Re-Postmortem: ಪೇಂಟರ್ ರಮೇಶ್ ಕೊಲೆ ಕೇಸ್! ಮರು ಪೋಸ್ಟ್​ಮಾರ್ಟಂಗಾಗಿ ಕೆರೆಯಲ್ಲಿರೊ ನೀರು ಹೊರಕ್ಕೆ

ಜೂನ್ 7 ರಂದು ಕೋಲಾರದ ಮುಳಬಾಗಿಲು ಪಟ್ಟಣದಲ್ಲಿ ಭೀಕರವಾಗಿ ಕೊಲೆಯಾಗಿದ್ದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದಲ್ಲಿ 8 ವರ್ಷ ಹಳೆಯ ಅಮಾಯಕನ ಕೊಲೆ ರಹಸ್ಯ ಬಯಲಾಗಿದೆ. ಇದೀಗ ಹೂತಿಟ್ಟ ಶವ ಹೊರತೆಗೆಯಲು ಕೆರೆಯ ನೀರು ಬತ್ತಿಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ(ಜು.17): ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಕಳೆದ ತಿಂಗಳ ಜೂನ್ 7 ರಂದು ನಗರಸಭೆ ಸದಸ್ಯ, ಹಾಗು ಸ್ಥಾಯಿ ಸಮೀತಿ ಅದ್ಯಕ್ಷ ಜಗನ್ ಮೋಹನ್ ರೆಡ್ಡಿ (Jagan Mohan Reddy) ಭೀಕರ ಕೊಲೆ (Murder) ನಡೆದಿತ್ತು. ಮತ್ಯಾಲಪೇಟೆಯ ಗಂಗಮ್ಮನ ದೇವಸ್ಥಾನದ ಬಾಗಿಲು ತೆಗೆಯುದಕ್ಕೆ, ಹೊಗಿದ್ದ ಮೋಹನ್ ರೆಡ್ಡಿ ಮೇಲೆ ಆರು ಮಂದಿ ತಲ್ವಾರ್ ನಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಘಟನೆಯ ಎಲ್ಲಾ ದೃಶ್ಯಾವಳಿಗಳು ಅವರದ್ದೆ ಮನೆಯ ಸಿಸಿಟಿವಿಯಲ್ಲಿ (CCTV) ಸೆರೆ ಯಾಗಿತ್ತು. ಕೊಲೆಯಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ ಜಗನ್ನಾಥ್, ಧನುಂಜಯ್, ಮಹೇಶ್, ಬಾಲಾಜಿ ಸಿಂಗ್ ಸೇರಿದಂತೆ 6 ಮಂದಿ ಹಾಗು ಕೊಲೆಗೆ ಸಹಕರಿಸಿದ 8 ಮಂದಿ ಸೇರಿ ಒಟ್ಟು 14 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕಾರ ನೀಡಿದವರಲ್ಲಿ ಅಶ್ವಿನಿ, ರೊಹಿತ್ ಕುಮಾರ್, ಪ್ರಕಾಶ್, ಸಂಗೀತಾ, ಜಯಲಕ್ಷ್ಮಿ, ನಾಗೇಶ್. ಸಾವಿತ್ರಮ್ಮ ಇದ್ದು ಮತ್ತೊಬ್ಬ ಆರೋಪಿ ಪ್ರಸಾದ್ ಗಾಗಿ ಪೊಲೀಸರು  (Police) ಹುಡುಕಾಟ ಮುಂದುವರೆಸಿದ್ದಾರೆ.

ಆರೋಪಿಗಳು ಕೊಲೆ ನಂತರ ಗೋವಾ, ಮಹಾರಾಷ್ಟ್ರ, ಹಾಗು ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದು, ಪೆÇಲೀಸರ ಮಿಂಚಿನ ಕಾರ್ಯಾಚರಣೆಯಿಂದ ಎಲ್ಲರು ಜೈಲು ಪಾಲಾಗಿದ್ದಾರೆ,

ಕೊಲೆ ತನಿಖೆಯಲ್ಲಿ ಹಳೇ ಕೇಸ್ ಪ್ರಸ್ತಾಪಸಿದ ಪ್ರಮುಖ ಆರೋಪಿ

ಜಗನ್ ಮೋಹನ್ ರೆಡ್ಡಿ ಕೊಲೆ ಕೇಸ್ ತನಿಖೆಯ ವೇಳೆ 8 ವರ್ಷದ ಹಿಂದೆ ಮಣ್ಣಲ್ಲಿ ಮಣ್ಣಾಗಿದ್ದ ಅಮಾಯಕನ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು, ಈ ಕೊಲೆ ಕೇಸ್ ನ ಪ್ರಮುಖ ಆರೋಪಿಯು ಮೃತ ಮೋಹನ್ ರೆಡ್ಡಿ ಎಂಬುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. 2015 ರ ಏಪ್ರಿಲ್ 30 ರಂದು ಮುಳಬಾಗಿಲು ತಾಲೂಕಿನ ಲಿಂಗಾಪುರದ ನಿರ್ಮಾನುಷ ಪ್ರದೇಶದ ಪೊದೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಸಿಕ್ಕಿತ್ತು.

ಕೊಲೆಯಾದ ರಮೇಶ್


ಆ ಶವ ಗುರುತು ಸಿಗದ ಹಿನ್ನಲೆ, ಬಾಡಿ 'ಡಿ' ಕಂಪೋಸ್ ಆಗಿದೆಯೆಂದು ಮುಳಬಾಗಿಲು ಗ್ರಾಮಾಂತರ ಪೊಲೀಸರೆ, ನಾಗನಕುಂಟೆ ಕೆರೆ ಬಳಿಯೇ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು. ಬಳಿಕ ಶರ್ಟ್ ಮೇಲಿನ ಧರ್ಮಸಿಂಗ್ ಟೈಲರ್ ಎಂಬ ಮಳಿಗೆಯ ಹೆಸರಿನ ಮೂಲಕ, ಅದು ಗಣೇಶಪಾಳ್ಯದ 31 ವರ್ಷದ ರಮೇಶ್ ಅಲಿಯಾಸ್ ಪೇಂಟರ್ ರಮೇಶ್ ಎಂದು ತಿಳಿದುಬಂದಿತ್ತು,

ಕೊಲೆ ನಡೆದಿದ್ದು ಹೇಗೆ ? ಯಾವಾಗ ?

2015 ಏಪ್ರಿಲ್ 28 ರಂದು ಮುತ್ಯಾಲಪೇಟೆಯಲ್ಲಿ ಗಂಗಮ್ಮನ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ವೇಳೆ ಸಕತ್ತಾಗಿಯೇ ಕುಡಿದಿದ್ದ ಪೇಂಟರ್ ರಮೇಶ್, ಡ್ಯಾನ್ಸ್ ಮಾಡುತ್ತಾ ನಗರಸಬೆ ಸದಸ್ಯ ಜಗನ್ ಮೋಹನ್ ರೆಡ್ಡಿ ಭುಜಕ್ಕೆ ಮೈ ತಾಕಿಸಿದ್ದಾನೆ. ಒಂದೆರಡು ಬಾರಿ ಎಚ್ಚರಿಕೆ ನೀಡಿದ್ದರು. ಕುಡಿದ ಅಮಲಲ್ಲಿ ಹಾಗೆ ಚೇಸ್ಟೆ ಮಾಡಿದ್ದಕ್ಕೆ ಕಪಾಳಕ್ಕೆ ಬಾರಿಸಿದ್ದಾನೆ. ಇದಕ್ಕೆ ಕೆಟ್ಟ ಪದಗಳಿಂದ ಬೈಗುಳ ಹಾಕಿದ್ದ ಪೇಂಟರ್ ರಮೇಶ್ ಜಗಳಕ್ಕೆ ಹೋಗಿದ್ದಾನೆ.

ರೀ ಪೋಸ್ಟ್​ ಮಾರ್ಟಂ ಪ್ರಕ್ರಿಯೆಗಳು ಆರಂಭ


ಅದೇ ಜಿದ್ದಿನಿಂದಲೇ ನಿನ್ನ ಒಂದು ಕೈ ನೋಡ್ಕೋತಿನಿ ಎಂದು ಜಗನ್ ಮೋಹನ್ ರೆಡ್ಡಿ ಸವಾಲು ಹಾಕಿದ್ದನಂತೆ. ಇನ್ನು ಪೇಂಟರ್ ರಮೇಶ್ ಹಾಗು ಜಗನ್ ಮೋಹನ್ ರೆಡ್ಡಿ ನಡುವೆ, ಆರ್ಕೆಸ್ಟ್ರಾ ಗಲಾಟೆಗೂ ಮೊದಲೆ, ಮೂರ್ನಾಲ್ಕು ಬಾರಿ ಸಣ್ಣ ಮಾತಿನ ಚಕಮಕಿ ಆಗಿ ಗಲಾಟೆಯು ಆಗಿತ್ತಂತೆ.

ಇದೇ ಜಿದ್ದಿನ ಮೇಲೆ ತನ್ನ ಬಲಗೈ ಬಂಟನಾಗಿದ್ದ ಸೂರಿ ಹಾಗು ಅಪ್ಪಿ ಎನ್ನುವ ಇಬ್ಬರಿಗೆ ಪೇಂಟರ್ ರಮೇಶ್ ನನ್ನ ಮುಗಿಸುವಂತೆ ತಲಾ 1 ಲಕ್ಷ ಹಣ ನೀಡಿ ಸುಪಾರಿ ನೀಡಿದ್ದಾರಂತೆ. ಇಬ್ಬರು 2015 ರ ಏಪ್ರಿಲ್ 30 ರಂದು ರಮೇಶನನ್ನ ಯಾಮಾರಿಸಿ, ಮುಳಬಾಗಿಲು ನಗರ ಹೊರವಲಯದ ಲಿಂಗಾಪುರ ಬಳಿಯ ನಿರ್ಮಾನುಷ ಸ್ಥಳಕ್ಕೆ ಕರೆದೊಯ್ದು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ಜಗನ್ನಾಥ್ ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ: Kolara: ದೇಗುಲದ ಬಾಗಿಲು ತೆರೆಯಲು ಹೋದ ನಗರಸಭೆ ಸದಸ್ಯನ ಕಗ್ಗೊಲೆ!

ಪೇಂಟರ್ ರಮೇಶ್ ಕೊಲೆಯನ್ನ ಜಗನ್ ಮೋಹನ್ ರೆಡ್ಡಿ ಸೂಚನೆ ಮೇರೆಗೆ, ಬೆಂಬಲಿಗರಾದ ಸೂರಿ, ಹಾಗು ಅಪ್ಪಿ ಇಬ್ಬರೇ ಮಾಡಿದ್ದಾರೆ. ಅವರಿಬ್ಬರು ಕೊಲೆ ಮಾಡಲು ನನ್ನನ್ನ ಡ್ರೈವರ್ ಆಗಿ ವಾಹನಕ್ಕೆ ಬಳಿಸಿಕೊಂಡಿದ್ದರು ಎಂಬ ಹೇಳಿಕೆಯನ್ನ ಜಗನ್ ಮೋಹನ್ ರೆಡ್ಡಿ ಕೊಲೆ ಆರೋಪಿ ಜಗನ್ನಾಥ್ ನೀಡಿದ್ದಾನೆ.

ಕೆರೆಯ ನೀರು ಬತ್ತಿಸುವ ಕಾರ್ಯ


ಹೀಗಾಗಿ ಎಚ್ಚೆತ್ತುಕೊಂಡ ಕೋಲಾರ ಎಸ್ಪಿ ದೇವರಾಜ್, ಕೂಡಲೇ ಸೂರಿ ಹಾಗು ಅಪ್ಪಿ ಎನ್ನುವ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ಕೇಸ್‍ನ ಮರು ತನಿಖೆಯನ್ನ ಆರಂಭಿಸಿದ್ದಾರೆ,

ಮರು ಮರಣೋತ್ತರ ಪರೀಕ್ಷೆಗೆ ಸಿದ್ದತೆ

ಪೇಂಟರ್ ರಮೇಶ್ ಕೊಲೆ ಕೇಸ್ ನಲ್ಲಿ ನ್ಯಾಯ ದೊರಕಿಸುವಂತೆ ಈಗಾಗಲೇ ರಮೇಶ್ ಕುಟುಂಬದವರು ಸಾಕಷ್ಟು ಬಾರಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರು, ಇದೀಗ ಪ್ರಕರಣದ ವಿಚಾರಣೆ ನಡೆಸಲು ಮಾಸ್ತಿ ಸರ್ಕಲ್ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಪೊಲೀಸರು ರಮೇಶ್ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ, ಮರು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ದತೆ ನಡೆಸಿದ್ದಾರೆ.

ಇದನ್ನೂ ಓದಿ: Zameer: ಜಮೀರ್ ಅಹ್ಮದ್‌ಗೆ ಎಸಿಬಿ ಸಂಕಷ್ಟ, 10 ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ನಾಗನಕುಂಟೆ ಕೆರೆಯಲ್ಲೀಗ ನೀರು ತುಂಬಿರುವ ಕಾರಣ, ಕೆರೆಯ ನೀರನ್ನ ಹೊರಕ್ಕೆ ಬಿಡಲಾಗುತ್ತಿದ್ದು ಬಳಿಕ ಹೂತಿಟ್ಟಿರುವ ಶವ ಹೊರತೆಗೆದು ಆರ್,ಎಲ್ ಜಾಲಪ್ಪ ಆಸ್ಪತ್ರೆ ವೈದ್ಯರು ಮರು ಮರಣೋತ್ತರ ಪರೀಕ್ಷೆಯನ್ನ ನಡೆಸಲಿದ್ದಾರೆ,
Published by:Divya D
First published: