ಮಂಡ್ಯ (ಜೂ 6): ಜಾಮಿಯಾ ಮಸೀದಿ ವಿವಾದ (Jamia Mosque Controversy) ದಿನಕ್ಕೊಂದು ರೋಚಕ ತಿರುವನ್ನು ಪಡೆದುಕೊಳ್ಳುತ್ತಿದೆ. ಮೂಡಲಬಾಗಿಲು ಶ್ರೀ ಆಂಜನೇಯಸ್ವಾಮಿ (Anjaneya Swamy) ದೇಗುಲದೊಳಗೆ ದೊರೆತ ಏಳು ಕೊಪ್ಪರಿಗೆ ಹಣದಿಂದ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮಸೀದಿಯಲ್ಲಾ (Mosque), ಮಂದಿರ ಎಂದು ಶ್ರೀ ಆಂಜನೇಯ ಸುಪ್ರಭಾತ ಚರಿತ್ರೆ ಪುಸ್ತಕದಲ್ಲಿ (History Book) ಉಲ್ಲೇಖ ಮಾಡಲಾಗಿದೆಯಂತೆ.
ಮಸೀದಿಯಲ್ಲಾ, ಮಂದಿರ
ಲೇಖಕ ವಿದ್ವಾನ್ ಶ್ರೀ ಬಾಲಗಣಪತಿ ಭಟ್ಟ ಬರೆದಿರುವ ಮೂಡಲಬಾಗಿಲು ಶ್ರೀ ಆಂಜನೇಯ ಸುಪ್ರಭಾತ ಎಂಬ ಕಿರು ಪುಸ್ತಕದಲ್ಲಿ ಈ ಸಂಗತಿಯನ್ನು ಉಲ್ಲೇಖಿಸಲಾಗಿದೆ. ವಿಜಯನಗರದ ಅರಸು ತಿಮ್ಮಣ್ಣ ಹೆಬ್ಬಾರನಿಂದ ಕಟ್ಟಿಸಲ್ಪಟ್ಟ ಮೂಡಲಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಾಲಯ ನೂರಾರು ವರ್ಷಗಳ ಕಾಲ ಶೋಭಾಯಮಾನವಾಗಿತ್ತು. ಟಿಪ್ಪು ಕಾಲದಲ್ಲಿ ಈ ದೇವಾಲಯಕ್ಕೆ ವಿನಾಶ ಕಾಲ ಬಂದಿತೆಂದು ದಾಖಲಿಸಿದ್ದಾರೆ.
ಹನುಮನ ಅರ್ಚಕನ ಕೈ ಕತ್ತರಿಸಿದ್ನಾ ಟಿಪ್ಪು?
ಟಿಪ್ಪು ಹನುಮನ ಅರ್ಚಕನ ಕೈ ಕತ್ತರಿಸಿದ್ನಾ? ಮಂದಿರದ ಕೊಪ್ಪರಿಕೆಯಲ್ಲಿದ್ದ ರತ್ನಾಭರಣ ಏನಾಯ್ತು ಅನ್ನೋ ಪ್ರಶ್ನೆ ಎದ್ದಿದೆ. ದೇವಾಲಯದ ಮೇಲ್ಭಾಗವನ್ನು ಸಂಪೂರ್ಣ ನಾಶ ಮಾಡಿದರು. ಅರ್ಚಕರಾಗಿದ್ದ ನಾರಾಯಣಸ್ವಾಮಿ ಅವರ ಕೈಯನ್ನು ಕತ್ತರಿಸಿ ಗರ್ಭಗುಡಿಯೊಳಗಿದ್ದ ಏಳು ಕೊಪ್ಪರಿಗೆ ಹಣವನ್ನು ಮತ್ತು ಅತ್ಯಂತ ಅಮೂಲ್ಯವಾದ ರತ್ನಾಭರಣಗಳನ್ನು ದೋಚಿದರು. ಈ ಹಣದ ಸಹಾಯದಿಂದಲೇ ಮಸೀದಿಯನ್ನು ನಿರ್ಮಿಸಿರುವುದಾಗಿ ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ.
ಇದನ್ನೂ ಓದಿ: RSS Activist: ಚಡ್ಡಿ ಸುಡ್ತೀರಾ ತಗೋಳ್ಳಿ, ಮಾಜಿ ಸಿಎಂ ಸಿದ್ದರಾಮಯ್ಯಗೆ RSSನಿಂದ ಪಾರ್ಸೆಲ್!
ಶ್ರೀ ಆಂಜನೇಯನ ದಿವ್ಯಮೂರ್ತಿ ಪತ್ತೆ
ದೇಗುಲದ ಗರ್ಭಗುಡಿಯಲ್ಲಿದ್ದ ಮೂಡಲಬಾಗಿಲು ಶ್ರೀ ಆಂಜನೇಯಸ್ವಾಮಿ ಮೂಲಮೂರ್ತಿಯನ್ನು ಜೊಂಡಿನಿಂದ ಮುಚ್ಚಿ ಈಗಿನ ವೆಲ್ಲೆಸ್ಲಿ ಸೇತುವೆ ಪೂರ್ವ ಭಾಗದ ಮಡುವಿನಲ್ಲಿ ಹಾಕಿದರು. 1799ರ ಮೇ 4ರಂದು ಅರ್ಚಕರು ಆ ಸ್ಥಳಕ್ಕೆ ಯೋಚನಾ ಮಗ್ನರಾಗಿ ಬರುತ್ತಿರುವಾಗ ಒಂದು ದಿವ್ಯವಾಣಿ ಕೇಳಿಸಿತು. ಇಲ್ಲೇನೋ ಇರಬೇಕೆಂದು ಶಿಷ್ಯವೃಂದದೊಂದಿಗೆ ಆಗಮಿಸಿ ಹುಡುಕಾಡಿದಾಗ ಶ್ರೀ ಆಂಜನೇಯನ ದಿವ್ಯಮೂರ್ತಿ ಕಂಡಿತು. ನಂತರ ಆ ದೇವರನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ತಂದು ಹಸಿರುವಾಣಿ ಚಪ್ಪರದಿಂದ ಅಲಂಕರಿಸಿ ಮಸೀದಿ ಮುಂಭಾಗದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದರು.
ಉತ್ತರಾಭಿಮುಖವಾಗಿ ಪ್ರತಿಷ್ಠಾಪನೆ
ದಳವಾಯಿ ನಂಜರಾಜಯ್ಯನವರ ದೃಷ್ಟಿ ಈ ದೇವರ ಮೇಲೆ ಬಿದ್ದು, ಆಗ ಅವರು ನಿರ್ಮಿಸುತ್ತಿದ್ದ ಶ್ರೀ ಜ್ಯೋತಿ ಮಹೇಶ್ವರಸ್ವಾಮಿ ದೇವಾಲಯದ ಅಂಗಳದಲ್ಲಿ ಮೂಡಣಕ್ಕಿದ್ದ ಈ ದೇವಾಲಯವನ್ನು ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಿದರು. ಈಗ ದೇವಾಲಯವು ಉತ್ತರಾಭಿಮುಖವಾಗಿ ಅಂಗಡಿ ಬೀದಿಯಲ್ಲಿ ಶೋಭಾಯಮಾನವಾಗಿ ಬೆಳಗುತ್ತಿದೆ. ಅಂದಿನಿಂದ ಸ್ವಾಮಿಗೆ ನಿತ್ಯಾರ್ಚನೆ, ಪಕ್ಷಾರ್ಚನೆ, ಇತರೆ ಸೇವಾ ಕೈಂಕರ್ಯಗಳು ನಡೆಯುತ್ತಿವೆ.
ಇದನ್ನೂ ಓದಿ: Udupi ಕಾರ್ಕಳದ ರಸ್ತೆಯೊಂದರ ಫಲಕದಲ್ಲಿ ನಾಥೂರಾಮ್ ಗೋಡ್ಸೆ ಹೆಸರು ಪ್ರತ್ಯಕ್ಷ; ಪೊಲೀಸರಿಂದ ತೆರವು
ಕಾನೂನು ಹೋರಾಟಕ್ಕೂ ಇದು ಸಾಕ್ಷ್ಯ
ಇನ್ನು ಹಲವು ದಶಕಗಳ ಹಿಂದೆ ರಚಿಸಿರುವ ಶ್ರೀ ಮೂಡಲ ಭಾಗಿಲು ಆಂಜನೇಯ ಸುಪ್ರಭಾತ ಪುಸ್ತಕ ಮಸೀದಿಯಲ್ಲ ಮಂದಿರ ಎಂಬ ವಾದಕ್ಕೆ ಪುಷ್ಠಿ ನೀಡಿದೆ. ಅಲ್ಲದೆ ಕಾನೂನು ಹೋರಾಟಕ್ಕೂ ಇದು ಸಾಕ್ಷ್ಯ ವಾಗಲಿದೆ ಎನ್ನಲಾಗ್ತಿದೆ.
ಸದ್ಯ ಈ ಬಗ್ಗೆ ಕಳೆದ 18 ವರ್ಷಗಳ ಹಿಂದೆಯೇ ಭಜರಂಗದಳ ಹೋರಾಟ ಆರಂಭಿಸಿತ್ತು ಎಂಬುದರ ಬಗ್ಗೆ ಭಜರಂಗದಳದ ಮಾಜಿ ಸಂಚಾಲಕ ಗಿರೀಶ್ ಮಾಹಿತಿ ನೀಡಿದ್ದು, ಮಸೀದಿಯಲ್ಲ ಮಂದಿರ ಎಂಬುದು ಮತ್ತೊಂದು ಮಜಲನ್ನ ಪಡೆದುಕೊಳ್ತಿದೆ. ಲೇಖಕ ವಿದ್ವಾನ್ ಶ್ರೀ ಬಾಲಗಣಪತಿ ಭಟ್ಟ ಬರೆದಿರುವ ಮೂಡಲಬಾಗಿಲು ಶ್ರೀ ಆಂಜನೇಯ ಸುಪ್ರಭಾತ ಎಂಬ ಕಿರು ಪುಸ್ತಕದಲ್ಲಿ ಅನೇಕ ಸಂಗತಿಗಳನ್ನು ಉಲ್ಲೇಖಿಸಲಾಗಿದೆ.
ಸದ್ಯ ಮಂಡ್ಯದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದ್ದು, ಭಜರಂಗದಳ ನೀಡಿರುವ ಗಡವು ಮುಗಿದ ಬಳಿಕ ಈ ಹೋರಾಟ ಯಾವ ಹಂತ ತಲುಪಲಿದೆ ಎಂದು ಕಾದು ನೋಡ ಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ