• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi: ಸೋಲಿಸಲು ಕರೆ ನೀಡಿದ್ದ ಯಡಿಯೂರಪ್ಪಗೆ ಟಕ್ಕರ್ ಕೊಟ್ಟ ಜಗದೀಶ್ ಶೆಟ್ಟರ್

Hubballi: ಸೋಲಿಸಲು ಕರೆ ನೀಡಿದ್ದ ಯಡಿಯೂರಪ್ಪಗೆ ಟಕ್ಕರ್ ಕೊಟ್ಟ ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್ , ಬಿಎಸ್ ಯಡಿಯೂರಪ್ಪ

ಜಗದೀಶ್ ಶೆಟ್ಟರ್ , ಬಿಎಸ್ ಯಡಿಯೂರಪ್ಪ

Jagadish Shettar Vs BS Yediyurappa: ಶೆಟ್ಟರ್ ಸೋಲಿಸೋದಾಗಿ ರಕ್ತದಲ್ಲಿ ಬರೆದುಕೊಡ್ತೇನೆ ಎಂದು ಬಿಎಸ್ ಯಡಿಯೂರಪ್ಪ ಶಪಥ ಮಾಡಿದ್ದರು. ಅದರ ಬೆನ್ನ ಹಿಂದೆಯೇ ಶೆಟ್ಟರ್ ಶಕ್ತಿಪ್ರದರ್ಶನ ಮಾಡಿದ್ದಾರೆ.

  • Share this:

ಧಾರವಾಡ: ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (Hubli-Dharwad Central) ಕ್ಷೇತ್ರದಲ್ಲಿ ಜಾತಿ ರಾಜಕಾರಣ ತಾರಕಕ್ಕೇರಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ನೇತೃತ್ವದಲ್ಲಿ ವೀರಶೈವ, ಲಿಂಗಾಯತ (Veerashaiva And Lingayat) ಗುಪ್ತ ಸಭೆ ಆಗಿದೆ. ಈಗ ಮಾಜಿ ಸಿಎಂ ಜಗದೀಶ್ (Former CM Jagadish Shettar) ಶೆಟ್ಟರ್ ಪ್ರಮುಖ ಮುಖಂಡರ ಜೊತೆ ಗುಪ್ತ ಸಭೆ ಮಾಡಿ ಯಡಿಯೂರಪ್ಪ ಅವರಿಗೆ ಕೌಂಟರ್ ಕೊಟ್ಟಿದ್ದಾರೆ. ಗುಪ್ತ ಸಭೆಯಲ್ಲಿ ಜಗದೀಶ ಶೆಟ್ಟರ್ ಗೆಲ್ಲಿಸುತ್ತೇವೆಂದು ವೀರಶೈವ ಲಿಂಗಾಯತರು ಶಪಥ ಮಾಡಿದ್ದಾರೆ ಎನ್ನಲಾಗಿದೆ. ಕೇಶ್ವಾಪುರದ ಖಾಸಗಿ ಹೋಟೆಲ್​ನಲ್ಲಿ ವೀರಶೈವ ಲಿಂಗಾಯತ ಗುಪ್ತ ಸಭೆ ನಡೆದಿದೆ. ಮುಖಂಡರಾದ ಬಂಗಾರೇಶ್ ಹಿರೇಮಠ ಹಾಗೂ ರಾಜಶೇಖರ್ ಮೆಣಸಿನಕಾಯಿ ನೇತೃತ್ವದಲ್ಲಿ ಸಭೆ ನಡೆಯಿತು. ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.


ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ನಿಲ್ಲಲು ಸಭೆಯಲ್ಲಿದ್ದ ಮುಖಂಡರು ನಿರ್ಧರಿಸಿದ್ದಾರೆ. ಲಿಂಗಾಯತ ಸಮುದಾಯದ ಒಳಪಂಗಡಗಳ ಪ್ರಮುಖರು ಕೈ ಎತ್ತಿ ಸಂಪೂರ್ಣವಾಗಿ ಬೆಂಬಲ ವ್ಯಕ್ತವಾಗಿದೆ. ನಿಮ್ಮನ್ನು ಗೆಲ್ಲಿಸುವವರೆಗೂ ವಿರಮಿಸುವದಿಲ್ಲ ಎಂದು ಮುಖಂಡರು ಪ್ರತಿಜ್ಞೆ ಮಾಡಿದ್ದಾರೆ ಎಂಬ ತಿಳಿದು ಬಂದಿದೆ.


ಸಭೆಯಲ್ಲಿ ಶೆಟ್ಟರ್ ಹೇಳಿದ್ದೇನು?


ತಮಗೆ ಬಿಜೆಪಿಯಲ್ಲಿ ಅಪಮಾನ ಆಗಿದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂದು ಶೆಟ್ಟರ್ ಅಲವತ್ತುಕೊಂಡಿದ್ದಾರೆ. ಸಮಾಜದ ಪ್ರೀತಿ, ವಿಶ್ವಾಸದ ಬೆಂಬಲಕ್ಕೆ ಕೃತಜ್ಞನಾಗಿದ್ದೇನೆ ಎಂದು ಈ ವೇಳೆ ಶೆಟ್ಟರ್ ತಿಳಿಸಿದ್ದಾರೆ.




ಶೆಟ್ಟರ್ ಶಕ್ತಿ ಪ್ರದರ್ಶನ


ಬಿಜೆಪಿಯವರ ಪೊಳ್ಳು ಬೆದರಿಕೆಗಳಿಗೆ ಭಯ ಪಡೋದು ಬೇಡ. ನಾವೆಲ್ಲರೂ ಶೆಟ್ಟರ್ ಗೆಲುವಿಗೆ ಶ್ರಮಿಸೋಣ ಎಂದು ಮುಖಂಡರು ಸಂಕಲ್ಪ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ:  Karnataka Election 2023: ಇಂದು ಹಳೇ ಮೈಸೂರಿನಲ್ಲಿ ಪ್ರಧಾನಿ ಮೋದಿ ಅಬ್ಬರ; ಸಿದ್ದರಾಮಯ್ಯ ತವರಿನಲ್ಲಿ ನಮೋ ರೋಡ್ ಶೋ

top videos


    ಶೆಟ್ಟರ್ ಸೋಲಿಸೋದಾಗಿ ರಕ್ತದಲ್ಲಿ ಬರೆದುಕೊಡ್ತೇನೆ ಎಂದು ಬಿಎಸ್ ಯಡಿಯೂರಪ್ಪ ಶಪಥ ಮಾಡಿದ್ದರು. ಅದರ ಬೆನ್ನ ಹಿಂದೆಯೇ ಶೆಟ್ಟರ್ ಶಕ್ತಿಪ್ರದರ್ಶನ ಮಾಡಿದ್ದಾರೆ.

    First published: