ಹುಬ್ಬಳ್ಳಿ: ನಾನು ಕೂಲ್ ಕೂಲ್ ಆಗಿಯೇ ಚುನಾವಣಾ ಪ್ರಚಾರ (Election Campaign) ನಡೆಸುತ್ತಿದ್ದ್ದೇನೆ. ನಾನು ಪ್ರತಿಬಾರಿಯೂ ಇದೇ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸೋದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಹೇಳಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ನನ್ನನ್ನು ಮಣಿಸೋಕೆ ಘಟಾನುಘಟಿ ನಾಯಕರು (BJP Leaders) ಬೀಡು ಬಿಟ್ಟಿದ್ದಾರೆ. ಲಿಂಗಾಯತ ಮುಖಂಡರನ್ನೇ (Lingayat Leaders) ನನ್ನ ವಿರುದ್ಧ ದಾಳ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ (Former CM BS Yediyurappa) ಹೆಗಲ ಮೇಲೆ ಬಂದೂಕು ಇಟ್ಟು, ನನಗೆ ಗುರಿ ಇಟ್ಟಿದ್ದಾರೆ. ಲಿಂಗಾಯತ ನಾಯಕನ ಮೂಲಕವೇ ಮತ್ತೊಬ್ಬ ಲಿಂಗಾಯತ ನಾಯಕನ ತೇಜೋವಧೆ ನಡೆದಿದೆ ಎಂದು ಬೇಸರ ಹೊರಹಾಕಿದರು.
ಯಡಿಯೂರಪ್ಪನವರು ವೀರಶೈವ ಲಿಂಗಾಯತರ ಸಭೆ ಮಾಡಿದ್ದು, ಅಲ್ಲಿ ಎಂತಹ ನಾಯಕರು, ಎಷ್ಟು ನಾಯಕರು ಭಾಗಿಯಾಗಿದ್ದರೆಂಬ ಮಾಹಿತಿ ನನ್ನ ಬಳಿ ಇದೆ. ಅವರಷ್ಟೇ ಲಿಂಗಾಯತ ನಾಯಕರಲ್ಲ. ಅದರ ಹೊರತಾಗಿಯೂ ಲಿಂಗಾಯತ ನಾಯಕರ ದೊಡ್ಡ ಪಡೆ ಇದೆ ಎಂದು ಹೇಳುವ ಮೂಲಕ ಯಡಿಯೂಪ್ಪ ಅವರಿಗೆ ಟಾಂಗ್ ನೀಡಿದರು.
ನಾನು ಧೃತಿಗೆಡಲ್ಲ
ಕ್ಷೇತ್ರದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಲ್ಲಿಗೆ ಪ್ರಧಾನಿ ಮೋದಿಯವರನ್ನೂ ಸಹ ಕರೆತರೋಕೆ ಮುಂದಾಗಿದ್ದಾರೆ. ಅವರು ಏನೇ ಮಾಡಲಿ, ಯಡಿಯೂರಪ್ಪ ಏನೇ ಬೈಯಲಿ. ನಾನು ಮಾತ್ರ ಧೃತಿಗೆಡಲ್ಲ ಎಂದರು.
ಬಿಜೆಪಿಗೆ ಶೆಟ್ಟರ್ ಸವಾಲು
ಹಿರಿಯರಾಗಿರುವ ಯಡಿಯೂರಪ್ಪ ಅವರ ಬೈಗುಳವನ್ನು ಆಶೀರ್ವಾದ ಅಂತ ತಿಳಿದುಕೊಳ್ತೇನೆ. ಅವರ ಬೈಗುಳ ಆಶೀರ್ವಾದದಿಂದಲೇ ಗೆದ್ದು ತೋರಿಸುತ್ತೇನೆ ಎಂದು ಬಿಜೆಪಿಗೆ ಸವಾಲು ಹಾಕಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ