ಕೇಂದ್ರ ಸಚಿವ ಅನಂತ ಕುಮಾರ್​ ಹೆಗಡೆ ಆಪ್ತನ ಮನೆ ಮೇಲೆ ಐಟಿ ದಾಳಿ

ಕೇಂದ್ರ ಸಚಿವ ಅನಂತ ಕುಮಾರ್​ ಹೆಗಡೆ ಆಪ್ತ ಕೃಷ್ಣ ಎಸಳೆ ಎಂಬುವವರ ಮನೆ ಮೇಲೆ ಈ ದಾಳಿ ಮಾಡಲಾಗಿದೆ. ಶಿರಸಿಯ ವಿವೇಕಾನಂದ ನಗರದಲ್ಲಿರುವ ಕೃಷ್ಣ ಎಸಳೆ ಎಂಬುವವರ ಮನೆ ಮೇಲೆ ದಾಳಿ ನಡೆಸಿದ ಗೋವಾ-ಹುಬ್ಬಳ್ಳಿ ಆದಾಯ ತೆರಿಗೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

Seema.R | news18
Updated:April 16, 2019, 3:49 PM IST
ಕೇಂದ್ರ ಸಚಿವ ಅನಂತ ಕುಮಾರ್​ ಹೆಗಡೆ ಆಪ್ತನ ಮನೆ ಮೇಲೆ ಐಟಿ ದಾಳಿ
ಅನಂತಕುಮಾರ್​ ಹೆಗಡೆ
Seema.R | news18
Updated: April 16, 2019, 3:49 PM IST
ಕಾರವಾರ (ಏ.16): ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಹಾಸನ ಹಾಗೂ ಮಂಡ್ಯ ಸೇರಿ ಹಲವೆಡೆ ಕಾಂಗ್ರೆಸ್​-ಜೆಡಿಎಸ್​ ಮುಖಂಡರು ಮತ್ತು ಅವರ ಆಪ್ತರ ಮನೆ ಮೇಲೆ ದಾಳಿ ನಡೆಸುತ್ತಿದ್ದ ಆದಾಯ ತೆರಿಗೆ ಇಲಾಖೆ ಇಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಆಪ್ತರ ಮನೆ ಮೇಲೆ ದಾಳಿ ನಡೆಸುವ ಮೂಲಕ ಶಾಕ್ ನೀಡಿದೆ.

ಕಳೆದೊಂದು ವಾರದಿಂದ ದೇವೇಗೌಡ ಕುಟುಂಬದ ಆಪ್ತರ ಮೇಲೆ ಹಾಸನದಲ್ಲಿ ನಿರಂತರವಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ. ಇಂದು ಕೂಡ  ದೇವೇಗೌಡರ ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕನ ಆತ್ಮೀಯನ ಮನೆ ಮೇಲೂ ಐಟಿ ದಾಳಿ ನಡೆಸಿದೆ.

ಕೇಂದ್ರ ಸಚಿವ ಅನಂತ ಕುಮಾರ್​ ಹೆಗಡೆ ಆಪ್ತ ಕೃಷ್ಣ ಎಸಳೆ ಎಂಬುವವರ ಮನೆ ಮೇಲೆ ಈ ದಾಳಿ ಮಾಡಲಾಗಿದೆ. ಶಿರಸಿಯ ವಿವೇಕಾನಂದ ನಗರದಲ್ಲಿರುವ ಕೃಷ್ಣ ಎಸಳೆ ಎಂಬುವವರ ಮನೆ ಮೇಲೆ ದಾಳಿ ನಡೆಸಿದ ಗೋವಾ-ಹುಬ್ಬಳ್ಳಿ ಆದಾಯ ತೆರಿಗೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಅನಂತ ಕುಮಾರ್​ ರಾಜಕೀಯ ಜೀವನಕ್ಕೆ ಬಂದಾಗಿನಿಂದ ಅವರ ಜೊತೆಯಾಗಿದ್ದವರು ಈ ಕೃಷ್ಣ. ಅನಂತ ಕುಮಾರ್​​ ಬೆಂಬಲವಾಗಿ ನಿಂತಿದ್ದ ನಾಯಕರ ಮೇಲೆ ದಾಳಿ ನಡೆಸುವ ಮೂಲಕ ಐಟಿ ಇಲಾಖೆ ಶಾಕ್​ ನೀಡಿದೆ. ಇದೇ ಸಂದರ್ಭದಲ್ಲಿ ಶಿರಸಿ ಗ್ರಾಮೀಣ ಘಟಕದ ಸದಸ್ಯ ಆರ್​ ವಿ ಹೆಗಡೆ ಮನೆ ಮೇಲೆಯೂ ದಾಳಿ ನಡೆಸಲಾಗಿದೆ.

ಇದನ್ನು ಓದಿ: ಸಿಎಂ ಕುಮಾರಸ್ವಾಮಿಯನ್ನು ಬೆಂಬಿಡದ ಐಟಿ ಭೂತ; ಮಂಗಳವಾರ ಬೆಳಗ್ಗೆಯೇ ಹಾಸನದ 5 ಕಡೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು

ಕಳೆದೊಂದು ವಾರದಿಂದ ಹಾಸನ ಮಂಡ್ಯದಲ್ಲಿ ಸರಣಿ ದಾಳಿ ನಡೆಸುವ ಮೂಲಕ ಜೆಡಿಎಸ್​ ಕಾಂಗ್ರೆಸ್​ನ್ನು ಗುರಿಯಾಗಿಸಿಕೊಂಡು ಐಟಿ ಇಲಾಖೆ ದಾಳಿ ನಡೆಸುತ್ತಿದೆ. ಈ ದಾಳಿಗಳು ರಾಜಕೀಯ ಪ್ರೇರಿತ ದಾಳಿಯಾಗಿದೆ. ಕೇಂದ್ರ ಸರ್ಕಾರ ನಮ್ಮನ್ನು ಹೆದರಿಸಲು ಈ ದಾಳಿಗೆ ಮುಂದಾಗಿವೆ. ಯಾಕೆ ಬಿಜೆಪಿ ನಾಯಕರ ಮನೆಯಲ್ಲಿ ಈ ದಾಳಿಗಳು ನಡೆಯುತ್ತಿಲ್ಲ ಎಂದು ಕುಮಾರಸ್ವಾಮಿ  ಸೇರಿದಂತೆ ಹಲವು ಮೈತ್ರಿ ನಾಯಕರು ಆರೋಪಿಸಿದ್ದರು. ಈಗ ಬಿಜೆಪಿ ಆಪ್ತನ ಮನೆ ಮೇಲೂ ಐಟಿ ದಾಳಿ ನಡೆಸಿದ್ದಾರೆ.
Loading...

First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...