IT Notice: ಮಾಜಿ ಪ್ರಧಾನಿ ದೇವೇಗೌಡರ ಪತ್ನಿಗೆ ಐಟಿ ನೋಟಿಸ್; ನಮ್ಮ ಗದ್ದೆಗೆ ಬಂದು ನೋಡಿ ಎಂದು ರೇವಣ್ಣ ಗರಂ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮಗೆ ಐಟಿ ನೋಟಿಸ್ ನೀಡಲಾಗಿದೆ. ಅಕ್ರಮ ಆಸ್ತಿಗಳಿಗೆ ಆರೋಪದಡಿ ಐಟಿ ಇಲಾಖೆ ಚನ್ಮಮ್ಮಗೆ ನೋಟಿಸ್ ನೀಡಿದೆ. ತಾಯಿಗೆ ನೋಟಿಸ್ ನೀಡಿದ ಹಿನ್ನೆಲೆ ಮಾಜಿ ಸಚಿವ ರೇವಣ್ಣ ಗರಂ ಆಗಿದ್ದಾರೆ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ದಂಪತಿ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ದಂಪತಿ

  • Share this:
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (Deve Gowda) ಅವರ ಪತ್ನಿ ಚೆನ್ನಮ್ಮ (Chennamma) ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ನಮ್ಮ ತಾಯಿಗೆ ಐಟಿ ನೋಟಿಸ್ (iT Notice) ನೀಡಿದ್ದಾರೆ. ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ಐಟಿ ನೋಟಿಸ್ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್​.ಡಿ. ರೇವಣ್ಣ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿ ಕೋಟಿ ಕೊಳ್ಳೆ ಹೊಡಯುವವರಿಗೆ  ನೋಟಿಸ್​ ಕೊಡಲ್ಲ.  1 ಎಕರೆಯಲ್ಲಿ ಕಬ್ಬು ಬೆಳೆಯೋರಿಗೆ ನೋಟಿಸ್ ಕೊಡ್ತಾರೆ ಎಂದು ರೇವಣ್ಣ(Revanna)  ಗರಂ ಕಿಡಿಕಾರಿದ್ರು.

ಜೆಡಿಎಸ್​ನವರನ್ನೇ ಹುಡುಕಿ ನೋಟಿಸ್​ ಕೊಡ್ತಾರೆ

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ ಅವರು, ನಮ್ಮ ತಾಯಿಗೆ ಅಸ್ತಿ ವಿವರದ ಬಗ್ಗೆ ಮಾಹಿತಿ ಕೇಳಿ ನೋಟಿಸ್ ನೀಡಿದ್ದಾರೆ. ನಮ್ಮಮ್ಮ, ನಮ್ಮಪ್ಪ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರಾ? ನಾನು ಆಲೂಗಡ್ಡೆ ಬೆಳೆದಿದ್ದೆ, ಈಗ ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ. ಅದನ್ನು ನೋಡಬೇಕು ಅದನ್ನು ನೋಡದೆ ನಮ್ಮ ತಾಯಿಗೆ ನೋಟೀಸ್ ಕೊಟ್ಟಿದ್ದಾರೆ. ಒಬ್ಬೊಬ್ಬ ಆರ್ ಟಿಒ ನೂರು ಇನ್ನೂರು ಕೋಟಿ ಮಾಡಿದ್ದಾರಲ್ಲ. ಅವರಿಗೇಕೆ ನೀವು ನೋಟೀಸ್ ನೀಡಲ್ಲ. ಒಂದು ಎಕರೆಯಲ್ಲಿ ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ ಎಂದರು.

ಕಾಲ ಬರುತ್ತೆ ಎಲ್ಲದಕ್ಕೂ ಉತ್ತರ ಕೊಡುತ್ತೇವೆ

ದ್ವೇಷದ ರಾಜಕಾರಣ ಯಾವ ಮಟ್ಟಿಗೆ ಇದೆ ನೋಡಿ ಎಂದು ಕಿಡಿಕಾರಿದ ರೇವಣ್ಣ, ಜೆಡಿಎಸ್ ನವರು ಯಾರು ಎಂದು ಆರಿಸಿ ನೋಟಿಸ್ ಕೊಡುತ್ತಿದ್ದಾರೆ. ಕಾಲ ಬರುತ್ತೆ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಗುಡುಗಿದ್ದಾರೆ. ಅವರ ನೋಟಿಸ್ ಗೆ ನಾವು ಉತ್ತರ ಕೊಡುತ್ತೇವೆ. ನಮಗೂ ಕಾಲ ಬರುತ್ತೆ. ಯಾವುದೂ ಶಾಶ್ವತವಾಗಿ ಇರಲ್ಲ. ಏನಾದರೂ ಕದ್ದು ವ್ಯವಸಾಯ ಮಾಡುತ್ತಿದ್ದೇವಾ ಅಂತ ಡ್ರೋಣ್ ಸರ್ವೆ ಮಾಡಲಿ. ದೊಡ್ಡಪುರ, ಪಡುವಲ ಹಿಪ್ಪೆ ಹತ್ತಿರ ನಮ್ಮ ಗದ್ದೆ ಇದೆ ಎಂದರು.

ಇದನ್ನೂ ಓದಿ: BJP Meeting: ಈ ಬಾರಿ ನೂತನ ಜಿಲ್ಲೆ ವಿಜಯನಗರದಲ್ಲಿ ಬಿಜೆಪಿ ಕಾರ್ಯಕಾರಣಿ; ವಿಜಯೋತ್ಸವ ಆಚರಿಸುತ್ತೇವೆ ಎಂದ್ರು ಆನಂದ್ ಸಿಂಗ್

ನೋಟಿಸ್​ ನೀಡಿರೋ ವಿಚಾರ ನನಗೆ ಗೊತ್ತಿಲ್ಲ

ತಾಯಿ ಚನ್ನಮ್ಮಗೆ ನೋಟಿಸ್​ ನೀಡಿರೋ ವಿಚಾರನೇ ನನಗೆ ಗೊತ್ತಿಲ್ಲ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅದ್ರಲ್ಲಿ ತಲೆಕಡೆಸಿಕೊಳ್ಳುವ ವಿಚಾರ ಏನಿದೆ. ನೋಟಿಸ್ ನೀಡಿರುವ ಬಗ್ಗೆ ನನಗೆ ಐಡಿಯಾ ಇಲ್ಲ ಎಂದ್ರು.  ಕೊಟ್ಟಿದ್ದರು ಸಹ ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ, ನಮ್ಮ ಕುಟುಂಬದಲ್ಲಿ ನಮ್ಮ ವ್ಯವಹಾರ ತೆರೆದ ಪುಸ್ತಕವಿದ್ದಂತೆ. ದೇವೇಗೌಡರು ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದು ಮಹತ್ವ ಕೊಟ್ಟಿಲ್ಲ, ನಾವು ಸಹ ನಮ್ಮ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದು ಪ್ರಾಮುಖ್ಯತೆ ಕೊಟ್ಟವರಲ್ಲ, ನಾವು ಪರಿಶುದ್ಧವಾಗಿರಬೇಕು ಅಷ್ಟೇ ಎಂದಿದ್ದಾರೆ.

ನೋಟಿಸ್​ಗೆ ಏನು ಉತ್ತರ ಕೊಡ್ಬೇಕು ಅದನ್ನ ಕೊಡ್ತೀವಿ

ನೋಟಿಸ್ ಕೊಟ್ಟಿದ್ದಾರೆ ಅಂತ ಹೆದರುವ ಅಗತ್ಯವಿಲ್ಲ, ನೋಟಿಸ್ ಕೊಟ್ಟಿದ್ದಾರೆ ಅದಕ್ಕೆ ಏನ್ ಉತ್ತರ ಕೊಡಬೇಕೋ ಕೊಟ್ಟರಾಯ್ತು ಎಂದ್ರು. ನನ್ನ ಸಹೋದರನಿಗೂ ಅದನ್ನೇ ಹೇಳಿದ್ದೇನೆ. ಇದನ್ನ ನಾವು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾನೂನಾತ್ಮಕವಾಗಿ ಆಸ್ತಿ ವಿಚಾರವಾಗಿ ಕೇಳಿರ್ತಾರೆ ಅದನ್ ಸಬ್ಮಿಟ್ ಮಾಡಿದ್ರಾಯ್ತು. ಇದನ್ನ ರಾಜಕೀಯವಾಗಿ ಪ್ರಚಾರ  ತೆಗೆದುಕೊಳ್ಳುವ ಅವಶ್ಯಕತೆ ನಮಗೆ ಇಲ್ಲ. ನಾವು ಪರಿಶುದ್ಧವಾಗಿದ್ದಾಗ ಯಾರು ನಮ್ಮನ್ನು ಏನು ಮಾಡೋದಕ್ಕೆ ಆಗೋದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: B.S Yediyurappa: ಸಿಎಂ ಆಗಿದ್ದ ವೇಳೆ ಅಧಿಕಾರ ದುರುಪಯೋಗ; ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು

ನಮ್ಮ ತಾಯಿ ಅಕ್ರಮ ಆಸ್ತಿ ಮಾಡಿಲ್ಲ

ಐಟಿ ರೇಡ್, ಐಟಿ ನೋಟಿಸ್ ಇದೀಗ ರಾಜ್ಯ ಮಾತ್ರವಲ್ಲ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮಗೆ ಐಟಿ ನೋಟಿಸ್ ನೀಡಲಾಗಿದೆ. ಅಕ್ರಮ ಆಸ್ತಿಗಳಿಗೆ ಆರೋಪದಡಿ ಐಟಿ ಇಲಾಖೆ ಚೆನ್ಮಮ್ಮಗೆ ನೋಟಿಸ್ ನೀಡಿದೆ. ಇದರ ವಿರುದ್ಧ ಕೆಂಡಾಮಂಡಲವಾಗಿರುವ ಪುತ್ರ, ಮಾಜಿ ಸಚಿವ ರೇವಣ್ಣ, ರಾಜಕೀಯ ಕುತಂತ್ರ ಮಾಡಬೇಡಿ. ನಮ್ಮ ತಾಯಿ ಅಕ್ರಮ ಆಸ್ತಿ ಮಾಡಿಲ್ಲ ಎಂದಿದ್ದಾರೆ.
Published by:Pavana HS
First published: