• Home
  • »
  • News
  • »
  • state
  • »
  • ಜಕ್ಕೂರು ವೈಮಾನಿಕ ತರಬೇತಿ ಶಾಲೆ, ಏರೋಡ್ರಮ್ ಪಿಪಿಪಿ ಮಾದರಿಯಲ್ಲಿ ಅಭಿವೃದ್ದಿ

ಜಕ್ಕೂರು ವೈಮಾನಿಕ ತರಬೇತಿ ಶಾಲೆ, ಏರೋಡ್ರಮ್ ಪಿಪಿಪಿ ಮಾದರಿಯಲ್ಲಿ ಅಭಿವೃದ್ದಿ

ಜಕ್ಕೂರು ವೈಮಾನಿಕ ತರಬೇತಿ ಶಾಲೆ

ಜಕ್ಕೂರು ವೈಮಾನಿಕ ತರಬೇತಿ ಶಾಲೆ

ಪ್ರಸ್ತುತ ಜಕ್ಕೂರ್ ಏರೋಡ್ರಮ್‍ನಲ್ಲಿ ಪ್ರತಿ ಲ್ಯಾಂಡಿಂಗ್‍ಗೆ ದೊಡ್ಡ ಏರ್​ಕ್ರಾಫ್ಟ್​ಗೆ 500 ರೂ. ಚಿಕ್ಕ ಏರ್​ಕ್ರಾಫ್ಟ್​ಗೆ  200 ರೂ. ಮಾತ್ರ ಇದೆ. ಅಲ್ಲದೆ ತಿಂಗಳ ಬಾಡಿಗೆ ಕೂಡ ಕೇವಲ 10 ಸಾವಿರ ರೂ. ಮಾತ್ರ. ಇಷ್ಟೊಂದು ಕಡಿಮೆ ಬಾಡಿಗೆ ಸರಿಯಲ್ಲ. ತಕ್ಷಣ ದರ ಪರಿಷ್ಕರಣೆ ಹಾಗೂ ಬಾಕಿ ವಸೂಲಿ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸಚಿವ ಡಾ. ನಾರಾಯಣಗೌಡ ಸೂಚಿಸಿದರು.

ಮುಂದೆ ಓದಿ ...
  • Share this:

ಬೆಂಗಳೂರು; ಸಾಕಷ್ಟು ಸ್ಥಳಾವಕಾಶ, ಮೂಲಸೌಕರ್ಯ ಇದ್ದರೂ ಅಭಿವೃದ್ಧಿ ಕಾಣದ ಜಕ್ಕೂರಿನ ವೈಮಾನಿಕ ತರಬೇತಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಖಾಸಗಿ- ಸಾರ್ವಜನಿಕ ಸಹಭಾಗಿತ್ವದಲ್ಲಿ ವೈಮಾನಿಕ ತರಬೇತಿ ಶಾಲೆ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದ್ದು,  ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.


ವಿಕಾಸಸೌಧದಲ್ಲಿ ಇಂದು ಜಕ್ಕೂರು ವೈಮಾನಿಕ ತರಬೇತಿ ಶಾಲೆ ಅಭಿವೃದ್ಧಿ ವಿಚಾರವಾಗಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ರಾಜ್ಯದ ನೂರಾರು ವಿದ್ಯಾರ್ಥಿಗಳಿಗೆ ವೈಮಾನಿಕ ತರಬೇತಿಗೆ ಅವಕಾಶವಾಗಬೇಕಿದ್ದ ಶಾಲೆ ಇಂದು ಡೋಲಾಯಮಾನ ಸ್ಥಿತಿಯಲ್ಲಿದೆ. ಹೀಗಾಗಿ ಖಾಸಗಿ- ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಯಿತು. ವೈಮಾನಿಕ ತರಬೇತಿ ಹಾಗೂ ಏರೋಡ್ರಮ್ ಅಭಿವೃದ್ಧಿಯಲ್ಲಿ  ಅನುಭವ ಹೊಂದಿರುವ ಸ್ಕೈಬರ್ಡ್ ಹಾಗೂ ವಿಂಗ್ಸ್ ಕಂಪೆನಿಗಳು ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದು,  ವಾರದೊಳಗೆ ಸಂಪೂರ್ಣ ಮಾಹಿತಿ ಕಲೆಹಾಕಿ ವರದಿ ನೀಡುವಂತೆ ಸಚಿವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ಪ್ರಾತ್ಯಕ್ಷಿಕೆ ನೀಡಿದ ಕಂಪೆನಿಗಳು ಪ್ರತಿ ವರ್ಷ ಕನಿಷ್ಠ 100 ವಿದ್ಯಾರ್ಥಿಗಳಿಗೆ ವೈಮಾನಿಕ ತರಬೇತಿ ನೀಡುವುದಾಗಿ ತಿಳಿಸಿವೆ. ಅಲ್ಲದೆ ವೈಮಾನಿಕ ತರಬೇತಿ ಶಾಲೆ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಸೇರಿದಂತೆ ಇನ್ನಿತರ ಕ್ರೀಡಾ ಚಟುವಟಿಕೆಗಳನ್ನೂ ನಡೆಸಲು ಉದ್ದೇಶಿಸಲಾಗಿದೆ. ಕಾರ್ಯಯೋಜನೆಯ ಮಾಹಿತಿ ಪಡೆದು, ಸಚಿವ ಸಂಪುಟದ ಮುಂದೆ ಕೂಡಲೇ ಅನುಮೋದನೆಗೆ ಮಂಡಿಸುವಂತೆ ಸಚಿವರು ಸೂಚಿಸಿದರು. ಇದರಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ವಿದ್ಯಾರ್ಥಿಗಳು ವೈಮಾನಿಕ ತರಬೇತಿ ಪಡೆಯಲು ಅವಕಾಶವಾಗಲಿದೆ. ಅಲ್ಲದೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ಆದಾಯ ಬರಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶವಾಗಲಿದೆ. 18 ತಿಂಗಳು ತರಬೇತಿ ಪಡೆದು ಲಕ್ಷಾಂತರ ರೂ. ಸಂಬಳ ಪಡೆಯುವ ಅವಕಾಶ ರಾಜ್ಯದ ಯುವಜನತೆಗೆ ಸಿಗಲಿದೆ. ಆದ್ದರಿಂದ ಶೀಘ್ರದಲ್ಲೇ ವೈಮಾನಿಕ ತರಬೇತಿ ಶಾಲೆಗೆ ಹೈಟೆಕ್ ಟಚ್ ನೀಡಿ, ಪ್ರಾರಂಭಿಸಲು ಉದ್ದೇಶಿಸಲಾಗಿದೆ.


ದರ ಪರಿಷ್ಕರಣೆಗೆ ನಿರ್ಧಾರ, ಅಧಿಕಾರಿಗಳ ಕಾರ್ಯವೈಖರಿಗೆ ಸಚಿವರು ಗರಂ


ಈ ಸಂದರ್ಭದಲ್ಲಿ ಜಕ್ಕೂರಿನಲ್ಲಿರುವ ಏರೋಡ್ರಮ್ ವಿಚಾರದಲ್ಲಿ ಅಧಿಕಾರಿಗಳ ನಡೆಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಖಾಸಗಿ ಕಂಪೆನಿಗಳಿಗೆ ಹೆಲಿಕಾಪ್ಟರ್ ಪಾರ್ಕಿಂಗ್‍ಗೆ ಹಾಗೂ ಲ್ಯಾಂಡಿಂಗ್‍ಗೆ ಸ್ಥಳ ನೀಡಲಾಗಿದ್ದು, ಲ್ಯಾಂಡಿಂಗ್ ಚಾರ್ಜ್ 1 ಕೋಟಿ ರೂ. ಗಿಂತಲು ಹೆಚ್ಚು ಬಾಕಿ ಹಣ ಬರಬೇಕಿದೆ. ವಸೂಲಿಗೆ ಸೂಚಿಸಿ ತಿಂಗಳಾದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಕಿಡಿಕಾರಿದರು. ಅಲ್ಲದೆ ಹೆಚ್‍ಎಎಲ್‍ಗೆ ಹೋಲಿಸಿದಲ್ಲಿ ಬಾಡಿಗೆ ಹಾಗೂ ಲ್ಯಾಂಡಿಂಗ್ ಚಾರ್ಜ್ ತೀರಾ ಕಡಿಮೆ ಇದೆ. ಕೂಡಲೆ ಬಾಡಿಗೆ ದರ ಪರಿಷ್ಕರಣೆ ಮಾಡಿ, ಹೆಚ್‍ಎಎಲ್ ರೀತಿಯಲ್ಲೇ ಬಾಡಿಗೆ ನಿಗದಿಪಡಿಸಬೇಕು ಎಂದು ಸಚಿವರು ಸೂಚಿಸಿದರು.


ಇದನ್ನು ಓದಿ: ಅರಬ್ಬಿ ಸಮುದ್ರದ ಬೋಟ್ ದುರಂತದಲ್ಲಿ ಬದುಕುಳಿದ ಮೀನುಗಾರ ಹೇಳಿದ ಸಾವು-ಬದುಕಿನ ಕಥೆ!


ತಿಂಗಳ ಬಾಡಿಗೆ 50 ಸಾವಿರ ಹಾಗೂ ಪ್ರತಿ ಲ್ಯಾಂಡಿಂಗ್ ಚಾರ್ಜ್ 25 ಸಾವಿರ ನಿಗದಿಪಡಿಸಬೇಕು. ಪ್ರಸ್ತುತ ಜಕ್ಕೂರ್ ಏರೋಡ್ರಮ್‍ನಲ್ಲಿ ಪ್ರತಿ ಲ್ಯಾಂಡಿಂಗ್‍ಗೆ ದೊಡ್ಡ ಏರ್​ಕ್ರಾಫ್ಟ್​ಗೆ 500 ರೂ. ಚಿಕ್ಕ ಏರ್​ಕ್ರಾಫ್ಟ್​ಗೆ  200 ರೂ. ಮಾತ್ರ ಇದೆ. ಅಲ್ಲದೆ ತಿಂಗಳ ಬಾಡಿಗೆ ಕೂಡ ಕೇವಲ 10 ಸಾವಿರ ರೂ. ಮಾತ್ರ. ಇಷ್ಟೊಂದು ಕಡಿಮೆ ಬಾಡಿಗೆ ಸರಿಯಲ್ಲ. ತಕ್ಷಣ ದರ ಪರಿಷ್ಕರಣೆ ಹಾಗೂ ಬಾಕಿ ವಸೂಲಿ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸಚಿವ ಡಾ. ನಾರಾಯಣಗೌಡ ಸೂಚಿಸಿದರು.


ಶೇ. 98 ರಷ್ಟು ಸಾಧನೆ- ಸಚಿವರ ಶ್ಲಾಘನೆ


ಇದೇ ಮೊದಲ ಬಾರಿಗೆ ಇಲಾಖೆಗೆ ಒದಗಿಸಿದ ಅನುದಾನಲ್ಲಿ ಶೇ. 98 ರಷ್ಟು ಪ್ರಗತಿ ಸಾಧಿಸಿದ್ದಕ್ಕೆ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು. ಆದಾಗ್ಯೂ ಕೆಲವು ಜಿಲ್ಲೆಗಳಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸದೆ ಇರುವುದಕ್ಕೆ ಸಚಿವರು ಗರಂ ಆದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸದೆ ಇರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.

Published by:HR Ramesh
First published: