• Home
  • »
  • News
  • »
  • state
  • »
  • Karnataka Politics: ಬರ್ತ್​ಡೇ ನೆಪದಲ್ಲಿ ಪಾಲಿಟಿಕ್ಸ್​; ಸಾಹುಕಾರ್ ಜೊತೆ ಶೆಟ್ಟರ್ ರಹಸ್ಯ ಸಭೆ!

Karnataka Politics: ಬರ್ತ್​ಡೇ ನೆಪದಲ್ಲಿ ಪಾಲಿಟಿಕ್ಸ್​; ಸಾಹುಕಾರ್ ಜೊತೆ ಶೆಟ್ಟರ್ ರಹಸ್ಯ ಸಭೆ!

ಜಗದೀಶ್ ಶೆಟ್ಟರ್ ಭೇಟಿಯಾದ ರಮೇಶ್ ಜಾರಕಿಹೊಳಿ

ಜಗದೀಶ್ ಶೆಟ್ಟರ್ ಭೇಟಿಯಾದ ರಮೇಶ್ ಜಾರಕಿಹೊಳಿ

ಶೆಟ್ಟರ್ ಮತ್ತು ಜಾರಕಿಹೊಳಿ ಸಭೆ ತೀವ್ರ ಕುತೂಹಲ ಕೆರಳಿಸಿದೆ. ಸಿಎಂ ಬೊಮ್ಮಾಯಿ ಜೊತೆ ಮೊದಲಿನಿಂದಲೂ ಮುನಿಸಿಕೊಂಡಿರೋ ಶೆಟ್ಟರ್, ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದಲೂ ಅಂತರ ಕಾಯ್ದುಕೊಳ್ತಿದಾರೆ.

  • News18 Kannada
  • 2-MIN READ
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ: ಹುಟ್ಟುಹಬ್ಬದ ಸಂಭ್ರಮದ (Birthday) ನೆಪದಲ್ಲಿ ಹುಬ್ಬಳ್ಳಿ (Hubballi) ಅಂಗಳದಲ್ಲಿ ತೆರೆಮರೆಯ ರಾಜಕಾರಣ (Politics) ನಡೆಯುತ್ತಿದೆಯಾ ಅನ್ನೋ  ಅನುಮಾನ ಹುಟ್ಟಿದೆ. ಹುಟ್ಟು ಹಬ್ಬದ ನೆಪದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಜಗದೀಶ್ ಶೆಟ್ಟರ್ ಮತ್ತು ರಮೇಶ್ ಜಾರಕಿಹೊಳಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಬರ್ತ್​ಡೇ ಹೆಸರಿನಲ್ಲಿಯೇ ರಾಜಕಾರಣ ನಡೆಯುತ್ತಿದೆಯಾ ಎಂಬ ಚರ್ಚೆಗಳು ಶರುವಾಗಿವೆ.


ಹುಬ್ಬಳ್ಳಿಯ ಮಥುರಾ ಕಾಲೋನಿಯಲ್ಲಿರೋ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸಕ್ಕೆ ಅನಿರೀಕ್ಷಿತ ಅತಿಥಿಯಾಗಿ ಭೇಟಿ ನೀಡಿದ ಜಾರಕಿಹೊಳಿ, ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಶುಭಾಶಯ ಕೋರುವ ನೆಪದಲ್ಲಿ ಭೇಟಿ ಮಾಡಿದ ಜಾರಕಿಹೊಳಿ, ಸುಮಾರು ಒಂದೂವರೆ ಗಂಟೆ ಕಾಲ ಗುಪ್ತ ಸಭೆ ನಡೆಸಿದ್ದಾರೆ.


ಉಭಯ ನಾಯಕರಿಂದ ರಾಜಕೀಯ ಚಟುವಟಿಕೆ ಕುರಿತು ಬಿರುಸಿನ ಚರ್ಚೆಗೆ ಕಾರಣವಾಗಿದೆ. ಸಚಿವ ಸಂಪುಟ ವಿಸ್ತರಣೆ, ಬಿಜೆಪಿಯಲ್ಲಿ ನಡೆದಿರೋ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.


jagadish shettar secret meeting with ramesh jarkiholi mrq
ಜಗದೀಶ್ ಶೆಟ್ಟರ್ ಬರ್ತ್ ಡೇ ಕಾರ್ಯಕ್ರಮ


ಎಲ್ಲರಿಂದಲೂ ಅಂತರ ಕಾಯ್ದುಕೊಂಡಿರುವ ಜಗದೀಶ್ ಶೆಟ್ಟರ್


ಶೆಟ್ಟರ್ ಮತ್ತು ಜಾರಕಿಹೊಳಿ ಸಭೆ ತೀವ್ರ ಕುತೂಹಲ ಕೆರಳಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮೊದಲಿನಿಂದಲೂ ಮುನಿಸಿಕೊಂಡಿರೋ ಶೆಟ್ಟರ್, ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದಲೂ ಅಂತರ ಕಾಯ್ದುಕೊಳ್ತಿದಾರೆ.


ಸಚಿವ ಸ್ಥಾನ ಸಿಗದೇ ಅತೃಪ್ತಿಗೊಂಡಿರೋ ಜಾರಕಿಹೊಳಿ, ಅತೃಪ್ತ ನಾಯಕ ಶೆಟ್ಟರ್ ಅವರನ್ನು ಭೇಟಿಯಾಗಿ ಹಲವಾರು ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.


jagadish shettar secret meeting with ramesh jarkiholi mrq
ಜಗದೀಶ್ ಶೆಟ್ಟರ್ ಬರ್ತ್ ಡೇ ಕಾರ್ಯಕ್ರಮ


ರಾಜಕೀಯ ಬದಲಾವಣೆಗೆ ಕಾರಣವಾಗುತ್ತಾ ಸಭೆ?


ಈ ಸಭೆ ಚಳಿಗಾಲದ ಅಧಿವೇಶನದ ನಂತರ ರಾಜಕೀಯ ಬದಲಾವಣೆಗೆ ಕಾರಣವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಹುಟ್ಟುಹಬ್ಬದ ಶುಭ ಕೋರುವ ವೇಳೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.


ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಶಿವು ಪಾಟೀಲ್, ಬಿಲ್ಡರ್ ಸತೀಸ್ ಸೇಠ್ ಉರ್ಫ್ ಭಾಬು ಮತ್ತಿತರರು ಉಪಸ್ಥಿತರಿದ್ದು, ಶುಭಾಶಯ ಕೋರಿದ್ದಾರೆ. ಹುಟ್ಟು ಹಬ್ಬದ ಶುಭ ಕೋರಿದ ನಂತರ ಶೆಟ್ಟರ್ – ಜಾರಕಿಹೊಳಿ ಗುಪ್ತ ಸಭೆ ಮಾಡಿದ್ದಾರೆ.


ಈ ಹಿಂದೆಯೂ ಇಬ್ಬರು ನಡುವೆ ನಡೆದಿತ್ತು ಸಭೆ


ಈ ಹಿಂದೆಯೂ ಶೆಟ್ಟರ್ ಜೊತೆ ಜಾರಕಿಹೊಳಿ ಮಾತುಕತೆ ನಡೆಸಿದ್ದರು. ಮತ್ತೊಮ್ಮೆ ಸಿಎಂ ಆಗೋಕೆ ಶೆಟ್ಟರ್ ತೆರೆಮರೆಯ ಕಸರತ್ತು ನಡೆಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು


ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತೆ ಅನ್ನೋ ಚರ್ಚೆ ಎದ್ದಿರುವಾಗಲೇ, ಶೆಟ್ಟರ್, ಜಾರಕಿಹೂಳಿ ಗೌಪ್ಯ ಸಭೆ ನಡೆಸಿದ್ದು, ಚರ್ಚೆಯ ಅಂಶಗಳನ್ನು ಬಹಿರಂಗಪಡಿಸಿಲ್ಲ.


jagadish shettar secret meeting with ramesh jarkiholi mrq
ಜಗದೀಶ್ ಶೆಟ್ಟರ್ ಬರ್ತ್ ಡೇ ಕಾರ್ಯಕ್ರಮ


ಬೆಳಗಾವಿಯಲ್ಲಿ ಬಿಜೆಪಿಗೆ ಬಿಗ್ ಶಾಕ್?


ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ (Belagavi BJP) ಶಕ್ತಿ ಕುಂದುತ್ತಿದೆಯಾ ಅನ್ನೋ ಅನುಮಾನ ಕಮಲ ಮನೆಯಲ್ಲಿ ಮೂಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಆಂತರಿಕ ಸಮೀಕ್ಷೆ (Internal Survey) ಮಾಡಿದ್ದ ಬಿಜೆಪಿ ಕೈಗೆ ಶಾಕಿಂಗ್ ವರದಿ ಸೇರಿದೆ ಎನ್ನಲಾಗಿದೆ.


ಈಗಿನಿಂದಲೇ ಅಲರ್ಟ್​ ಆಗದಿದ್ದರೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂಬ ಮಾಹಿತಿ ಇರೋ ವರದಿ ಬಿಜೆಪಿ ಪ್ರಮುಖರ (BJP Leaders) ಟೇಬಲ್ ತಲುಪಿದೆ ಎಂಬ ಮಾಹಿತಿ  ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.


ಇದನ್ನೂ ಓದಿ: Belagavi Politics: ಹಳೇ ದ್ವೇಷ, ಹೊಸ ಲೆಕ್ಕಾಚಾರ; ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಮಿಂಚಿನ ಸಂಚಾರ


ಸ್ಥಳೀಯರ ನಾಯಕರ ಮುನಿಸಿನಿಂದ ಬೆಳಗಾವಿಯಲ್ಲಿ ಬಿಜೆಪಿಯ ಪಕ್ಷ ಸಂಘಟನೆಯಲ್ಲಿ ಹಿಂದೆ ಬೀಳುತ್ತಿದೆಯಂತೆ. ಹಂತ ಹಂತವಾಗಿ ಬಿಜೆಪಿ ಶಕ್ತಿ ಕುಂದುತಿದೆ ಎಂಬ ಆತಂಕವನ್ನು ಸ್ಥಳೀಯ ಕಮಲ ನಾಯಕರೇ ಹೊರ ಹಾಕುತ್ತಿದ್ದಾರೆ ಎನ್ನಲಾಗಿದೆ. ನಾಯಕರ ಮುನಿಸಿನಿಂದ ಬಿಜೆಪಿಗೆ ಹಿನ್ನಡೆ ಆಗುವ ಸಾಧ್ಯತೆಗಳಿವೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು