ಕಡೆಗೆ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ.


ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ


ಇದನ್ನೂ ಓದಿ: Mangli: ಕಲ್ಲೆಸೆದು ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಒಡೆದ ಪುಂಡರು!


ಯಾರನ್ನೋ ಸೋಲಿಸಲು ಅಭ್ಯರ್ಥಿ ಹಾಕೋದಿಲ್ಲ


ಈಗಾಗಲೇ ಆಪೇಕ್ಷಿತ ಅಭ್ಯರ್ಥಿಗಳ ಬಗ್ಗೆ ಸರ್ವೆ ಮಾಡುತ್ತಿದ್ದೇವೆ. ಬೆಂಗಳೂರು ಭಾಗದಲ್ಲೂ ಪಕ್ಷ ಸಂಘಟನೆ ಆರಂಭಗೊಂಡಿದೆ. ದೊಡ್ಡ ದೊಡ್ಡ ಕುಟುಂಬಗಳು ಪಕ್ಷಕ್ಕೆ ಬೆಂಬಲಿಸಿವೆ. ಕಲ್ಯಾಣ ಕರ್ನಾಟಕ, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಭ್ಯರ್ಥಿ ಹಾಕುತ್ತೇವೆ.


ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ


ನಾನು ಯಾರ ವಿರುದ್ದವೂ ಮಾತನಾಡುವುದಿಲ್ಲ. ಯಾರ ಹೇಳಿಕೆಗೂ ಕಾಮೆಂಟ್ ಮಾಡುವುದಿಲ್ಲ ಎಂದರು. 40 ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳ ವರ್ಚಸ್ಸು, ಗೆಲ್ಲುವ ಸಾಧ್ಯತೆಯನ್ನು ಗಮನದಲ್ಲಿಟ್ಟಕೊಂಡು ಟಿಕೆಟ್ ನೀಡಲಾಗುತ್ತದೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆಯನ್ನು ಚುನಾವಣೆಯಲ್ಲಿ ಮಾಡಿಕೊಳ್ಳುವುದಿಲ್ಲ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, ಸಮೀಕ್ಷೆಗಳ ಫಲಿತಾಂಶವನ್ನು ಆಧರಿಸಿ ಟಿಕೆಟ್ ನೀಡುತ್ತೇವೆ.


ಕೆಆರ್​ಪಿಪಿ ಪಕ್ಷಕ್ಕೆ ಬನ್ನಿ ಎಂದು ಬೇರೆ ಪಕ್ಷದವರನ್ನೂ ಆಹ್ವಾನಿಸುವುದಿಲ್ಲ


ತಮ್ಮನ್ನು ತಾವೂ ಗೆಲ್ಲಿಸಿಕೊಳ್ಳುವ ಸಾಮರ್ಥ್ಯ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೆಟ್ ನೀಡುತ್ತೇವೆ. ಆದರೆ ಕೆಆರ್​ಪಿಪಿ ಪಕ್ಷಕ್ಕೆ ಬನ್ನಿ ಎಂದು ಬೇರೆ ಪಕ್ಷದವರನ್ನೂ ಆಹ್ವಾನಿಸುವುದಿಲ್ಲ. ನನ್ನ ಕಾರ್ಯವನ್ನು ಮೆಚ್ಚಿ, ಭವಿಷ್ಯದಲ್ಲಿ ನಾನು ಏನಾದರೂ ಸಾಧನೆ ಮಾಡಬಹುದು ಎನ್ನುವ ನಂಬಿಕೆಯಿಂದ ಯಾರೇ ಬಂದರೂ ಪ್ರೀತಿಯಿಂದ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇನೆ. ಬೇರೆ ಪಕ್ಷಗಳ ಟಿಕೆಟ್ ಘೋಷಿಸಿದ ಬಳಿಕ ಅವಕಾಶ ಸಿಗದವರಿಗೆ ಅಥವಾ ಅಸಮಾಧಾನಿತರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಇಚ್ಛಿಸುವುದಿಲ್ಲ.


ಅಲ್ಲದೇ ಕೊಪ್ಪಳ ಜಿಲ್ಲೆಯ ಪಕ್ಷದ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು. ಮನೋಹರಗೌಡ ಹೇರೂರು ಪಕ್ಷದ ಜಿಲ್ಲಾಧ್ಯಕ್ಷ, ದುರುಗಪ್ಪ ಆಗೋಲಿ ಗಂಗಾವತಿ ತಾಲೂಕು ಗ್ರಾಮೀಣ ಭಾಗದ ಅಧ್ಯಕ್ಷ, ವಿರೇಶ ಬಲಕುಂದಿ ಅವರನ್ನು ಗಂಗಾವತಿ ನಗರ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

Published by:Sumanth SN
First published: