ಬಿಜೆಪಿ ಸರ್ಕಾರ ಸಾಕಷ್ಟು ಗೊಂದಲದಲ್ಲಿದ್ದು ಈ ಸರ್ಕಾರ ಹೆಚ್ಚು ದಿನ ಉಳಿಯೋದು ಕಷ್ಟ; ಸತೀಶ್ ಜಾರಕಿಹೊಳಿ

ಒಂದು ತಿಂಗಳು ಮಾತ್ರ ಈ ಸರ್ಕಾರ ನಡೆಯಲಿದೆ ಎಂದು ಸ್ವತಃ ಬಿಜೆಪಿ ಪಕ್ಷದವರೇ ಹೇಳುತ್ತಿದ್ದಾರೆ. ಹೀಗಾಗಿ ಮುಂದೆ ರಾಜ್ಯ ರಾಜಕೀಯದಲ್ಲಿ ಏನು ನಡೆಯಲಿದೆ? ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ, ಖಂಡಿತ ಕಾಂಗ್ರೆಸ್ ಇದರ ಲಾಭ ಒಡೆಯಲ್ಲ, ಇದಕ್ಕೇನಿದ್ರು ಮಧ್ಯಂತರ ಚುನಾವಣೆಯೇ ಪರಿಹಾರ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.

MAshok Kumar | news18-kannada
Updated:August 31, 2019, 1:42 PM IST
ಬಿಜೆಪಿ ಸರ್ಕಾರ ಸಾಕಷ್ಟು ಗೊಂದಲದಲ್ಲಿದ್ದು ಈ ಸರ್ಕಾರ ಹೆಚ್ಚು ದಿನ ಉಳಿಯೋದು ಕಷ್ಟ; ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ (ಆಗಸ್ಟ್.31); ರಾಜ್ಯ ಬಿಜೆಪಿ ಸರ್ಕಾರ ಸಾಕಷ್ಟು ಗೊಂದಲದಲ್ಲಿದ್ದು, ಇವರ ಆಡಳಿತ ಇನ್ನೆಷ್ಟು ದಿನ ನಡೆಯಲಿದೆ ಎಂಬುದನ್ನು ಕಾಡುನೋಡಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿರುವ ಅವರು, “ಬಿಜೆಪಿ ಸರ್ಕಾರ ಪ್ರಸ್ತುತ ಸಾಕಷ್ಟು ಸಂಕಷ್ಟ ಹಾಗೂ ಗೊಂದಲಕ್ಕೆ ಒಳಗಾಗಿದೆ. ಒಂದು ತಿಂಗಳು ಮಾತ್ರ ಈ ಸರ್ಕಾರ ನಡೆಯಲಿದೆ ಎಂದು ಸ್ವತಃ ಬಿಜೆಪಿ ಪಕ್ಷದವರೇ ಹೇಳುತ್ತಿದ್ದಾರೆ. ಹೀಗಾಗಿ ಮುಂದೆ ರಾಜ್ಯ ರಾಜಕೀಯದಲ್ಲಿ ಏನು ನಡೆಯಲಿದೆ? ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ, ಖಂಡಿತ ಕಾಂಗ್ರೆಸ್ ಇದರ ಲಾಭ ಒಡೆಯಲ್ಲ, ಇದಕ್ಕೇನಿದ್ರು ಮಧ್ಯಂತರ ಚುನಾವಣೆಯೇ ಪರಿಹಾರ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಸಹೋದರ ಹಾಗೂ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕುರಿತು ಮಾತನಾಡಿದ ಅವರು, “ರಮೇಶ್ ಅವರಿಗೆ ಆರಂಭದಿಂದಲೂ ಜನರ ಮೇಲೆ ಕಾಳಜಿ ಕಡಿಮೆ. ಪ್ರವಾಹದ ಪರಿಸ್ಥಿತಿಯಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಜನರ ಜೊತೆ ಇರಬೇಕು. ಆದರೆ, ಅದನ್ನು ಬಿಟ್ಟು ಅವರು ತಿಂಗಳು ಗಟ್ಟಲೆ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರದ್ದೇನಿದ್ದರೂ ಚುನಾವಣಾ ರಾಜಕಾರಣ. ಹೀಗಾಗಿ ಅವರು ಯಾವುದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಯೂಟರ್ನ್ ಹೊಡೆದರು ಅಚ್ಚರಿ ಇಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ : ಲಕ್ಷ್ಮಣ ಸವದಿಗೆ ಡಿಸಿಎಂ ಪಟ್ಟ; ಕೆಂಡಾಮಂಡಲರಾದ ಮಹಿಳಾ ಹೋರಾಟಗಾರ್ತಿಯರು, ಬಿಜೆಪಿ ಕಚೇರಿ ಎದುರು ಉಗ್ರ ಪ್ರತಿಭಟನೆ!

First published:August 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading