HOME » NEWS » State » JALLIKATTU BULL DRAGGED MAN IN SINGARAPALLI JALLIKATTU FESTIVAL CANK SCT

Jallikattu: ಸಿಂಗಾರಪಲ್ಲಿ ‌ಜಲ್ಲಿಕಟ್ಟು ವೇಳೆ ಅವಾಂತರ; ಹಗ್ಗದ ಜೊತೆ ವ್ಯಕ್ತಿಯನ್ನು ಎಳೆದೊಯ್ದ ಎತ್ತು!

Jallikattu Festival: ತಮಿಳುನಾಡಿನ ಕೃಷ್ಣಗಿರಿ ಬಳಿಯ ಸಿಂಗಾರಪಲ್ಲಿಯಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹಗ್ಗದೊಂದಿಗೆ ವ್ಯಕ್ತಿಯನ್ನು ಎತ್ತು ಎಳೆದೊಯ್ದಿದೆ. ಈ ರಭಸಕ್ಕೆ ವ್ಯಕ್ತಿಯ ಕೈ, ಕಾಲು, ಹೊಟ್ಟೆ, ಎದೆ ಮೇಲೆ ಗಂಭೀರ ಗಾಯಗಳಾಗಿದ್ದು, ಒಂದು ಕಿವಿ ಸಹ ಛಿದ್ರಗೊಂಡಿದೆ.

news18-kannada
Updated:February 14, 2021, 9:05 AM IST
Jallikattu: ಸಿಂಗಾರಪಲ್ಲಿ ‌ಜಲ್ಲಿಕಟ್ಟು ವೇಳೆ ಅವಾಂತರ; ಹಗ್ಗದ ಜೊತೆ ವ್ಯಕ್ತಿಯನ್ನು ಎಳೆದೊಯ್ದ ಎತ್ತು!
ಸಿಂಗಾರಪಲ್ಲಿ ಜಲ್ಲಿಕಟ್ಟು
  • Share this:
ಆನೇಕಲ್ (ಫೆ.14): ಜಲ್ಲಿಕಟ್ಟು ಸ್ಪರ್ಧೆ ವೇಳೆ ಆಕಸ್ಮಿಕವಾಗಿ ವ್ಯಕ್ತಿಯೋರ್ವನ ಕೈಗೆ ಎತ್ತಿನ‌ ಹಗ್ಗ ಸುತ್ತಿಕೊಂಡು ಒಂದು ಕಿ.ಮೀಗೂ ಅಧಿಕ ದೂರ ಎಳೆದೊಯ್ದಿರುವ ಘಟನೆ ತಮಿಳುನಾಡಿನ ಸಿಂಗಾರಪಲ್ಲಿ ಗ್ರಾಮದ ಬಳಿ ನಿನ್ನೆ ನಡೆದಿದ್ದು, ತಡವಾಗಿ ವಿಷಯ ಬೆಳಕಿಗೆ ಬಂದಿದೆ. ಎತ್ತು ಎಳೆದೊಯ್ದು ಗಾಯಗೊಂಡ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಕೃಷ್ಣಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಎತ್ತು ಎಳೆದೊಯ್ದಿರುವ ರಭಸಕ್ಕೆ ವ್ಯಕ್ತಿಯ ಕೈ, ಕಾಲು, ಹೊಟ್ಟೆ, ಎದೆ ಮೇಲೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಒಂದು ಕಿವಿ ಸಹ ಛಿದ್ರಗೊಂಡಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ನಶೆಯಲ್ಲಿ ಹದ್ದಿನತ್ತ ನುಗ್ಗಿ ಬರುವ ರಾಸುಗಳ ಸ್ಪರ್ಧೆ ಜಲ್ಲಿಕಟ್ಟು ಅಪಾಯಕಾರಿಯಾದರೂ ತಮಿಳುನಾಡಿನಲ್ಲಿ ಇದು ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಅಪಾರ ಜನಮನ್ನಣೆ ಪಡೆದಿದೆ. ಹಾಗಾಗಿ ತಮಿಳುನಾಡಿನಾದ್ಯಂತ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜನೆ ಮಾಡುತ್ತಾರೆ.

ನೋಡುಗರ ದೊಡ್ಡ ಸಂಖ್ಯೆಯೇ ಜಲ್ಲಿಕಟ್ಟು ವೀಕ್ಷಣೆಗೆ ಸೇರುತ್ತಾರೆ.  ಹಾಗಾಗಿ ಭಾನುವಾರ  ಸಹ ತಮಿಳುನಾಡಿನ ಕೃಷ್ಣಗಿರಿ ಸಮೀಪದ ಸಿಂಗಾರಪಲ್ಲಿ ಗ್ರಾಮದ ಹೊರವಲಯದಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಲು ಕರ್ನಾಟಕ ಸೇರಿದಂತೆ ತಮಿಳುನಾಡಿನ ಹಲವು ಕಡೆಯಿಂದ ಸುಮಾರು ನೂರಕ್ಕೂ ಅಧಿಕ ರಾಸುಗಳು ಆಗಮಿಸಿದ್ದವು. ಬಣ್ಣ ಬಣ್ಣದ ತಡಿಕೆಗಳನ್ನು ಕಟ್ಟಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳನ್ನು ನೋಡಿ ಮನರಂಜನೆ ಪಡೆಯಲು ಸಾವಿರಾರು ಮಂದಿ ಜಮಾಯಿಸಿದ್ದರು. ರೋಮಾಂಚಕಾರಿಯಾದ ಜಲ್ಲಿಕಟ್ಟು ಸ್ಪರ್ಧೆ ಅಷ್ಟೆ ಅಪಾಯಕಾರಿಯೂ ಹೌದು. ಹಾಗಾಗಿ, ಜಲ್ಲಿಕಟ್ಟು ಸ್ಪರ್ಧೆ ವೇಳೆ ಎಷ್ಟು ಜಾಗರೂಕತೆ ವಹಿಸಿದರು ಸಾಲದು.

ಇದನ್ನೂ ಓದಿ: Chikmagalur Rape: ಚಿಕ್ಕಮಗಳೂರಿನಲ್ಲಿ 14 ವರ್ಷದ ಬಾಲಕಿ ಮೇಲೆ ಮತ್ತೊಂದು ಅತ್ಯಾಚಾರ; ಬಾಲಕಿಯ ನಗ್ನ ಫೋಟೋ ತೆಗೆದು ಬ್ಲಾಕ್​ಮೇಲ್

ಅಂದಹಾಗೆ, ಇಲ್ಲಿಯೂ ಆಯೋಜಕರು ಎರಡು ಕಡೆ ಮರಗಳಿಂದ ತಡೆಗೋಡೆಗಳನ್ನು ನಿರ್ಮಿಸಿದ್ದರೂ ಸಹ ಹದ್ದಿನ ಕಡೆ ಸಾಗುವ ಬರದಲ್ಲಿ ದನಗಳು ತಡೆಗೋಡೆಯನ್ನು ಛಿದ್ರಗೊಳಿಸಿ ಜನರ ಮೇಲೆ ನುಗ್ಗುವ ಸಾಧ್ಯತೆ ಇರುತ್ತದೆ. ಜೊತೆಗೆ ಹದ್ದಿನಲ್ಲಿ ನುಗ್ಗಿ ಬರುವ ಎತ್ತುಗಳನ್ನು ಹಿಡಿದು ಬಹುಮಾನ ಗೆಲ್ಲುವ ತವಕದಲ್ಲಿ ಯುವಕರು ಸಹ ಪ್ರಾಣ ಪಣಕ್ಕಿಟ್ಟು ಸೆಣಸುತ್ತಾರೆ. ಇಂತಹ ಸಂದರ್ಭದಲ್ಲಿ ಎತ್ತಿನ ಹಗ್ಗ ವ್ಯಕ್ತಿಯ ಕೈಗೆ ಸುತ್ತಿಕೊಂಡು ಎಳೆದೊಯ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.  ಸಾಮಾನ್ಯವಾಗಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ದನಗಳಿಗೆ ಮತ್ತು ಬರಿಸಲು ಸಾರಾಯಿ ಸೇರಿದಂತೆ ನಶೆ ಪಾನೀಯಗಳನ್ನು ನೀಡಲಾಗುತ್ತದೆ. ಹಾಗಾಗಿ ದನಗಳು ದಿಕ್ಕೆಟ್ಟು ದಿಕ್ಕಾಪಾಲಾಗಿ ನುಗ್ಗುತ್ತವೆ. ಇದರಿಂದ ದನಗಳ ಜೀವಕ್ಕೂ ಹಾನಿ ಮತ್ತು ಜನಗಳ ಜೀವಕ್ಕೂ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಒಟ್ಟಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಪದೇ ಪದೇ ಸಾವು ನೋವುಗಳು ಸಂಭ‌ವಿಸಿದರೂ ಜಲ್ಲಿಕಟ್ಟು ವೀಕ್ಷಣೆಗೆ ಮಾತ್ರ ಸಾವಿರಾರು ಮಂದಿ ಸೇರುತ್ತಾರೆ. ಜೊತೆಗೆ  ಸ್ಪರ್ಧೆಯಲ್ಲಿ ತಮ್ಮ ರಾಸುಗಳು ಗೆಲ್ಲಬೇಕು. ಹದ್ದಿನಲ್ಲಿ ಯಾರು ಹಿಡಿಯಬಾರದು ಎಂದು ನಶೆಯ ಪಾನಿಯಗಳನ್ನು ನೀಡುವುದು ಮಾತ್ರ ನಿಂತಿಲ್ಲ.(ವರದಿ : ಆದೂರು ಚಂದ್ರು)
Published by: Sushma Chakre
First published: February 14, 2021, 9:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories