• Home
  • »
  • News
  • »
  • state
  • »
  • Hubballi: ರಾಷ್ಟ್ರಪತಿಗಳ ಕಾರ್ಯಕ್ರಮದ ಪಟ್ಟಿಯಿಂದ ಜಗದೀಶ್ ಶೆಟ್ಟರ್ ಹೆಸರು ಕೈ ಬಿಟ್ಟಿದ್ದು ಯಾಕೆ?

Hubballi: ರಾಷ್ಟ್ರಪತಿಗಳ ಕಾರ್ಯಕ್ರಮದ ಪಟ್ಟಿಯಿಂದ ಜಗದೀಶ್ ಶೆಟ್ಟರ್ ಹೆಸರು ಕೈ ಬಿಟ್ಟಿದ್ದು ಯಾಕೆ?

ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

ಶೆಟ್ಟರ್ ಹೆಸರು ಕೈ ಬಿಟ್ಟು ಅವಮಾನ ಮಾಡಿದ್ರಾ ಅನ್ನೋ ಚರ್ಚೆ ಜೋರಾಗಿದೆ. ಹಾಗಿದ್ದರೆ ಯಾರು ಜಗದೀಶ್ ಶೆಟ್ಟರ್ ಅವರನ್ನು ವೇದಿಕೆ‌ ಹತ್ತದಂತೆ ನೋಡಿಕೊಂಡಿದ್ದು ಅಂತನೂ ಚರ್ಚಿಸಲಾಗ್ತಿದೆ.

  • Share this:

ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರ ಪೌರ ಸನ್ಮಾನ (Poura Sanmana) ಕಾರ್ಯಕ್ರಮದಲ್ಲಿ ಮಹಾ ಎಡವಟ್ಟು ನಡೆದಿದೆ. ಇದೇನು ತಿಳಿದು ಮಾಡಿದ್ದಾರೆಯೋ, ತಿಳಿಯದೇ ಮಾಡಿದ್ದಾರೆಯೋ ಆದರೆ ಇದರಿಂದ ಬಿಜೆಪಿ ನಾಯಕರ (BJP Leaders) ನಡುವೆ ತಿಕ್ಕಾಟ ಜೋರು ಆಗುವುದಂತೂ ಖಚಿತ. ರಾಷ್ಟ್ರಪತಿ ಜೊತೆ ವೇದಿಕೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ (Former CM Jagadish Shettar) ಸ್ಥಾನ ಇಲ್ಲದೇ ಇರೋದು ಚರ್ಚೆಗೆ ಗ್ರಾಸವಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ವೇದಿಕೆಯಿಂದ ದೂರು ಇಟ್ಟಿರೋದು ಅಚ್ಚರಿಗೆ ಕಾರಣವಾಗಿದೆ. ರಾಷ್ಟ್ರಪತಿ ಕಾರ್ಯಕ್ರಮ ವೇದಿಕೆ ಮೇಲಿನ ಗಣ್ಯರ ಜೊತೆ ಶೆಟ್ಟರ್ ಅವರಿಗೆ ಸ್ಥಾನ ನೀಡಿಲ್ಲ. ಮಾಜಿ‌ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಬಿಟ್ರಾ? ಅನ್ನೋ ಚರ್ಚೆ ಶುರುವಾಗಿದೆ.


9 ಗಣ್ಯರಿಗೆ ವೇದಿಕೆ ಮೇಲೆ ಅವಕಾಶ


ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮದ ವೇದಿಕೆಯಲ್ಲಿ ಒಂಬತ್ತು ಗಣ್ಯರಿಗೆ ಅವಕಾಶ ನೀಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ, ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಹುಬ್ಬಳ್ಳಿ - ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಗೇ ಮಾತ್ರ ವೇದಿಕೆ ಹತ್ತಲು ಅವಕಾಶ ಕೊಡಲಾಗಿದೆ.


ಜಗದೀಶ್ ಶೆಟ್ಟರ್ ಹೆಸರು ಕೈ ಬಿಟ್ಟಿದ್ದಕ್ಕೆ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಶೆಟ್ಟರ್ ಮಾಜಿ ಸಿಎಂ ಅನ್ನೋ ಸಂಗತಿ ಒಂದೆಡೆಯಾದ್ರೆ, ಕಾರ್ಯಕ್ರಮ ನಡೆಯುತ್ತಿರೊ ಸ್ಥಳ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಸೆಂಟ್ರಲ್ ಕ್ಷೇತ್ರದಲ್ಲಿ ಬರುತ್ತದೆ.


ಕಾರ್ಯಕ್ರಮದ ಸಿದ್ಧತೆಯಲ್ಲಿ ಶೆಟ್ಟರ್ ಭಾಗಿ


ಶೆಟ್ಟರ್ ಹೆಸರು ಕೈ ಬಿಟ್ಟು ಅವಮಾನ ಮಾಡಿದ್ರಾ ಅನ್ನೋ ಚರ್ಚೆ ಜೋರಾಗಿದೆ. ಹಾಗಿದ್ದರೆ ಯಾರು ಜಗದೀಶ್ ಶೆಟ್ಟರ್ ಅವರನ್ನು ವೇದಿಕೆ‌ ಹತ್ತದಂತೆ ನೋಡಿಕೊಂಡಿದ್ದು ಅಂತನೂ ಚರ್ಚಿಸಲಾಗ್ತಿದೆ. ವಿಚಿತ್ರವೆಂದರೆ ರಾಷ್ಟ್ರಪತಿಗಳ ಕಾರ್ಯಕ್ರಮದ ಸಿದ್ಧತೆಗೆ ಜಗದೀಶ್ ಶೆಟ್ಟರ್ ಜೋರಾಗಿ ಓಡಾಡುತ್ತಿದ್ದಾರೆ.


ಕಾರ್ಯಕ್ರಮದ ವೇದಿಕೆ


ನಿನ್ನೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಪೂರ್ವಸಿದ್ಧತೆಯ ಪರಿಶೀಲನೆಯನ್ನು ಮಾಡಿದ್ದರು. ಹಾಗಿದ್ದರೂ ಜಗದೀಶ್ ಶೆಟ್ಟರ್ ವೇದಿಕೆ ಮೇಲಿನ ಗಣ್ಯರ ಲಿಸ್ಟ್ ನಿಂದ ಕೈಬಿಟ್ಟಿದ್ದು ಯಾಕೆ? ಜಗದೀಶ್ ಶೆಟ್ಟರ್ ವಿರೋಧಿ ಬಣದ‌ ಮೆಲುಗೈ ಸಾಧಿಸಿತಾ ಅನ್ನೋದು ಹುಬ್ಬಳ್ಳಿ ಜನರ ಚರ್ಚೆಯಾಗಿದೆ.


ಇದನ್ನೂ ಓದಿ: Mohammed Haris Nalapad: ಯಾವನೋ, ಗೀವನೋ ಅಂದ್ರೆ ಸರಿ ಇರಲ್ಲ; ಏಕವಚನ ಬಳಸಿದ್ದ ನಲಪಾಡ್​ಗೆ ರೈತನ ಎಚ್ಚರಿಕೆ


ರಾಷ್ಟ್ರಪತಿಗಳಿಗೆ ಪೌರ ಸನ್ಮಾನ ಗೌರವ


ಪಾಲಿಕೆ ಅಸ್ತಿತ್ವಕ್ಕೆ ಬಂದು 60 ವರ್ಷಗಳಾಗಿದ್ದು, ಗಣ್ಯಾತಿಗಣ್ಯರಿಗೆ ಪೌರಸನ್ಮಾನ ಸಲ್ಲಿಸಲಾಗಿದೆ. ಇದೀಗ ದೇಶದ ಎರಡನೇ ಮಹಿಳಾ ಮತ್ತು ಬುಡಕಟ್ಟು ಸಮುದಾಯದಿಂದ ಮೊದಲ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಈ ಪೌರಸನ್ಮಾನಕ್ಕೆ ಪಾತ್ರರಾಗುತ್ತಿದ್ದಾರೆ.


1986-87 ರ ಅವಧಿಯಲ್ಲಿ ಅಂದಿನ ರಾಷ್ಟ್ರಪತಿ ಗ್ಯಾನಿ ಜೇಲ್‍ಸಿಂಗ್ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ್ದಾಗ ಪಾಲಿಕೆಯಿಂದ ಪೌರಸನ್ಮಾನ ಮಾಡಲಾಗಿತ್ತು. 35 ವರ್ಷಗಳ ನಂತರ ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.


ಧಾರವಾಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಐದನೇ ರಾಷ್ಟ್ರಪತಿ


ದ್ರೌಪದಿ ಮುರ್ಮು ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಐದನೇ ರಾಷ್ಟ್ರಪತಿ ಅನ್ನೋದು ಮತ್ತೊಂದು ವಿಶೇಷ. ರಾಷ್ಟ್ರಪತಿಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್, ಗ್ಯಾನಿ ಜೇಲ್‍ಸಿಂಗ್, ಡಾ.ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿ ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡಿದ್ದರು.


ಇದನ್ನೂ ಓದಿ: Monsoon: ಮಾನ್ಸೂನ್ ವ್ಯತ್ಯಯದಿಂದ ಬೆಳೆ ಹಾನಿ; ಆಹಾರ ಭದ್ರತೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದ ತಜ್ಞರು


ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದಾರೆ. ಆದರೆ ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಜಗದೀಶ್ ಶೆಟ್ಟರ್ ಅವರಿಗೆ ಭಾಗಿಯಾಗೋಕೆ ಅವಕಾಶ ನೀಡದೇ ಇರೋದು ತೀವ್ರ ಚರ್ಚೆ ಹುಟ್ಟು ಹಾಕಿದೆ.

Published by:Mahmadrafik K
First published: