HOME » NEWS » State » IT IS WRONG TO BLAME THE ENTIRE INDUSTRY FOR THE WRONG DONE BY SOME PEOPLE SAYS ACTOR DUNIA VIJAY MAK

ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಇಂಡಸ್ಟ್ರಿಯನ್ನು ದೂರುವುದು ತಪ್ಪು; ನಟ ದುನಿಯಾ ವಿಜಯ್‌

ಇಂಡಸ್ಟ್ರಿಯಲ್ಲಿ ಡ್ರಗ್ಸ್ ತಗೊಂಡಿರೋದ್ರ ಬಗ್ಗೆ ನಮ್ಮ ಗಮನಕ್ಕೆ ಯಾರೂ ಬಂದಿರಲಿಲ್ಲ. ಒಂದು ವೇಳೆ ಈಗಿರೋ ಆರೋಪದಂತೆ ಯಾರಾದರೂ ಡ್ರಗ್ಸ್ ತಗೊಂಡಿದ್ರೆ? ಅಂತವರು ಸಿನಿಮಾ ರಂಗಕ್ಕೆ ಬರಬೇಡಿ ಬದ್ಧತೆ ಇರೋರು ಮಾತ್ರ ಬನ್ನಿ. ಬೇರೆ ವಿಚಾರಗಳನ್ನು ಇಟ್ಕೊಂಡು ಇಂಡಸ್ಟ್ರಿ ಗೆ ಬರೋದಾದ್ರೆ ಬರಲೇ ಬೇಡಿ ಎಂದು ದುನಿಯಾ ವಿಜಯ್ ವಿನಂತಿಸಿದ್ದಾರೆ.

news18-kannada
Updated:September 1, 2020, 4:08 PM IST
ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಇಂಡಸ್ಟ್ರಿಯನ್ನು ದೂರುವುದು ತಪ್ಪು; ನಟ ದುನಿಯಾ ವಿಜಯ್‌
ದುನಿಯಾ ವಿಜಯ್.
  • Share this:
ಬೆಂಗಳೂರು (ಸೆಪ್ಟೆಂಬರ್‌ 01); ಸ್ಯಾಂಡಲ್‌ವುಡ್‌ನಲ್ಲಿ ನಟ-ನಟಿಯರೆಲ್ಲರೂ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ ಎಂಬುದು ಸುಳ್ಳು. ಎಲ್ಲೋ ಯಾರೋ ಕೆಲವು ಜನ ಮಾಡುವ ತಪ್ಪಿಗೆ ಇಡೀ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯನ್ನು ದೂರುವುದು ಸರಿಯಲ್ಲ ಎಂದು ನಟ ದುನಿಯಾ ವಿಜಯ್‌ ನಿರ್ದೇಶಕ ಲಂಕೇಶ್‌ಗೆ ಕಿವಿಮಾತು ಹೇಳಿದ್ದಾರೆ.

ಬೆಂಗಳೂರು ಪೊಲೀಸರು ಕಳೆದ ಗುರುವಾರ ನಗರದಲ್ಲಿ ಡ್ರಗ್ಸ್‌ ಸಾಗಿಸುತ್ತಿದ್ದ ಗುಂಪೊಂದನ್ನು ಬಂಧಿಸಿದ್ದರು. ಅಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ವಿವಿಧ ಮಾಧಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಆರೋಪಿಗಳು ಸ್ಯಾಂಡಲ್‌ವುಡ್‌ ನಟ ನಟಿಯರಿಗೂ ಸಹ ತಾವು ಈ ಡ್ರಗ್ಸ್‌ಗಳನ್ನು ಪೂರೈಸಿದ್ದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದರ ಬೆನ್ನಿಗೆ ಆಘಾತಕಾರಿ ಮಾಹಿತಿ ನೀಡಿದ್ದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, "ಸ್ಯಾಂಡಲ್‌ವುಡ್‌ ಕೊಕೇನ್ ವರೆಗೆ ಬೆಳೆದಿದೆ. ಅನೇಕ ನಟ ನಟಿಯರು ಇದಕ್ಕೆ ದಾಸರಾಗಿದ್ದಾರೆ. ಶೂಟಿಂಗ್ ಸಮಯದಲ್ಲಿ ಅವರು ಮಾದಕ ವಸ್ತುಗಳನ್ನು ಬಳಸಿ ಅನೇಕರ ಬಳಿ ಬೈಸಿಕೊಂಡಿರುವ ಪ್ರಸಂಗಗಳು ಇಂಡಸ್ಟ್ರಿಯಲ್ಲಿ ನಡೆದಿದೆ. ಇದರಿಂದ ಯುವ ಪೀಳಿಗೆ ಹಾಳಾಗುತ್ತಿದೆ. ಈ ಡ್ರಗ್ಸ್‌ಗಳನ್ನು ಬಳಸುವವರ ಹೆಸರನ್ನು ನಾನು ಪೊಲೀಸರಿಗೆ ದಾಖಲೆ ಸಮೇತ ನೀಡುತ್ತೇನೆ. ಅವರೇ ಕ್ರಮ ಜರುಗಿಸಲಿ" ಎಂದು ಹೇಳಿದ್ದರು.

ಅಲ್ಲದೆ. ಸೋಮವಾರ ಸಿಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್‌ ಲಂಕೇಶ್ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಬಳಸುವ 15 ಜನರ ಹೆಸರುಗಳನ್ನು ಪೊಲೀಸ್‌ ಅಧಿಕಾರಿಗಳಿಗೆ ನೀಡಿದ್ದಾರೆ. ಇದರನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಇಂದಿನಿಂದ ಬಾರ್‌ ಅಂಡ್ ರೆಸ್ಟೋರೆಂಟ್‌ ಓಪನ್ ಶೇ.50ರಷ್ಟು ಹೆಚ್ಚುವರಿ ಆದಾಯ ನಿರೀಕ್ಷೆ; ಹೆಚ್‌. ನಾಗೇಶ್

ಆದರೆ, ಈ ಕುರಿತು ಇಂದು ಪ್ರತಿಕ್ರಿಯೆ ನೀಡಿರುವ ನಟ ದುನಿಯಾ ವಿಜಯ್‌, "ಇಂಡಸ್ಟ್ರಿಯಲ್ಲಿ ಡ್ರಗ್ಸ್ ತಗೊಂಡಿರೋದ್ರ ಬಗ್ಗೆ ನಮ್ಮ ಗಮನಕ್ಕೆ ಯಾರೂ ಬಂದಿರಲಿಲ್ಲ. ಒಂದು ವೇಳೆ ಈಗಿರೋ ಆರೋಪದಂತೆ ಯಾರಾದರೂ ಡ್ರಗ್ಸ್ ತಗೊಂಡಿದ್ರೆ?
ಅಂತವರು ಸಿನಿಮಾ ರಂಗಕ್ಕೆ ಬರಬೇಡಿ ಬದ್ಧತೆ ಇರೋರು ಮಾತ್ರ ಬನ್ನಿ. ಬೇರೆ ವಿಚಾರಗಳನ್ನು ಇಟ್ಕೊಂಡು ಇಂಡಸ್ಟ್ರಿ ಗೆ ಬರೋದಾದ್ರೆ ಬರಲೇ ಬೇಡಿ" ಎಂದಿದ್ದಾರೆ.
Youtube Video

ಇನ್ನೂ ಇಂದ್ರಜಿತ್ ಲಂಕೇಶ್‌ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಅವರು, "ಸಿನಿಮಾದವರು ಕೆಲವರು ತಗೊಂಡಿರಬಹುದು, ಹಾಗಂತ ಇಡೀ ಇಂಡಸ್ಟ್ರಿಯನ್ನು ದೂಷಿಸೋದು ತಪ್ಪು. ಇಂದ್ರಜಿತ್ ಮಾಡ್ತಿರೋ ಕೆಲಸ ಸರಿಯಿದೆ.. ಇಂಡಸ್ಟ್ರಿ ಸ್ವಚ್ಛ ಆಗೋಕೆ ಅವರ ಹೋರಾಟವೂ ಕಾರಣವಾಗಲಿ" ಎಂದಿದ್ದಾರೆ. ಅಲ್ಲದೆ, "ಜಿಮ್ ಮಾಡೋರು ಮಾತ್ರೆ ಸ್ಟೆರಾಯ್ಡ್ ತಗೋತಾರೆ ಅನ್ನೋ ಆರೋಪ ಸುಳ್ಳು. ಈಗ ತಾನೆ ಜಿಮ್ ಗಳು ಆರಂಭವಾಗಿವೆ. ಸುಮ್ ಸುಮ್ನೆ ಆರೋಪ ಮಾಡೋದು ತಪ್ಪು" ಎಂದು ದುನಿಯಾ ವಿಜಯ್ ತಿಳಿಸಿದ್ದಾರೆ.
Published by: MAshok Kumar
First published: September 1, 2020, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories