• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Zameer Ahmed: ಅಕ್ರಮ ಆಸ್ತಿ ಗಳಿಸಿದ್ದಾರಾ ಜಮೀರ್ ಅಹ್ಮದ್? ಎಸಿಬಿ ದಾಳಿ ವೇಳೆ ಸ್ಫೋಟಕ ಮಾಹಿತಿ

Zameer Ahmed: ಅಕ್ರಮ ಆಸ್ತಿ ಗಳಿಸಿದ್ದಾರಾ ಜಮೀರ್ ಅಹ್ಮದ್? ಎಸಿಬಿ ದಾಳಿ ವೇಳೆ ಸ್ಫೋಟಕ ಮಾಹಿತಿ

ಜಮೀರ್ ಅಹ್ಮದ್ ಮನೆ ಮೇಲೆ ನಡೆದಿದ್ದ ಎಸಿಬಿ ದಾಳಿ

ಜಮೀರ್ ಅಹ್ಮದ್ ಮನೆ ಮೇಲೆ ನಡೆದಿದ್ದ ಎಸಿಬಿ ದಾಳಿ

ಎಸಿಬಿ ತನಿಖೆಯಲ್ಲಿ ಜಮೀರ್ ಅಹ್ಮದ್ ಅಕ್ರಮ‌ ಆಸ್ತಿ ಹೊಂದಿರೋದು ಪತ್ತೆಯಾಗಿದೆ. ಜಮೀರ್ ಅಹ್ಮದ್ ಆಸ್ತಿ ಅವರ ಆದಾಯಕ್ಕಿಂತ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.

  • Share this:

ಬೆಂಗಳೂರು: ಮಾಜಿ ಸಚಿವ (Ex Minister), ಬೆಂಗಳೂರಿನ (Bengaluru) ಚಾಮರಾಜಪೇಟೆಯ ಹಾಲಿ ಶಾಸಕ (Chamarajpet MLA) ಬಿ.ಝಡ್. ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅವರು ಅಕ್ರಮ ಆಸ್ತಿ (Property) ಹೊಂದಿರುವುದು ಎಸಿಬಿ ದಾಳಿ (ACB Raid) ವೇಳೆ ಪತ್ತೆಯಾಗಿದೆ. ಕೋಟಿ ಕೋಟಿ ಅಕ್ರಮ ಆಸ್ತಿ ಗಳಿಕೆ ಮಾಡಿರೋದು ನಿನ್ನೆ ನಡೆದ ಎಸಿಬಿ ದಾಳಿ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ. ನಿನ್ನೆ ಜಮೀರ್ ಅಹ್ಮದ್ ಖಾನ್ ಅವರ ನಿವಾಸ (House), ಕಚೇರಿಗಳ (Office) ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಜಮೀರ್ ಅಹ್ಮದ್‌ ಅವರ ಮನೆಯಲ್ಲಿ ಸಿಕ್ಕ ಹಲವು ಪ್ರಮುಖ ಕಡತಗಳ (Documents) ಪರಿಶೀಲನೆ ನಡೆಸಲಾಗಿತ್ತು. ಈ ತನಿಖೆಯಲ್ಲಿ ಜಮೀರ್ ಅಹ್ಮದ್ ಅಕ್ರಮ‌ ಆಸ್ತಿ ಹೊಂದಿರೋದು ಪತ್ತೆಯಾಗಿದೆ. ಜಮೀರ್ ಅಹ್ಮದ್ ಆಸ್ತಿ ಅವರ ಆದಾಯಕ್ಕಿಂತ ಸುಮಾರು ಶೇಕಡಾ 2031ರಷ್ಟು ಪಟ್ಟು ಹೆಚ್ಚಾಗಿದೆ ಅಂತ ಇಡಿ ಹೇಳಿತ್ತು. ಇದೀಗ ಎಸಿಬಿ ದಾಳಿಯಲ್ಲೂ ಜಮೀರ್ ಅಹ್ಮದ್ ಅಕ್ರಮ ಆಸ್ತಿ ಗಳಿಸಿರುವುದು ಬೆಳಕಿಗೆ ಬಂದಿದೆ.  


ಎಸಿಬಿ ಪ್ರಕಟಣೆಯಲ್ಲಿ ಏನಿದೆ?


ದಿನಾಂಕ 05.07.2022 ರಂದು ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಒಟ್ಟು 85 ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ 5 ವಿವಿಧ ತಂಡಗಳಿಂದ ಜಮೀರ್ ಅಹಮ್ಮದ್ ಅವರ ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ಜಾರಿ ನಿರ್ದೇಶನಾಲಯ, ನವದೆಹಲಿ ರವರ ವರದಿ ಹಾಗೂ ದಾಖಲಾತಿಗಳನ್ನು ಆಧರಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಲಾಗಿರುತ್ತದೆ.


ಎಸಿಬಿ ತನಿಖೆಯಲ್ಲಿ ಜಮೀರ್ ಅಹ್ಮದ್ ಅಕ್ರಮ‌ ಆಸ್ತಿ ಹೊಂದಿರೋದು ಪತ್ತೆಯಾಗಿದೆ. ಜಮೀರ್ ಅಹ್ಮದ್ ಆಸ್ತಿ ಅವರ ಆದಾಯಕ್ಕಿಂತ ಸುಮಾರು ಶೇಕಡಾ 2031ರಷ್ಟು ಪಟ್ಟು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.
ದಾಳಿ ಕುರಿತಂತೆ ಎಸಿಬಿ ಪ್ರಕಟಣೆ


ಶೇ. 2031ರಷ್ಟು ಅಕ್ರಮ ಆಸ್ತಿ ಬಗ್ಗೆ ವರದಿ ಮಾಡಿದ್ದ ಇಡಿ


ಜಾರಿ ನಿರ್ದೇಶನಾಲಯದ ವರದಿಯಲ್ಲಿ ಶಾಸಕರು ರೂ.87,44,05,057/- ರಷ್ಟು ಅಂದರೆ ಶೇಕಡಾ 2031ರಷ್ಟು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ವರದಿ ಇದ್ದು ಸದರಿ ವರದಿಯನ್ನು ಪರಿಗಣಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ. ಸದರಿ ವರದಿ ಮೇರೆಗೆ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ದಾಖಲಾತಿಗಳನ್ನು ಅಮಾನತ್ತು ಪಡಿಸಿಕೊಂಡು ತನಿಖೆಗೆ ಒಳಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಅಂತ ಎಸಿಬಿ ಪ್ರಕಟಣೆಯಲ್ಲಿ ಹೇಳಿದೆ.


ಇದನ್ನೂ ಓದಿ: ACB Raid: ಜಮೀರ್ ಫ್ಲ್ಯಾಟ್​ನಲ್ಲಿ 24 ಜೀವಂತ ಗುಂಡುಗಳು ಪತ್ತೆ; ಕುತೂಹಲ ಕೆರಳಿಸಿದೆ Empty ಬುಲೆಟ್ ಕೇಸ್


87.44 ಲಕ್ಷ ಕೋಟಿ ಅಕ್ರಮ ಆಸ್ತಿ ಬಗ್ಗೆ ವರದಿ


ಎಸಿಬಿ ತನಿಖೆ ವೇಳೆ ಜಮೀರ್ ಅಹ್ಮದ್ ಅವರು 87 ಕೋಟಿ 44 ಲಕ್ಷ 05 ಸಾವಿರದ 057 ಮೌಲ್ಯದ ಅಕ್ರಮ ಆಸ್ತಿ ಹೊಂದಿರೋದು ಎಬಿಸಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿಂದೆ ದಾಳಿ‌ ನಡೆಸಿ ಆಸ್ತಿ ಬಗ್ಗೆ ಇಡಿ ವರದಿ ನೀಡಿತ್ತು. ಇ.ಡಿ ಅಧಿಕಾರಿಗಳ ರೆಫೆರೆನ್ಸ್ ನಲ್ಲಿ ಎಸಿಬಿ ಅಧಿಕಾರಿಗಳು ನಿನ್ನೆ  ದಾಳಿ ನಡೆಸಿದ್ದರು. 85 ಅಧಿಕಾರಿಗಳ 5 ತಂಡಗಳಿಂದ ದಾಳಿ ನಡೆದಿದ್ದು, ಜಮೀರ್ ಮನೆ, ಕಚೇರಿ ಸೇರಿ ನಾಲ್ಕು ಕಡೆ ಅಮೂಲ್ಯ ಕಡತಗಳ ಪರಿಶೀಲನೆ‌‌ ನಡೆಸಲಾಗಿತ್ತು. ಈ ವೇಳೆ ಆಸ್ತಿ ಗಳಿಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಪತ್ತೆಯಾಗಿತ್ತು.


ಇದನ್ನೂ ಓದಿ: Zameer ನಿವಾಸದ ಮುಂದೆ ಹೈಡ್ರಾಮಾ; ಇದೇ ಮೊದಲ ಬಾರಿಗೆ ಶಾಸಕರ ಮನೆ ಮೇಲೆ ACB ದಾಳಿ


ಮುಂದುವರೆದ ಎಸಿಬಿ ತನಿಖೆ


ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು, ಈಗಾಗಲೆ ಕೆಲ ದಾಖಲೆಗಳನ್ನ ವಶಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Published by:Annappa Achari
First published: