ಕಲಬುರಗಿ: ಮಾಜಿ ಸಚಿವ, ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ (Priyank Kharge) ಬೆಂಬಲಿಗ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚವ್ಹಾಣ್ ಎಂಬವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅರವಿಂದ್ ಚವ್ಹಾಣ್ (Aravind Chavan) ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಶನಿವಾರ ಸಾಯಂಕಾಲ ಮನೆ, ಹೋಟೆಲ್, ಸ್ಟೋನ್ ಕ್ರಷರ್ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ರಾತ್ರಿ ಹನ್ನೊಂದು ಗಂಟೆವರೆಗೆ ಪರಿಶೀಲನೆ ನಡೆಸಲಾಗಿದೆ. ಅರವಿಂದ್ ಅವರ ಮನೆಯಲ್ಲಿ ಸಿಕ್ಕ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳು ತೆರಳಿದ್ದಾರೆ. ಇನ್ನು ಅರವಿಂದ್ ಅವರ ನಿವಾಸದಲ್ಲಿ ಏನು ಸಿಕ್ಕಿದೆ ಎಂಬುದರ ಮಾಹಿತಿ ಲಭ್ಯವಾಗಿದೆ.
ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ
ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಪ್ರಿಯಾಂಕ್ ಖರ್ಗೆ, ಕಲಬುರಗಿ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಬಿಜೆಪಿ ಸೋಲುತ್ತಿದೆ. ಜಗಳ ಹಚ್ಚಿ, ವೈಯಕ್ತಿಕ ನಿಂದನೆ ಮಾಡಿಕೊಂಡು ಬಿಜೆಪಿ ಬರುತ್ತಿದೆ ಎಂದು ಹೇಳಿದರು.
ಸೋಲ್ತಿವಿ ಅಂತಾ ಗೊತ್ತಾದ್ರೆ ಹೆದರಿಸೋದು, ಬೆದರಿಸೋದು ಮಾಡ್ತಾರೆ. ಸೋಲುತ್ತಿರುವ ಬಿಜೆಪಿ ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಎರಡೇ ವಾರದಲ್ಲಿ ಅಕ್ರಮ ಆಸ್ತಿ ಮಾಡಿದ್ರಾ?
ಅರವಿಂದ್ ಚವ್ಹಾಣ್ ಅವರ ಮನೆ, ಹೊಟೇಲ್, ಕ್ರಷರ್ ಮೇಲೆ ಐಡ ರೇಡ್ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ನೋಡಿದ್ರೆ ವಿರೋಧ ಪಕ್ಷದವರು ಬಿಜೆಪಿ ಪಕ್ಷ ಸೇರಿದ್ರೆ ವೈಟ್ ವಾಷ್ ಆಗ್ತಾರೆ. ಆದ್ರೆ ವಿರೋಧ ಪಕ್ಷದಲ್ಲಿದ್ದಾಗ ಟಾರ್ಗೆಟ್ ಮಾಡ್ತಾರೆ. ಅರವಿಂದ್ ಚವ್ಹಾಣ್ ಅವರು ಬಿಜೆಪಿ ಬಿಟ್ಟು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಂದು ಎರಡು ವಾರ ಆಯ್ತು. ಎರಡೇ ವಾರದಲ್ಲಿ ಅರವಿಂದ್ ಚವ್ಹಾಣ್ ಅಕ್ರಮ ಮಾಡಿ ಆಸ್ತಿಗಳಿಸಿದ್ರಾ ಎಂದು ಪ್ರಶ್ನೆ ಮಾಡಿದರು.
ಈ ರೀತಿ ಏನೇ ನೀವು ಮಾಡಿದ್ರು ನಾವು ಹೆದರಲ್ಲ. ನೀವು ಇಷ್ಟೇ ಪ್ರಾಮಾಣಿಕರಿದ್ರೆ, ಕೆಕೆಆರ್ಡಿಬಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತಾ ನಿಮ್ಮ ಸರ್ಕಾರವೇ ವರದಿ ರೆಡಿ ಮಾಡಿದೆ. ಆದರೂ ಕೆಕೆಆರ್ಡಿಬಿ ಅಧ್ಯಕ್ಷರ ಅವರ ಮನೆ ಮೇಲೆ ಯಾಕೆ ರೇಡ್ ಮಾಡಿಲ್ಲ ಎಂದು ಕೇಳಿದರು.
ಇದನ್ನೂ ಓದಿ: DK Shivakumar: ಚುನಾವಣಾ ಅಖಾಡದಲ್ಲಿ ಡಿಕೆ ಶಿವಕುಮಾರ್ ಪುತ್ರ; ತಂದೆಯ ಪರ ಆಕಾಶ್ ಭರ್ಜರಿ ಪ್ರಚಾರ
ಹಾವೇರಿಯಲ್ಲೂ ಐಟಿ ದಾಳಿ
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ನೆಹರು ನಗರದಲ್ಲಿರುವ ಕಾಂಗ್ರೆಸ್ ಮುಖಂಡ, ಮಾಜಿ ಎಪಿಎಂಸಿ ಅಧ್ಯಕ್ಷ ಚನ್ನಬಸಪ್ಪ ಹುಲ್ಲತ್ತಿ ಎಂಬವರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಇಂದು ಬೆಳಗ್ಗೆ ಸುಮಾರು 5.30ರ ವೇಳೆಗೆ ದಾಳಿ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ