ಹಾವೇರಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಕಾಂಗ್ರೆಸ್ (Congress) ಸೇರ್ಪಡೆ ಹಿನ್ನೆಲೆ ಹಿರೇಕೆರೂರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಬಿ.ಸಿ.ಪಾಟೀಲ್ (Minister BC Patil) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯದ ಮುಖ್ಯಮಂತ್ರಿ, ಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಶೆಟ್ಟರ್ ಅವರಿಗೆ ನೀಡಲಾಗಿತ್ತು. ಇಂದು ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರೋದು ಖಂಡನೀಯ ಎಂದರು. ಬಿಜೆಪಿ ಪಕ್ಷ ರಾಜ್ಯದ ಉನ್ನತ ಸ್ಥಾನಗಳನ್ನು ಕೊಟ್ಟಿದ್ದರೂ ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ ಅಂದರೆ ಶೆಟ್ಟರ್ ಅವರನ್ನ ಮುಖ್ಯಮಂತ್ರಿ ಮಾಡ್ತೀವಿ ಅಥವಾ ದೇಶದ ಪ್ರಧಾನಿ ಮಾಡುತ್ತೇವೆ ಅಂತ ಕಾಂಗ್ರೆಸ್ ಹೇಳಿರಬಹುದು ಎಂದು ಬಿ.ಸಿ.ಪಾಟೀಲ್ ವ್ಯಂಗ್ಯ ಮಾಡಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿಗೆ ಬಂದಿದೆ. ಯಾರು ಬರ್ತಿರಾ ಬನ್ನಿ ಬನ್ನಿ ಅಂತಾ ಟಿಕೆಟ್ ಹಿಡಿದುಕೊಂಡು ಕಾಂಗ್ರೆಸ್ ನಾಯಕರು ನಿಂತಿದ್ದಾರೆ. ಬಸ್ ನಿಲ್ದಾಣದಲ್ಲಿ ಟಿಕೆಟ್ ಅನ್ನೋ ಹಾಗೆ ಕಾಂಗ್ರೆಸ್ ನಾಯಕರು ಟಿಕೆಟ್ ಕೊಡಲು ನಿಂತಿದ್ದಾರೆ. ಲಕ್ಷ್ಮಣ್ ಸವದಿ ಮತ್ತು ಶೆಟ್ಟರ್ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಖಂಡನೀಯ ಎಂದು ಅಸಮಾಧಾನ ಹೊರ ಹಾಕಿದರು.
ಸವದಿ ಪಕ್ಷದಲ್ಲಿ ಇರಬೇಕಿತ್ತು!
ಲಕ್ಷ್ಮಣ್ ಸವದಿ ಸೋತಿದ್ರು ಸಹಿತ ಅವರನ್ನು ಡಿಸಿಎಂ ಮಾಡಿ ಎಂಎಲ್ಸಿ ಮಾಡಲಾಯಿತು. ಕುಮಟಳ್ಳಿ ಸೇರಿದಂತೆ 17 ಜನ ಪಕ್ಷ ಬಿಟ್ಟು ಬಂದಿದಕ್ಕೆ ಇವರು ಡಿಸಿಎಂ ಆಗಿದ್ದರು. ಇದನ್ನೆಲ್ಲಾ ಸವದಿಯವರು ತಿಳಿದುಕೊಂಡು ಪಕ್ಷದಲ್ಲಿ ಇರಬೇಕಿತ್ತು ಎಂದು ಹೇಳಿದರು.
ಶೆಟ್ಟರ್ ಸ್ಪ್ಲೆಂಡರ್ ಬೈಕ್ ಹತ್ತಿದ್ದಾರೆ
ಧರ್ಮೇಂದ್ರ ಪ್ರಧಾನ್, ಅಮಿತ ಶಾ ಕೂಡ ಶೆಟ್ಟರ್ ಜೊತೆ ಮಾತನಾಡಿದ್ರು. ನಿಮಗೆ ಕೇಂದ್ರದ ಸಚಿವ ಸ್ಥಾನ ಕೊಡುತ್ತೇವೆ ಅಂತಾ ಹೇಳಿದರು. ಇಷ್ಟೆಲ್ಲಾ ಹೇಳಿದರೂ ಸಹಿತ ಶೆಟ್ಟರ್ ರಾಜೀನಾಮೆ ಕೊಟ್ಟು ಹೊಗಿದ್ದು ನೋಡಿದ್ರೆ ಬಹುಶ್ ಕಾಂಗ್ರೆಸ್ ದವರು ದೇಶದ ಪ್ರಧಾನಿ ಮಾಡಬಹುದು ಎಂದು ಹೇಳಿ ನಕ್ಕರು.
ಇದನ್ನೂ ಓದಿ: SS Mallikarjun: ದಾವಣಗೆರೆ ಉತ್ತರ ಕ್ಷೇತ್ರದ 'ಕೈ' ಅಭ್ಯರ್ಥಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ವಿವರ
ಬುಲೆಟ್ ಬೈಕ್ ಬಿಟ್ಟು ಬುಲ್ಡೋಜರ್ ಹತ್ತಬೇಕು ಅದನ್ನು ಬಿಟ್ಟು ಸ್ಪ್ಲೆಂಡರ್ ಬೈಕ್ ಹತ್ತಿದ್ದಾರೆ ಎಂದು ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ