ಬಂಡಾಯಗಾರರಿಗೆ ಬಿಸಿ; ಅನರ್ಹ ಶಾಸಕ ಎಸ್​ಟಿ ಸೋಮಶೇಖರ್​ ಪರ ಪ್ರಚಾರಕ್ಕಿಳಿದ ಜಗ್ಗೇಶ್​​

ಕೇವಲ ಜಗ್ಗೇಶ್​ ಮಾತ್ರವಲ್ಲದೇ ಅಥಣಿ, ರಾಣೆಬೆನ್ನೂರು ಸೇರಿದಂತೆ ಹಲವೆಡೆ ಅತೃಪ್ತರು  ಬಂಡಾಯದ ಬಾವುಟ ಹಾರಿಸಿದ್ದರು. ಇವರಿಗೆಲ್ಲಾ ಪಕ್ಷದ ವತಿಯಿಂದ ಖಡಕ್​ ಎಚ್ಚರಿಕೆಯನ್ನು ನೀಡಲಾಗಿದೆ. 

Seema.R | news18-kannada
Updated:November 21, 2019, 12:45 PM IST
ಬಂಡಾಯಗಾರರಿಗೆ ಬಿಸಿ; ಅನರ್ಹ ಶಾಸಕ ಎಸ್​ಟಿ ಸೋಮಶೇಖರ್​ ಪರ ಪ್ರಚಾರಕ್ಕಿಳಿದ ಜಗ್ಗೇಶ್​​
ಜಗ್ಗೇಶ್​
  • Share this:
ಬೆಂಗಳೂರು (ನ.21): ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಒಬ್ಬರಾದ ಬಳಿಕ ಒಬ್ಬರು ಬಂಡಾಯ ಸಾರುವ ಮೂಲಕ ಟಿಕೆಟ್​ ಕೈ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ರೀತಿ ಪಕ್ಷದ ವಿರುದ್ಧ ಬಂಡಾಯ ಸಾರಿದ್ದ ಅತೃಪ್ತರಿಗೆ ಪಕ್ಷ ಶಾಕ್​ ನೀಡಿದ್ದು, ಎಲ್ಲ ಮುನಿಸುಗಳನ್ನು ಒತ್ತಟ್ಟಿಗಿಟ್ಟು ಪ್ರಚಾರ ನಡೆಸಬೇಕು ಇಲ್ಲವಾದಲ್ಲಿ ಪಕ್ಷ ಉಚ್ಛಾಟನೆ ಕ್ರಮಕ್ಕೆ ಮುಂದಾಗುತ್ತದೆ ಎಂದು ಖಡಕ್​ ಎಚ್ಚರಿಕೆ ನೀಡಿದೆ. ಪಕ್ಷ ನೀಡಿದ ಈ ಬಿಸಿಗೆ ಬೆಚ್ಚಿಬಿದ್ದ ನಟ, ರಾಜಕಾರಣಿ ಜಗ್ಗೇಶ್​ ಇಂದು ಅನರ್ಹ ಶಾಸಕ ಎಸ್​ಟಿ ಸೋಮಶೇಖರ್​ ಪರ ಪ್ರಚಾರಕ್ಕೆ ಮುಂದಾಗಿದ್ದು, ಎಲ್ಲರ ಗಮನಸೆಳೆದಿದ್ದಾರೆ. 

ಯಶವಂತಪುರ ಕ್ಷೇತ್ರದಿಂದ ಅನರ್ಹ ಶಾಸಕ ಎಸ್​ಟಿ ಸೋಮಶೇಖರ್​ಗೆ ಟಿಕೆಟ್​ ನೀಡಿದ ಹಿನ್ನೆಲೆ ಅಸಮಾಧಾನಕ್ಕೆ ಒಳಗಾಗಿದ್ದ ನಟ, ರಾಜಕಾರಣಿ ಜಗ್ಗೇಶ್​ ಪ್ರಚಾರ ಸಭೆಗಳಿಂದ ದೂರ ಉಳಿಯುವ ಮೂಲಕ ಬಂಡಾಯ ಸಾರಿದ್ದರು. ಇನ್ನು ಅವರಿಗೆ ಟಿಕೆಟ್​ ಕೈ ತಪ್ಪಿದರ ಕುರಿತು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಜಗ್ಗೇಶ್​ ಈ ಹಿಂದೆ ಕೂಡ ಚುನಾವಣಾ ನಮ್ಮ ಅಭ್ಯರ್ಥಿಯಾಗಿರಲಿಲ್ಲ.  ಯಶವಂತಪುರ ಅವರ ಕ್ಷೇತ್ರ ಕೂಡ ಅಲ್ಲ. ಈ ಹಿಂದೆ ಯಾರು ಅಭ್ಯರ್ಥಿಗಳು ಸಿಗಲಿಲ್ಲ ಎಂದು ಅವರಿಗೆ ಟಿಕೆಟ್​ ನೀಡಲಾಗಿತ್ತು ಎಂದಿದ್ದರು.

ಎಸ್​ಟಿ ಸೋಮಶೇಖರ್​ ಗೆಲುವಿಗಾಗಿ ನಡೆದ ಸಭೆ ಹಾಗೂ ಮುಖ್ಯಮಂತ್ರಿಗಳ ನಡುವೆ ನಡೆದ ಸಭೆಯಲ್ಲಿಯೂ ಅವರು ಗೈರಾಗಿದ್ದರು. ಕೇವಲ ಜಗ್ಗೇಶ್​ ಮಾತ್ರವಲ್ಲದೇ ಅಥಣಿ, ರಾಣೆಬೆನ್ನೂರು ಸೇರಿದಂತೆ ಹಲವೆಡೆ ಅತೃಪ್ತರು  ಬಂಡಾಯದ ಬಾವುಟ ಹಾರಿಸಿದ್ದರು. ಇವರಿಗೆಲ್ಲಾ ಪಕ್ಷದ ವತಿಯಿಂದ ಖಡಕ್​ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನು ಓದಿ: ಕುರುಬ ಸಮುದಾಯದ ಆಕ್ರೋಶ: ಕಾಗಿನೆಲೆ ಸ್ವಾಮೀಜಿ ಜೊತೆ ಸಂಧಾನಕ್ಕೆ ಮುಂದಾದ ಸಚಿವ ಮಾಧುಸ್ವಾಮಿ

ಈ ಹಿನ್ನೆಲೆಯಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಜಗ್ಗೇಶ್​ ಭಾಗಿಯಾಗಿದ್ದಾರೆ. ಕೆಂಗೇರಿ ಉಪನಗರದ ಹೊಯ್ಸಳದಿಂದ ಆರಂಭವಾಗುವ ಬೈಕ್​ ರ್ಯಾಲಿಯಲ್ಲಿ ಅವರು ಭಾಗಿಯಾಗಲಿದ್ದಾರೆ. ಈ ಮೂಲಕ ಅನರ್ಹ ಶಾಸಕ ಎಸ್​ಟಿ ಸೋಮಶೇಖರ್​ ಪರ ಮತಯಾಚಿಸಲಿದ್ದಾರೆ.

ಪ್ರಚಾರಕ್ಕೆ ಆಗಮಿಸಿದ ಕೂಡ ಅವರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
First published: November 21, 2019, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading