ನಟ ದರ್ಶನ್​ ಫಾರ್ಮ್​ಹೌಸ್​ ಮೇಲೆ ಐಟಿ ದಾಳಿ; ಚುನಾವಣಾಧಿಕಾರಿಗಳ ದಾಳಿ ಎಂದ ಡಿ ಬಾಸ್​

ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ದರ್ಶನ್​, ಇದು ಐಟಿ ದಾಳಿಯಲ್ಲ, ಚುನಾವಣಾಧಿಕಾರಿಗಳ ದಾಳಿ. ದುಡ್ಡು ಹಂಚಲಾಗುತ್ತಿತ್ತು ಎಂದು ಯಾರೋ ಸುಳ್ಳು ಸುದ್ದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ಕೈದು ಜನ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೆ. ಫಾರ್ಮ್​ ಹೌಸ್​ನಲ್ಲಿ ಏನು ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.

Seema.R | news18
Updated:April 15, 2019, 5:59 PM IST
ನಟ ದರ್ಶನ್​ ಫಾರ್ಮ್​ಹೌಸ್​ ಮೇಲೆ ಐಟಿ ದಾಳಿ; ಚುನಾವಣಾಧಿಕಾರಿಗಳ ದಾಳಿ ಎಂದ ಡಿ ಬಾಸ್​
ದರ್ಶನ್​
  • News18
  • Last Updated: April 15, 2019, 5:59 PM IST
  • Share this:
ಮೈಸೂರು (ಏ.15): ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ನಟ ದರ್ಶನ್​ ಫಾರ್ಮ್​ ಹೌಸ್​ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇತ್ತ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರದಲ್ಲಿ ನಟ ದರ್ಶನ್​ ಬ್ಯಸಿಯಾಗಿದ್ದರೆ, ಅತ್ತ ಟಿ.ನರಸೀಪುರದಲ್ಲಿರುವ ದರ್ಶನ್​ ಪಾರ್ಮ್​ಹೌಸ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅಲ್ಲಿ ಪರಿಶೀಲನೆ ನಡೆಸಿ ತೆರಳಿದ್ದಾರೆ. ಯಾವ ಕಾರಣಕ್ಕೆ ಈ ಶೋಧ ಮಾಡಿದ್ದಾರೆ, ಎಷ್ಟು ಜನ ಅಧಿಕಾರಿಗಳಿದ್ದರು, ಅಲ್ಲಿ ಯಾವ ಮಾಹಿತಿ ಲಭ್ಯವಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇನ್ನು ಈ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ದರ್ಶನ್​, ಇದು ಐಟಿ ದಾಳಿಯಲ್ಲ, ಚುನಾವಣಾಧಿಕಾರಿಗಳ ದಾಳಿ. ದುಡ್ಡು ಹಂಚಲಾಗುತ್ತಿತ್ತು ಎಂದು ಯಾರೋ ಸುಳ್ಳು ಸುದ್ದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ಕೈದು ಜನ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೆ. ಫಾರ್ಮ್​ ಹೌಸ್​ನಲ್ಲಿ ಏನು ಸಿಗುತ್ತದೆ. ಅಲ್ಲಿ ಸಿಗುವುದು ಬೂಸಾ ಹಿಂಡಿ ಅಷ್ಟೇ, ಅಲ್ಲಿ ಪ್ರಾಣಿ ಪಕ್ಷಿಗಳನ್ನು ನೋಡಿಕೊಂಡು ಹೋಗಲಿ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರಚಾರದ ವೇಳೆ ತಿಳಿಸಿದ್ದಾರೆ.

ದರ್ಶನ್​ ಫಾರ್ಮ್​ಹೌಸ್​ ಮೇಲೆ ನಡೆಸಿದ ದಾಳಿ ದುರುದ್ದೇಶಪೂರ್ವಕವಾಗಿ ನಡೆಸಿಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಕೆಲವು ದಿನಗಳ ಹಿಂದೆ ಕೆ.ಆರ್​ ಪೇಟೆ ಶಾಸಕ ನಾರಾಯಣಗೌಡ, ಸಿನಿಮಾದವರು ಗೌರವದಿಂದ ಮನೆಯಲ್ಲಿರಬೇಕು. ಅದನ್ನು ಬಿಟ್ಟು ದೇವೇಗೌಡರು, ಕುಮಾರಸ್ವಾಮಿ ಅವರ ಬಗ್ಗೆ ಟೀಕೆ ಮಾಡಿದರೆ ನಿಮ್ಮ ಆಸ್ತಿ, ಅಂತಸ್ತು ಏನು ಮಾಡಿದ್ದೀರಾ ಎಂಬುದು ತಿಳಿದಿದೆ. ರಾಜ್ಯದಲ್ಲಿ ನಮ್ಮ ಸರ್ಕಾರವೇ ಇದ್ದು ಎಲ್ಲವನ್ನೂ ತನಿಖೆ ಮಾಡಿಸಬೇಕಾಗುತ್ತದೆ  ಎಂದು ಎಚ್ಚರಿಕೆ ನೀಡಿದ್ದರು.

ಇದನ್ನು ಓದಿ: ಏಕಾಂಗಿಯಾದ ಸಮಲತಾ; ಕೊನೇ ಗಳಿಗೆಯಲ್ಲಿ 'ಕೈ' ಕೊಟ್ರಾ ಸ್ಥಳೀಯ ನಾಯಕರು?

ಚುನಾವಣೆಗೆ ಮುನ್ನ ನಟ ಯಶ್​, ಸುದೀಪ್​, ಶಿವರಾಜ್​ಕುಮಾರ್​, ಪುನೀತ್​ ಮನೆ ಮೇಲೆ ಬೃಹತ್​ ಐಟಿ ದಾಳಿ ನಡೆದಿತ್ತು. ವರ್ಷದಿಂದ ವರ್ಷಕ್ಕೆ ಇವರ ಆದಾಯ ಪ್ರಮಾಣ ಏರುಗತಿಯಲ್ಲಿ ಸಾಗಿದ್ದರೂ ಹಿಂದಿನ ಗಳಿಕೆಯ ಮೇಲೆ ತೆರಿಗೆ ಕಟ್ಟುವ ಮೂಲಕ ತೆರಿಗೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಕೆ ದಾಳಿ ನಡೆಸಿತ್ತು.

First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...