HOME » NEWS » State » JAGADISH SHETTAR THE ALLEGED MASTERMIND BEHIND NEW REBEL POLITICS IN BJP SNVS

ಬಿಜೆಪಿಯೊಳಗಿನ ಹೊಸ ಬಂಡಾಯ ಪರ್ವದ ಮಾಸ್ಟರ್​ಮೈಂಡ್ ಮಾಜಿ ಸಿಎಂ?

ಸರ್ಕಾರದ ಅಸ್ತಿತ್ವ ಹಾಗೂ ಕೊರೋನಾ ವೈರಸ್ ಬಿಕ್ಕಟ್ಟಿನ ಕಾರಣಕ್ಕೆ ಬಂಡಾಯ ಬೂದಿಮುಚ್ಚಿದ ಕೆಂಡದಂತಿತ್ತು. ನಾಯಕತ್ವದ ಬದಲಾವಣೆಯಾಗಬೇಕೆಂಬ ಕೂಗಿನೊಂದಿಗೆ ಈ ಭಿನ್ನಮತ ಪುನಾರಂಭಗೊಂಡಿದೆ ಎನ್ನಲಾಗಿದೆ.

news18
Updated:May 30, 2020, 12:46 PM IST
ಬಿಜೆಪಿಯೊಳಗಿನ ಹೊಸ ಬಂಡಾಯ ಪರ್ವದ ಮಾಸ್ಟರ್​ಮೈಂಡ್ ಮಾಜಿ ಸಿಎಂ?
ಸಿಎಂ ಬಿ.ಎಸ್.ಯಡಿಯೂರಪ್ಪ.
  • News18
  • Last Updated: May 30, 2020, 12:46 PM IST
  • Share this:
ಬೆಂಗಳೂರು(ಮೇ 30): ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಸಮಾಧಾನಿತರು ಮೈತ್ರಿ ಸರಕಾರ ಉರುಳಿಸಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವವರೆಗೂ ರಾಜ್ಯ ರಾಜಕಾರಣದಲ್ಲಿ ಆರ್ಭಟಿಸುತ್ತಿದ್ದ ಬಂಡಾಯದ ಸುದ್ದಿಗಳಿಗೆ ಕೊರೋನಾ ವೈರಸ್ ಬ್ರೇಕ್ ಹಾಕಿತ್ತು. ಈಗ ಮೂರು ತಿಂಗಳ ಬಳಿಕ ಮತ್ತೊಂದು ಬಂಡಾಯದ ಕಿಡಿ ಹೊತ್ತಿಕೊಂಡಿದೆ. ಇದು ಮೊದಲಿನ ಬಂಡಾಯ ತಂಡದ ಸದಸ್ಯರದ್ದಲ್ಲ, ಬಿಜೆಪಿಯೊಳಗಿನ ಆಂತರಿಕ ಬಂಡಾಯ. ಮೊನ್ನೆ ಉತ್ತರ ಕರ್ನಾಟಕದ ಅಸಮಾಧಾನಿತ ಬಿಜೆಪಿ ಶಾಸಕರು ಸಭೆ ಸೇರಿರುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಸೃಷ್ಟಿಸಿದೆ.

ಅದರಲ್ಲಿ ಪಾಲ್ಗೊಂಡಿದ್ದ ಯಾವ ಶಾಸಕರೂ ಕೂಡ ಇದು ಭಿನ್ನಮತದ ಸಭೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರಾದರೂ ಮೂಲಗಳ ಪ್ರಕಾರ ಇದು ನಾಯಕತ್ವ ಬದಲಾವಣೆಗೆ ಆರಂಭಗೊಂಡಿರುವ ಪ್ರಕ್ರಿಯೆ ಎನ್ನಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದ ಈ ಸಭೆಯ ಹಿಂದಿನ ಮಾಸ್ಟರ್ ಮೈಂಡ್ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎನ್ನುತ್ತಿವೆ ಮೂಲಗಳು.

ಮೂಲ ಬಿಜೆಪಿಗರನ್ನು ಸಂಪೂರ್ಣವಾಗಿ ಕಡೆಗಣಿಸಿ ವಲಸಿಗರಿಗೆ ಮಣೆ ಹಾಕಿದ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪಕ್ಷದೊಳಗೆ ಮೊದಲಿಂದಲೂ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಆದರೆ, ಸರ್ಕಾರದ ಅಸ್ತಿತ್ವ ಹಾಗೂ ಕೊರೋನಾ ವೈರಸ್ ಬಿಕ್ಕಟ್ಟಿನ ಕಾರಣಕ್ಕೆ ಬಂಡಾಯ ಬೂದಿಮುಚ್ಚಿದ ಕೆಂಡದಂತಿತ್ತು. ನಾಯಕತ್ವದ ಬದಲಾವಣೆಯಾಗಬೇಕೆಂಬ ಕೂಗಿನೊಂದಿಗೆ ಈ ಭಿನ್ನಮತ ಪುನಾರಂಭಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದು ಮಾಡುತ್ತಾ?; ಸುಳಿವು ಕೊಟ್ಟ ಡಿಸಿಎಂ ಅಶ್ವತ್ಥ್‌ ನಾರಾಯಣ್‌

ಮೊನ್ನೆಯ ಸಭೆಯನ್ನು ಜಗದಶೀಶ್ ಶೆಟ್ಟರ್​ಗೆ ಮಾಹಿತಿ ಕೊಟ್ಟೇ ನಡೆಸಲಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಅದಕ್ಕಾಗಿ ವಿವಿಧ ಶಾಸಕರ ಸಹಿ ಸಂಗ್ರಹ ಮಾಡಲಾಗುತ್ತಿದೆ. ಇದೀಗ ಉತ್ತರ ಕರ್ನಾಟಕ ಭಾಗದ 40ಕ್ಕೂ ಹೆಚ್ಚು ಬಿಜೆಪಿ ಶಾಸಕರು ಇದಕ್ಕೆ ಸಹಿ ಹಾಕಲು ನಿರ್ಧರಿಸಿದ್ದಾರೆನ್ನಲಾಗಿದೆ.

ಹೆಚ್ಚಿನ ಸಂಖ್ಯೆಯ ಬಿಜೆಪಿ ಶಾಸಕರ ಸಹಿ ಸಂಗ್ರಹ ಆದ ಬಳಿಕ ಅದನ್ನು ಹೈಕಮಾಂಡ್ ಗಮನಕ್ಕೆ ತರುವುದು ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಒತ್ತಾಯಿಸುವುದು ಮುಂದಿನ ತಂತ್ರಗಾರಿಕೆ ಎನ್ನಲಾಗಿದೆ.

First published: May 30, 2020, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories