• Home
  • »
  • News
  • »
  • state
  • »
  • Karnataka Politics: ಜಮೀರ್ ಅಹ್ಮದ್​ಖಾನ್ ನಮ್ಮ ಪಕ್ಷದ ಬಾಹುಬಲಿ; ಸತೀಶ್ ಜಾರಕಿಹೊಳಿ

Karnataka Politics: ಜಮೀರ್ ಅಹ್ಮದ್​ಖಾನ್ ನಮ್ಮ ಪಕ್ಷದ ಬಾಹುಬಲಿ; ಸತೀಶ್ ಜಾರಕಿಹೊಳಿ

ಸತೀಶ್​ ಜಾರಕಿಹೊಳಿ

ಸತೀಶ್​ ಜಾರಕಿಹೊಳಿ

ಜಮೀರ್ ಅಹಮ್ಮದ್ ಖಾನ್ ಬಾಹುಬಲಿ ಎಂದು ಹೊಗಳಿದ ಜಾರಕಿಹೊಳಿ, ಜಮೀರ್ ಅಹಮ್ಮದ್ ಖಾನ್ ಅಲ್ಪಸಂಖ್ಯಾತ ಪ್ರಮುಖ ನಾಯಕ, ನಮ್ಮ ಪಕ್ಷದಲ್ಲಿ ಜಮೀರ್‌ ಬಾಹುಬಲಿ ಅಂದರೇ ತಪ್ಪೇನಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

  • Share this:

ಬೆಳಗಾವಿ (ಜು.22):  ಡಿ.ಕೆ ಶಿವಕುಮಾರ್​ (D.K Shivakumar) ಲೇವಲ್ ದೊಡ್ಡದಿರಬಹುದು, ನನ್ನ ಲೇವಲ್ ಚಿಕ್ಕದಿರಬಹುದು. ಅವರೇ ದೊಡ್ಡವರಾಗಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದರು. ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್​,  ಕಾಂಗ್ರೆಸ್ ಕಟ್ಟಿ ಬೆಳೆಸಬೇಕಿದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ನನ್ನ ಹೆಸರು ಡಿ.ಕೆ ಶಿವಕುಮಾರ ಹೇಳಿಲ್ಲ. ಎಲ್ಲರೂ ಸೇರಿ ಪಕ್ಷ ಕಟ್ಟೋಣ ಎಂದಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಯಾರು ಆಗಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನ (High Command Decision) ಮಾಡುತ್ತದೆ. ನನ್ನ ವೈಯಕ್ತಿ ಅಭಿಪ್ರಾಯ ನಾನು ಸಿದ್ದರಾಮಯ್ಯ ಆಗಬೇಕು ಎಂದು ಹೇಳಿದ್ದೇನೆ ಎಂದ್ರು.


2023ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು


ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಎಲ್ಲರೂ 2023ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಜನರೆ ಹೇಳುತ್ತಿದ್ದಾರೆ. ನಾನು ಪ್ರವಾಸ ಮಾಡಿದ ಸಂದರ್ಭದಲ್ಲಿ ಸಿದ್ದರಾಮಯ್ಯನ ಸರಕಾರದಲ್ಲಿ ನೀಡಿದ ಯೋಜನೆಯ ಬಗ್ಗೆ ಜನ ನೆನೆಸಿಕೊಳ್ಳುತ್ತಿದ್ದಾರೆ ಎಂದರು. ಮುಖ್ಯಮಂತ್ರಿ ಯಾರು ಆಗಬೇಕೆಂದು ನಮ್ಮ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಿರ್ಣಯ ಮಾಡುತ್ತಾರೆ. ಮುಖ್ಯಮಂತ್ರಿ ಯಾರ ಆಗಬೇಕೆಂದು ಒಕ್ಕಲಿಗರು ಆಗಬೇಕೆಂದು ಹೇಳಿ ಚಾಲನೆ ಕೊಟ್ಟವರೇ ಡಿ.ಕೆ.ಶಿವಕುಮಾರ. ಮುಸ್ಲಿಂರಿಗೂ ಆಸೆ ಇದೆ. ಅವರ ಸಮುದಾಯದವರು ಮುಖ್ಯಮಂತ್ರಿ ಆಗಬೇಕೆಂದು ಅದರಂತೆ ನಾನು ಸಹ ನನ್ನ ವೈಯಕ್ತಿ ಅಭಿಪ್ರಾಯ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಹೇಳಿದ್ದೇನೆ ಎಂದರು.


ನಾನು ಡಿಕೆಶಿ ಬದಲು ನಳೀನ್ ಭೇಟಿ ಮಾಡಲು ಆಗುತ್ತಾ?


ಡಿ.ಕೆ ಶಿವಕುಮಾರ ನಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರನ್ನು ಭೇಟಿಯಾಗುತ್ತೇನೆ. ಇಲ್ಲ ಅಂದರೆ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ ಕಟೀಲ್ ಭೇಟಿಯಾಗೋಕೆ ಆಗುತ್ತಾ ಎಂದು ಸುದ್ದಿಗಾರರ ಪ್ರಶ್ನೆಗೆ ಮರು ಪ್ರಶ್ನಿಸಿದರು. ಸಿದ್ದರಾಮಯ್ಯ ಅಮೃತ ಮಹೋತ್ಸವ ಎಲ್ಲ ಅವರ ಅಭಿಮಾನಿ ಸೇರಿಕೊಂಡು ಆಚರಿಸುತ್ತಿದ್ದೇವೆ. ಕಳೆದ ಆರು ತಿಂಗಳಿನಿಂದ ಸಿದ್ದರಾಮಯ್ಯನವರಿಗೆ ಅಭಿಮಾನಿಗಳು ಒತ್ತಡ ಹಾಕಿದ್ದರು. ಆದ್ದರಿಂದ ಆ.3 ರಂದು ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಆಚರಣೆಯನ್ನು ದಾವಣಗೆರೆಯಲ್ಲಿ ಮಾಡುತ್ತಿದ್ದೇವೆ ಎಂದರು.


ಇದನ್ನೂ ಓದಿ: H D Kumaraswamy: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ಸಿದ್ಧತೆ; ಯಾವಾಗ ಎಲೆಕ್ಷನ್ ಬಂದ್ರು ನಾವ್ ರೆಡಿ


ಜಮೀರ್ ಅಹಮ್ಮದ್ ಖಾನ್ ನಮ್ಮ ಪಕ್ಷದ ಬಾಹುಬಲಿ


ಜಮೀರ್ ಅಹಮ್ಮದ್ ಖಾನ್ ಬಾಹುಬಲಿ ಎಂದು ಹೊಗಳಿದ ಜಾರಕಿಹೊಳಿ, ಜಮೀರ್ ಅಹಮ್ಮದ್ ಖಾನ್ ಅಲ್ಪಸಂಖ್ಯಾತ ಪ್ರಮುಖ ನಾಯಕ, ನಮ್ಮ ಪಕ್ಷದಲ್ಲಿ ಜಮೀರ್‌ ಬಾಹುಬಲಿ ಅಂದರೇ ತಪ್ಪೇನಿಲ್ಲ. ಸಮೂದಾಯದ ಬಗ್ಗೆ ವಿಶೇಷ ಕಾಳಜಿಯನ್ನು‌ ವಹಿಸಿದ್ದಾರೆ. ತಾವೇಲ್ಲ 70 ವರ್ಷದಿಂದ ನಿಮ್ಮ ಜತೆಗೆ ಇದ್ದೇವೆ ಎಂದಿದ್ದೀರಿ.‌ಆದರೆ ಈ ಚುನಾವಣೆ ಅತ್ಯಂತ ಮಹತ್ವದು. ಈ ಚುನಾವಣೆ ಎಲ್ಲರೂ ಒಗ್ಗಟಿನಿಂದ ಇರಬೇಕು. ಜಮೀರ್ ಈಗಾಗಲೇ ನಾನು ಸಿಎಂ ಸ್ಥಾನ ಆಕಾಂಕ್ಷಿ ಎಂದಿದ್ದಾರೆ. ತಪ್ಪೇನಿಲ್ಲ ಇದು ಅವರ ಅಭಿಪ್ರಾಯ  ಎಂದ್ರು.


ಇದನ್ನೂ ಓದಿ: Education Department: ರಾಜ್ಯದ ಅನಧಿಕೃತ ಶಾಲೆಗಳಿಗೆ ಬೀಳಲಿದೆ ಬೀಗ!


ಸದ್ಯ ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ


ನಮ್ಮನ್ನು ಸಹ ಜನ ಕೇಳ್ತಾರೆ. ಆದರೇ ನಮ್ಮದು ದಿಲ್ಲಿ ಇನ್ನೂ ದೂರ ಇದೆ. ಸದ್ಯ ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ. ಇದಕ್ಕೆ ಇನ್ನೂ ಸಾಕಷ್ಟು ಸಮಯ ಇದೆ. ನಮ್ಮದು ಸಮಾನತೆಗಾಗಿ ಮಾತ್ರ ಹೋರಾಟ ಇದೆ. ಖುರ್ಚಿಗಾಗಿ ನಮ್ಮ ಹೋರಾಟ ಇಲ್ಲ. ಎಲ್ಲರಿಗೂ ಸಮಾನತೆ ಬೇಕು ಎಂಬುದು ನಮ್ಮ ಹೋರಾಟ. ಶಿಕ್ಷಣ, ರಾಜಕೀಯದಲ್ಲಿ ಸಮಾನತೆ ಬೇಕು ಇದಕ್ಕಾಗಿ ನಮ್ಮ ಹೋರಾಟ ಎಂದರು.

Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು