ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಮೇಲೆ ಗಂಭೀರ ಆರೋಪ; ವಜಾಕ್ಕೆ ಜನಜಾಗೃತಿ ವೇದಿಕೆ ಆಗ್ರಹ

ಕೃಷಿ ವಿವಿಯನ್ನು ವಜಾ ಗೊಳಿಸಿ ನೂತನ ಕುಲಪತಿ ನೇಮಕವನ್ನು ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿ ಪತ್ರ ಬರೆಯಲಾಗಿದೆ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದ್ದಾರೆ

ಕೃಷಿ ವಿಶ್ವವಿದ್ಯಾಲಯ

ಕೃಷಿ ವಿಶ್ವವಿದ್ಯಾಲಯ

  • Share this:
ಧಾರವಾಡ (ಅ.3) : ಭಾರತದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಒಂದು. ಕೃಷಿಗೆ ಬೇಕಾದ ತಂತ್ರಜ್ಞಾನ, ಹೊಸ ಹೊಸ ಬೀಜಗಳ ತಳಿಗಳ ಸಂಶೋಧನೆ ಸೇರಿದಂತೆ ರೈತ ವರ್ಗಕ್ಕೆ ಮಾರ್ಗದರ್ಶನ ಮಾಡುತ್ತ ತನ್ನದೆ ಆದ ವಿಶಿಷ್ಟತೆ ಹೊಂದಿದ ವಿವಿಯಲ್ಲಿ ಈಗ ವಿವಾವೊಂದು ಕೇಳಿ ಬಂದಿದೆ. ಕೃಷಿ  ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಬಿ ಚೆಟ್ಟಿ ಅಕ್ರಮ ನೇಮಕಾತಿ ಮಾಡಿದ್ದಾರೆ ಎಂದು ಜನಜಾಗೃತಿ ವೇದಿಕೆ ಆರೋಪ ಮಾಡಿದ್ದಾರೆ. ಈ ಮೊದಲೇ ಕುಲಪತಿಗಳ ಮೇಲೆ ಯಾರದೋ ಕುಟುಂಬದ ಗಲಾಟೆಯ ಪ್ರಕರಣ ಕುರಿತು 2014ರಲ್ಲಿ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಅಲ್ಲದೇ ಕುಲಸಚಿವರಾಗಿದ್ದಾಗ 409 ಜನರ ಡಿ ಗ್ರೂಪ್ ನೇಮಕಾತಿ ವೇಳೆ ಸರ್ಕಾರದ ಅದೇಶ ಧಿಕ್ಕರಿಸಿ ಪೂರ್ವಾನ್ವಯವಾಗುವಂತೆ ಖಾಯಂ‌ ಮಾಡಿ ಕಾಲ್ಪನಿಕ ವೇತನ ನಿಗದಿಪಡಿಸಿ ಅಕ್ರಮ ಮಾಡಿದ ಆರೋಪ ಇವರ ಮೇಲಿದೆ. ಈಗ ಈ ಅಕ್ರಮ ನೇಮಕಾತಿ ಕುರಿತು ಗಂಭೀರ ಆರೋಪ ಮಾಡಿರುವ ಜನಜಾಗೃತಿ ವೇದಿಕೆ ಅವರನ್ನು ಹುದ್ದೆಯಿಂದ ವಜಾ ಮಾಡುವಂತೆ ಆಗ್ರಹಿಸಿದೆ. 

1989 ಪರಿಶಿಷ್ಟ ಜಾತಿ (ಎಸ್‌ಸಿ)ಗೆ ಮೀಸಲಾಗಿದ್ದ ಸಹ ಪ್ರಾಧ್ಯಾಪಕ ಹುದ್ದೆಯನ್ನು ಸಂದರ್ಶನ ಇಲ್ಲದೇ ಪಡೆದಿದ್ದು, ಇದು ಎಸ್. ಸಿ. ಬ್ಯಾಕ್ ಲಾಗ್ ಆಗಿತ್ತು. ಆ ಅಪರಾಧ ಹಿನ್ನೆಲೆಯಲ್ಲಿ ಅಂದಿನ ಕುಲಪತಿ ಡಾ.ಜೆ.ವಿ ಗೌಡರನ್ನು ಕಡ್ಡಾಯವಾಗಿ ನಿವೃತ್ತಿ ಮಾಡಲಾಗಿದೆ. ನಿಗದಿತ ಕನಿಷ್ಠ ಐದು ವರ್ಷದ ಅನುಭವ ಇಲ್ಲದೇ ಸಹ ಪ್ರಾಧ್ಯಾಪಕ ಹುದ್ದೆ ಪಡೆದಿದ್ದು, ಅಪರಾಧ ಎಂದು ರಾಜಪಾಲರು ನೇಮಿಸಿದ್ದ ಕೆ.ಪಿ.ಸುರೇಂದ್ರನಾಥ ಹಾಗೂ ಗಣೇಶ ರಾವ್ ಸಮಿತಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃಷಿ ವಿವಿಯನ್ನು ವಜಾ ಗೊಳಿಸಿ ನೂತನ ಕುಲಪತಿ ನೇಮಕವನ್ನು ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿ ಪತ್ರ ಬರೆಯಲಾಗಿದೆ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದ್ದಾರೆ

ಕೃಷಿ ವಿವಿಯ ಕುಲಪತಿ ಚಟ್ಟಿ ಅವರ ಕೇಳಿದರೆ ಹೇಳೋದೇ ಬೇರೆ, ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು, ಅದರಲ್ಲಿ ನನ್ನ ಪಾತ್ರವಿಲ್ಲ, ನನ್ನ ಸ್ನೇಹಿತನ ಮಗಳ ಮದುವೆ ಮಾಡಿಸಿದ ವಿಚಾರವಾಗಿ ಅವರ ಕುಟುಂಬದ ಜಗಳದ ವಿಚಾರದಲ್ಲಿ ದೂರು‌ನೀಡುವಾಗ ನನ್ನ ಹೆಸರು ಸೇರಿಸಲಾಗಿತ್ತು. ಅಂದು ಪೊಲೀಸ್ ಇಲಾಖೆ ತನಿಖೆ ಮಾಡಿ ನನ್ನ‌ ಮೇಲೆ‌ ದೂರು ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಬಿ ರಿಪೋರ್ಟ್ ನಲ್ಲಿ ಹೇಳಿದ್ದಾರೆ. ಅಲ್ಲದೇ ಕೇಸ್ ಮುಗಿದಿದೆ. ಆದರೆ ಅವರ ಕೇಸ್ ವಿಚಾರ ಈಗ ಮತ್ತೆ ಕೋರ್ಟ್ ಮೇಟ್ಟಿಲೇರಿದೆ.  ಡಿ ಗ್ರೂಪ್‌ ಹುದ್ದೆ ನೇಮಕ ಜಾತಿಯ ಯಾವುದೇ ಅಕ್ರಮಗಳಾಗಿಲ್ಲ, ಕೆಲವೇ ದಿನಗಳಲ್ಲಿ 409 ಜನರ ಆಡಿಟ್ ಅಡಿಷನ್ ನೇಮಕಾತಿಯಾಗಲಿದೆ. ಸಮಸ್ಯೆ ಎಲ್ಲ ಬಗೆಹರಿಯಲಿದೆ ಅಂತ ಸಬೂಬು ನೀಡುತ್ತಾರೆ ಧಾರವಾಡ ‌ಕೃಷಿ‌ ವಿವಿಯ ಪ್ರೊ. ಮಹದೇವ್ ಚಟ್ಟಿ.

ಕೃಷಿ ವಿವಿ ಅಂದ್ರೆ ರೈತರಿಗೆ ಹೊಸ ಹೊಸ ಅನ್ವೇಷಣೆಗಳ ಮೂಲಕ ಅನುಕೂಲವಾಗಬೇಕಿದ್ದ ಈ ವಿವಿ ಇದೀಗ ವಿವಾದಗಳ ಮೂಲಕ ಕೇಂದ್ರ ಬಿಂದುವಾಗಿದೆ. ಕುಲಪತಿಗಳ ಅವ್ಯವಹಾರ ಆರೋಪಗಳು ಕೇಳಿ‌ಬಂದಿದ್ದು ಇದರ ಬಗ್ಗೆ ತನಿಖೆ ಆಗಬೇಕು ಅನ್ನೋದೇ ಜನಜಾಗೃತಿ ವೇದಿಕೆಯ ಒತ್ತಾಯವಾಗಿದೆ.
Published by:Seema R
First published: