Puttur: ಗಮನ ಸೆಳೆದ ಪುತ್ತೂರಿನ‌ ಹಲಸು ಮೇಳ; ಇಲ್ಲಿಯ ಉತ್ಪನ್ನ ಕಂಡು ಆಶ್ಚರ್ಯಚಕಿತರಾದ ಜನರು

ಹಲಸಿನ ಹಪ್ಪಳ, ಸಂಡಿಗೆ, ಹೋಳಿಗೆ, ಹಲಸಿನ ದೋಸೆ, ಹಲಸಿನ ಪಾನಿಪೂರಿ, ಹಲಸಿನ ಮಂಚೂರಿ, ಹಲಸಿನ ಕೇಕ್, ಹಲಸಿನ ಸೀರಾ, ಹಲಸಿನ ಪೇಡಾ ಹೀಗೆ ಹಲಸನ್ನೇ ಬಳಸಿದ ಬಹುತೇಕ ತಿಂಡಿ-ತಿನಿಸುಗಳನ್ನು ಈ ಮೇಳದಲ್ಲಿ ಪರಿಚಯಿಸಲಾಗಿದೆ

ಹಲಸಿನಹಣ್ಣಿನ ಮೇಳ

ಹಲಸಿನಹಣ್ಣಿನ ಮೇಳ

  • Share this:
ತೋಟದಲ್ಲಿ ಎಲ್ಲೆಂದರಲ್ಲಿ ಕೊಳೆತು ನಾರುತ್ತಿದ್ದ ಹಲಸಿಗೆ (Jackfruit) ಇದೀಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹಲಸಿನಿಂದ ವಿವಿಧ ರೀತಿಯ ಉತ್ಪನ್ನಗಳನ್ನು (Jackfruit Products) ತಯಾರಿಸುವ ಮೂಲಕ ಹಲಸಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ (International Market) ಬೇಡಿಕೆ ತರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೃಷಿಕರು (Farmers) ಹಲಸಿನ ಮೇಳಗಳನ್ನು (Jackfruit Mela) ಆಯೋಜಿಸುವ ಮೂಲಕ ಹಲಸಿನ ವಿವಿಧ ಉತ್ಪನ್ನಗಳನ್ನು ಜನತೆಗೆ ಮುಟ್ಟಿಸುವ ಕಾರ್ಯ ನಡೆಯುತ್ತಿದ್ದು, ಇಂಥಹುದೇ ಒಂದು ಹಲಸು ಮೇಳ ಪುತ್ತೂರಿನಲ್ಲಿ (Puttur) ನಡೆಯುತ್ತಿದ್ದು, ಈ ಮೇಳಕ್ಕೆ ಭಾರೀ ಜನ ಬೆಂಬಲವೂ ವ್ಯಕ್ತವಾಗಿದೆ. 

ಹಲಸಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಹಾಗೂ ಹಲಸಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ಜನಸಾಮಾನ್ಯನಿಗೆ ತಿಳಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಿಶೇಷ ಹಲಸು ಮೇಳವನ್ನು ಆಯೋಜಿಸಲಾಗಿದೆ.

ಹಲಸಿನಹಣ್ಣಿನ ಮಾಹಿತಿ ನೀಡುವ ಉದ್ದೇಶ

ಕೃಷಿ ತೋಟಗಳಲ್ಲಿ ಎಲ್ಲೆಂದರಲ್ಲಿ ಎಸೆದು, ಹಾಳಾಗುತ್ತಿದ್ದ ಹಲಸು ಯಾರಿಗೂ ಬೇಡವಾದ ಹಣ್ಣಾಗಿ ಗುರುತಿಸಿಕೊಂಡಿದೆ. ಈ ಹಲಸನ್ನು ಬಳಸಿಕೊಂಡು ಹಲಸಿನಿಂದಲೇ ವಿವಿಧ ರೀತಿಯ ತಿಂಡಿ ತಿನಿಸುಗಳಿಂದ ಉತ್ತಮ ಆದಾಯ ಗಳಿಸಬಹುದು ಎನ್ನುವುದನ್ನು ಜನತೆಗೆ ಮಾಹಿತಿ ನೀಡುವ  ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ:  Puttur: ತಾರಕಕ್ಕೇರಿದ ನಾಗನ ಕಟ್ಟೆ ವಿವಾದ; ಪುತ್ತೂರಿನ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಬಿಗ್ ಫೈಟ್

ಮೇಳದಲ್ಲಿ ವಿವಿಧ ಉತ್ಪನ್ನಗಳ ಪರಿಚಯ

ಪ್ರತೀ ವರ್ಷವೂ ಈ ಹಲಸಿನ ಮೇಳವನ್ನು ಪುತ್ತೂರಿನಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿತ್ತಾದರೂ, ಕೋವಿಡ್ 19 ನಿಂದಾಗಿ  ಈ ಮೇಳ ಆಯೋಜನೆ ಕೊಂಚ ಸಮಸ್ಯೆಗಳು ಎದುರಾಗಿತ್ತು. ಆದರೆ ಈ ಬಾರಿ ಮತ್ತೆ ಹಲಸಿನ ಮೇಳವನ್ನು ವಿಶೇಷವಾಗಿ ಹಮ್ಮಿಕೊಳ್ಳುವ ಮೂಲಕ ಜನರನ್ನು ಹಲಸಿನ ಇನ್ನಷ್ಟು ಹತ್ತಿರ ಕರೆತರುವ ಪ್ರಯತ್ನವನ್ನು ನಡೆಸಲಾಗಿದೆ.

Jack fruits mela in puttur dakshina Kannada akp mrq
ಹಲಸಿನಹಣ್ಣಿನ ಮೇಳ


ಹಲಸಿನ ಕುರಿತ ಮಾಹಿತಿ, ಹಲಸಿನ ವಿವಿಧ ರೀತಿಯ ತಳಿಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಹಪ್ಪಳ, ಸಂಡಿಗೆ, ಹೋಳಿಗೆ, ಹಲಸಿನ ದೋಸೆ, ಹಲಸಿನ ಪಾನಿಪೂರಿ, ಹಲಸಿನ ಮಂಚೂರಿ, ಹಲಸಿನ ಕೇಕ್, ಹಲಸಿನ ಸೀರಾ, ಹಲಸಿನ ಪೇಡಾ ಹೀಗೆ ಹಲಸನ್ನೇ ಬಳಸಿದ ಬಹುತೇಕ ತಿಂಡಿ-ತಿನಿಸುಗಳನ್ನು ಈ ಮೇಳದಲ್ಲಿ ಪರಿಚಯಿಸಲಾಗಿದೆ.

ತಜ್ಞರಿಂದ ಮಾಹಿತಿ ನೀಡುವ ಪ್ರಯತ್ನ

ಹಲಸಿನಿಂದ ವ್ಯಾಲ್ಯೂ ಆಡೆಡ್ ಉತ್ಪನ್ನಗಳನ್ನು ಹೇಗೆ ತಯಾರಿಸಬಹುದು ಎನ್ನುವ ಕುರಿತು ತಜ್ಞರಿಂದ ಮಾಹಿತಿ ಒದಗಿಸುವ ಪ್ರಯತ್ನವೂ ಈ ಮೇಳದಲ್ಲಿ ನಡೆದಿದ್ದು, ಈ ಮೇಳಕ್ಕೆ ಈ ಬಾರಿ ಜನತೆಯಿಂದ ಉತ್ತಮ ಪ್ರತಿಕ್ರಿಯೆಯೂ ದೊರೆತಿದೆ ಎನ್ನುತ್ತಾರೆ ಮೇಳದ ಸಂಜೋಜಕರಲ್ಲಿ ಓರ್ವರಾದ ಸುಹಾಸ್ ಮರಿಕೆ.

ಹಲಸನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದ ಜನರಿಗೆ ಈ ಮೇಳದಿಂದ ಹಲಸಿನ ವಿಚಾರವಾಗಿ ಉತ್ತಮ ಮಾಹಿತಿಯು ದೊರೆತಿದೆ. ಹಲಸು ಒಂದು ಆರೋಗ್ಯ ಸ್ನೇಹಿ ಹಣ್ಣಾಗಿದ್ದು, ಇದರಿಂದ ಹಲವು ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಲಾಗುತ್ತದೆ ಎನ್ನುವ ವಿಚಾರವನ್ನು ತಿಳಿದ ಇಲ್ಲಿಗೆ ಬಂದ ಜನ ತಾವೂ ಇಂಥಹ ಪ್ರಯತ್ನವನ್ನು ನಡೆಸುವ ನಿರ್ಧಾರವನ್ನು ಕೈಗೊಂಡಿದ್ದಾರೆ.

ಮೇಳದಲ್ಲಿ ವಿವಿಧ ಹಣ್ಣುಗಳ ಪ್ರದರ್ಶನ

ಇನ್ನು ಕೆಲವರು ಹಲಸಿನಿಂದ ಇಷ್ಟೆಲ್ಲಾ ಉತ್ಪನ್ನಗಳನ್ನು ಮಾಡಲು ಸಾಧ್ಯವೇ ಎನ್ನುವ ಕುತೂಲಹದಿಂದಲೂ ನೋಡುವ ದೃಶ್ಯಗಳೂ ಮೇಳದಲ್ಲಿ ಕಂಡು ಬರುತ್ತಿತ್ತು. ಹಲಸಿನ ಜೊತೆಗೆ ಸ್ಥಳೀಯ ಕೃಷಿಕರು ತಮ್ಮ ತೋಟಗಳಲ್ಲಿ ಬೆಳೆದ ರಂಬೂಟಾನ್, ಡ್ಯಾಗ್ರನ್ ಫ್ರುಟ್ಸ್, ಪಪ್ಪಾಯ ಹೀಗೆ ಹಲವು ಬಗೆಯ ಹಣ್ಣುಗಳನ್ನೂ ಮೇಳದಲ್ಲಿ ಪರಿಚಯಿಸುವ ಮೂಲಕ ಗಮನಸೆಳೆದಿದ್ದಾರೆ.

Jack fruits mela in puttur dakshina Kannada akp mrq
ಹಲಸಿನಹಣ್ಣಿನ ಮೇಳ


ಭರ್ಜರಿ ಮಾರಾಟ

ಹಲಸಿನ ಮೇಳದಲ್ಲಿ ಹಲಸಿನಿಂದ ತಯಾರಿಸಿದ ಐಸ್ ಕ್ರೀಂ, ತಂಪು ಪಾನೀಯ, ಸೆಂಡಿಗೆ, ಪಾಪಡ್ ಸೇರಿದಂತೆ ಹಲವು ತಿಂಡಿ ತಿನಿಸುಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು.

ಇದನ್ನೂ ಓದಿ:  Puttur: ಪುತ್ತೂರಿನಲ್ಲೊಂದು ಅವೈಜ್ಞಾನಿಕ ರೈಲ್ವೇ ಮೇಲ್ಸೇತುವೆ; ಎಚ್ಚರ ತಪ್ಪಿದ್ರೆ 50 ಅಡಿ ಆಳಕ್ಕೆ ಬೀಳ್ತೀರಿ

ಮೇಳಕ್ಕೆ ಬಂದ ಜನ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಹಣ್ಣುಗಳನ್ನು ವೀಕ್ಷಿಸಿದರಲ್ಲದೆ, ತಮಗೆ ಬೇಕಾದ ಹಣ್ಣುಗಳನ್ನು ಹಾಗೂ ಹಲಸಿನ ಸಸಿಗಳನ್ನು ಖರೀದಿಸುವ ಮೂಲಕ ಹಲಸಿನ ಉತ್ಪನ್ನಗಳ ಅಭಿವೃದ್ಧಿಗೆ ತಮ್ಮ ಕೈಲಾದ ಕೊಡುಗೆಯನ್ನೂ ನೀಡಿದ್ದಾರೆ.
Published by:Mahmadrafik K
First published: