Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 7, 2020, 5:51 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂರ್ಭಿಕ ಚಿತ್ರ
  • Share this:
1.ನಿರ್ಭಯಾ ಅತ್ಯಾಚಾರ ಪ್ರಕರಣ: ಡೆತ್ ವಾರೆಂಟ್ ಜಾರಿ; ಜ. 22, ಬೆಳಗ್ಗೆ 7ಗಂಟೆಗೆ ಗಲ್ಲುಶಿಕ್ಷೆ ಜಾರಿ

ಏಳು ವರ್ಷಗಳ ಹಿಂದಿನ ದಿಲ್ಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಪಟಿಯಾಲ ಹೌಸ್ ನ್ಯಾಯಾಲಯವು ಡೆತ್ ವಾರೆಂಟ್ ಜಾರಿಗೊಳಿಸಿದೆ. ಅಂದರೆ, ಈ ನಾಲ್ವರನ್ನು ನೇಣಿಗೇರಿಸುವ ಪ್ರಕ್ರಿಯೆ ಪ್ರಾರಂಭಿಸಲು ಕೋರ್ಟ್ ಹಸಿರುನಿಶಾನೆ ತೋರಿದೆ. ಜನವರಿ 22, ಬೆಳಗ್ಗೆ 7ಕ್ಕೆ ಇವರನ್ನು ನೇಣಿಗೆ ಏರಿಸಲು ಸಮಯ ನಿಗದಿಯಾಗಿದೆ.

2.ಜನರಲ್ ಸೊಲೆಮಾನಿ ಅಂತಿಮ ಯಾತ್ರೆ ವೇಳೆ ನೂಕುನುಗ್ಗಲಿನಿಂದ 35 ಮಂದಿ ಸಾವು, 48 ಜನರಿಗೆ ಗಾಯ

ಅಮೆರಿಕ ವಾಯುದಾಳಿಯಿಂದ ಮೃತಪಟ್ಟ ಇರಾನ್ ಸೇನಾ ಮುಖ್ಯಸ್ಥ ಜನರಲ್ ಸೊಲೈಮಾನಿ ಅಂತಿಮ ಮೆರವಣಿಗೆ ವೇಳೆ ನೂಕು ನುಗ್ಗಲಿನಿಂದ 35 ಜನರು ಮೃತಪಟ್ಟಿದ್ದು, 48 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸುದ್ದಿವಾಹಿನಿ ತಿಳಿಸಿದೆ. ಕ್ರಾಂತಿಕಾರಿ ಕ್ವಾಡ್ಸ್ ಪಡೆಯ ಜನರಲ್ ಖಾಸಿಂ ಸೊಲೈ,ಮಾನಿ ಅವರ ಹುಟ್ಟೂರು ಇರಾನಿನ ಕೆರ್ಮಾನಿಯಲ್ಲಿ ಈ ಘಟನೆ ನಡೆದಿದೆ ಎಂದು ಸರ್ಕಾರಿ ಆನ್​ಲೈನ್ ಟಿವಿ ಮಂಗಳವಾರ ವರದಿ ಮಾಡಿದೆ.

3.ಜೆಎನ್​ಯು ದಾಳಿ ಖಂಡಿಸಿ ಮುಂಬೈ ಪ್ರತಿಭಟನೆ ವೇಳೆ ಆಜಾದಿ ಘೋಷಣೆಗೆ ವೃದ್ಧರೊಬ್ಬರು ಮಾಡಿದ ಡಾನ್ಸ್ ವೈರಲ್

ಭಾನುವಾರ ರಾತ್ರಿ ಜೆಎನ್​ಯು ಕ್ಯಾಂಪಸ್​ಗೆ ನುಗ್ಗಿದ ದುಷ್ಕರ್ಮಿಗಳ ತಂಡ ಅಲ್ಲಿನ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ದಾಳಿ ನಡೆಸಿದ ಕೃತ್ಯಕ್ಕೆ ಇಡೀ ದೇಶ ವ್ಯಾಪಕ ಖಂಡನೆ ವ್ಯಕ್ತಪಡಿಸಿದೆ. ಘಟನೆ ಖಂಡಿಸಿ ಮತ್ತು ಅಮಾಯಕ ವಿದ್ಯಾರ್ಥಿಗಳು, ಬೋಧಕರಿಗೆ ರಕ್ಷಣೆ ಒದಗಿಸಲು ಸಾಧ್ಯವಾಗದ ಪೊಲೀಸರ ಅಸಾಮರ್ಥ್ಯದ ವಿರುದ್ಧ ಮುಂಬೈನಲ್ಲೂ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಗಿದೆ.

4.ಮುಂಬೈ ಪ್ರತಿಭಟನೆ ವೇಳೆ ‘Free Kashmir’ ಪೋಸ್ಟರ್ ಹಿಡಿದಿದ್ದ ಯುವತಿ ಹೇಳುವುದೇನು?ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆ ಸಾಕಷ್ಟು ಚರ್ಚೆಗೆ ಆಸ್ಪದ ಕೊಟ್ಟಿದೆ. ನಿನ್ನೆ ಮುಂಬೈನಲ್ಲಿ ನಡೆದ ಪ್ರತಿಭಟನೆಯ ವೇಳೆ ಬೃಹತ್ ಜನಸಾಗರದ ಮಧ್ಯೆ “Free Kashmir” ಎಂಬ ದೊಡ್ಡ ಪೋಸ್ಟರ್​ವೊಂದು ಎದ್ದುಕಂಡಿತ್ತು. ಕಾಶ್ಮೀರವನ್ನು ಭಾರತದಿಂದ ಮುಕ್ತಗೊಳಿಸಿ ಎಂಬ ಕೂಗು ಕೇಳಿಬರುತ್ತಿದೆ ಎಂದು ಬಲಪಂಥೀಯ ವ್ಯಕ್ತಿಗಳನೇಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಕಾಶ್ಮೀರ ಮುಕ್ತಗೊಳಿಸಿ ಎಂದು ಬರೆದಿದ್ದ ಆ ಪೋಸ್ಟರ್ ಹಿಡಿದುಕೊಂಡಿದ್ದು ಮೆಹಕ್ ಮಿರ್ಜಾ ಪ್ರಭು ಎಂಬ ಮಹಿಳೆ. ಕಥೆಗಾರ್ತಿಯಾಗಿರುವ ಆಕೆ ಆ ಪೋಸ್ಟರ್ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದು, ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.

5.ಭಾರತ್ ಬಂದ್ ಯಾಕೆ? ಬುಧವಾರ ಏನಿರುತ್ತೆ ಏನಿರಲ್ಲ? ಸರ್ಕಾರಕ್ಕೆ ಎಷ್ಟು ನಷ್ಟ? ಶಾಲಾ ಕಾಲೇಜು ಬಂದ್ ಆಗುತ್ತಾ?

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸಿ ನಾಳೆ ಬುಧವಾರ ಭಾರತ್ ಬಂದ್ ಅಥವಾ ಮುಷ್ಕರ ನಡೆಯುತ್ತಿದೆ. ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲವಾಗಿ ನಿಂತಿವೆ. ಕರ್ನಾಟಕದ ರಾಜ್ಯ ರೈತ ಸಂಘ ಕೂಡ ಬಂದ್​ಗೆ ಬೆಂಬಲ ನೀಡಿದೆ. ಬ್ಯಾಂಕ್ ಇತ್ಯಾದಿ ಸಂಘಟಿತ ವಲಯದ ಕಾರ್ಮಿಕರು ಈ ಬಂದ್​ನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಎಡಪಂಥೀಯ ಸಂಘಟನೆಗಳು ಒಟ್ಟಾರೆಯಾಗಿ ನಾಳೆಯ ಬಂದ್​ನಲ್ಲಿ ಮುಂಚೂಣಿಯಲ್ಲಿವೆ.

6.ಹೈಕಮಾಂಡ್​ ಒಪ್ಪಿದರೆ ರಾಜ್ಯಸಭೆ ಪ್ರವೇಶಕ್ಕೆ ಸಿದ್ದ ಎಂದ ಮಲ್ಲಿಕಾರ್ಜುನ ಖರ್ಗೆ

ಹೈಕಮಾಂಡ್​ ತೀರ್ಮಾನಕ್ಕೆ ನಾನು ಬದ್ಧವಾಗಿದ್ದು, ಪಕ್ಷ ಒಪ್ಪಿದರೆ ರಾಜ್ಯಸಭೆಗೆ ಹೋಗುವುದಾಗಿ ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ತಿಳಿಸಿದ್ದಾರೆ. ಇದೇ ಜೂನ್​ಗೆ ಮೇಲ್ಮನೆಯ ರಾಜ್ಯದ ನಾಲ್ಕು ಸ್ಥಾನಗಳು ಖಾಲಿಯಾಗಲಿದೆ. ಕಾಂಗ್ರೆಸ್​ನಿಂದ ಬಿಜಕೆ ಹರಿಪ್ರಸಾದ್​, ರಾಜೀವ್​ ಗೌಡ ಅವಧಿ ಮುಗಿಯಲಿದ್ದು,  ಬಿಜೆಪಿಯಿಂದ ಪ್ರಭಾಕರ್​ ಕೋರೆ ಹಾಗೂ ಜೆಡಿಎಸ್​ನ ಕುಪೇಂದ್ರ ರೆಡ್ಡಿ ಸ್ಥಾನ ಖಾಲಿಯಾಗಲಿದೆ.

7.ಡಾ.ರಾಜ್ ಬಿಟ್ರೆ ರಾಜ್ಯದ ಜನತೆ ಅಣ್ಣ ಎಂದಿದ್ದು ಕುಮಾರಸ್ವಾಮಿಗೆ ಮಾತ್ರ: ಜಿಟಿ ದೇವೇಗೌಡ

ಇಡೀ ರಾಜ್ಯದ ಜನತೆ ಪ್ರೀತಿಯಿಂದ ಅಣ್ಣ ಎಂದು ಕರೆದ ನಾಯಕರು ಎಂದರೆ ಒಬ್ಬರು ಡಾ. ರಾಜ್​​ ಕುಮಾರ್,​ ಮತ್ತೊಬ್ಬರು ಜೆಡಿಎಸ್​ ನಾಯಕ ಎಚ್​. ಡಿ ಕುಮಾರಸ್ವಾಮಿ ಇವರಿಬ್ಬರನ್ನೇ. ರಾಜ್ಯದ ಜನರು ಅಷ್ಟು ಪ್ರೀತಿಯನ್ನು ನೀಡಿರುವಾಗ ಕುಮಾರಸ್ವಾಮಿಯವರು ವೈರಾಗ್ಯದ ಮಾತನಾಡುವುದು ಉಚಿತವಲ್ಲ ಎಂದು ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ಉದ್ಗರಿಸಿದ್ದಾರೆ.

8.ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲು ಮೌಲ್ಯಮಾಪನ ಪರೀಕ್ಷೆ ; ಸಚಿವ ಸುರೇಶ್ ಕುಮಾರ್

ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಬದಲಾಗಿ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ಮಾಡುವುದಕ್ಕೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಯಲ್ಲಿ ಯಾವುದೇ ಮಗುವನ್ನು ಫೈಲ್, ಪಾಸ್ ಮಾಡಲ್ಲ. ಪರೀಕ್ಷೆ ನಡೆಸಿ ವಿದ್ಯಾರ್ಥಿಯ ಕಲಿಕೆ ಬಗ್ಗೆ ತಿಳಿದು 8ನೇ ತರಗತಿಯಿಂದ ಅಗತ್ಯ ತರಬೇತಿ ಕೊಡುವುದು ಈ ಪರೀಕ್ಷೆ ಉದ್ದೇಶವಾಗಿದೆ ಎಂದರು.

9.‘ಅಸುರನ್​‘ ತೆಲುಗು ರಿಮೇಕ್​ನಲ್ಲಿ ಕನ್ನಡದ ಖ್ಯಾತ ನಟಿ !

ಹುಭಾಷಾ ನಟಿ ಪ್ರಿಯಾಮಣಿ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಸದ್ಯ ‘ತಲೈವಿ‘ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರಣಾವತ್​ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ರಿಯಾಮಣಿ ಶಶಿಕಲಾ ಆಗಿ ಕಾಣಿಸಿಕೊಳ್ಳುವ ತಯಾರಿಲ್ಲಿದ್ದಾರೆ. ಹೀಗಿರುವಾಗ ತೆಲುಗಿನಲ್ಲಿ ಮೂಡಿ ಬರಲಿರುವ ಸಿನಿಮಾವೊಂದಕ್ಕೆ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ.

10.ಎರಡನೇ ಟಿ-20 ಫೈಟ್​ಗೆ ಭಾರತ ಸಜ್ಜು; ಇಂದೋರ್​ನಲ್ಲಿ ಕೊಹ್ಲಿ ಹುಡುಗರ ಭರ್ಜರಿ ಅಭ್ಯಾಸ !

ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯ ಮಳೆಯಿಂದ ರದ್ದಾದ ಬಳಿಕ ಟೀಂ ಇಂಡಿಯಾ ಎರಡನೇ ಕದನಕ್ಕೆ ಸಿದ್ಧವಾಗಿದೆ. ಇಂದೋರ್​​ನ ಹೋಲ್ಕರ್ ಕ್ರೀಡಾಂಗಣ ಸರಣಿಯ ಎರಡನೇ ಪಂದ್ಯದ ಆತಿಥ್ಯ ವಹಿಸಲು ಸಿದ್ಧವಾಗಿದೆ. ಕೊಹ್ಲಿ ಪಡೆಗೆ ಇಂದೋರ್ ಕ್ರೀಡಾಂಗಣ ಅದೃಷ್ಟದ ಅಂಗಳ. ಯಾಕೆಂದರೆ ಈ ಕ್ರೀಡಾಂಗಣದಲ್ಲಿ ಭಾರತ ಈವರೆಗೆ ಒಂದೇ ಒಂದು ಪಂದ್ಯ ಸೋತಿಲ್ಲ. ಈ ದಾಖಲೆ ಕೇವಲ ಟಿ-20ಗೆ ಮಾತ್ರ ಸೀಮಿತವಾಗಿಲ್ಲ. ಮೂರೂ ಫಾರ್ಮೆಟ್​ಗಳಲ್ಲಿ ಆಡಿರುವ ಪಂದ್ಯಗಳ ಪೈಕಿ ಪ್ರತಿ ಪಂದ್ಯದಲ್ಲು ಭಾರತ ಗೆದ್ದು ಬೀಗಿದೆ.

 
First published:January 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ