ಡಿಕೆಶಿ ತಂಗಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ; ಬಿಜೆಪಿ ನಾಯಕರ ರೂಮ್ಗಳ ಮೇಲೆ ಯಾಕಿಲ್ಲ ದಾಳಿ ಎಂದ ಸಿದ್ದರಾಮಯ್ಯ
ಕುಂದಗೋಳ ಉಪಚುನಾವಣೆ ಉಸ್ತುವಾರಿವಹಿಸಿ ಕೊಂಡಿರುವ ಸಚಿವ ಡಿಕೆ ಶಿವಕುಮಾರ್, ಅವರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಡಿ.ಕೆ. ಶಿವಕುಮಾರ್
- News18
- Last Updated: July 20, 2020, 7:10 PM IST
ಹುಬ್ಬಳ್ಳಿ (ಮೇ.14): ಕುಂದಗೋಳ ಉಪಚುನಾವಣೆ ಉಸ್ತುವಾರಿ ಹೊತ್ತಿರುವ ಸಚಿವ ಡಿಕೆ ಶಿವಕುಮಾರ್, ತಂಗಿದ್ದ ರೆಸಾರ್ಟ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಕಾಟನ್ ಕೌಂಟಿ ರೆಸಾರ್ಟ್ಗೆ ಸೋಮವಾರ ರಾತ್ರಿ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳೊಂದಿಗೆ ಡಿಕೆ ಶಿವಕುಮಾರ್ ಸಭೆ ನಡೆಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಅಧಿಕಾರಿಗಳು, ತಡರಾತ್ರಿವರೆಗೂ ಶೋಧ ನಡೆಸಿದ್ದಾರೆ. ಈ ವೇಳೆ ಹೊಟೇಲ್ನಲ್ಲಿರಿಸಿದ ಕೆಲವು ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದಾದ ಬಳಿಕ ಸಿಎಂ ಕುಮಾರಸ್ವಾಮಿ ತಂಗಿದ್ದ ಡೆನಿಸನ್ಸ್ ಹೊಟೇಲ್ ಮೇಲೆ ಕೂಡ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ ಸಚಿವ ಜಮೀರ್ ಅಹ್ಮದ್ಖಾನ್, ಎಂಟಿಬಿ ನಾಗರಾಜ್, ಆರ್ ವಿ, ದೇಶಪಾಂಡೆ, ಸಂತೋಷ್ ಲಾಡ್, ಬಂಡೆಪ್ಪ ಖಾಶಂಪೂರ್ ತಂಗಿದ್ದ ಕೊಠಡಿಗಳಲ್ಲಿಯೂ ಸಮಗ್ರ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಸಂಜೆ ಏಳು ಗಂಟೆಗೆ ಆರು ಜನರ ತಂಡದ ಅಧಿಕಾರಿಗಳು ಹೊಟೇಲ್ ಮೇಲೆ ದಾಳಿ ನಡೆಸಿದ್ದು, ಮಧ್ಯರಾತ್ರಿ ಎರಡುವರೆಗೂ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಬಿಜೆಪಿ ರೂಮ್ಗಳ ಮೇಲೆ ಯಾಕಿಲ್ಲ ದಾಳಿ?
ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ರೂಮ್ಗಳ ಮೇಲೆ ಐಟಿ ಅಧಿಕಾರಿಗಳ ದಾಳಿಯನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕರ ರೂಮ್ಗಳ ಮೇಲೆ ಮಾತ್ರ ಯಾಕೆ ದಾಳಿ ಆಗಿದೆ. ಬಿಜೆಪಿ ನಾಯಕರ ರೂಮ್ಗಳ ಮೇಲೆ ಯಾಕಿಲ್ಲ ಎಂಬ ಪ್ರಶ್ನಿಸಿದ್ದಾರೆ.
ಕುಂದುಗೋಳ ಉಪಚುನಾವಣಾ ಪ್ರಚಾರ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೂಡ ಹುಬ್ಬಳ್ಳಿಯಲ್ಲಿ ತಂಗಿದ್ದಾರೆ. ಯಡಿಯೂರಪ್ಪ ಇದ್ದ ರೂಮ್ ಮೇಲೆ ದಾಳಿ ಮಾಡಿದ್ದಾರೆಯೇ ಎಂದು ಕೇಳಿದ್ದಾರೆ. ನಮ್ಮನ್ನು ಗುರಿಯಾಗಿಸಿಕೊಂಡು ಮಾತ್ರ ಈ ದಾಳಿ ನಡೆಸಲಾಗುತ್ತಿದೆ. ನಮ್ಮನ್ನು ಈ ದಾಳಿ ಮೂಲಕ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಇದಾದ ಬಳಿಕ ಸಿಎಂ ಕುಮಾರಸ್ವಾಮಿ ತಂಗಿದ್ದ ಡೆನಿಸನ್ಸ್ ಹೊಟೇಲ್ ಮೇಲೆ ಕೂಡ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ ಸಚಿವ ಜಮೀರ್ ಅಹ್ಮದ್ಖಾನ್, ಎಂಟಿಬಿ ನಾಗರಾಜ್, ಆರ್ ವಿ, ದೇಶಪಾಂಡೆ, ಸಂತೋಷ್ ಲಾಡ್, ಬಂಡೆಪ್ಪ ಖಾಶಂಪೂರ್ ತಂಗಿದ್ದ ಕೊಠಡಿಗಳಲ್ಲಿಯೂ ಸಮಗ್ರ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಸಂಜೆ ಏಳು ಗಂಟೆಗೆ ಆರು ಜನರ ತಂಡದ ಅಧಿಕಾರಿಗಳು ಹೊಟೇಲ್ ಮೇಲೆ ದಾಳಿ ನಡೆಸಿದ್ದು, ಮಧ್ಯರಾತ್ರಿ ಎರಡುವರೆಗೂ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.