ಹುಬ್ಬಳ್ಳಿ: ನನಗೆ ಸಿಎಂ ಹುದ್ದೆ ಬೇಡ. ಕಾಂಗ್ರೆಸ್ನಲ್ಲಿದ್ದವರೇ ಮುಖ್ಯಮಂತ್ರಿ ಆಗಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ತಿಳಿಸಿದ್ದಾರೆ. ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಆಯೋಸಿದ್ದ ವೀರಶೈವ, ಲಿಂಗಾಯತ ಸ್ವಾಭಿಮಾನಿ ಬಳಗದ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮಾತೆತ್ತಿದರೆ ಗುಜರಾತ್ ಮಾದರಿ ಅಂತಾರೆ. ಆದ್ರೆ ಕರ್ನಾಟಕ ಗುಜರಾತ್ ಅಲ್ಲ, ಹುಬ್ಬಳ್ಳಿ ಅಹ್ಮದಬಾದ್ ಅಲ್ಲ. ಇದು ಲಿಂಗಾಯತ ಸಮಾಜದ (Lingayat Community) ಸ್ವಾಭಿಮಾನಿಗಳ ಎತ್ತಿ ಹಿಡಿಯುವ ಸಮಾವೇಶ. ಜನಸಂಘದಿಂದ ಬಿಜೆಪಿ ಕಟ್ಟಿಬೆಳೆಸುವ ಕೆಲಸ ಆಗಿದೆ. ನಾನು ನನ್ನ ಕ್ಷೇತ್ರಕ್ಕೆ ಸೀಮಿತ ಆಗಿ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ ಎಂದರು.
ನಾನು ಹತ್ತು ವರ್ಷದಲ್ಲಿ ಮಾಡಿದ ಕೆಲಸ ಅವರು ನೆನಪು ಮಾಡಿಕೊಳ್ಳಲಿಲ್ಲ. ಬೊಮ್ಮಾಯಿ ಸಿಎಂ ಆಗುವಾಗ ನಾನು ಲಾಬಿ ಮಾಡಿದ್ರೆ ಮಂತ್ರಿ ಆಗ್ತಿದೆ. ಏನೇ ಮಾಡಿದ್ರು ನಾನು ಸುಮ್ಮನೆ ಆಗ್ತೀನಿ ಅಂತಾ ಅವರು ಇದ್ರು. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಯಿತು ಎಂದು ಆರೋಪಿಸಿದರು.
ಆರು ಜನರ ಸಿಡಿಗಳಿವೆ
ಕೆಲವೇ ಕೆಲವು ವ್ಯಕ್ತಿಗಳ ಮೂಲಕ ಜಗದೀಶ್ ಶೆಟ್ಟರ್ ಮುಗಿಸುವ ಕೆಲಸ ಆಯ್ತು. ನಾನು ಸೀನಿಯರ್ ಅನ್ನೋ ಕಾರಣಕ್ಕೆ ಮುಂದೆ ಅಡ್ಡಿ ಆಗಬಹುದು ಅಂತಾ ಹೀಗೆ ಮಾಡಿದ್ರು. ನನಗೆ ಚೂರಿ ಹಾಕಿ ಮುಗಿಸಿಬಿಡೋ ಕೆಲಸ ಆಯ್ತು. 6 ಜನರ ಸಿಡಿ ಇದ್ದಾವೆ, ಇಷ್ಟೊತ್ತಿಗೆಲ್ಲ ಟಿವಿಯಲ್ಲಿ ಬಂದು ಅವರ ಮಾನ ಮರ್ಯಾದೆ ಹೋಗುತ್ತಿತ್ತು ಎಂದು ಹೇಳಿದರು.
ವರಿಷ್ಠರ ಮಾತಿಗೆ ನಾನು ಒಪ್ಪದೇ ಚಾಲೆಂಜ್ ಮಾಡುವೆ. ಬಿಜೆಪಿಯಲ್ಲಿ ಸಿದ್ಧಾಂತ ಉಳಿದಿಲ್ಲ, ಕ್ರಿಮಿನಲ್ ಗಳಿಗೆ ವಯಸ್ಸಾದವರಿಗೆ ಟಿಕೆಟ್ ಕೊಡಲಾಗಿದೆ. ಗುಲಾಮಗಿರಿ, ಜೀ ಹುಜುರ್ ವ್ಯವಸ್ಥೆಗೆ ಬಗ್ಗದೇ ಸ್ಪರ್ಧೆ ಮಾಡಿರುವೆ. ಮಹಾನಗರ ಸುಂದರ ನಗರ ಮಾಡಬೇಕು ಅಂತಾ ಕನಸು ಇದೆ. ಅದನ್ನ ಮಾಡಿ ತೋರಿಸಲು ಇನ್ನೂ ಒಂದು ಅವಧಿಗೆ ಶಾಸಕನಾಗಬೇಕೆಂದಿದ್ದೇನೆ ಎಂದು ತಿಳಿಸಿದರು.
ಬಿಎಲ್ ಸಂತೋಷ್ ವಿರುದ್ಧ ವಾಗ್ದಾಳಿ
ಬಿ.ಎಲ್ ಸಂತೋಷ್ ಎಂಬ ವ್ಯಕ್ತಿಯಿಂದ ಪಾರ್ಟಿ ಹಾಳಾಗುತ್ತಿದೆ. ಬಿ.ಎಲ್.ಸಂತೋಷನಿಂದ ಇಡೀ ವ್ಯವಸ್ಥೆ ಹಾಳಾಗುತ್ತಿದೆ. ಬಿಜೆಪಿ ಸೌಧವೇ ಕುಸಿಯುವಂತಾಗಿದೆ. ಅವನಿಗೆ ಮಣೆ ಹಾಕ್ತಿರಲ್ಲ ನನಗೆ ಆಶ್ಚರ್ಯ ಆಗುತ್ತಿದೆ. ಎಲ್ಲಾ ಕಡೆ ಫೇಲ್ ಆಗಿರೋ ವ್ಯಕ್ತಿಗೆ ಬಿಜೆಪಿ ಮಣೆ ಹಾಕ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್ ಸೋಲಿಸಿ ಅಂತಾ ಹೇಳ್ತಾರೆ. ಇದು ನನಗೆ ಅಷ್ಟೆ ಅಲ್ಲಾ ನಮ್ಮ ಸಮಾಜಕ್ಕೆ ಚಾಲೆಂಜ್ ಆಗಿದೆ. ಬಿಜೆಪಿಯವರು 67 ವರ್ಷದ ನನಗೆ ಟಿಕೆಟ್ ಕೊಡಲಿಲ್ಲ. ಆದ್ರೆ ಕಾಂಗ್ರೆಸ್ 93 ವರ್ಷದ ಶಾಮನೂರು ಶಿವಶಂಕರಪ್ಪ ಟಿಕೆಟ್ ಕೊಟ್ಟಿದ್ದಾರೆ. ಸ್ವಾಭಿಮಾನ ಸಲುವಾಗಿ ದೃಢವಾದ ನಿರ್ಧಾರ ತೆಗೆದುಕೊಂಡಿದ್ದೇನೆ. ದುರಂಹಕಾರದ ಬಿಜೆಪಿಗೆ ನಿವೆಲ್ಲರೂ ಪಾಠ ಕಲಿಸಬೇಕು ಎಂದು ಗುಡುಗಿದರು.
ಸ್ವಾಭಿಮಾನಕ್ಕೆ ಧಕ್ಕೆ
ಜಗದೀಶ್ ಶೆಟ್ಟರ್ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಇದು ವೀರಶೈವ ಲಿಂಗಾಯತ ಸಮಾಜಕ್ಕೆ ಧಕ್ಕೆ ಆದ ಹಾಗೆ. ಪಕ್ಷಕ್ಕಾಗಿ ಕೂಲಿ ಕೆಲಸ ಮಾಡಿದ್ದೇನೆ. ಸ್ಥಾನಮಾನ ಸಿಕ್ಕಿದೆ ಅಂತಾರೆ. ಎಷ್ಟು ಅವಧಿ ಸ್ಥಾನಮಾನ ಸಿಕ್ಕಿದೆ. ನನ್ನ ರಾಜಕೀಯ ಜೀವನದಲ್ಲಿ ಎರಡೂ ವರ್ಷದಿಂದ ಕೆಟ್ಟ ದಿನಗಳನ್ನ ಎದುರಿಸಿದ್ದೇನೆ. ಜಗದೀಶ್ ಶೆಟ್ಟರ್ ವಿರುದ್ಧ ಷಡ್ಯಂತ್ರ ಮಾಡಲಾಯಿತು. ಸಿಎಂ ಹುದ್ದೆಗೆ ನಾನೂ ಅಡ್ಡಲಾಗುತ್ತೇನೆಂದು ನನ್ನನ್ನ ಇಲ್ಲಿಯೇ ಚಿವುಟಿ ಹಾಕಿದ್ರು
ಕುಟುಂಬ ರಾಜಕಾರಣ ಎಲ್ಲಿ ಹೋಯಿತು ನಿಮ್ಮದು. ನನಗೂ ಒಂದು ವ್ಯಕ್ತಿತ್ವ ಇದೆ, ನನಗೂ ಸ್ವಾಭಿಮಾನ ಇದೆ. ಅದಕ್ಕಾಗಿ ನಾನೂ ಚಾಲೆಂಜ್ ಆಗಿ ಸ್ವೀಕಾರ ಮಾಡಿ ಸ್ಪರ್ಧೆ ಮಾಬೇಕಾಯಿತು.
ಕೇಂದ್ರ ಸಂಪುಟದಲ್ಲಿ ಬ್ರಾಹ್ಮಣರಿಗೆ ಆದ್ಯತೆ
ಕೇಂದ್ರ ಸಚಿವ ಸಂಪುಟದಲ್ಲಿಯೂ ಲಿಂಗಾಯತರಿಗೆ ಅನ್ಯಾಯವಾಗಿದೆ. ಬ್ರಾಹ್ಮಣರಿಗೆ ಅಗ್ರ ಪಂಕ್ತಿ ಸಿಕ್ಕಿದೆ. ವೀರಶೈವ, ಲಿಂಗಾಯತರ ಸ್ವಾಭಿಮಾನಿ ಬಳಗದ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟು ದಿನ ಬಿಜೆಪಿ ಬಿಜೆಪಿ ಎಂದು ಚುನಾವಣೆ ಮಾಡಿ, ಈಗ ಕಾಂಗ್ರೆಸ್ ಎನ್ನುವುದು ನಿಮಗೂ ಬೇಸರ ಆಗಿದೆ. ಬೇಜಾರ್ ತಿಳಿದುಕೊಳ್ಳಬೇಡಿ ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಗೆಲ್ಲಿಸಿ. ಷಡ್ಯಂತ್ರ, ಸಂಚು ಮಾಡಿ ಮುಗಿಸಲಿಕ್ಕೆ ಹೋಗ್ತಾ ಇದ್ದಾರೆ. ರಾಜ್ಯದಲ್ಲಿ 25 ಜನ ಸಂಸದರಲ್ಲಿ ಕ್ಯಾಬಿನೆಟ್ ಸಚಿವರು ಪ್ರಹ್ಲಾದ್ ಜೋಶಿ ಮಾತ್ರ. ಆದ್ರೆ ರಾಜ್ಯದಲ್ಲಿ ಐದು ಜನ ಸಚಿವರಾಗಿದ್ದಾರೆ, ಅವರಲ್ಲಿ ಜೋಶಿ ಹೊರತುಪಡಿಸಿ ಕ್ಯಾಬಿನೆಟ್ ದರ್ಜೆ ಹೊಂದಿಲ್ಲ.
ಹೊರಗಿನಿಂದ ಬಂದ ನಿರ್ಮಲಾ ಸೀತಾರಾಮನ್ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಉಳಿದ ನಾಲ್ವರು ಬ್ರಾಹ್ಮಣ ಜಾತಿಗೆ ಸೇರಿಲ್ಲ, ಹೀಗಾಗಿ ಅವರು ಕ್ಯಾಬಿನೆಟ್ ದರ್ಜೆ ಸಿಕ್ಕಿಲ್ಲ. ಕೇವಲ ರಾಜ್ಯ ಸಚಿವರಾಗಿದ್ದಾರೆ. ಪ್ರಹ್ಲಾದ ಜೋಶಿ, ನಿರ್ಮಲಾ ಸೀತಾರಾಮನ್ ಯಾರು..? ಶೋಭಾ ಕರದ್ಲಾಂಜೆ ಒಕ್ಕಲಿಗ, ನಾರಾಯಣಸ್ವಾಮಿ ದಲಿತ, ಭಗವಂತ ಖುಬಾ ಲಿಂಗಾಯತ, ಸುರೇಶ್ ಅಂಗಡಿ ಲಿಂಗಾಯತ ಇವರಿಗೆ ಏಕೆ ಕ್ಯಾಬಿನೆಟ್ ದರ್ಜೆ ಕೊಡಲಿಲ್ಲ ಯೋಚಿಸಿ ಎಂದರು.
ಬ್ರಾಹ್ಮಣ ಸಮಯಕ್ಕೆ ಸಿಗುವಂತಹ ಆದ್ಯತೆ ಉಳಿದ ಸಮುದಾಯಕ್ಕೆ ಸಿಗುತ್ತಿಲ್ಲ. ಇದನ್ನೇ ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು, ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಶೆಟ್ಟರ್ ಕರೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ