Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 4, 2020, 5:50 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಎಲ್​ಇಟಿ ಉಗ್ರನನ್ನು ಬಂಧಿಸಿದ ಭದ್ರತಾ ಪಡೆ

ಭದ್ರತಾ ಪಡೆಯು ಲಷ್ಕರ್​-ಇ-ತೋಯ್ಬಾ ಸಂಘಟನೆಗೆ ಸೇರಿದ ಉಗ್ರ ನಿಸಾರ್​​ ಅಹಮದ್​ ದಾರ್​​ನನ್ನು ಶ್ರೀನಗರದಲ್ಲಿ ಶುಕ್ರವಾರ ತಡರಾತ್ರಿ ಬಂಧಿಸಿದೆ.  ಉಗ್ರ ಅಡಗಿ ಕುಳಿತಿದ್ದಾನೆ ಎಂಬ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು.

2.ಶಿವಸೇನೆಯ ಏಕೈಕ ಮುಸ್ಲಿಮ್ ಶಾಸಕ ಅಬ್ದುಲ್ ಸತ್ತಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ?

ಶಿವಸೇನಾ ಪಕ್ಷದ ಏಕೈಕ ಶಾಸಕ ಅಬ್ದುಲ್ ಸತ್ತಾರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ವಿಧಾನಸಭಾ ಚುನಾವಣೆಗೆ ಸ್ವಲ್ಪ ಕಾಲ ಮುನ್ನ ಶಿವಸೇನೆಯನ್ನು ಸೇರಿದ್ದ ಅಬ್ದುಲ್ ಸತ್ತಾರ್ ಅವರಿಗೆ ಸಂಪುಟದಲ್ಲಿ ಖಾತೆ ಹಂಚಿಕೆ ಮತ್ತು ದರ್ಜೆ ತೃಪ್ತಿ ತಂದಿಲ್ಲ. ಹೀಗಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಶಿವಸೇನಾ ಪಕ್ಷ ಈ ಸುದ್ದಿಯನ್ನು ಅಲ್ಲಗಳೆದಿದೆ. ಅಬ್ದುಲ್ ಸತ್ತಾರ್ ಅವರಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.

3.ತಮಿಳುನಾಡು ಮಾಜಿ ಸ್ಪೀಕರ್ ಪಿ.ಎಚ್​​​ ಪಾಂಡಿಯನ್ ವಿಧಿವಶ

ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಎಐಎಡಿಎಂಕೆ ಹಿರಿಯ ಮುಖಂಡ ಪಿ.ಎಚ್ ಪಾಂಡಿಯನ್(74) ವಿಧಿವಶರಾಗಿದ್ದಾರೆ. ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಪಾಂಡಿಯನ್​​​​ ಸಾವನ್ನಪ್ಪಿದ್ಧಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

4.ಸಿಎಎಯಿಂದ ಯಾವುದೇ ತೊಂದರೆ ಇಲ್ಲ ಎನ್ನುತ್ತ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ; ಗುಲಾಂ ನಬಿ ಆಜಾದ್​​ಸಿಎಎ ಕಾಯ್ದೆಯಿಂದ ಯಾವುದೇ ಅಲ್ಪಸಂಖ್ಯಾತರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ಜನರನ್ನು ದಿಕ್ಕ ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇವಲ ಭಾರತದಲ್ಲಿ ಮಾತ್ರವಲ್ಲ, ಫ್ರಾನ್ಸ್​, ಜರ್ಮನ್​ ಕೂಡ ಆತಂಕ ವ್ಯಕ್ತಪಡಿಸುತ್ತಿದೆ.

5.ಮೋದಿಯಿಂದ ಕರ್ನಾಟಕ ಜನತೆಗೆ ದ್ರೋಹ - ಇಂಥವರು ಪ್ರಧಾನಿಯಾಗಿರೋದೇ ದೌರ್ಭಾಗ್ಯ ; ಕಾಗೋಡು ಕಿಡಿ

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಜನರಿಗೆ ದ್ರೋಹವೆಸಗಿದ್ದಾರೆ. ಇಂತಹ ಪ್ರಧಾನಿಯನ್ನು ಹೊಂದಿರುವುದೇ ನಮ್ಮ ದೌರ್ಭಾಗ್ಯ, ರಾಜ್ಯದ ಬಗ್ಗೆ ಪ್ರಧಾನಿಯವರಿಗೆ ಗೌರವ, ಮಮತೆ, ವಿಶ್ವಾಸವೇ ಇಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯಕ್ಕೆ ಮೋದಿಯವರು ಅನ್ಯಾಯ ಮಾಡಿದ್ದಾರೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದು ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದ್ದರೂ ನಯಾ ಪೈಸೆ ನೀಡದೇ ವಾಪಾಸ್ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

6.ಎಲ್ಲಿಯವರೆಗೆ ಹಣದ ಪ್ರಭಾವ ಇರುತ್ತೋ ಅಲ್ಲಿಯವರೆಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ; ಎಸ್.ಎಂ. ಕೃಷ್ಣ

ಈಗ ಪ್ರಜಾಪ್ರಭುತ್ವ ಎಂಬುದು ಹಣದ ಬಲದ ಮೇಲೆ ನಿಂತಿದೆ. ಎಲ್ಲಿಯವರೆಗೆ ಈ ಪ್ರಜಾಪ್ರಭುತ್ವದಲ್ಲಿ ಹಣದ ಬಲ ಇರುತ್ತದೋ ಅಲ್ಲಿಯವರೆಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಷಾಧ ವ್ಯಕ್ತಪಡಿಸಿದ್ದಾರೆ. “ಪ್ರಸ್ತುತ ಪ್ರಜಾಭುತ್ವ ಸಂಪೂರ್ಣವಾಗಿ ಹಣದ ಬಲದ ಮೇಲೆ ನಿಂತಿದೆ. ಇದನ್ನು ನೋಡಿದರೆ, ಒಳ್ಳೆಯ ದಿನಗಳನ್ನು ನೋಡಿ ಬಾಳ ಮುಸ್ಸಂಜೆಯಲ್ಲಿರುವ ನಮ್ಮಂತಹ ಕಾರ್ಯಕರ್ತರಿಗೆ ಕಳವಳ ಮೂಡುತ್ತಿದೆ. ಇಂತಹ ಪರಿಸ್ಥಿತಿಗೆ ಏಕೈಕ ಪರಿಹಾರ ಎಂದರೆ ಇಂದಿನ ಯುವ ಸಮೂಹ ರಾಜಕೀಯ ಪ್ರವೇಶ ಮಾಡುವ ಕುರಿತು ಚಿಂತನೆ ನಡೆಸಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

7.ಡಿಸಿಎಂ ಆಗಿದ್ದು ಹೇಗೆಂಬ ಗುಟ್ಟು ಬಿಚ್ಚಿಟ್ಟ ಲಕ್ಷ್ಮಣ ಸವದಿ

ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಬಿಜೆಪಿ ನಾಯಕ ಲಕ್ಷ್ಮಣ ಸವದಿಗೆ ಉಪ ಮುಖ್ಯಮಂತ್ರಿ ಸ್ಥಾನ ಅರಸಿಕೊಂಡು ಬಂದಿತ್ತು. ಲಕ್ಷ್ಮಣ ಸವದಿ ಹೆಸರು ಡಿಸಿಎಂ ಪಟ್ಟಿಯಲ್ಲಿದ್ದಿದ್ದು ಕಂಡು ಖುದ್ದು ಬಿಎಸ್​ ಯಡಿಯೂರಪ್ಪ ಅವರು ಕೂಡ ಶಾಕ್​ ಆಗಿದ್ದರು. ಸೋತ ಅಭ್ಯರ್ಥಿಗೆ ಮಣೆ ಹಾಕಿದ ಹೈ ಕಮಾಂಡ್​ ತೀರ್ಮಾನವನ್ನು ಅವರು ಅನಿವಾರ್ಯವಾಗಿ ಒಪ್ಪಿದ್ದರು. ಚುನಾವಣೆಯಲ್ಲಿ ಸೋತರೂ ತಾವು ಹೇಗೆ ಡಿಸಿಎಂ ಆದೆ ಎಂಬ ಕಾರಣವನ್ನು ಖುದ್ದು ಸವದಿಯವರೇ ಈಗ ಬಿಚ್ಚಿಟ್ಟಿದ್ದಾರೆ.

8.ಚಿಂಚೋಳಿ ಅಭಿವೃದ್ಧಿಗಾಗಿ ಬಿಜೆಪಿ ಯಾವಾಗ ತೊರೀತೀರಿ - ಉಮೇಶ್ ಜಾಧವ್ ಕಾಲೆಳೆದ ಪ್ರಿಯಾಂಕ್ ಖರ್ಗೆ

ಚಿಂಚೋಳಿ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ನೀಡಿದ್ದ 30 ಕೋಟಿ ಪೈಕಿ 20 ಕೋಟಿಯನ್ನು ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ ಎನ್ನಲಾಗಿರುವ ವಿಚಾರ ಟ್ವೀಟ್ ವಾರ್ ಗೆ ಕಾರಣವಾಗಿದೆ. ಚಿಂಚೋಳಿ ಅಭಿವೃದ್ಧಿ ಹೆಸರಲ್ಲಿ ಕಾಂಗ್ರೆಸ್ ತೊರೆದಿದ್ದ ಜಾಧವ್ ಅವರೇ, ಅಭಿವೃದ್ಧಿಗೆ ನೀಡಿದ್ದ ಹಣವನ್ನೇ ವಾಪಸ್ ಪಡೆದ ಬಿಜೆಪಿಯನ್ನು ಯಾವಾಗ ತೊರೀತೀರಿ ಅಂತ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ನಿಸಿದ್ದಾರೆ.

9.ದಿಢೀರ್​ ಎಂದು ಹೆಸರು ಬದಲಾಯಿಸಿಕೊಂಡ ವಿಜಯ್​ ದೇವರಕೊಂಡ; ಕಾರಣವೇನು?

ಯುವ ಜನತೆಯಲ್ಲಿ ಹೊಸ ಕ್ರೇಜ್​ ಹುಟ್ಟು ಹಾಕಿದ ನಟ ವಿಜಯ್​ ದೇವರಕೊಂಡ. ತೆಲುಗು ಮಾತ್ರವಲ್ಲದೇ ದಕ್ಷಿಣ ಭಾರತ ಸೇರಿದಂತೆ ಹಿಂದಿ ಚಿತ್ರರಂಗವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿತು ಅವರ ನಟನೆ. ರಾತ್ರೋ ರಾತ್ರಿ ಬೇಡಿಕೆ ಸೃಷ್ಟಿಸಿಕೊಂಡ ಈ ನಟ  ಈಗ ದಿಢೀರ್​ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

10.ಕರ್ನಾಟಕಕ್ಕೆ ಅಲ್ಪ ಮುನ್ನಡೆ; 2ನೇ ಇನ್ನಿಂಗ್ಸ್​ನಲ್ಲೂ ಮುಂಬೈಗೆ ಶಾಕ್ ನೀಡಿದ ನಾಯರ್ ಪಡೆ!

ರಣಜಿ ಟ್ರೋಫಿಯಲ್ಲಿ ಸಾಗುತ್ತಿರುವ ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಮುಂಬೈ ತಂಡವನ್ನು 194 ರನ್​ಗೆ ಆಲೌಟ್ ಮಾಡಿ ಇನ್ನಿಂಗ್ಸ್​ ಆರಂಭಿಸಿದ ಕರ್ನಾಟಕ 24 ರನ್​ಗಳ ಮುನ್ನಡೆ ಸಾಧಿಸಿ 218 ರನ್ ಬಾರಿಸಿತು. ಸದ್ಯ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಮುಂಬೈಗೆ ರಾಜ್ಯ ತಂಡ ಮತ್ತೆ ಶಾಕ್ ನೀಡಿದೆ. ಆದಿತ್ಯ ತಾರೆ(6), ಅಜಿಂಕ್ಯಾ ರಹಾನೆ(1), ಸಿದ್ಧೇಶ್ ಲಾಡ್(4) ಹಾಗೂ ನಾಯಕ ಸೂರ್ಯಕುಮಾರ್ ಯಾದವ್(10) ಬೇಗನೆ ನಿರ್ಗಮಿಸಿದ್ದಾರೆ. ಮುಂಬೈ 50 ರನ್​ಗೂ ಮುನ್ನ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪೃಥ್ವಿ ಶಾ ಇಂಜುರಿಗೆ ತುತ್ತಾದ ಪರಿಣಾಮ ಮೈದಾನಕ್ಕೆ ಇಳಿಯದಿರುವುದು ತಂಡಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ.

 

 
First published:January 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ