• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Jaishankar: ವಿದೇಶಾಂಗ ಸಚಿವರಿಗೆ ಕರುನಾಡ ನಂಟು! ಬೆಂಗಳೂರು, ಚಿಕ್ಕೋಡಿಯ ನಂಟು ಬಿಚ್ಚಿಟ್ಟ ಜೈಶಂಕರ್

Jaishankar: ವಿದೇಶಾಂಗ ಸಚಿವರಿಗೆ ಕರುನಾಡ ನಂಟು! ಬೆಂಗಳೂರು, ಚಿಕ್ಕೋಡಿಯ ನಂಟು ಬಿಚ್ಚಿಟ್ಟ ಜೈಶಂಕರ್

ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್

ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್

ನನಗೆ ಅನೇಕ ದೇಶಗಳಿಗೆ ಹೋದಾಗ ಭಾರತದ ಬದಲಾವಣೆಗೆ ಕಾರಣ ಏನು? ಅಂತಾ ಕೇಳುತ್ತಾರೆ. ಆಗ ನಾನು ಅವರಿಗೆ ಕೊಡುವ ಒಂದೇ ಉತ್ತರ ಅದು ಮೋದಿ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

  • Share this:

ಧಾರವಾಡ : ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ (Jaishankar) ಆಗಮನ ಜೆಎಸ್‌ಎಸ್ ಕ್ಯಾಂಪಸ್‌ನ (JSS Campus) ಸನ್ನಿಧಿ ಕಲಾಕ್ಷೇತ್ರದಲ್ಲಿ ನಡೆದ ಸಂವಾದ ಕಾರ್ಯಕ್ರದಲ್ಲಿ ಇಂದು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಅರವಿಂದ್ ಬೆಲ್ಲದ್ (Aravind Bellad), ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಸೇರಿದಂತೆ ನೂರಾರು ಮಂದಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸಂವಾದದಲ್ಲಿ ಮಾತನಾಡಿದ ಜೈಶಂಕರ್ ಅವರು, ಹಿಂದಿನ ಯಾವ ವಿದೇಶಾಂಗ ಸಚಿವರು ಧಾರವಾಡಕ್ಕೆ (Dharwad) ಬಂದಿರಲಿಕ್ಕಿಲ್ಲ, ಆದರೆ ನಾನು ಇವತ್ತು ಬಂದಿದ್ದೇನೆ. ಹೀಗಾಗಿ ನನಗೆ ಬಹಳ ಸಂತೋಷ ಆಗಿದೆ. ವಿದೇಶಾಂಗ ನೀತಿ ತುಂಬಾ ಮುಖ್ಯವಾಗಿದೆ. ಅದರ ಬಗ್ಗೆಯೇ ಸಂವಾದ ಮಾಡಲಿದ್ದೇನೆ ಎಂದು ಹೇಳಿದರು.


ವಿದೇಶಾಂಗ ನೀತಿ ಜನರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ


ನನ್ನ ತರಬೇತಿ ಚಿಕ್ಕೋಡಿ ಪಡೆದಿದ್ದೇನೆ. ಆಗ ನನ್ನ ಪಾಲಕರು ಬೆಂಗಳೂರಿನಲ್ಲಿದ್ದರು, ಚಿಕ್ಕೋಡಿಯಿಂದ ಬೆಂಗಳೂರಿಗೆ ಪ್ರತಿ ವಾರ ಹೋಗುತ್ತಿದ್ದೆ. ಆಗ ರಾತ್ರಿ ಬಸ್‌ನಲ್ಲಿ ನಾನು ಧಾರವಾಡ ನೋಡಿದ್ದೇನೆ. ಅದೆಲ್ಲವೂ ಈಗ ನೆನಪಾಗುತ್ತಿದೆ.


ಇದನ್ನೂ ಓದಿ: ISRO: ಚಿತ್ರದುರ್ಗದಲ್ಲಿ ಇಸ್ರೋ ಮತ್ತೊಂದು ಸಾಧನೆ, ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಲ್ಯಾಂಡಿಂಗ್ ಟೆಸ್ಟ್‌ ಯಶಸ್ವಿ


ವಿದೇಶಾಂಗ ನೀತಿ ಜನರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಕೋವಿಡ್ ಸಮಯದಲ್ಲಿ ಎಲ್ಲರಿಗೂ ಗೊತ್ತಾಗಿರಬಹುದು. ಚೀನಾದಲ್ಲಿ ಕೊರೊನಾ ಬಂದಾಗ ನಮಗೆ ಏನೂ ಆಗೋದಿಲ್ಲ ಎಂದಿದ್ದೇವು. ಆದರೆ ಅದು ಏನಾಯ್ತು ಅಂತಾ ಎಲ್ಲರಿಗೂ ಗೊತ್ತು ಎಂದು ಜೈಶಂಕರ್​ ತಿಳಿಸಿದರು.



ವಿದೇಶಗಳಲ್ಲಿ ಏನೂ ನಡೆಯುತ್ತಿದೆ ಅಂತ ಎಲ್ಲರೂ ತಿಳಿದುಕೊಳ್ಳಬೇಕು


ಉಕ್ರೇನ್ ರಷ್ಯಾ ಯುದ್ಧ ನಡೆದಿತ್ತು. ಆಗ ನಮ್ಮ ವಿದ್ಯಾರ್ಥಿಗಳ ಬಗ್ಗೆ ಭಯ ಶುರುವಾಗಿತ್ತು. ಆಗ ಧಾರವಾಡದಲ್ಲಿ ಇದ್ದವರೂ ಅಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಆತಂಕ ವ್ಯಕ್ಯಪಡಿಸಿದ್ದರು. ಆಗ ನಾವು ಅವರನ್ನು ತರಲು ಪ್ರಯತ್ನ ಆರಂಭಿಸಿದ್ದೇವು. ಅದಕ್ಕಾಗಿ ಭಾರತಕ್ಕೆ ಲಭ್ಯ ಇರುವ ಎಲ್ಲ ಸೌಲಭ್ಯ ಬಳಸಿಕೊಂಡಿದ್ದೇವೆ.


ಐವರು ಸಚಿವರನ್ನು ನೇಮಿಸಿಕೊಳ್ಳಲಾಗಿತ್ತು. ಆ ಯುದ್ಧದ ಪರಿಣಾಮ ಖಾದ್ಯ ತೈಲ್ಯದ ಮೇಲೂ ಆಯ್ತು, ಉಕ್ರೇನ್ ಅತೀ ಹೆಚ್ಚು ಖಾದ್ಯ ತೈಲ ಉತ್ಪಾದಿಸುವ ದೇಶ. ಹೀಗಾಗಿ ನಮ್ಮಲ್ಲಿ ಆಹಾರ ಬೆಲೆಗಳು ಹೆಚ್ಚಾಯಿತು. ವಿದೇಶಗಳಲ್ಲಿ ಏನೂ ನಡೆಯುತ್ತಿದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕಿದೆ ಎಂದರು.


ಯಾವುದೇ ದೇಶಕ್ಕೆ ಹೋದರು ಓರ್ವ ಭಾರತೀಯ ಸಿಗುತ್ತಾನೆ


ಬಹುತೇಕರು ನೆಗೆಟಿವ್ ವಿಚಾರಗಳನ್ನೇ ಮಾಡುತ್ತಾರೆ. ಆದರೆ ವಿದೇಶಗಳ ಬಗ್ಗೆ ಇರುವ ಅವಕಾಶಗಳ ಬಗ್ಗೆ ಗಮನ ಹರಿಸಬೇಕಿದೆ. ಮೂರುವರೆ ಕೋಟಿ ಜನ ಭಾರತೀಯರು ವಿದೇಶದಲ್ಲಿದ್ದಾರೆ. ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗ ಮಾಡುವವರು ಇದ್ದಾರೆ.


ಇವತ್ತು ಭಾರತೀಯರೇ ಇಲ್ಲದ ಒಂದೇ ಒಂದು ದೇಶ ಇಲ್ಲ. ಯಾವುದೇ ದೇಶಕ್ಕೆ ಹೋದರು ಓರ್ವ ಭಾರತೀಯ ಸಿಕ್ಕೆ ಸಿಗುತ್ತಾನೆ. ನಾನು ವಿದೇಶಾಂಗ ಸಚಿವ, ಹೀಗಾಗಿ ಬಹಳ ದೇಶ ಓಡಾಡುವ ಅವಕಾಶ ಸಿಕ್ಕಿದೆ. ಇತ್ತೀಚೆಗೆ ಇಡೀ ಜಗತ್ತಿನ ದೇಶಗಳಲ್ಲಿ ಭಾರತ ಬದಲಾಗಿದೆ ಎಂಬ ಭಾವನೆ ಮೂಡಿದೆ.


ಎಲ್ಲಾ ಉತ್ಪಾದನೆ ದೇಶದಲ್ಲಿಯೇ ನಡೆಯುತ್ತಿದೆ


ನನಗೆ ಅನೇಕ ದೇಶಗಳಿಗೆ ಹೋದಾಗ ಭಾರತದ ಬದಲಾವಣೆಗೆ ಕಾರಣ ಏನು? ಅಂತಾ ಕೇಳುತ್ತಾರೆ. ಆಗ ನಾನು ಅವರಿಗೆ ಕೊಡುವ ಒಂದೇ ಉತ್ತರ ಅದು ಮೋದಿ. ಕೇವಲ ಮೋದಿ ಹೆಸರು ಹೇಳಿ ಸುಮ್ಮನಾಗುವುದಿಲ್ಲ, ಮೋದಿ ಬದಲಾವಣೆಗೆ ಏನೆಲ್ಲಾ ಮಾಡಿದ್ದಾರೆ ಅಂತ ವಿವರಿಸಿ ಹೇಳಿ ಬರುತ್ತೇನೆ. ಕೋವಿಡ್ ಬಳಿಕ ಇಡೀ ಜಗತ್ತಿನ ಆರ್ಥಿಕ ವ್ಯವಸ್ಥೆ ಚೇತರಿಕೆಗೆ ಒದ್ದಾಡುತ್ತಿದೆ.


ಆದರೆ ಆ ಸಮಸ್ಯೆ ನಮ್ಮ ದೇಶಕ್ಕೆ ಇಲ್ಲ, 2014ರ ಮೊದಲು 142 ಶ್ರೇಣಿಯಲ್ಲಿ ನಮ್ಮ ಅರ್ಥಿಕ ಸೂಚ್ಯಂಕ ಇತ್ತು. ಈಗ ನಾವು 63ಕ್ಕೆ ಬಂದಿದ್ದೇವೆ. ಉತ್ಪಾದನಾ ಕ್ಷೇತ್ರವನ್ನು ನಮ್ಮ ದೇಶ ನಿರ್ಲಕ್ಷ್ಯ ಮಾಡುತ್ತಿತ್ತು. ಆದರೆ ಈಗ ಎಲ್ಲಾ ಉತ್ಪಾದನೆ ದೇಶದಲ್ಲಿಯೇ, ಆ್ಯಪಲ್ ದಂತಹ ಕಂಪನಿಗಳು ತಮ್ಮ ಉತ್ಪನ್ನ ಉತ್ಪಾದನೆಗೆ ಈಗ ನಮ್ಮಲ್ಲಿಯೇ ಬರುತ್ತಿವೆ. ಮೊದಲು ನಾವು ಸೈನ್ಯದ ಶಸ್ತ್ರಾಸ್ತ್ರಗಳ ಆಮದಿನಲ್ಲಿ ಮುಂದೆ ಇದ್ದವು, ಆದರೆ ಈಗ ಆಮದು ಕಡಿಮೆಯಾಗಿದೆ.




ಇದನ್ನೂ ಓದಿ: Siddaramaiah: ಕಾಂಗ್ರೆಸ್‌ನಲ್ಲಿ ಸಿದ್ದು ಮೂಲೆ ಗುಂಪು ಮಾಡುವ ಹುನ್ನಾರ ನಡೀತಿದ್ಯಾ? ಹೈಕಮಾಂಡ್‌ಗೆ ರಮೇಶ್ ಕುಮಾರ್ ವಾರ್ನಿಂಗ್!

top videos


    ನಮ್ಮ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರ ನಾವೇ ತಯಾರಿಸುವಲ್ಲಿ ಮುಂದಡಿ ಇಟ್ಟಿದ್ದೇವೆ. ಇವತ್ತು ಬದಲಾವಣೆಯ ಭಾರತವನ್ನು ಇಡೀ ಜಗತ್ತು ನೋಡುತ್ತಿದೆ. ಇಂಟರ್‌ನೆಟ್, ಮೊಬೈಲ್ ಕ್ಷೇತ್ರದಲ್ಲಿ ನಾವು ಸಾಕಷ್ಟು ಬೆಳೆದಿದ್ದೇವೆ. ದೇಶದಲ್ಲಿ ಮೊಬೈಲ್ ಬಳಸುವವರ ಸಂಖ್ಯೆ 100 ಕೋಟಿ ದಾಟಿದೆ. ದೇಶದ ಯಾವುದೇ ಮೂಲೆಗೆ ಹೋದರೂ ಒಂದಿಲ್ಲೊಂದು ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಅಂತಹ ಒಂದು ಶಕ್ತಿ ದೇಶಕ್ಕೆ ಬಂದಿದೆ. ಭಾರತದ ಈ ಕ್ರಿಯಾಶೀಲತೆಯನ್ನು ಜಗತ್ತು ಗಮನಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

    First published: