• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rajya Sabha Election: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಹೆಸರು ಘೋಷಣೆ

Rajya Sabha Election: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಹೆಸರು ಘೋಷಣೆ

ಜೈರಾಮ್​ ರಮೇಶ್​

ಜೈರಾಮ್​ ರಮೇಶ್​

ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್​ ರಮೇಶ್ ಹೆಸರನ್ನು ಕಾಂಗ್ರೆಸ್​ ಫೈನಲ್​ ಮಾಡಿದೆ. ಮೇ 30 ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್​ ರಮೇಶ್ ನಾಮಪತ್ರ ಸಲ್ಲಿಸಲಿದ್ದಾರೆ.

  • Share this:

ಬೆಂಗಳೂರು (ಮೇ 26): ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Elections) ರಾಜ್ಯದ ಕಾಂಗ್ರೆಸ್​ ಅಭ್ಯರ್ಥಿ ಯಾರ್​ ಆಗ್ತಾರೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ. ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್​ ರಮೇಶ್ (Jai Ram Ramesh) ಅವರ ಹೆಸರನ್ನು ಕಾಂಗ್ರೆಸ್​ ಫೈನಲ್​ ಮಾಡಿದೆ. ಮೇ 30 ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ (Congress Candidate) ಜೈರಾಮ್​ ರಮೇಶ್ ನಾಮಪತ್ರ (Nomination) ಸಲ್ಲಿಸಲಿದ್ದಾರೆ.  ನಾಮಪತ್ರ ವಾಪಾಸ್ ಪಡೆಯಲು  ಮೇ 31 ಕೊನೆಯ ದಿನವಾಗಿದೆ.


ಡಿಕೆ ಶಿವಕುಮಾರ್​, ಜೈ ರಾಮ್ ರಮೇಶ್​ ಭೇಟಿ


ರಾಜ್ಯಸಭಾ ಸದಸ್ಯ ಜೈರಾಮ್​ ರಮೇಶ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಭೇಟಿ ಮಾಡಿದ್ರು. ರಾಜ್ಯಸಭಾ ಚುನಾವಣೆಯ ಅಧಿಸೂಚನೆ ಹೊರಡಿಸಲಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕರ್ನಾಟಕದಿಂದ ಜೈರಾಮ್​ ರಮೇಶ್ ಸ್ಪರ್ಧೆ ಖಚಿತವಾದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ರು.


2016ರಲ್ಲಿ ಕರ್ನಾಟಕದಿಂದಲೇ  ಆಯ್ಕೆ


ಜೈರಾಮ್ ರಮೇಶ್ 2016ರಲ್ಲಿ ಕರ್ನಾಟಕದಿಂದಲೇ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಜೈರಾಮ್ ರಮೇಶ್ ಅವರೇ ಮತ್ತೊಮ್ಮೆ ಕರ್ನಾಟಕದಿಂದ ಕಾಂಗ್ರೆಸ್ ಅಭ್ಯರ್ಥಿಯಾಗ್ತಿದ್ದಾರೆ. ಈ ಹಿನ್ನೆಲೆ ಕರ್ನಾಟಕಕ್ಕೆ ಭೇಟಿ ನೀಡಿರುವ ಜೈರಾಮ್ ರಮೇಶ್ ಡಿ.ಕೆ. ಶಿವಕುಮಾರ್ ಸಹಿತ ಹಲವು ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದರು.


ಇದನ್ನೂ ಓದಿ: H.D Devegowda: ಬೆಂಗಳೂರಲ್ಲಿ ಕೆಸಿಆರ್-ಹೆಚ್​ಡಿಡಿ ಭೇಟಿ, ತೃತೀಯ ರಂಗ ಬಲಪಡಿಸುವ ಕುರಿತು ಮಾತುಕತೆ


ರಾಜ್ಯಸಭಾ ಚುನಾವಣೆ


ಕರ್ನಾಟಕ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಗೆ ಆಯ್ಕೆಗೊಂಡ ನಾಲ್ಕು ಸದಸ್ಯರುಗಳ ಪೈಕಿ ಮೂವರು ಸದಸ್ಯರುಗಳು ಅಂದರೆ ನಿರ್ಮಲಾ ಸೀತಾರಾಮನ್, ಜೈರಾಮ್ ರಮೇಶ್ ಮತ್ತು ಕೆ.ಸಿ. ರಾಮಮೂರ್ತಿ ಅವರು ಜೂನ್ 30 ರಂದು ನಿವೃತ್ತರಾಗಲಿರುವುದರಿಂದ ಹಾಗೂ 2021ರ ಸೆಪ್ಟೆಂಬರ್ 13ರಂದು ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ತೆರವಾಗಿರುವ ಸ್ಥಾನಗಳನ್ನು ತುಂಬಲು ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆಯನ್ನು ನಡೆಸಲು ಭಾರತದ ಚುನಾವಣಾ ಆಯೋಗವು ಚುನಾವಣೆಯನ್ನು ಘೋಷಿಸಿ, ವೇಳಾಪಟ್ಟಿಯನ್ನು ಪ್ರಕಟಿಸಿದೆ.


ಮೇ 31 ನಾಮಪತ್ರ ಸಲ್ಲಿಕೆಗೆ ಕೊನೇ ದಿನ


ಚುನಾವಣಾ ವೇಳಾಪಟ್ಟಿಯಂತೆ ಮೇ 24ರ ಮಂಗಳವಾರದಂದು ಅಧಿಸೂಚನೆಯನ್ನು ಹೊರಡಿಸಿದ್ದು, ಮೇ 31ರ ಮಂಗಳವಾರದಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಜೂನ್ 01ರ ಬುಧವಾರದಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು.


ಜೂನ್​ 10 ರಂದು ರಾಜ್ಯಸಭಾ ಚುನಾವಣೆ 


ಜೂನ್ 03ರ ಶುಕ್ರವಾರದಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಅವಶ್ಯವಿದ್ದಲ್ಲಿ ಜೂನ್ 10ರ ಶುಕ್ರವಾರದಂದು ಬೆಳಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಮತದಾನವನ್ನು ನಡೆಸಲಾಗುವುದು. 2022ರ ಜೂನ್ 10ರ ಶುಕ್ರವಾರ ಸಂಜೆ 5:00 ಗಂಟೆಯಿಂದ ಮತಗಳ ಏಣಿಕೆ ನಡೆಯಲಿದ್ದು, ಜೂನ್ 13ರ ಸೋಮವಾರದಂದು ಚುನಾವಣೆ ಮುಕ್ತಾಯಗೊಳ್ಳಲಿದೆ.


ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್!?


ಬಿಜೆಪಿಯು ನಿರ್ಮಲಾ ಸೀತಾರಾಮನ್ ಮತ್ತು ಕೆ ಸಿ ರಾಮಸ್ವಾಮಿ ಅವರ ಹೆಸರನ್ನು ಮರುನಾಮಕರಣ ಮಾಡುವ ಸಾಧ್ಯತೆಯಿದೆ ಮತ್ತು ನಾಲ್ಕನೇ ಸದಸ್ಯರನ್ನು ಆಯ್ಕೆ ಮಾಡಲು 13-14 ಶಾಸಕರ ಕೊರತೆಯಿರುವ ಜೆಡಿ (ಎಸ್) ಕಾಂಗ್ರೆಸ್ ಮತ್ತು ಬಿಜೆಪಿಯ ಹೆಚ್ಚುವರಿ ಮತಗಳನ್ನು ಎದುರು ನೋಡುತ್ತಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಬಿಜೆಪಿ ಹೈಕಮಾಂಡ್ ಜೊತೆ ಮಾತನಾಡಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: HD Kumaraswamya: ಹಿಂದುತ್ವದ ಮೂಲಕವೇ ಬಿಜೆಪಿಗೆ ಹೆಚ್​ಡಿಕೆ ಟಕ್ಕರ್​


ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು, ಇಷ್ಟು ಶಾಸಕರ 45 ಮತಗಳ ಅಗತ್ಯವಿದೆ. 122 ಶಾಸಕರನ್ನು ಹೊಂದಿರುವ ಬಿಜೆಪಿಯು ತನ್ನ ನಾಮನಿರ್ದೇಶಿತರಲ್ಲಿ ಇಬ್ಬರನ್ನು ಸುಲಭವಾಗಿ ಆಯ್ಕೆ ಮಾಡಬಹುದು, 69 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲಬಹುದು ಮತ್ತು 32 ಶಾಸಕರನ್ನು ಹೊಂದಿರುವ ಜೆಡಿಎಸ್‌ಗೆ ಕನಿಷ್ಠ 13 ಹೆಚ್ಚಿನ ಶಾಸಕರ ಮತಗಳು ಬೇಕಾಗುತ್ತವೆ. ಆದರೆ ಜೆಡಿ(ಎಸ್) ಬಿಜೆಪಿಯ ಮೂರನೇ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಏಕೆಂದರೆ ಅದರ ಕೆಲವು ಶಾಸಕರು ಈಗಾಗಲೇ ಪಕ್ಷವನ್ನು ತೊರೆಯಲು ಯೋಜಿಸಿದ್ದಾರೆ ಮತ್ತು ಪಕ್ಷದ ನಿರ್ಧಾರಕ್ಕೆ ಬದ್ಧರಾಗುವ ಸಾಧ್ಯತೆಯಿಲ್ಲ.

Published by:Pavana HS
First published: