HOME » NEWS » State » JAGADISH SHETTAR BECOMES HIGHLY ACTIVE BY MEETING SEVERAL LEADERS SNVS

ಕುತೂಹಲಗೊಳಿಸಿದೆ ಜಗದೀಶ್ ಶೆಟ್ಟರ್ ರಹಸ್ಯ ಕಾರ್ಯಸೂಚಿ; ನಾಯಕತ್ವ ಬದಲಾವಣೆಗೆ ನಡೆದಿದೆಯಾ ಪ್ರಯತ್ನ?

ರಾಜ್ಯದ ಲಿಂಗಾಯತ ಸಮುದಾಯದ ಬಿಜೆಪಿ ಶಾಸಕರು, ಕೇಂದ್ರ ಸಚಿವರು ಮೊದಲಾದ ನಾಯಕರನ್ನು ಜಗದೀಶ್ ಶೆಟ್ಟರ್ ಭೇಟಿಯಾಗಿದ್ದಾರೆ. ಪ್ರಹ್ಲಾದ್ ಜೋಷಿ ಕೂಡ ಶೆಟ್ಟರ್ ಜೊತೆಗಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಇವರು ಪ್ರಯತ್ನಿಸುತ್ತಿದ್ದಾರೆಂದು ಹೇಳುತ್ತಿವೆ ಮೂಲಗಳು.

news18-kannada
Updated:September 15, 2020, 11:27 AM IST
ಕುತೂಹಲಗೊಳಿಸಿದೆ ಜಗದೀಶ್ ಶೆಟ್ಟರ್ ರಹಸ್ಯ ಕಾರ್ಯಸೂಚಿ; ನಾಯಕತ್ವ ಬದಲಾವಣೆಗೆ ನಡೆದಿದೆಯಾ ಪ್ರಯತ್ನ?
ಡಿವಿ ಸದಾನಂದ ಗೌಡರ ಜೊತೆ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಷಿ
  • Share this:
ಬೆಂಗಳೂರು(ಸೆ. 15): ರಾಜ್ಯದಲ್ಲಿ ಇತ್ತೀಚಿನ ಕೆಲ ದಿನಗಳಿಂದ ಸಿಎಂ ಸ್ಥಾನದಲ್ಲಿ ಬದಲಾವಣೆ ಆಗಬಹುದು ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಯಡಿಯೂರಪ್ಪ ಅವರೇ ಪೂರ್ಣಾವಧಿಯವರೆಗೆ ಸಿಎಂ ಅಗಿ ಮುಂದುವರಿಯುತ್ತಾರೆಂದು ಬಿಜೆಪಿಯ ಎಲ್ಲಾ ಹಿರಿಯ ನಾಯಕರೂ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರಾದರೂ, ನಾಯಕತ್ವ ಬದಲಾವಣೆ ಸಾಧ್ಯತೆ ಬಗ್ಗೆ ಒಳಗಿಂದೊಳಗೆ ಪ್ರಯತ್ನಗಳು ನಡೆಯುತ್ತಿರುವುದು ಎಂದು ಅನುಮಾನ ಮೂಡುವಂಥ ಬೆಳವಣಿಗೆಗಳು ಆಗುತ್ತಿವೆ. ಮಾಜಿ ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಇತ್ತೀಚಿನ ನಡೆಗಳು ಈ ನಿಟ್ಟಿನಲ್ಲಿ ಅನುಮಾನವನ್ನು ಗಾಢಗೊಳಿಸುತ್ತವೆ. ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬಂದಾಗಿನಿಂದಲೂ ಜಗದೀಶ್ ಶೆಟ್ಟರ್ ಹೆಚ್ಚೆಚ್ಚು ಸಕ್ರಿಯವಾಗುತ್ತಿದ್ದಾರೆ. ಅನೇಕ ನಾಯಕರ ಜೊತೆ ಅವರು ಸದ್ದಿಲ್ಲದೆ ಭೇಟಿ ಆಗಿದ್ದಾರೆ. ಲಿಂಗಾಯತ ಸಮುದಾಯದ ಶಾಸಕರ ಜೊತೆಯೂ ಅವರು ಮಾತುಕತೆ ನಡೆಸಿದ್ದಾರೆ. ಅವರ ರಹಸ್ಯ ಕಾರ್ಯಸೂಚಿ ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಅವರು ಸಿಎಂ ಸ್ಥಾನದ ಕನಸು ಕಾಣುತ್ತಿರುವಂತೆ ಭಾಸವಾಗುತ್ತಿದೆ.

ಹಾಲಿ ಸಿಎಂ ಯಡಿಯೂರಪ್ಪ ಅವರ ಆಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಲಿಂಗಾಯತ ಸಮುದಾಯದ ಹಲವು ಬಿಜೆಪಿ ಶಾಸಕರ ಜೊತೆ ಶೆಟ್ಟರ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಜ್ಯಪಾಲರನ್ನೂ ಭೇಟಿ ಆಗಿ ಬಂದಿದ್ದಾರೆ. ಇಲಾಖೆಯ ಸಾಧನೆ ನೆಪದಲ್ಲಿ ರಾಜ್ಯಪಾಲರ ಜೊತೆ ಹಲವು ರಾಜಕೀಯ ವಿಚಾರಗಳನ್ನ ಮಾತನಾಡಿದ್ದಾರೆನ್ನಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಬಗ್ಗೆ ಅವರು ರಾಜ್ಯಪಾಲರೊಂದಿಗೆ ಚರ್ಚೆ ಕೂಡ ನಡೆಸಿದರೆಂದು ಹೇಳಲಾಗುತ್ತಿದೆ. ಶೆಟ್ಟರ್ ಕಾರ್ಯದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಕೂಡ ಜೊತೆಗಿದ್ದಾರೆ.

ಇದನ್ನೂ ಓದಿ: ಅತ್ತ ಪಾಕಿಸ್ತಾನ, ಇತ್ತ ಚೀನಾ; ದ್ವಿಮುಖಿ ಯುದ್ಧದ ಸಾಧ್ಯತೆಯಲ್ಲಿ ಭಾರತ

ಇಲ್ಲಷ್ಟೇ ಅಲ್ಲ, ದೆಹಲಿಗೆ ಹೋಗಿ ಕೆಲವು ನಾಯಕರನ್ನೂ ಭೇಟಿಯಾಗಿ ಬಂದಿದ್ಧಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಆ ಎಲ್ಲ ನಾಯಕರ ಜೊತೆ ಶೆಟ್ಟರ್ ಕಾಣಿಸಿಕೊಂಡಿರುವ ಫೋಟೋಗಳು ಸಾಕ್ಷಿಯಾಗಿವೆ.

ಇದನ್ನೂ ಓದಿ: Karnataka Weather: ಕರ್ನಾಟಕದ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ; ಸೆ. 19ರವರೆಗೆ ಹಳದಿ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಅನೇಕ ಹಣಕಾಸು ವ್ಯವಹಾರ, ಡೀಲ್​ಗಳನ್ನೆಲ್ಲಾ ಮಗ ಬಿ.ವೈ. ವಿಜಯೇಂದ್ರ ಅವರೇ ಮಾಡುತ್ತಾರೆ ಎಂಬ ಬಿಜೆಪಿಯೊಳಗಿನ ಒಂದು ವರ್ಗದ ಶಾಸಕರು ಒಳಗಿಂದೊಳಗೆ ಆರೋಪ ಮಾಡುತ್ತಲೇ ಬಂದಿದ್ದಾರೆ. ಆದ್ದರಿಂದ ನಾಯಕತ್ವ ಬದಲಾವಣೆ ಆಗುವುದು ಉತ್ತಮ ಎಂದು ಈ ನಾಯಕರು ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಇದರ ಮಧ್ಯೆ, ಬಿ.ಎಸ್. ಯಡಿಯೂರಪ್ಪ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ಭೇಟಿ ಕೂಡ ಕುತೂಹಲ ಮೂಡಿಸಿದೆ. ರಾಜ್ಯ ರಾಜಕಾರಣದಲ್ಲಿ ಮಹತ್ತರದ ಬೆಳವಣಿಗೆಯಾಗಬಹುದು ಎಂಬ ಸೂಚನೆ ರವಾನೆಯಾಗುತ್ತಿರುವಂತಿದೆ.

ವರದಿ: ಚಿದಾನಂದ ಪಟೇಲ್
Published by: Vijayasarthy SN
First published: September 15, 2020, 11:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories