ಐಟಿ ದಾಳಿ ರಾಜಕೀಯ ಅಲ್ಲ,100 ಕೋಟಿ ರೂ.ಅವ್ಯವಹಾರ ನಡೆದಿದ್ದರೆ ಆನಂದ್​ ಉತ್ತರ ಕೊಡುತ್ತಾರೆ; ಜಿ.ಪರಮೇಶ್ವರ್

3500 ಕೋಟಿ ಕಿಕ್​ಬ್ಯಾಕ್​ ತೆಗೆದುಕೊಂಡಿದ್ದೇನೆ ಅಂತ ಸುದ್ದಿ ಆಗಿದೆ. ಇಂಥಾ ಸುದ್ದಿ ಬಂದ್ರೆ ನಾವು ಹೇಗೆ ಬದುಕೋದು ಹೇಳಿ?-ಪರಮೇಶ್ವರ್​

Latha CG | news18-kannada
Updated:October 12, 2019, 10:00 AM IST
ಐಟಿ ದಾಳಿ ರಾಜಕೀಯ ಅಲ್ಲ,100 ಕೋಟಿ ರೂ.ಅವ್ಯವಹಾರ ನಡೆದಿದ್ದರೆ ಆನಂದ್​ ಉತ್ತರ ಕೊಡುತ್ತಾರೆ; ಜಿ.ಪರಮೇಶ್ವರ್
ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್
  • Share this:
ಬೆಂಗಳೂರು(ಅ.12): ಮಾಜಿ ಡಿಸಿಎಂ ಜಿ.ಪರಮೇಶ್ವರ್​ ಮನೆಯಲ್ಲಿ ಇಂದು ಐಟಿ ದಾಳಿ ಅಂತ್ಯವಾಗಿದೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಪರಮೇಶ್ವರ್​ಗೆ ​ ಐಟಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.  50 ಗಂಟೆಗಳ ಬಳಿಕ ಪರಮೇಶ್ವರ್​ ಪ್ರತ್ಯಕ್ಷವಾಗಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಅಕ್ರಮ ಹಣ ಮಾಡಿಲ್ಲ, ಐಟಿ ದಾಳಿ ರಾಜಕೀಯ ಅಲ್ಲ. 100 ಕೋಟಿ ರೂ. ಅವ್ಯವಹಾರ ನಡೆದಿದ್ದರೆ ನನ್ನ ಸಹೋದರನ ಮಗ ಆನಂದ್​ ಉತ್ತರ ಕೊಡುತ್ತಾರೆ. ಮಂಗಳವಾರ ವಿಚಾರಣೆಗೆ ಹೋಗುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಐಟಿ ಅಧಿಕಾರಿಗಳು ನನ್ನನ್ನ ಪ್ರಶ್ನೆ ಮಾಡಿದರು. ಅವರು ಕೇಳಿದ್ದಕ್ಕೆಲ್ಲಾ ಸಮರ್ಪಕ ಉತ್ತರ ಕೊಟ್ಟಿದ್ದೇನೆ. ಮುಖ್ಯವಾಗಿ ಸಿದ್ಧಾರ್ಥ ಮೆಡಿಕಲ್​ ಕಾಲೇಜು ಬಗ್ಗೆ ಪ್ರಶ್ನೆ ಮಾಡಿದರು. ನೀಟ್​ ಅಲಾಟ್​ಮೆಂಟ್​ನಲ್ಲಿ ಸೀಟು ಹಂಚಿಕೆ ಬಗ್ಗೆ ಕೇಳಿದರು. 30 ವರ್ಷದಿಂದ ಸಂಸ್ಥೆಯಲ್ಲಿ ಇದ್ದೆ. ಆದರೆ ಅಣ್ಣ ನೋಡಿಕೊಳ್ಳುತ್ತಿದ್ದರು. 6ರಿಂದ 7 ತಿಂಗಳಿನಿಂದ ನನ್ನ ಅಣ್ಣನ ಮಗ ನೋಡಿಕೊಳ್ತಿದ್ದಾನೆ. ಅಣ್ಣನ ಮಗ, ಪ್ರಾಂಶುಪಾಲರು ಎಲ್ಲವನ್ನೂ ನೋಡಿಕೊಳ್ತಿದ್ದಾರೆ.

ಇತ್ತೀಚೆಗೆ ನಾನು ಜವಾಬ್ದಾರಿ ತೆಗೆದುಕೊಂಡಿದ್ದೇನೆ ಅಂತ ಹೇಳಿದ್ದೇನೆ ಎಂದರು.

ಜಿ.ಪರಮೇಶ್ವರ್ ಮನೆ ಮೇಲಿನ ಐಟಿ ದಾಳಿ ಅಂತ್ಯ; 2 ದಿನ ಬಿಟ್ಟು ವಿಚಾರಣೆಗೆ ಹಾಜರಾಗಲು ಸೂಚನೆ

3500 ಕೋಟಿ ಕಿಕ್​ಬ್ಯಾಕ್​ ತೆಗೆದುಕೊಂಡಿದ್ದೇನೆ ಅಂತ ಸುದ್ದಿ ಆಗಿದೆ. ಇಂಥಾ ಸುದ್ದಿ ಬಂದ್ರೆ ನಾವು ಹೇಗೆ ಬದುಕೋದು ಹೇಳಿ? ಐಟಿ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. 100 ಕೋಟಿ ಹಣದ ಬಗ್ಗೆ ಪರಿಶೀಲನೆ ನಡೆಸಲಿ. 8.82 ಕೋಟಿ ಲೆಕ್ಕಕ್ಕೆ ಸಿಗದ ಆಸ್ತಿ, ಹಣದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮೇಲಿನ ಐಟಿ ದಾಳಿಗೆ ರಾಜಕೀಯ ಬಣ್ಣ ಬಳಿಯಲ್ಲ ಎಂದು ಹೇಳಿದರು.

ರಾಜಸ್ಥಾನ ಮೂಲದ ವಿದ್ಯಾರ್ಥಿಗಳು ದೂರು ಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಅಕ್ರಮ ನಡೆದಿಲ್ಲ, ನಡೆದಿದ್ರೆ ಆನಂದ್​ ಉತ್ತರಿಸ್ತಾರೆ. ನನ್ನ ಬಳಿ ಪಂಚನಾಮೆ ಬರೆಸಿಕೊಂಡಿದ್ದಾರೆ, ಹಣದ ಬಗ್ಗೆ ಲೆಕ್ಕ ಕೊಡ್ತೀವಿ. ಮಂಗಳವಾರ ಐಟಿ ವಿಚಾರಣೆಗೆ ಕರೆದಿದ್ದಾರೆ ಹೋಗ್ತೀನಿ.  ನನ್ನ ಕಾರ್ಯಕರ್ತರು, ಬೆಂಬಲಿಗರು ತಾಳ್ಮೆಯಿಂದ ಇರಬೇಕು. ಇವತ್ತು ಬೆಳಗ್ಗೆ ಸಿದ್ಧಾರ್ಥ ಕಾಲೇಜಿಗೆ ಹೋಗ್ತೀನಿ, ಅಲ್ಲೂ ವಿಚಾರಣೆ ಇದೆ ಎಂದರು.ಮಂಗಳವಾರ ವಿಚಾರಣೆಗೆ ಬರುವಂತೆ ಐಟಿ ಅಧಿಕಾರಿಗಳು ನೋಟಿಸ್ ಪರಮೇಶ್ವರ್​ಗೆ ಸೂಚನೆ ನೀಡಿದ್ದಾರೆ.  ಇಂದು ಸಿದ್ದಾರ್ಥ ಕಾಲೇಜಿನಲ್ಲಿ ಮತ್ತೆ ಪರಮೇಶ್ವರ್ ವಿಚಾರಣೆ ನಡೆಯಲಿದೆ. ಹೀಗಾಗಿ ಬೆಳಗ್ಗೆ 11 ಗಂಟೆಗೆ ತುಮಕೂರು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಬರುವಂತೆ ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಐಟಿ ಅಧಿಕಾರಿಗಳು ಇನ್ನೂ ಸಿದ್ದಾರ್ಥ ಕಾಲೇಜಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading