ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು ಬೆಳ್ಳಂಬೆಳಗ್ಗೆಯೇ (Early Morning) ಆದಾಯ ತೆರಿಗೆ ಅಧಿಕಾರಿಗಳು (IT Officers) ಭರ್ಜರಿ ದಾಳಿ (Raid) ನಡೆಸಿದ್ದಾರೆ. ಕಾಂಗ್ರೆಸ್ (Congress) ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಉದ್ಯಮಿ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು (KGF Babu) ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ವಸಂತ ನಗರದಲ್ಲಿರುವ (Vasantanagar) ಬಾಬು ನಿವಾಸದಲ್ಲಿ (House) ಬೀಡು ಬಿಟ್ಟಿರುವ ಐಟಿ ಅಧಿಕಾರಿಗಳು ಮಹತ್ವದ ದಾಖಲೆ ಪತ್ರಗಳ (Documents) ಪರಿಶೀಲನೆ ನಡೆಸಿದ್ದಾರೆ. ಅತ್ತ ಕೆಜಿಎಫ್ ಬಾಬುಗೆ ಸೇರಿದ ಕಚೇರಿಗಳಲ್ಲೂ (Office) ಪರಿಶೀಲನೆ ನಡೆಯುತ್ತಿದೆ. ಸುಮಾರು ಆರು ಇನ್ನೋವಾ ಕಾರುಗಳಲ್ಲಿ ಬಂದಿರುವ 20ಕ್ಕೂ ಹೆಚ್ಚು ಅಧಿಕಾರಿಗಳಿಂದ ಬಾಬು ಮನೆಯಲ್ಲಿ ತಲಾಷ್ ನಡೆಯುತ್ತಿದೆ.
ಐಟಿ ಅಧಿಕಾರಿಗಳಿಂದ ಕೆಜಿಎಫ್ ಬಾಬು ಮನೆಯಲ್ಲಿ ಶೋಧ
ಬೆಳ್ಳಂಬೆಳಗ್ಗೆಯೇ 6 ಕಾರುಗಳಲ್ಲಿ 3 ತಂಡವಾಗಿ ಬಂದಿರುವ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಉದ್ಯಮಿ ಕೆಜಿಎಫ್ ಬಾಬು ನಿವಾಸ ಹಾಗೂ ಕಚೇರಿಗಳಲ್ಲಿ ದಾಳಿ ನಡೆಸಿದ್ದಾರೆ. ಪೊಲೀಸ್ ಹಾಗೂ ಸಿಆರ್ಪಿಎಫ್ ಭದ್ರತಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಬಾಬು ಅವರ ಆದಾಯ, ವ್ಯವಹಾರಕ್ಕೆ ಸಂಬಂಧಿಸಿದಂತೆ ಕಡತಗಳ ಪರಿಶೀಲನೆ ನಡೆಸ್ತಿದ್ದಾರೆ. ಆದಾಯ ತೆರಿಗೆಯಲ್ಲಿ ವ್ಯತ್ಯಯ ಶಂಕೆ ಹಿನ್ನಲೆಯಲ್ಲಿ ಐಟಿ ದಾಳಿ ನಡೆದಿದೆ.
ಐಟಿ ದಾಳಿ ವೇಳೆ ಮನೆಯಲ್ಲಿಯೇ ಇದ್ದ ಕೆಜಿಎಫ್ ಬಾಬು
ಬೆಂಗಳೂರಿನ ಖ್ಯಾತ ಉದ್ಯಮಿಯಾಗಿರೋ ಕೆಜಿಎಫ್ ಬಾಬು, ಸಾವಿರ ಕೋಟಿಗಳ ಸರದಾರ. ಹಿಂದೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿ ಸೋತುಹೋಗಿದ್ದ ಬಾಬು, ಆ ವೇಳೆ ತಮ್ಮ ಆಸ್ತಿ 1741 ಕೋಟಿ ರೂಪಾಯಿ ಅಂತ ಘೋಷಿಸಿಕೊಂಡಿದ್ದರು. ಇನ್ನು ಬಾಬುಗೆ ಸೇರಿದ ವಸಂತನಗರದ ರುಕ್ಸಾನಾ ಪ್ಯಾಲೇಸ್, ಹಾಗೂ ಎದುರುಗಡೆ ಇರುವ ಮನೆ ಮೇಲೆ ದಾಳಿ ಪರಿಶೀಲನೆ ನಡೆಯುತ್ತಿದ್ದು, ಈ ವೇಳೆ ಬಾಬು ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ.
ಇದನ್ನೂ ಓದಿ: Maggi: ಮನೆಯಲ್ಲಿ ಮೂರು ಹೊತ್ತೂ ಮ್ಯಾಗಿ, ಮ್ಯಾಗಿ, ಮ್ಯಾಗಿ; ಸಿಟ್ಟಾದ ಗಂಡ ಡಿವೋರ್ಸ್ ಕೊಟ್ಟೇ ಬಿಟ್ಟನಂತೆ!
ಸ್ಕ್ರಾಪ್ ಬ್ಯುಸಿನೆಸ್ನಿಂದ ರಿಯಲ್ ಎಸ್ಟೇಟ್ವರೆಗೆ
ಮೊದಲು ಕೆಜಿಎಫ್ ಬಾಬು ಸ್ಕ್ರಾಪ್ ಬ್ಯುಸಿನೆಸ್ ನಡೆಸುತ್ತಿದ್ದರು. ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ಶುರು ಮಾಡಿ, ಕೋಟಿ ಕೋಟಿ ಗಳಿಸಿದ್ರು. ಉಮ್ರಾ ಡೆವಲಪರ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದ್ದ ಬಾಬು, ಅದರಲ್ಲೂ ಯಶಸ್ವಿಯಾಗಿದ್ದರು.
12 ಬ್ಯಾಂಕ್ ಅಕೌಂಟ್ ಹೊಂದಿರುವ ಕೆಜಿಎಫ್ ಬಾಬು
ಐಟಿ ದಾಳಿ ವೇಳೆ ಅನೇಕ ವಿಚಾರಗಳು ಬೆಳಕಿಗೆ ಬಂದಿವೆ. ಕೆಜಿಎಫ್ ಬಾಬು ಕುಟುಂಬಸ್ಥರು ಒಟ್ಟು 23 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಇದರಲ್ಲಿ ಬಾಬು ಅವರೇ ಸ್ವತಃ 12 ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ. ಇನ್ನು ಪತ್ನಿ ಮತ್ತು ಮಗ, ಮಗಳ ಹೆಸರಲ್ಲಿ 11 ಅಕೌಂಟ್ ಪತ್ತೆಯಾಗಿದೆ.
ಇದನ್ನೂ ಓದಿ: Malali Mosque: ಹಿಂದೂಗಳ ಭಾವನೆ ಸಂಸ್ಕೃತಿಗೆ ಗೌರವ ಕೊಟ್ಟು ಬದುಕಿ: ಮಜೀದ್ ಹೇಳಿಕೆಗೆ ಮುತಾಲಿಕ್ ತಿರುಗೇಟು
ಅಮಿತಾಭ್ ಬಚ್ಚನ್ ಕಾರು ಖರೀಸಿದಿದ್ದ ಬಾಬು
ಬಾಲಿವುಡ್ನ ಖ್ಯಾತ ಹಿರಿಯ ನಟ ಅಮಿತಾಭ್ ಬಚ್ಚನ್ ಬಳಸ್ತಿದ್ದ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದ ಬಾಬು, ಕೆಲ ವರ್ಷಗಳ ಹಿಂದೆ ಮುಂಬೈನಲ್ಲಿ MH02-BB2 ಸಂಖ್ಯೆಯ ರೋಲ್ಸ್ ರಾಯ್ಸ್ ಖರೀದಿಸಿದ್ದರು. ಬಿಗ್ ಬಿ ಅಮಿತಾಭ್ ಬಳಸ್ತಿದ್ದ ಕಾರನ್ನ ಮಧ್ಯವರ್ತಿ ಮೂಲಕ ಬಾಬು ಖರೀದಿಸಿದ್ದರು. ಆದರೆ ಸೂಕ್ತ ದಾಖಲಾತಿ ಇಲ್ಲದ ಕಾರಣ ಕಳೆದ ವರ್ಷ ಆಗಸ್ಟ್ ನಲ್ಲಿ ಯುಬಿ ಸಿಟಿ ಬಳಿ ರೋಲ್ಸ್ ರಾಯ್ಸ್ ಕಾರನ್ನ ಆರ್ಟಿಒ ಅಧಿಕಾರಿಗಳು ಸೀಜ್ ಮಾಡಿದ್ದರು. ನಂತರ ನೆಲಮಂಗಲ ಆರ್ ಟಿಒ ಅಧಿಕಾರಿಗಳಿಗೆ ದಂಡ ಪಾವತಿಸಿ ಕಾರು ಬಿಡಿಸಿಕೊಳ್ಳಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ