ಬೆಳಗಾವಿ ಸಾಹುಕಾರ್​ಗೆ ಐಟಿ ಶಾಕ್; ಬೇನಾಮಿ ಆಸ್ತಿ ಸುಳಿಯಲ್ಲಿ ರಮೇಶ್ ಜಾರಕಿಹೊಳಿ; 105 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಸೌಭಾಗ್ಯ ಶುಗರ್ಸ್ ಎಂಬ ಬೇನಾಮಿ ಸಂಸ್ಥೆಯ ಹೆಸರಲ್ಲಿ ಅಘೋಷಿತ ಹಣವನ್ನು ರಮೇಶ್ ಜಾರಕಿಹೊಳಿ ಹೂಡಿಕೆ ಮಾಡಿದ್ದಾರೆ. ಅವರ ಪತ್ನಿ, ಮಕ್ಕಳು ಮತ್ತು ಸಂಬಂಧಿಕರ ಹೆಸರಲ್ಲಿ ಹಣ ಮಾಡಲಾಗಿದೆ ಎಂಬುದು ಐಟಿ ತನಿಖೆಯಿಂದ ತಿಳಿದುಬಂದಿದೆ.

news18-kannada
Updated:October 31, 2019, 12:04 PM IST
ಬೆಳಗಾವಿ ಸಾಹುಕಾರ್​ಗೆ ಐಟಿ ಶಾಕ್; ಬೇನಾಮಿ ಆಸ್ತಿ ಸುಳಿಯಲ್ಲಿ ರಮೇಶ್ ಜಾರಕಿಹೊಳಿ; 105 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ರಮೇಶ್ ಜಾರಕಿಹೊಳಿ
  • Share this:
ಬೆಂಗಳೂರು(ಅ. 31): ಮೈತ್ರಿ ಸರ್ಕಾರ ಉರುಳಿಸಲು ಕಾರಣವಾಗಿದ್ದ ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ಆದಾಯ ತೆರಿಗೆ ಇಲಾಖೆ ಶಾಕ್ ಕೊಟ್ಟಿದೆ. ರಮೇಶ್ ಜಾರಕಿಹೊಳಿ ಅವರ ಕೋಟ್ಯಂತರ ಮೌಲ್ಯದ ಬೇನಾಮಿ ಆಸ್ತಿಯನ್ನು ಐಟಿ ಇಲಾಖೆ ಪತ್ತೆ ಹಚ್ಚಿದೆ. ಒಟ್ಟು 34 ಹೆಸರುಗಳಲ್ಲಿದ್ದ 105.61 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಮಾಹಿತಿ ನ್ಯೂಸ್18 ಕನ್ನಡಕ್ಕೆ ಲಭಿಸಿದೆ. ಬೇನಾಮಿ ಪ್ರಾಪರ್ಟಿ ಟ್ರಾನ್ಸಾಕ್ಷನ್ಸ್ ಅಡಿಯಲ್ಲಿ ಐಟಿ ಈ ಕ್ರಮ ಕೈಗೊಂಡಿದೆ.

ರಮೇಶ್ ಜಾರಕಿಹೊಳಿ ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ಸಂಬಂಧಿಕರ ಹೆಸರಲ್ಲಿ ಬೇನಾಮಿಯಾಗಿ ಆಸ್ತಿ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ಎಂಡಿಯಾಗಿರುವ ಸೌಭಾಗ್ಯ ಶುಗರ್ಸ್ ಸಂಸ್ಥೆಯಲ್ಲಿ 105 ಕೋಟಿ ರೂ ಹೂಡಿಕೆಯಾಗಿದೆ. ರಮೇಶ್ ಜಾರಕಿಹೊಳಿ ಸಂಬಂಧಿಕರ ಹೆಸರಲ್ಲಿ ಈ ಸಂಸ್ಥೆಯಲ್ಲಿ ಹೂಡಿಕೆಯಾಗಿದೆ. ಅವರ ಪತ್ನಿ ಜಯಶ್ರೀ ಹೆಸರಲ್ಲಿ 9 ಕೋಟಿ ರೂ ಹೂಡಿಕೆಯಾಗಿದೆ. ಐಟಿ ಅಧಿಕಾರಿಗಳ ವಿಚಾರಣೆ ವೇಳೆ ತಮಗೆ ಈ ವ್ಯವಹಾರದ ಬಗ್ಗೆ ಏನೂ ಗೊತ್ತಿಲ್ಲವೆಂದು ಜಯಶ್ರೀ ಹೇಳಿದ್ದಾರೆ. ಇನ್ನು, ರಮೇಶ್ ಜಾರಕಿಹೊಳಿ ಅವರ ಇಬ್ಬರು ಪುತ್ರರಾದ ಅಮರನಾಥ ಜಾರಕಿಹೊಳಿ ಮತ್ತು ಸಂತೋಷ್ ಜಾರಕಿಹೊಳಿ ಹೆಸರಲ್ಲಿ ತಲಾ ಏಳೂವರೆ ಕೋಟಿ ರೂ ಹೂಡಿಕೆಯಾಗಿದೆ. ಇಬ್ಬರಿಗೂ ಕೂಡ ಈ ಹೂಡಿಕೆ ಬಗ್ಗೆ ಏನೂ ತಿಳಿದಿಲ್ಲವೆನ್ನಲಾಗಿದೆ.

ಇದನ್ನೂ ಓದಿ: ವಿದ್ಯಾವಂತರು ಕೃಷಿಯತ್ತ ಮುಖ ಮಾಡಬೇಕಿದೆ; ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಸಲಹೆ

ಸೌಭಾಗ್ಯ ಶುಗರ್ಸ್ ಕಂಪನಿಯಲ್ಲಿ ರಮೇಶ್ ಜಾರಕಿಹೊಳಿ ಅವರ ಬಾಮೈದ ಶಂಕರ್ ಪಾವಡೆ, ಸಂಬಂಧಿ ವಸಂತ್ ಪಾಟೀಲ್ ಅವರ ಹೆಸರಲ್ಲೂ 7 ಕೋಟಿಗೂ ಹೆಚ್ಚು ಹೂಡಿಕೆಯಾಗಿದೆ. ಹತ್ತು ಸಹಕಾರ ಸಂಘಗಳಿಂದಲೂ ಹೂಡಿಕೆಯಾಗಿದೆ. ಐಟಿ ತನಿಖೆ ವೇಳೆ ಈ 10 ಸಹಕಾರ ಸಂಘಗಳ ಪೈಕಿ ಎಂಟು ಅಸ್ತಿತ್ವದಲ್ಲೇ ಇಲ್ಲ. ಇನ್ನೂ ಶಾಕಿಂಗ್ ಎಂದರೆ, ಎಲ್ಲರ ಹೂಡಿಕೆಯ ಕೇಂದ್ರಬಿಂದುವಾದ ಸೌಭಾಗ್ಯ ಶುಗರ್ಸ್ ಸಂಸ್ಥೆ ವಾಸ್ತವದಲ್ಲಿ ಬೇನಾಮಿ ಎಂಬುದು ಐಟಿ ತನಿಖೆಯಿಂದ ತಿಳಿದುಬಂದಿದೆ.

(ವರದಿ: ಮುನಿರಾಜು ಹೊಸಕೋಟೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ