ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ: ಉಪಸಭಾಧ್ಯಕ್ಷ ಜೆ.ಕೆ ಕೃಷ್ಣಾರೆಡ್ಡಿ ರಾಜೀನಾಮೆಗೆ ನಿರ್ಧಾರ


Updated:September 6, 2018, 9:36 PM IST
ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ: ಉಪಸಭಾಧ್ಯಕ್ಷ ಜೆ.ಕೆ ಕೃಷ್ಣಾರೆಡ್ಡಿ ರಾಜೀನಾಮೆಗೆ ನಿರ್ಧಾರ

Updated: September 6, 2018, 9:36 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಸೆಪ್ಟೆಂಬರ್​​.06): ಜಾರಕಿಹೊಳಿ ಬ್ರದರ್ಸ್​​ ಬಂಡಾಯದ ಬೆನ್ನಲ್ಲೇ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಿಧಾನಸಭಾ ಉಪಸಭಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡಿದ್ದ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕರ್ನಾಟಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟಾಗಿದೆ.

ಈಗಾಗಲೇ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತಾಗಿ ತಮ್ಮ ಆಪ್ತರೊಂದಿಗೆ ಚರ್ಚಿಸಿದ್ಧಾರೆ. ವಾರದೊಳಗೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದು, ಮೈತ್ರಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ಧಾರೆ. ಕೃಷ್ಣಾರೆಡ್ಡಿ ಮನವೊಲಿಕೆಗೆ ಮುಂದಾಗಿದ್ದ ಸಿಎಂ ಬಂದ ಕೂಡಲೇ ತಕ್ಷಣವೇ ವಿಧಾನಸೌಧದಿಂದ ಹೊರನಡೆದಿದ್ದಾರೆ ಎನ್ನುತ್ತಿವೆ ಮೂಲಗಳು.

ಮಾಜಿ ಸಿಎಂ ಸಿದ್ದರಾಮಯ್ಯನವರ ಪ್ರಬಲ ವಿರೋಧದ ನಡುವೆಯೂ ಜೆಡಿಎಸ್‌ ವರಿಷ್ಠರ ಒತ್ತಾಯದ ಮೇರೆಗೆ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಲಾಯ್ತು. ಜೆಡಿಎಸ್​​ ಕಾಂಗ್ರೆಸ್‌ ಬೆಂಬಲದೊಂದಿಗೆ ಜುಲೈ 7ರಂದು ಶಾಸಕ ಕೃಷ್ಣಾರೆಡ್ಡಿ ಆಯ್ಕೆಗೊಂಡಿದ್ದರು.

ಎರಡು ಬಾರಿ ಚಿಂತಾಮಣಿ ಶಾಸಕರಾಗಿ ಆಯ್ಕೆಯಾಗಿರುವ ಕೃಷ್ಣಾರೆಡ್ಡಿ ಅವರ ಆಯ್ಕೆ ಕುರಿತು ಜೆಡಿಎಸ್‌ ಶಾಸಕ ಗೋಪಾಲಯ್ಯ ಪ್ರಸ್ತಾವನೆ ಸಲ್ಲಿಸಿದರು. ನಂತರ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಕೃಷ್ಣಾರೆಡ್ಡಿ ಆಯ್ಕೆ ಕುರಿತು ಘೋಷಿಸಿದರು. ಬಳಿಕ ಜೆಡಿಎಸ್‌ನ ಕೃಷ್ಣಾರೆಡ್ಡಿ ಅವರನ್ನು ವಿಧಾನಸಭೆ ಉಪಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯ್ತು.

ಬಳಿಕ ಸಭಾನಾಯಕರು, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ಅವರು, ಕೃಷ್ಣಾರೆಡ್ಡಿ ಅವರನ್ನು ಉಪಾಧ್ಯಕ್ಷರ ಆಸನದ ಬಳಿ ಕರೆದು ತಂದರು. ಈ ಮೂಲಕ ಅವಿರೋಧವಾಗಿ ಆಯ್ಕೆಯಾಗಿರುವ ಕೃಷ್ಣಾರೆಡ್ಡಿಯವರಿಗೆ ಎಲ್ಲಾ ನಾಯಕರು ಅಭಿನಂದನೆ ಸಲ್ಲಿಸಿದ್ದರು.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ