Veer Savarkar: ಸಾವರ್ಕರ್ ಪಕ್ಷಿ ಮೇಲೆ ಕುಳಿತು ಅಂಡಮಾನ್ ಜೈಲಿನಿಂದ ತಾಯ್ನಾಡಿಗೆ ಬರ್ತಿದ್ದರಂತೆ! ಪಠ್ಯದಲ್ಲಿ ಮತ್ತೊಂದು ಯಡವಟ್ಟು!

ಕೆಲವು ದಿನಗಳಿಂದ ಸಾವರ್ಕರ್ ವಿಚಾರದಲ್ಲಿ ರಾಜಕೀಯವಾಗಿ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಪಠ್ಯ ಸೇರ್ಪಡೆಯೂ ಪುಸ್ತಕದ ಮತ್ತೊಂದು ದಂಗಲ್​ಗೆ ಕಾರಣವಾಗುವ ಸಾಧ್ಯತೆ ಇದೆ. ಅಂಡಮಾನ್​ ಜೈಲಿನಿಂದ ಬುಲ್​ ಬುಲ್ ಪಕ್ಷಿಯ ಮೇಲೆ ಕುಳಿತು ವೀರ ಸಾವರ್ಕರ್ ತಾಯ್ನಾಡನ್ನು ಸಂದರ್ಶಿಸಿ ಬರುತ್ತಿದ್ದರು ಅಂತಾ ಬರೆಯಲಾಗಿದೆ.

ವೀರ ಸಾವರ್ಕರ್

ವೀರ ಸಾವರ್ಕರ್

  • Share this:
ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ (Freedom Fighter) ವೀರ ಸಾವರ್ಕರ್ (Veer Savarkar) ಬಗ್ಗೆ ವಿವಾದ (Controversy) ಮಾತ್ರ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಮೊನ್ನೆ ಮೊನ್ನೆಯಷ್ಟೇ ಫೋಟೋ (Photo) ಇಡುವ ವಿಚಾರಕ್ಕೆ ಘರ್ಷಣೆಗಳಾಗಿ ರಾಜಕೀಯ ಸ್ವರೂಪ ಕೂಡ ಪಡೆದಿತ್ತು. ರಾಜಕೀಯ ನಾಯಕರು ವಾಕ್ಸಮರ ನಡೆಸಿದ್ರು. ಈ ಬಗ್ಗೆ ಪರ-ವಿರೋಧಗಳು ಚರ್ಚೆಗಳಾಗುತ್ತಿರುವ ನಡುವೆಯೇ ವೀರ ಸಾವರ್ಕರ್ ಸಂಬಂಧಿತ ಪಠ್ಯದ (Text Book) ಸಂಬಂಧ ವಿವಾದ ಮುನ್ನೆಲೆಗೆ ಬಂದಿದೆ. ಅಂಡಮಾನ್​ ಜೈಲಿನಿಂದ (Andaman Jail) ಬುಲ್​ ಬುಲ್ ಪಕ್ಷಿಯ ಮೇಲೆ ಕುಳಿತು ವೀರ ಸಾವರ್ಕರ್ ತಾಯ್ನಾಡನ್ನು ಸಂದರ್ಶಿಸಿ ಬರುತ್ತಿದ್ದರು ಅಂತಾ ಬರೆಯಲಾಗಿದೆ. 8ನೇ ತರಗತಿಯ ಕನ್ನಡ ವಿಷಯದಲ್ಲಿ ಈ ವಿಚಾರ ಇದ್ದು ಇದು ವಿವಾದಕ್ಕೆ ಕಾರಣವಾಗಿದೆ.

ಈ ಹಿಂದೆ ಪಠ್ಯ ಪರಿಷ್ಕರಣೆ ವೇಳೆ ಟಿಪ್ಪು ವಿಚಾರದಲ್ಲಿ ವಿವಾದ ಉಂಟಾಗಿತ್ತು. ಇದೀಗ ಕೆಲವು ದಿನಗಳಿಂದ ಸಾವರ್ಕರ್ ವಿಚಾರದಲ್ಲಿ ರಾಜಕೀಯವಾಗಿ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಪಠ್ಯ ಸೇರ್ಪಡೆಯೂ ಪುಸ್ತಕದ ಮತ್ತೊಂದು ದಂಗಲ್​ಗೆ ಕಾರಣವಾಗುವ ಸಾಧ್ಯತೆ ಇದೆ.

 8ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಯಡವಟ್ಟು
8ನೇ ತರಗತಿಯ ಕನ್ನಡ ವಿಷಯದಲ್ಲಿ ಕೆ.ಟಿ.ಗಟ್ಟಿ ರಚನೆಯ ‘ಕಾಲವನ್ನು ಗೆದ್ದವರು’ ಎಂಬ ಪಠ್ಯದಲ್ಲಿ ಸಾವರ್ಕರ್ ಪಠ್ಯ ಸೇರ್ಪಡೆಗೊಳಿಸಿರುವ ವಿಚಾರ ಮುನ್ನೆಲೆಗೆ ಬಂದಿದೆ. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ವೇಳೆ ಪಠ್ಯದಲ್ಲಿದ್ದ ಬ್ಲಡ್ ಗ್ರೂಪ್ ಪಠ್ಯವನ್ನು ತೆಗೆದು ಸಾವರ್ಕರ್ ಕುರಿತಾದ ಪಠ್ಯ ಸೇರ್ಪಡೆ ಮಾಡಿತ್ತು.

It was as if Savarkar had returned home from the Andaman jail sitting on a bird
ಪಠ್ಯ ಪುಸ್ತಕದಲ್ಲಿನ ಸಾಲುಗಳು


ಜೈಲಿನಿಂದ ಪಕ್ಷಿ ಮೇಲೆ ಬಂದಿದ್ದರಂತೆ ಸಾವರ್ಕರ್!
ಸಾವರ್ಕರ್ ಪಠ್ಯದಲ್ಲಿ ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ ಬಗ್ಗೆ ಹಾಗೂ ಅವರ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಉಲ್ಲೇಖಿಸಲಾಗಿದೆ. ಜೊತೆಗೆ ಪಕ್ಷಿ ಮೇಲೆ ಬಂದಿದ್ದರು ಅನ್ನೋ ವಿಚಾರ ಮುನ್ನೆಲೆಗೆ ಬಂದು ಪರ-ವಿರೋಧಗಳು ವ್ಯಕ್ತವಾಗಲು ಆರಂಭವಾಗಿದೆ.

ಇದನ್ನೂ ಓದಿ: ಗಣೇಶೋತ್ಸವ ಆಯೋಜಕರಿಗೆ ಪೊಲೀಸರ ಖಡಕ್ ಸೂಚನೆ; ಪ್ರಕಟಣೆಯಲ್ಲಿ ಏನಿದೆ?

ಪಠ್ಯದ ಪ್ಯಾರಾದಲ್ಲಿ ಏನು ಬರೆದಿದೆ?
‘ಕೋಣೆಯೊಳಗಿನ ಹಿಂಬದಿ ಗೋಡೆಯಲ್ಲಿ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ, ಕಿಂಡಿ ಕೂಡ ಇಲ್ಲದ ಆ ಕತ್ತಲ ಕೋಣೆಯಲ್ಲಿ ಸಾವರ್ಕರ್‌ ಅವರನ್ನು ಇಡಲಾಗಿತ್ತು. ಆದರೂ, ಎಲ್ಲಿಂದಲೊ ಬುಲ್‌ಬುಲ್‌ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್‌ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು’ ಎಂದು ಕೆ.ಟಿ.ಗಟ್ಟಿ ವರ್ಣಿಸಿದ್ದಾರೆ.

It was as if Savarkar had returned home from the Andaman jail sitting on a bird
8ನೇ ತರಗತಿಯ ಕನ್ನಡ ಪಾಠ ಪುಸ್ತಕ


ಮತ್ತೆ ವಿದ್ಯಾರ್ಥಿಗಳಿಗೆ ಗೊಂದಲ
ಟಿಪ್ಪು ಮತ್ತು ಸಾವರ್ಕರ್ ಭಾವಚಿತ್ರದಲ್ಲಿ ಉಂಟಾದ ವಿವಾದವು ಇಡೀ ರಾಜ್ಯಾದ್ಯಂತ ರಾಜಕೀಯ ಪ್ರೇರಿತ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. ಈ ಹಿಂದೆ ಟಿಪ್ಪು ಪಠ್ಯ ಕೈಬಿಟ್ಟ ಹಾಗೂ ಆರ್​ಎಸ್​ಎಸ್ ಮುಖ್ಯಸ್ಥರ ಪಠ್ಯ ಸೇರ್ಪಡೆ ವಿಚಾರದಲ್ಲಿ ವಿವಾದಗಳು ಏರ್ಪಟ್ಟು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದರು.

ಇದನ್ನೂ ಓದಿ: ಅಫ್ಘನ್ ಯುವತಿಯರು ವಿದೇಶಕ್ಕೆ ಹೋಗುವಂತಿಲ್ಲ! ತಾಲಿಬಾನ್ ಸರ್ಕಾರದ ಹೊಸ ರೂಲ್ಸ್

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಪಠ್ಯ ಪುಸ್ತಕದಲ್ಲಿ ಈ ರೀತಿಯ ಯಡವಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಕನ್ನಡಪರ ಸಂಘಟನೆಯವರು ಸೇರಿದಂತೆ ಹಲವರು ಆಕ್ರೋಶ ಹೊರಹಾಕ್ತಿದ್ದಾರೆ. ಇದು ಸತ್ಯವೇ? ಮಿಥ್ಯವೇ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯಿಂದ ಪಠ್ಯ ಸೇರ್ಪಡೆ
8ನೇ ತರಗತಿಯ ಕನ್ನಡ ಪುಸ್ತಕದಲ್ಲಿ ವಿಜಯಮಾಲಾ ರಂಗನಾಥ್‌ ಅವರ ‘ಬ್ಲಡ್‌ ಗ್ರೂಪ್‌’ ಗದ್ಯದ ಬದಲಿಗೆ ಲೇಖಕ ಕೆ.ಟಿ.ಗಟ್ಟಿ ಅವರ ಪ್ರವಾಸ ಕಥನವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯಕ್ಕೆ ಅಳವಡಿಸಿತ್ತು. 2017-18 ರಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯದಲ್ಲಿದ್ದ ವಿಜಯಮಾಲಾ ರಂಗನಾಥ್ ರಚಿತ ಬ್ಲಡ್ ಗ್ರೂಪ್ ಪಠ್ಯವನ್ನು ಕೈ ಬಿಟ್ಟು ಸಾವರ್ಕರ್ ವಿಚಾರವನ್ನು ಸೇರಿಸಲಾಗಿದೆ.

ಈ ಪ್ರವಾಸ ಕಥನದ ಒಂದು ಪ್ಯಾರಾದಲ್ಲಿ ಸಾವರ್ಕರ್‌ ಕುರಿತು ಈ ರೀತಿಯ ವಾಕ್ಯಗಳಿವೆ. ಲೇಖಕರಾದ ಕೆ.ಟಿ.ಗಟ್ಟಿಯವರು ಸಾವರ್ಕರ್ ಇದ್ದ ಅಂಡಮಾನ್ ಸೆಲ್ಯುಲಾರ್ ಕಾರಾಗೃಹಕ್ಕೆ ಭೇಟಿ ನೀಡಿದ ಸಮಯದ ತಮ್ಮ ಅನುಭವಗಳನ್ನು ಕಥನ ರೂಪದಲ್ಲಿ ಬರೆದಿದ್ದಾರೆ. ಒಟ್ಟಿನಲ್ಲಿ ಇದೀಗ ಸಾವರ್ಕರ್ ವಿಚಾರ ಮುನ್ನೆಲೆಗೆ ಬರುವ ಮೂಲಕ ಶಾಲಾ ವಿದ್ಯಾರ್ಥಿಗಳು ಮತ್ತೊಮ್ಮೆ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ.
Published by:Thara Kemmara
First published: