IT Raid: ಕಾರಿನ ಸ್ಟೆಪ್ನಿ ಟಯರ್​ನಲ್ಲಿತ್ತು ಭಾರೀ ಮೊತ್ತ; ರಾಜ್ಯದ ಹಲವೆಡೆ ಒಂದೇ ದಿನ 4 ಕೋಟಿ ರೂ. ವಶಪಡಿಸಿಕೊಂಡ ಐಟಿ ಇಲಾಖೆ

ಲೋಕಸಭಾ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳು ಮತದಾರರಿಗೆ ಹಣದ ಹೊಳೆ ಹರಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಐಟಿ ಅಧಿಕಾರಿಗಳು ಮತ್ತು ಪೊಲೀಸರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಇಂದು ಐಟಿ ಇಲಾಖೆ ಭರ್ಜರಿ ಬೇಟೆಯಾಡಿದ್ದು, ಒಂದೇ ದಿನ 4 ಕೋಟಿ ರೂ. ವಶಪಡಿಸಿಕೊಂಡಿದೆ. 

Sushma Chakre | news18
Updated:April 20, 2019, 8:52 PM IST
IT Raid: ಕಾರಿನ ಸ್ಟೆಪ್ನಿ ಟಯರ್​ನಲ್ಲಿತ್ತು ಭಾರೀ ಮೊತ್ತ; ರಾಜ್ಯದ ಹಲವೆಡೆ ಒಂದೇ ದಿನ 4 ಕೋಟಿ ರೂ. ವಶಪಡಿಸಿಕೊಂಡ ಐಟಿ ಇಲಾಖೆ
ಸಾಂದರ್ಭಿಕ ಚಿತ್ರ
  • News18
  • Last Updated: April 20, 2019, 8:52 PM IST
  • Share this:
ಬೆಂಗಳೂರು (ಏ. 20): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಇಂದು ಐಟಿ ಇಲಾಖೆ ಅಧಿಕಾರಿಗಳು ಭಾರೀ ಬೇಟೆಯಾಡಿದ್ದು, ಒಂದೇ ದಿನ 4 ಕೋಟಿಗೂ ಹೆಚ್ಚು ಹಣವನ್ನು ಜಪ್ತಿ ಮಾಡಿದ್ದಾರೆ. ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಕಾರಿನ ಸ್ಟೆಪ್ನಿ ಟಯರ್​ನಲ್ಲಿಟ್ಟುಕೊಂಡು ಶಿವಮೊಗ್ಗ, ಭದ್ರಾವತಿಗೆ ಸಾಗಿಸುತ್ತಿದ್ದ 2.30 ಕೋಟಿ ರೂ. ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳು ಮತದಾರರಿಗೆ ಹಣದ ಹೊಳೆ ಹರಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಐಟಿ ಅಧಿಕಾರಿಗಳು ಮತ್ತು ಪೊಲೀಸರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಇಂದು ಐಟಿ ಇಲಾಖೆ ಭರ್ಜರಿ ಬೇಟೆಯಾಡಿದ್ದು, ಒಂದೇ ದಿನ 4 ಕೋಟಿ ಹಣವನ್ನು ವಶಪಡಿಸಿಕೊಂಡಿದೆ. ಬೆಂಗಳೂರಿನಿಂದ ಶಿವಮೊಗ್ಗ, ಭದ್ರಾವತಿಗೆ ಸಾಗಾಟ ಮಾಡುತ್ತಿದ್ದ 2 ಸಾವಿರ ರೂ. ಮುಖಬೆಲೆಯ 2.30 ಕೋಟಿ ರೂ. ಪತ್ತೆಯಾಗಿದೆ. ಕಾರಿನ ಸ್ಟೆಪ್ನಿ ಟಯರ್​ನಲ್ಲಿ ಹಣ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಮೋದಿ ನಾಟಕ ಮಾಡೋದ್ರಲ್ಲಿ ನಿಷ್ಣಾತರು, ಅಷ್ಟು ಸುಳ್ಳು ಹೇಳುವ ಬೇರೊಬ್ಬರನ್ನು ನಾನು ನೋಡೇ ಇಲ್ಲ; ದೇವೇಗೌಡ ವಾಗ್ದಾಳಿ

ಹಾಗೇ, ಬಾಗಲಕೋಟೆ ಬ್ಯಾಂಕ್ ಅಧಿಕಾರಿ ಮನೆಯಲ್ಲಿ 1 ಕೋಟಿ ರೂ. ಪತ್ತೆಯಾಗಿದೆ. ವಿಜಯಪುರದಲ್ಲಿ 10 ಲಕ್ಷ ರೂ. ಹಣವನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರ ಜೊತೆಗೆ ಬಾಗಲಕೋಟೆ ಕಾಂಗ್ರೆಸ್ ಮುಖಂಡರಿಗೂ ಐಟಿ ಶಾಕ್ ತಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತನ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಬಾಗಲಕೋಟೆ ಡಿಸಿಸಿ ಬ್ಯಾಂಕ್ ನೌಕರ ಆರೀಫ್​ ಕಾರ್ಲೇಕರ್ ಮನೆಯಲ್ಲಿ ಶೋಧ ನಡೆಸಲಾಗಿದ್ದು, ಕಾಂಗ್ರೆಸ್​ ಬೆಂಬಲಿಗ ಯಾಸಿನ್​ ತುಂಬರಮಟ್ಟಿ ಮನೆಯಲ್ಲೂ ದಾಳಿ ನಡೆಸಲಾಗಿದೆ. 

ವಿಜಯಪುರ ಜೆಡಿಎಸ್​ ಅಭ್ಯರ್ಥಿ ಸಂಬಂಧಿ ಮನೆ ಮೇಲೆ ಕೂಡ ಐಟಿ ದಾಳಿ ನಡೆದಿದೆ. ಜೆಡಿಎಸ್​ ಅಭ್ಯರ್ಥಿ ಡಾ. ಸುನಿತಾ ದೇವಾನಂದ ಚೌಹಾಣ್​ ಅವರ ಸಂಬಂಧಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಪಾಸಣೆ ವೇಳೆ 12 ಲಕ್ಷ ರೂ. ನಗದು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಸತತ ನಾಲ್ಕು ದಿನಗಳಿಂದ ಧಾರಾಕಾರ ಮಳೆ; ಇಂದು ಕೂಡ ಹಲವೆಡೆ ಜನಜೀವನ ಅಸ್ತವ್ಯಸ್ತ

ಇಂದು ಸಂಜೆ ಚುನಾವಣಾ ಆಯೋಗ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇದುವರೆಗೆ ವಿವಿಧ ತಂಡಗಳಿಂದ ಒಟ್ಟು 83.02 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸ್ಕ್ವಾಡ್, ಪೊಲೀಸರು ಒಟ್ಟು 16.80 ಕೋಟಿ ರೂ. ನಗದ ವಶಪಡಿಸಿಕೊಳ್ಳಲಾಗಿದೆ.64.67 ಲಕ್ಷ ರೂಪಾಯಿ ಮೌಲ್ಯದ 18,403 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
7.52 ಲಕ್ಷ ರೂ. ಮೌಲ್ಯದ 143.1 ಕೆ.ಜಿ. ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. 3.85 ಕೋಟಿ ರೂ. ಮೌಲ್ಯದ ಇತರೆ ಬೆಲೆಬಾಳುವ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಪ್ರಧಾನಿ ಆಗುವವರಿಗೆ ಪ್ರಬುದ್ಧತೆ ಇರಬೇಕು; ರಾಹುಲ್​ ಗಾಂಧಿ ಲೇವಡಿ ಮಾಡಿದ ಎಸ್​.ಎಂ.ಕೃಷ್ಣ

ಒಟ್ಟಾರೆ ವಿವಿಧ ಪ್ರಕರಣಗಳಲ್ಲಿ 1,976 ಎಫ್ ಐಆರ್ ದಾಖಲಾಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 17.69 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ. 7.03 ಕೋಟಿ ರೂ. ಮೌಲ್ಯದ ಮತ್ತಿತರ ವಸ್ತು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯು ಒಟ್ಟಾರೆ 36.85 ಕೋಟಿ ಮೌಲ್ಯದ 9.38 ಲಕ್ಷ ಲೀ. ಮದ್ಯ, 4.48 ಲಕ್ಷ ಮೌಲ್ಯದ 14.97 ಕೆ.ಜಿ ಮಾದಕ ದ್ರವ್ಯ ವಸ್ತು ಸೀಜ್ ಮಾಡಲಾಗಿದೆ. ಈತನಕ ಒಟ್ಟು 95,427 ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

First published:April 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading