ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ಗೆ (Congress) ಬೆಂಬಲ ನೀಡಿದ್ದ ಇಬ್ಬರು ಬಿಜೆಪಿ ಮುಖಂಡರ (BJP Leaders) ಮನೆ ಮತ್ತು ಕಚೇರಿಗಳ ಮೇಳೆ ಆದಾಯ ತೆರಿಗೆ ಇಲಾಖೆ ದಾಳಿ (IT Raid) ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ (Bommasandra) ಪುರಸಭೆ ಸದಸ್ಯರಾಗಿರುವ ಸಹೋದರರಾದ ಛಲಪತಿ ಮತ್ತು ಪ್ರಸಾದ್ ಮನೆ ಮೇಲೆ ದಾಳಿ ನಡೆದಿದೆ. ಛಲಪತಿ ಮತ್ತು ಪ್ರಸಾದ್ ಇಬ್ಬರು ಅವಳಿ ಸೋದರರಾಗಿದ್ದು, ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಾಗಿದ್ದರು. ಆದ್ರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದಾರೆ.
ಪುರಸಭೆ ಸದಸ್ಯರ ಜೊತೆಯಲ್ಲಿ ಪ್ರಸಾದ್ ಬೊಮ್ಮಸಂದ್ರ ಕೈಗಾರಿಕೆಗಳ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದು, ಸೋದರರಿಬ್ಬರು ಕೈಗಾರಿಕೋದ್ಯಮಿಗಳಾಗಿದ್ದಾರೆ.
ಎಂಟು ಜನ ಅಧಿಕಾರಿಗಳಿಂದ ದಾಳಿ
ಇಂದು ಬೆಳಗ್ಗೆ ಮೂರು ಕಾರ್ಗಳಲ್ಲಿ ಬಂದ ಎಂಟು ಜನ ಅಧಿಕಾರಿಗಳು ಕೈಗಾರಿಕಾ ಕಛೇರಿಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಛಲಪತಿ ಮನೆಯಲ್ಲಿ ಎರಡೂವರೆ ಲಕ್ಷ ನಗದು ಪತ್ತೆಯಾಗಿದೆ. ಇನ್ನು ಪ್ರಸಾದ್ ಅವರ ನಿವಾಸಲ್ಲಿ 5000 ರೂಪಾಯಿ ಸಿಕ್ಕಿದ್ದು, ಅಧಿಕಾರಿಗಳು ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. ಮನೆಯಿಂದ ಹೊರಬಂದ ಪ್ರಸಾದ್ ಅಭಿಮಾನಿಗಳತ್ತ ಕೈಬೀಸಿ, ಧೈರ್ಯವಾಗಿರಿ ಎಂದು ಹೇಳಿದರು.
ಇದನ್ನೂ ಓದಿ: Election Campaign: ಬಿಜೆಪಿ ಶಾಸಕರಿಗೆ ಗ್ರಾಮ ಪ್ರವೇಶಿಸಲು ಬಿಡದ ಜನರು; ಗ್ರಾಮಸ್ಥರಿಂದ ಕ್ಲಾಸ್!
ಕಾಂಗ್ರೆಸ್ ಗೆಲುವು ಖಚಿತ ಎಂದ ಅಭಿಮಾನಿಗಳು
ಬಿಜೆಪಿ ನಾಯಕರ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದನ್ನು ಸಹಿಸದೇ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಸೇಡಿನ ರಾಜಕಾರಣಕ್ಕೆ ನಾವು ಹೆದರುವುದಿಲ್ಲ. ಐಟಿ, ಇಡಿ ದಾಳಿಗೆ ನಾವು ಬಗ್ಗುವುದಿಲ್ಲ. ಬಿಜೆಪಿಯವರು ಯಾವುದೇ ಅಸ್ತ್ರ ಪ್ರಯೋಗಿಸಿದರೂ ನಮ್ಮ ಮುಂದೆ ಯಾವುದೂ ನಡೆಯವುದಿಲ್ಲ. ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ಛಲಪತಿ ಹಾಗೂ ಪ್ರಸಾದ್ ಅಭಿಮಾನಿಗಳು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ