• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • IT Raid ವೇಳೆ ಮರದಲ್ಲಿ ನೇತಾಡುತ್ತಿತ್ತು ₹1 ಕೋಟಿ ಕ್ಯಾಶ್! ಕಾಂಗ್ರೆಸ್ ಅಭ್ಯರ್ಥಿ ಸಹೋದರನಿಗೆ ಶಾಕ್

IT Raid ವೇಳೆ ಮರದಲ್ಲಿ ನೇತಾಡುತ್ತಿತ್ತು ₹1 ಕೋಟಿ ಕ್ಯಾಶ್! ಕಾಂಗ್ರೆಸ್ ಅಭ್ಯರ್ಥಿ ಸಹೋದರನಿಗೆ ಶಾಕ್

ಮರದ ಮೇಲೆ ನೇತುಹಾಕಿದ್ದ 1 ಕೋಟಿ ಹಣ!

ಮರದ ಮೇಲೆ ನೇತುಹಾಕಿದ್ದ 1 ಕೋಟಿ ಹಣ!

ಐಟಿ ದಾಳಿ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ಸಹೋದರನ ಮನೆ ಮುಂದಿನ ಮರದ ಮೇಲೆ ನೇತು ಹಾಕಲಾಗಿದ್ದ 1 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಮೈಸೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ (Karnataka state assembly elections) ಹತ್ತಿರ ಬರುತ್ತಿದ್ದಂತೆ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ (Puttur assembly constituency) ಅಶೋಕ್ ರೈ (Ashok Rai) ಅವರ ಸಹೋದರನ ಮನೆ ಮೇಲೂ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಶೋಕ್ ರೈ ಸಹೋದರ ಕೆ. ಸುಬ್ರಹ್ಮಣ್ಯ ರೈ (K. Subrahmanya Rai) ಅವರ ಮೈಸೂರಿನ (Mysore) ನಿವಾಸದಲ್ಲಿ ಐಟಿ ದಾಳಿ ನಡೆದಿದೆ. ಈ ವೇಳೆ ಮನೆ ಮುಂದಿನ ಮರದ ಮೇಲೆ ನೇತು ಹಾಕಲಾಗಿದ್ದ 1 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಪುತ್ತೂರು ಕೈ ಅಭ್ಯರ್ಥಿ ಸಹೋದರನಿಗೆ ಐಟಿ ಬಿಸಿ


ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರ ಸಹೋದರ ಸುಬ್ರಹ್ಮಣ್ಯ ರೈ ಎನ್ನಲಾಗಿದೆ. ಇವರ ಮೈಸೂರಿನಲ್ಲಿರುವ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರೇಡ್ ಮಾಡಿದ್ದಾರೆ ಎನ್ನಲಾಗಿದೆ.


ಮರದಲ್ಲಿ ನೇತು ಹಾಕಿದ್ದ1 ಕೋಟಿ ರೂಪಾಯಿ ವಶಕ್ಕೆ


ಐಟಿ ಅಧಿಕಾರಿಗಳು ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆಗೆ ದಾಳಿ ನಡೆಸಿ, ಅವರ ಮನೆಯಲ್ಲಿ ಶೋಧಕಾರ್ಯ ನಡೆಸಿದೆ. ಈ ವೇಳೆ ಅವರ ಮನೆಯಂಗಳದಲ್ಲಿದ್ದ ಗಿಡದಲ್ಲಿ ಬ್ಯಾಗ್ ಒಂದು ನೇತು ಹಾಕಲಾಗಿತ್ತು. ಅದನ್ನು ತೆಗೆದು ಪರಿಶೀಲಿಸಿದ ಅಧಿಕಾರಿಗಳು ಶಾಕ್ ಆಗಿದ್ದಾರೆ. ಯಾಕೆಂದರೆ ಅದರಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣ ಇತ್ತು. ಬಳಿಕ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು ಕ್ಯಾಶ್ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವಿಜಯವಾಣಿ ವೆಬ್ ವರದಿ ಮಾಡಿದೆ.


ಇದನ್ನೂ ಓದಿ: Bajrang Dal: ಬಜರಂಗದಳ ನಿಷೇಧ ಪ್ರಸ್ತಾಪಿಸಿದ್ದ 'ಕೈ' ವಿರುದ್ಧ ಕಿಡಿಕಿಡಿ! ಬಿಜೆಪಿ-ಹಿಂದೂ ನಾಯಕರಿಂದ 'ನಾನೂ ಬಜರಂಗಿ' ಅಭಿಯಾನ


ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ವೈರಲ್


ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮರದಲ್ಲಿ ನೇತು ಹಾಕಿದ್ದ ಹಣವನ್ನು ವಶಪಡಿಸಿಕೊಂಡಿರುವ ಫೋಟೋಗಳು ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಐಟಿ ದಾಳಿಗೆ ಒಳಗಾಗಿರುವ ಸುಬ್ರಹ್ಮಣ್ಯ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಸಹೋದರ ಎಂದು ಹೇಳಲಾಗುತ್ತಿದೆ.


ಅಶೋಕ್ ರೈ ಯಾರು?


ಅಶೋಕ್ ರೈ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ ಅಶೋಕ್ ಕುಮಾರ್ ರೈ, ಬಳಿಕ ಅಲ್ಲಿಂದ ಕಾಂಗ್ರೆಸ್ ಸೇರಿದ್ದರು. ಬಳಿಕ ಕಾಂಗ್ರೆಸ್‌ನಿಂದ ಈ ಬಾರಿ ಟಿಕೆಟ್ ಪಡೆದು, ಈ ಬಾರಿ ಸ್ಪರ್ಧಿಸುತ್ತಿದ್ದಾರೆ.

First published: