ವ್ಯಾಪಕ ಆಕ್ರೋಶಕ್ಕೆ ಮಣಿದ ಸಚಿವ ಜಗದೀಶ್ ಶೆಟ್ಟರ್; ವಿದೇಶ ಪ್ರವಾಸ ರದ್ದು?

ಜಗದೀಶ್ ಶೆಟ್ಟರ್ ಪತ್ನಿ ಜೊತೆ ಚೀನಾ ಹಾಗೂ ಲಂಡನ್​ಗೆ 10 ದಿನಗಳ ಪ್ರವಾಸಕ್ಕೆ ತೆರಳಲು ಅಣಿಯಾಗಿದ್ದರು. ಆದರೆ, ರಾಜ್ಯದಲ್ಲಿ ನೆರೆ ಉಂಟಾಗಿದ್ದು, ಈ ವೇಳೆ ಸಚಿವರು ಪ್ರವಾಸ ಮಾಡುತ್ತಿರುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದರು.

Rajesh Duggumane | news18-kannada
Updated:November 1, 2019, 8:08 AM IST
ವ್ಯಾಪಕ ಆಕ್ರೋಶಕ್ಕೆ ಮಣಿದ ಸಚಿವ ಜಗದೀಶ್ ಶೆಟ್ಟರ್; ವಿದೇಶ ಪ್ರವಾಸ ರದ್ದು?
ಜಗದೀಶ್ ಶೆಟ್ಟರ್
  • Share this:
ಬೆಂಗಳೂರು (ನ.1): ರಾಜ್ಯ ಈ ಬಾರಿಯ ನೆರೆಗೆ ಕಂಗಾಲಾಗಿದೆ. ಪ್ರವಾಹಕ್ಕೆ ತತ್ತರಿಸಿದ ಅನೇಕರಿಗೆ ಇನ್ನೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೆರೆ ಸಂತ್ರಸ್ತರಿಗೆ ಸರ್ಕಾರ ಸರಿಯಾದ ಪರಿಹಾರ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಬೃಹತ್​ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ಹೊರಟಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ, ಅವರು ಪ್ರವಾಸ ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಗದೀಶ್ ಶೆಟ್ಟರ್ ಪತ್ನಿ ಜೊತೆ ಚೀನಾ ಹಾಗೂ ಲಂಡನ್​ಗೆ 10 ದಿನಗಳ ಪ್ರವಾಸಕ್ಕೆ ತೆರಳಲು ಅಣಿಯಾಗಿದ್ದರು. ಇಲಾಖೆ ಕಾರ್ಯದರ್ಶಿ ಗೌರವ್ ಗುಪ್ತಾ, ಅವರ ಪತ್ನಿ ರೀನಾ ಗುಪ್ತಾ ಸೇರಿ ಹಲವು ಅಧಿಕಾರಿಗಳು ಹಾಗೂ ಅವರ ಕುಟುಂಬದ ಜೊತೆ ವಿದೇಶ ಪ್ರವಾಸಕ್ಕೆ ಹೊರಟಿದ್ದರು. ಆದರೆ, ನೆರೆ ಉಂಟಾಗಿದ್ದು, ಈ ವೇಳೆ ಸಚಿವರು ಪ್ರವಾಸ ಮಾಡುತ್ತಿರುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದರು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ  ಜಗದೀಶ್ ಶೆಟ್ಟರ್​ ಗೊಂದಲಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಈ ವಿಚಾರದಲ್ಲಿ ಕಪ್ಪು ಚುಕ್ಕೆ ಉಂಟಾಗಬಹುದು, ವಿಪಕ್ಷಗಳು ಇದೇ ವಿಚಾರದಲ್ಲಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಬಹುದು ಎನ್ನುವ ಆತಂಕ ಶೆಟ್ಟರ್​ ಅವರನ್ನು ಕಾಡಿದೆ. ಹೀಗಾಗಿ ಶೆಟ್ಟರ್ ಪ್ರವಾಸ ರದ್ದು ಮಾಡುವ ಯೋಚನೆಯಲ್ಲಿದ್ದಾರೆ.

ಇದನ್ನೂ ಓದಿ: ‘ಕನ್ನಡ ರಾಜ್ಯೋತ್ಸವಕ್ಕೆ ರಾಷ್ಟ್ರ ಧ್ವಜರೋಹಣ ಮಾಡಿ‘: ಶಿಕ್ಷಣಾಧಿಕಾರಿಗಳಿಗೆ ರಾಜ್ಯ ಸರ್ಕಾರ ಖಡಕ್​​ ಸೂಚನೆ

ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎನ್ನಲಾಗಿದೆ. ಕೆಲವರ ಜೊತೆ ಈ ಬಗ್ಗೆ ಚರ್ಚೆ ನಡೆಸಿ ಶೆಟ್ಟರ್​ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಪ್ರವಾಸ ರದ್ದು ಮಾಡುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳಿಂದ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ದೊರೆತಿದೆ.

First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading