• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Ambedkar-Jain College: ಅಂಬೇಡ್ಕರ್‌ರಿಗೆ ಅಪಮಾನ ಆರೋಪ; ಜೈನ್ ಕಾಲೇಜ್‌ನ 7 ವಿದ್ಯಾರ್ಥಿಗಳು, ಪ್ರಿನ್ಸಿಪಾಲ್ ಅರೆಸ್ಟ್

Ambedkar-Jain College: ಅಂಬೇಡ್ಕರ್‌ರಿಗೆ ಅಪಮಾನ ಆರೋಪ; ಜೈನ್ ಕಾಲೇಜ್‌ನ 7 ವಿದ್ಯಾರ್ಥಿಗಳು, ಪ್ರಿನ್ಸಿಪಾಲ್ ಅರೆಸ್ಟ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಫೆಬ್ರವರಿ 8ರಂದು ನಿಮ್ಹಾನ್ಸ್ ಕನ್ವೆನ್ಸನ್​ ಸೆಂಟರ್​ನಲ್ಲಿ ಜೈನ್​ ವಿವಿಯಿಂದ ಕಾಲೇಜ್ ಫೆಸ್ಟ್ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ನಾಟಕವೊಂದರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಲ್ಲದೇ, ಜಾತಿ ನಿಂದನೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ 9 ಮಂದಿಯನ್ನು ಬಂಧಿಸಲಾಗಿದೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ (Bharat Ratna Baba Saheb Ambedkar) ಅವರಿಗೆ ಅಪಮಾನ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ (Bengaluru) 7 ವಿದ್ಯಾರ್ಥಿಗಳು (Students) ಹಾಗೂ ಕಾಲೇಜ್‌ ಪ್ರಿನ್ಸಿಪಾಲ್‌ರನ್ನು (College Principal) ಬಂಧಿಸಲಾಗಿದೆ. ಬೆಂಗಳೂರಿನ ಲಾಲ್‌ಬಾಗ್ ರಸ್ತೆಯಲ್ಲಿರುವ (Lalbag Road) ಜೈನ್ ಕಾಲೇಜ್‌ (Jain College) ವಿದ್ಯಾರ್ಥಿಗಳು ಹಾಗೂ ಪ್ರಿನ್ಸಿಪಾಲ್‌, ಆಯೋಜಕ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಇದೇ ಫೆಬ್ರವರಿ 8ರಂದು ನಿಮ್ಹಾನ್ಸ್ ಕನ್ವೆನ್ಸನ್​ ಸೆಂಟರ್​ನಲ್ಲಿ ಜೈನ್​ ವಿವಿಯಿಂದ ಕಾಲೇಜ್ ಫೆಸ್ಟ್ (College Fest) ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ನಾಟಕವೊಂದರಲ್ಲಿ (Drama) ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಲ್ಲದೇ, ಜಾತಿ ನಿಂದನೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ನಾಟಕದ ವಿಡಿಯೋ (Video) ಒಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿತ್ತು. ಬಳಿಕ ದಲಿತ ಸಂಘರ್ಷ ಸಮಿತಿ (DSS) ಸೇರಿದಂತೆ ವಿವಿಧ ಸಂಘಟನೆಗಳು ಇದರ ವಿರುದ್ಧ ದೂರು ನೀಡಿದ್ದವು. ಈ ಸಂಬಂಧ ಬೆಂಗಳೂರಿನ ಸಿದ್ದಾಪುರ ಠಾಣೆ ಪೊಲೀಸರು ಕಾಲೇಜಿನ ಪ್ರಾಂಶುಪಾಲರು​​ ಮತ್ತು ಕಾರ್ಯಕ್ರಮದ ಆಯೋಜಕರು ಹಾಗೂ 7 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ.


ಕಾಲೇಜ್‌ ಡ್ರಾಮಾದಲ್ಲಿ ಅಂಬೇಡ್ಕರ್‌ಗೆ ಅಪಮಾನ ಆರೋಪ


ಜೈನ್ ಕಾಲೇಜ್ ವಿದ್ಯಾರ್ಥಿಗಳು ಇದೇ ಫೆಬ್ರವರಿ 8ರಂದು ನಿಮ್ಹಾನ್ಸ್ ಕನ್ವೆನ್ಸನ್​ ಸೆಂಟರ್​ನಲ್ಲಿ ನಾಟಕ ಪ್ರದರ್ಶಿಸಿದ್ದರು. ಇದರಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ನಾಟಕವೊಂದರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಲ್ಲದೇ, ಜಾತಿ ನಿಂದನೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ನಾಟಕದ ದೃಶ್ಯವೊಂದರಲ್ಲಿ ಬಿಆರ್ ಬದಲು ಬೇರೆ ಪದ ಬಳಸಿ ಗೇಲಿ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.


ದೂರು ನೀಡಿದ್ದ ದಲಿತ ಸಂಘಟನೆಗಳು


ಇನ್ನು ಈ ನಾಟಕದ ದೃಶ್ಯದ ತುಣುಕುಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಇಷ್ಟಾಗುತ್ತಿದ್ದಂತೆ ಇದಕ್ಕೆ ರಾಜ್ಯಾದ್ಂತ ವಿರೋಧ ವ್ಯಕ್ತವಾಗಿತ್ತು. ಜೈನ್ ಕಾಲೇಜ್ ಆಡಳಿತ ಮಂಡಳಿ ವಿರುದ್ಧ, ವಿದ್ಯಾರ್ಥಿಗಳು, ಆಯೋಜಕರ 20ಕ್ಕೂ ಹೆಚ್ಚು ದಲಿತ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಬ್ಯಾನ್ ಜೈನ್ ಕಾಲೇಜ್ ಎಂಬ ಅಭಿಯಾನ ಆರಂಭಿಸಲಾಗಿತ್ತು. ದಲಿತ ಸಂಘಟನೆಗಳು ಬೆಂಗಳೂರು ಸೇರಿ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದವು.


ಇದನ್ನೂ ಓದಿ: Shivalinge Gowda: ನೀವೂ ಸುಮ್ಮನಿರಿ, ನಾನೂ ಸುಮ್ಮನಿರ್ತೀನಿ: 'ದಳ'ಪತಿಗಳಿಗೆ ಶಿವಲಿಂಗೇಗೌಡ ವಾರ್ನಿಂಗ್!


ಕ್ಷಮೆ ಕೇಳಿದ್ದ ಕಾಲೇಜ್ ಆಡಳಿತ ಮಂಡಳಿ


ಇನ್ನು ಈ ವಿವಾದದ ಕಿಚ್ಚು ಹೆಚ್ಚಾಗುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಕ್ಷಮೆ ಕೇಳಿತ್ತು. ಬಳಿಕ ಪ್ರಕರಣದ ತನಿಖೆಗೆ ಶಿಸ್ತುಪಾಲನ ಕಮಿಟಿ ರಚಿಸಲಾಗಿದ್ದು, ಆ ಸಮಿತಿಯು ನಾಟಕ ಪ್ರದರ್ಶನ ಮಾಡಿದ 6 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಡಿತ್ತು.


ಜೈನ್ ಕಾಲೇಜ್‌ ಮುಂದೆ ಗಲಾಟೆ


ಇಷ್ಟಾದರೂ ಕಳೆದ ಭಾನುವಾರ ಜೈನ್ ಕಾಲೇಜ್ ಮುಂದೆ ಭಾರೀ ಪ್ರತಿಭಟನೆ ನಡೆದಿತ್ತು. ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ (NSUI) ಹಾಗೂ ಹಲವು ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ವೇಳೆ ಕಾಲೇಜಿನ ಬೋರ್ಡ್‌ಗೆ ಮಸಿ ಬಳಿಯಲಾಗಿತ್ತು.
ಹಾಸ್ಯವನ್ನು ಅಪರಾಧ ಎನ್ನುವುದು ಪ್ರಜಾಪ್ರಭುತ್ವವಲ್ಲ ಎಂದಿದ್ದ ನಟ ಚೇತನ್


ಇನ್ನು ನಟ ಅಹಿಂಸಾ ಚೇತನ್ ಟ್ವೀಟ್ ಮಾಡಿ, ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ ಯಾವುದನ್ನಾದರೂ ಮತ್ತು ಯಾರನ್ನಾದರೂ ತಮಾಷೆ ಮಾಡುವ ಹಕ್ಕು ನಮಗಿರಬೇಕು. ಮೋದಿಯನ್ನು ಹಾಸ್ಯ ಮಾಡುವ ಸ್ಟ್ಯಾಂಡ್-ಅಪ್ ಕಾಮಿಕ್‌ ಮತ್ತು ನಾಟಕಗಳನ್ನು ನಾವು ಹೇಗೆ ಸೆನ್ಸಾರ್ ಮಾಡಬಾರದೋ, ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತರ ವಿರುದ್ಧ 'ಹಾಸ್ಯ'ವನ್ನು ಅಪರಾಧ ಎಂದು ಭಾವಿಸಬಾರದು. ಅದು ಪ್ರಜಾಪ್ರಭುತ್ವವಲ್ಲ’ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು