ನನ್ನ ಆತ್ಮಕತೆಯಲ್ಲಿ ಬರೆದಿರುವುದೆಲ್ಲವೂ ಸತ್ಯ: ಜನಾರ್ಧನ ಪೂಜಾರಿ ಸ್ಪಷ್ಟನೆ


Updated:February 14, 2018, 9:08 PM IST
ನನ್ನ ಆತ್ಮಕತೆಯಲ್ಲಿ ಬರೆದಿರುವುದೆಲ್ಲವೂ ಸತ್ಯ: ಜನಾರ್ಧನ ಪೂಜಾರಿ ಸ್ಪಷ್ಟನೆ
ಜನಾರ್ದನ ಪೂಜಾರಿ

Updated: February 14, 2018, 9:08 PM IST
- ಭರತ್ ರಾಜ್, ನ್ಯೂಸ್ 18 ಕನ್ನಡ

ಮಂಗಳೂರು(ಫೆ.14): ತಮ್ಮ ಆತ್ಮಕತೆಯಲ್ಲಿ ಸುಳ್ಳನ್ನೇ ಬರೆಯಲಾಗಿದೆ ಎಂದು ಕೇಳಿಬರುತ್ತಿರುವ ಆರೋಪಗಳನ್ನು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ತಳ್ಳಿಹಾಕಿದ್ದಾರೆ. ಕುದ್ರೋಳಿಯಲ್ಲಿ ತಮ್ಮ ಮರುಮುದ್ರಿತ ಆತ್ಮಕತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪೂಜಾರಿ, ತಾನು ಆತ್ಮಕತೆ ಪುಸ್ತಕದಲ್ಲಿ ಬರೆದಿರುವುದೆಲ್ಲವೂ ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಬಂಗಾರಪ್ಪ ಇಂದಿರಾ ಗಾಂಧಿಗೆ ಹೊಡೆಯಲು ಹೋಗಿದ್ದರು ಎಂದು‌ ತಮ್ಮ ಆತ್ಮಕತೆಯಲ್ಲಿ ಜನಾರ್ದನ ಪೂಜಾರಿ ಉಲ್ಲೇಖಿಸಿದ್ದರು.  ಈ ಹಿನ್ನೆಲೆಯಲ್ಲಿ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಅವರು ಪೂಜಾರಿ ವಿರುದ್ಧ ಕಿಡಿಕಾರಿದ್ದರು. ಪೂಜಾರಿಯವರ ಪುಸ್ತಕದಲ್ಲಿ ಬರೀ ಸುಳ್ಳುಗಳಿವೆ ಎಂದು ಮಧು ಆರೋಪಿಸಿದ್ದರು.

ಈಗ ಆತ್ಮಕಥೆ ಬಗ್ಗೆ ಟೀಕಿಸಿದವರಿಗೆ ವೇದಿಕೆಯಿಂದಲೆ ಪೂಜಾರಿ ಉತ್ತರ ನೀಡಿದ್ದಾರೆ.  "ನನ್ನ‌ ಆತ್ಮಕಥೆಯ ಪುಸ್ತಕದಲ್ಲಿ ಏನು ಬರೆದಿದ್ದೇನೊ, ಅವೆಲ್ಲವೂ ಸತ್ಯ. ಇದೇ ಹಿನ್ನೆಲೆಯಲ್ಲಿ ಕೆಲವರು ಬಯೋಗ್ರಫಿ ಬರೆಯಲು ಹೋಗಲ್ಲ. ನಾವು ಬಿಲ್ಲವರಾಗಿದ್ದು, ಸತ್ಯ ಹೇಳಲು ಭಯಪಡಲ್ಲ. ನಾರಾಯಣ ಗುರುಗಳ ತತ್ವದಂತೆ ಪುಸ್ತಕದಲ್ಲಿ ಸತ್ಯವನ್ನೇ ಹೇಳಿದ್ದೇನೆ" ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ..

ಮಾಜಿ ಸಚಿವೆ ಸುಮಾ ವಸಂತ್ ಬಗ್ಗೆ ಬೇಸರ:
ಇದೇ ವೇಳೆ, ಮಾಜಿ ಸಚಿವೆ ಸುಮಾ ವಸಂತ್ ಬಗ್ಗೆ ಕೇಂದ್ರದ ಮಾಜಿ ಸಚಿವ ಜನಾರ್ಧನ  ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ. ಸುಮಾ ವಸಂತ್  ಇತ್ತೀಚೆಗೆ ಕೆಪಿಟಿಸಿಎಲ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದರು.

"ಶಿವರಾತ್ರಿ ಜಾಗರಣೆಗೆ  ಸುಮಾ ವಸಂತ್ ಅವರು ಪ್ರತಿ ವರ್ಷ ಕುದ್ರೋಳಿಗೆ ಆಗಮಿಸುತ್ತಿದ್ದರು. ಆದರೆ ಈ ಬಾರಿ  ಅವರು ಕುದ್ರೋಳಿಯನ್ನು ಮರೆತಿದ್ದಾರೆ. ಸುಮಾ ವಸಂತ್ ಕುದ್ರೋಳಿಗೆ ಬಂದಿದ್ದರಿಂದ ದೊಡ್ಡ ಹುದ್ದೆಗೇರುವಂತಾಗಿತ್ತು. ಪರಮಾತ್ಮನ ಕ್ಷೇತ್ರದಲ್ಲಿ ಹೇಳುತ್ತಿದ್ದೇನೆ ಸುಮಾ ಪ್ರಮಾದ ಮಾಡಿದ್ದಾರೆ" ಎಂದು ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
Loading...

 

 
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ