HOME » NEWS » State » JAGADISH SHETTER REACTION ON CONTESTING BELGAUM LOK SABHA BY ELECTION SESR CSB

ಲೋಕಸಭಾ ಉಪಚುನಾವಣೆಯಲ್ಲಿ ನನ್ನ ಹೆಸರು ತೇಲಿಬಿಟ್ಟವರ ಹುಡುಕುತ್ತಿದ್ದೇನೆ; ಜಗದೀಶ್​ ಶೆಟ್ಟರ್

ಚುನಾವಣೆ ಘೋಷಣೆ ಮುನ್ನ ಅಭ್ಯರ್ಥಿ ಚರ್ಚೆ ಇಲ್ಲ. ನನ್ನ ಹೆಸರು ಹೇಳಿದವರನ್ನು ಹುಡುಕುತ್ತಿದ್ದೇನೆ - ಜಗದೀಶ್​ ಶೆಟ್ಟರ್

news18-kannada
Updated:December 2, 2020, 4:17 PM IST
ಲೋಕಸಭಾ ಉಪಚುನಾವಣೆಯಲ್ಲಿ ನನ್ನ ಹೆಸರು ತೇಲಿಬಿಟ್ಟವರ ಹುಡುಕುತ್ತಿದ್ದೇನೆ; ಜಗದೀಶ್​ ಶೆಟ್ಟರ್
ಅಧಿಕಾರಿಗಳೊಂದಿಗೆ ಚರ್ಸಿಸುತ್ತಿರುವ ಸಚಿವ ಜಗದೀಶ್ ಶೆಟ್ಟರ್​
  • Share this:
ಬೆಳಗಾವಿ (ಡಿ.2): ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ  ತೆರವಾಗಿರುವ ಸ್ಥಾನಕ್ಕೆ ಜಗದೀಶ್​ ಶೆಟ್ಟರ್​ ಸ್ಪರ್ಧಿಸುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬಂದಿದೆ. ಆದರೆ, ಈ ಕುರಿತು ಜಗದೀಶ್​ ಶೆಟ್ಟರ್​ ಎಲ್ಲಿಯೂ ಮಾತನಾಡಿಲ್ಲ. ಈ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಮಾಜಿ ಸಿಎಂ, ಲೋಕಸಭೆ ಸ್ಪರ್ಧೆ ವಿಚಾರ ಅಪ್ರಸ್ತುತ ಎನ್ನುವ ಮೂಲಕ ತಮ್ಮ ಸ್ಪರ್ಧೆ ಕುರಿತ ವಿವರವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ಚುನಾವಣೆ ಘೋಷಣೆ ಮುನ್ನ ಅಭ್ಯರ್ಥಿ ಚರ್ಚೆ ಇಲ್ಲ. ನನ್ನ ಹೆಸರು ಹೇಳಿದವರನ್ನು ಹುಡುಕುತ್ತಿದ್ದೇನೆ ಎನ್ನುವ ಮೂಲಕ  ಸ್ಪರ್ಧೆ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿದ್ದಾರೆ. ಈ ಕುರಿತು  ಕೋರ್​ ಕಮಿಟಿ ಸಭೆಯಲ್ಲಿ ಅಭಿಪ್ರಾಯ ಹೇಳುತ್ತೇನೆ ಎನ್ನುವ ಮೂಲಕ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತೇವಾ ಇಲ್ಲ ಎಂಬ ಮಾತನ್ನು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಪಕ್ಷದ ವ್ಯವಸ್ಥೆಯಲ್ಲಿ ಚುನಾವಣೆ ಘೋಷಣೆ ಆದ ಬಳಿಕ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲಿಯವರೆಗೂ ಯಾರು ಅಭ್ಯರ್ಥಿ ಎಂಬ ಬಗ್ಗೆ ತಿಳಿಯಲಾಗದು ಎಂದಿದ್ದಾರೆ. 

ರಾಜ್ಯ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಈ ಕುರಿತು ಸಿಎಂ ವರಿಷ್ಠರ ಜೊತೆಗೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.

ಇದನ್ನು ಓದಿ: ಲವ್​ ಜಿಹಾದ್​ ಚರ್ಚೆ ನಡುವೆ ಇಷ್ಟಪಟ್ಟವರನ್ನು ಮದುವೆಯಾಗುವುದು ಮೂಲಭೂತ ಹಕ್ಕು ಎಂದ ಹೈ ಕೋರ್ಟ್​​

ಡಿಸೆಂಬರ್ 5 ರಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕಾರಿಣಿಯಲ್ಲಿ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಯಲಿದೆ. ಸ್ಥಳೀಯ ಮುಖಂಡರು, ಸಚಿವರು ಹಾಗೂ ಶಾಸಕರ ಅಭಿಪ್ರಾಯವನ್ನು ಪಕ್ಷದ ವರಿಷ್ಠರು ಪಡೆಯಲಿದ್ದಾರೆ.

ಸಚಿವಾಕಾಂಕ್ಷಿಯಾಗಿದ್ದ ಎಚ್​ ವಿಶ್ವನಾಥ್​ಗೆ ಅವರು, 2021ರವರೆಗೆ ಮಂತ್ರಿಯಾಗಲು ಅನರ್ಹರು ಎಂಬ ಕೋರ್ಟ್​ ತೀರ್ಪು ನೀಡಿದೆ. ಇದಾದ ಬಳಿಕ ವಿಶ್ವನಾಥ್​ ಸರ್ಕಾರಕ್ಕೆ ಕಷ್ಟಕಾಲದಲ್ಲಿ ನಾವು ಸಹಾಯ ಮಾಡಿದ್ದೇವು. ಆದರೆ, ನಮಗೆ ಕಷ್ಟಕಾಲಕ್ಕೆ ಅವರು ನೆರವಾಗಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಈ ಅಸಮಾಧಾನ ಕುರಿತು ಮಾತನಾಡಿದ ಅವರು, ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಬಗ್ಗೆ ನಾನು ಚರ್ಚೆ ಮಾಡಲ್ಲ. ಬಹಿರಂಗ ಹೇಳುವ ಮೊದಲು ರಾಜ್ಯದ ಅಧ್ಯಕ್ಷರ ಜತೆಗೆ ಚರ್ಚೆ ‌ಮಾಡಿ.
ನಾಲ್ಕು ಗೋಡೆಯ ಬಗ್ಗೆ ಏನೆ ಇದ್ದರೂ ಮಾತಾಡಿ. ಸಾರ್ವಜನಿಕವಾಗಿ‌ ಮಾತನಾಡೋದು ತಪ್ಪು ಎಂದು ತಮ್ಮ ಪಕ್ಷದ ನಾಯಕರಿಗೆ ತಿಳಿಸಿದರು.
Published by: Seema R
First published: December 2, 2020, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories