Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 3, 2020, 6:14 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಅಮೆರಿಕದ ರಾಕೆಟ್ ದಾಳಿಗೆ ಇರಾನ್​ ಮೇಜರ್​ ಜನರಲ್​ ಸಾವು; ಕಾಡಿದ ಯುದ್ಧಭೀತಿ

ಇರಾಕ್​ ರಾಜಧಾನಿ ಬಾಗ್ದಾದ್​ ವಿಮಾನ ನಿಲ್ದಾಣದಲ್ಲಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಇರಾನ್​​ ಪ್ರಭಾವಿ ನಾಯಕ ಹಾಗೂ ಮೇಜರ್​ ಜನರಲ್​ ಖಾಸಿಂ ಸೊಲೆಮನಿ ಸೇರಿ 7 ಜನರು ಮೃತಪಟ್ಟಿದ್ದಾರೆ. ಈ ಬೆಳವಣಿಗೆ ನಂತರ ಯುದ್ಧಭೀತಿ ಆರಂಭವಾಗಿದೆ.

2.ಜಮ್ಮು-ಕಾಶ್ಮೀರದದಲ್ಲಿ ಬಸ್​​ ಅಪಘಾತ: ಏಳು ಮಂದಿ ಸಾವು; 24 ಮಂದಿಗೆ ತೀವ್ರ ಗಾಯ

ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ಧಾರೆ. ಇಲ್ಲಿನ ರಜೋರಿ ಜಿಲ್ಲೆಯಲ್ಲಿ ಬಸ್‍ವೊಂದು ಅಪಘಾತಕ್ಕೀಡಾಗಿ ಸುಮಾರು 7 ಮಂದಿ ಮೃತಪಟ್ಟಿದ್ದು, 24 ಮಂದಿಗೆ ತೀವ್ರ ಗಾಯಗೊಂಡಿದ್ದಾರೆ ಎಂದು ಫಸ್ಟ್​ ಪೋಸ್ಟ್​​ ವರದಿ ಮಾಡಿದೆ.

3.ಭಾರತೀಯ ಮಹಿಳೆಯರು ಗಂಡನ ಹಿಂದೆ ನಡೆಯಬೇಕಂತೆ; ಸ್ಮೃತಿ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​​

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವವರು ಕೇಂದ್ರ ಸಚಿವೆ ಸ್ಮೃತಿ ಇರಾನಿ. ಸದ್ಯ ಭಾರತೀಯ ಮಹಿಳೆಯರ ಬಗ್ಗೆ ಅವರು ಈ ಹಿಂದೆ ಆಡಿದ ಮಾತೊಂದು ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಎಲ್ಲರ ಮನಗೆದ್ದಿದೆ. ನಾನು ನಡೆಯುವಾಗ ಗಂಡನ ಎರಡು ಹೆಜ್ಜೆ ಹಿಂದೆಯೇ ಇರುತ್ತೇನೆ. ನನ್ನಂತೆಯೇ ಅನೇಕ ಮಹಿಳೆಯರು ಇರುತ್ತಾರೆ, ಕಾರಣ. ಗಂಡಂದಿರುವ ನಡೆಯುವಾಗ ಅನೇಕ ತಪ್ಪಾಗುತ್ತದೆ. ಅನೇಕ ವಿಷಯಗಳಲ್ಲಿ ಎಡವುತ್ತಾರೆ. ಅವರು ಬಾಳಿನಲ್ಲಿ ಎಡವದಂತೆ ಬೆಂಬಲವಾಗಿ ನಿಲ್ಲಲು ಮಹಿಳೆಯರು ಹಿಂದೆ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ

4.ಕೂಡಲೇ ಇರಾಕ್​ನಿಂದ ಜಾಗ ಖಾಲಿ ಮಾಡುವಂತೆ ತನ್ನ ಪ್ರಜೆಗಳಿಗೆ ಕಟ್ಟಪ್ಪಣೆ ಹೊರಡಿಸಿದ ಅಮೆರಿಕ ರಾಯಭಾರ ಕಚೇರಿಇರಾನಿನ ಇಸ್ಲಾಮಿಕ್ ರಿಪಬ್ಲಿಕ್ ಕ್ವಾಡ್ಸ್​  ಫೋರ್ಸ್​ನ ಕಮಾಂಡರ್ ಜನರಲ್ ಖಾಸಿಮ್ ಸುಲೈಮಾನಿಯನ್ನು ಇಂದು ಬೆಳಗ್ಗೆ ಬಾಗ್ದಾದ್​ದಲ್ಲಿ ಅಮೆರಿಕ ವಾಯುಪಡೆ ಹತ್ಯೆಗೈದ ಬಳಿಕ ಅಮೆರಿಕ ಮತ್ತು ಇರಾನ್ ನಡುವೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಪ್ರತೀಕಾರವಾಗಿ ಇರಾನ್ ಅಮೆರಿಕ ಮತ್ತು ಅಮೆರಿಕನ್ನರ ಮೇಲೆ​ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಇರಾನ್​ನಲ್ಲಿ ನೆಲೆಸಿರುವ ಅಮೆರಿಕ ಪ್ರಜೆಗಳು ಅಲ್ಲಿಂದ ಶೀಘ್ರವೇ ಜಾಗ ಖಾಲಿ ಮಾಡುವಂತೆ ಅಮೆರಿಕ ರಾಯಭಾರ ಕಚೇರಿ ಶುಕ್ರವಾರ ಹೇಳಿದೆ.

5.ರಾಜ್ಯದ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಿ; ಪ್ರಧಾನಿ ಮೋದಿಗೆ ಎಂಎಲ್​ಸಿ ಬಿ.ಎಂ. ಫಾರೂಕ್ ಮನವಿ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ರಾಜ್ಯದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಈ ವೇಳೆ ಪೊಲೀಸರ ಗೋಲಿಬಾರ್​ಗೆ ಮಂಗಳೂರಿನಲ್ಲಿ ಇಬ್ಬರು ಬಲಿಯಾಗಿದ್ದರು. ಮೃತರಿಗೆ ಪರಿಹಾರ ಘೋಷಿಸಿದ್ದ ರಾಜ್ಯ ಸರ್ಕಾರ ನಂತರ ಏಕಾಏಕಿ ಅದನ್ನು ಹಿಂಪಡೆದಿತ್ತು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಉಂಟಾಗಿರುವ ಅನ್ಯಾಯಗಳ ನಿರ್ಮೂಲನೆ ಆಗಲಿದೆ ಎನ್ನುವ ಭರವಸೆ ಇದೆ ಎಂದು ಜೆಡಿಎಸ್​ ನಾಯಕ ಹಾಗೂ ವಿಧಾನ ಪರಿಷತ್​ ಸದಸ್ಯ ಬಿ.ಎಂ. ಫಾರೂಕ್​ ಬಹಿರಂಗ ಪತ್ರ ಬರೆದಿದ್ದಾರೆ.

6.ರಾಜ್ಯದ ನೆರವಿಗೆ ಪ್ರಧಾನಿ ಮೋದಿ ಭರವಸೆ; ಮುಖ್ಯಮಂತ್ರಿ ಕಚೇರಿಯಿಂದ ಸ್ಪಷ್ಟನೆ

ನೆರೆ ಪರಿಹಾರ ಸೇರಿದಂತೆ ರಾಜ್ಯದ ವಿವಿಧ ಬೇಡಿಕೆಗೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಕಾರತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ  ಹೊರಡಿಸಿರುವ ಮುಖ್ಯಮಂತ್ರಿಗಳ ಕಚೇರಿ, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಈ ಬಗ್ಗೆ ದೆಹಲಿಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲು ಮತ್ತು ಇಲಾಖಾವಾರು ಕೇಂದ್ರ ಸಚಿವರುಗಳಿಗೆ ಪ್ರಸ್ತಾವನೆ ಸಲ್ಲಿಸಲು  ಪ್ರಧಾನಮಂತ್ರಿಗಳು ಸೂಚಿಸಿದ್ದಾರೆ. ಅಲ್ಲದೇ ಪ್ರಧಾನಿಗಳು ಈ  ವಿಷಯದ ಬಗ್ಗೆ ಖುದ್ದಾಗಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

7.ಕೆರೆ ಏರಿ ನಿರ್ಮಾಣದ ವೇಳೆ ಕೆಳದಿ ಅರಸರ ಕಾಲದ ಅಪರೂಪದ ಮಿಥುನ ಶಿಲ್ಪ ಪತ್ತೆ

ಇಲ್ಲಿನ ಆನಂದಪುರದ ಕೆರ ಏರಿ ನಿರ್ಮಾಣ ಕಾಮಗಾರಿಯ ವೇಳೆ ಅಪರೂಪದ ಪುರಾತನ ಶಿಲ್ಪಗಳು ದೊರೆತಿದ್ದು, ಇದೀಗ ಎಲ್ಲರ ಆಕರ್ಷಣೆಯಾಗಿದೆ. ಕಾರಣ ಇವು ಮಾಮೂಲಿ ಶಿಲ್ಪಗಳಾಗಿರದೇ, ಜೋಡಿ ಮಿಥುನ ಶಿಲ್ಪಗಳಾಗಿರುವುದು. ಮಡಿವಂತಿಕೆಯನ್ನು ನಾಚಿ ನೀರಾಗಿಸುವ ಈ ಮಿಥುನ ಶಿಲ್ಪಗಳು ಆಗಿನ ಕಾಲದಲ್ಲಿ ಫಲವಂತಿಕೆ ಸಂಕೇತವಾಗಿದ್ದವು. ಅಲ್ಲದೇ, ಇವುಗಳನ್ನು ಪೂಜಿಸುವ ಪದ್ಧತಿ ಕೂಡ ಇತ್ತು ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ. ಸದ್ಯ ಈ ಶಿಲ್ಪಗಳನ್ನುಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು  ಶಿವಮೊಗ್ಗ ನಗರದಲ್ಲಿರುವ ಶಿವಪ್ಪ ನಾಯಕನ ಅರಮನೆಗೆ ಸ್ಥಳಾಂತರ ಮಾಡಲಾಗಿದ್ದು, ಅರಮನೆಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ,

8.ಶಿಕ್ಷಕರನ್ನು ರೊಚ್ಚಿಗೆಬ್ಬಿಸಿದ ರಾಜ್ಯ ಸರ್ಕಾರ ಸುತ್ತೋಲೆ

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಶಿಕ್ಷಕ ವರ್ಗವನ್ನು ರೊಚ್ಚಿಗೆಬ್ಬಿಸಿದೆ. ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಸರ್ಕಾರವೇ ಅಡ್ಡಿಪಡಿಸುತ್ತಿದೆ ಎಂದು ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುವ ವಿವೇಚನೆಯನ್ನು ಶಿಕ್ಷಕರಿಗೆ ಬಿಡಬೇಕೆಂದು ಪಟ್ಟು ಹಿಡಿದಿದ್ದಾರೆ.

9.ತೆರೆಗೆ ಬರುವುದಕ್ಕೆ ಮೊದಲೇ ದಾಖಲೆ ಬರೆದ ದಾಸನ ‘ರಾಬರ್ಟ್‘!

ಸ್ಯಾಂಡಲ್​ವುಡ್​ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ‘ರಾಬರ್ಟ್‘​ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. 2020ಕ್ಕೆ ಉಡುಗೊರೆಯಾಗಿ ದರ್ಶನ್​ ‘ರಾಬರ್ಟ್‘​ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಕ್ರಿಸ್​ ಹಬ್ಬದ ಉಡುಗೊರೆಯಾಗಿ ‘ರಾಬರ್ಟ್‘​ ಸಿನಿಮಾದ ಫಸ್ಟ್​ ಲುಕ್​ ಮೋಷನ್​ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಇದೀಗ​​ 1 ಮಿಲಿಯನ್​ ವೀಕ್ಷಣೆ ಮಾಡಿ ಮುನ್ನುಗ್ಗುತ್ತಿದೆ.

10.ಕರ್ನಾಟಕ ಬೌಲರ್​ಗಳ ಮಾರಕ ದಾಳಿ; ಮುಂಬೈ 194 ರನ್​ಗೆ ಆಲೌಟ್!

ರಣಜಿ ಟ್ರೋಫಿ ಟೂರ್ನಿಯಲ್ಲಿ ಸಾಗುತ್ತಿರುವ ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲ ದಿನವೇ ಬೌಲರ್​ಗಳ ಸಂಘಟಿತ ದಾಳಿಗೆ ನಲುಗಿರುವ ಮುಂಬೈ ಕೇವಲ 194 ರನ್​ಗೆ ಆಲೌಟ್ ಆಗಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಮುಂಬೈ ಆರಂಭದಿಂದಲೆ ವಿಕೆಟ್ ಕಳೆದುಕೊಂಡು ಸಾಗಿತು. ಆದಿತ್ಯ ತಾರೆ ಸೊನ್ನೆ ಸುತ್ತಿದರೆ, ಅಜಿಂಕ್ಯಾ ರಹಾನೆ 7 ಹಾಗೂ ಸಿದ್ದೇಶ್ ಲಾಡ್ 4 ರನ್​ಗೆ ಔಟ್ ಆದರು. ಪೃಥ್ವಿ ಶಾ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 29 ರನ್​ಗೆ ನಿರ್ಗಮಿಸಿದರು.
First published:January 3, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ